ಪತ್ರಿಕಾ ಪ್ರಕಟಣೆ
ಸರ್ವೋಚ್ಛ ನ್ಯಾಯಾಲಯದ ತೀರ್ಪಿನಂತೆ ಪೊಲೀಸ್ ಸುಧಾರಣೆಗೆ
ಸಂಬಂದಿಸಿದಂತೆ, ರಾಜ್ಯ ಮಟ್ಟದಲ್ಲಿ
ರಾಜ್ಯ ಪೊಲೀಸ್ ದೂರುಗಳ ಪ್ರಾದಿಕಾರ ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪೊಲೀಸ್ ಪ್ರಾಧಿಕಾರವನ್ನು
ರಚಿಸಲು ಮಂಜೂರಾತಿ ನೀಡಿ ಸರ್ಕಾರದ ಆದೇಶ ಸಂಖ್ಯೆ: ಹೆಚ್.ಡಿ/150/ಪೊಸಿಇ/2014 ದಿನಾಂಕ: 20/10/2014 ರಂದು ಆದೇಶ ಹೊರಡಿಸಿದೆ. ಕಲಬುರಗಿ
ಜಿಲ್ಲೆಯಲ್ಲಿ ಪೊಲೀಸ್ ದೂರುಗಳ ಪ್ರಾಧಿಕಾರ ದಿನಾಂಕ 17/03/2015 ರಂದು
ರಚನೆಯಾಗಿರುತ್ತದೆ. ಕಲಬುರಗಿ ಜಿಲ್ಲಾ ದೂರು ಪ್ರಾಧಿಕಾರವು ಈ ಕೆಳಕಂಡ ಪದಾಧಿಕಾರಿಗಳನ್ನು
ಹೊಂದಿರುತ್ತದೆ.
1] ಜಿಲ್ಲಾಧಿಕಾರಿ
ಕಲಬುರಗಿ ಜಿಲ್ಲೆ ಕಲಬುರಗಿ ಅದ್ಯಕ್ಷರು,
2] ಪೊಲೀಸ್
ಅಧೀಕ್ಷಕರು ಕಲಬುರಗಿ ಜಿಲ್ಲೆ ಕಲಬುರಗಿ ಸದಸ್ಯ ಕಾರ್ಯದರ್ಶಿಗಳು,
3] ಎಸ್.ಜಿ.ವಾಲಿ
ನಿವೃತ್ತ ಕೆ.ಎ.ಎಸ್. ಅಧಿಕಾರಿಗಳು ಕಲಬುರಗಿ ಜಿಲ್ಲೆ
ಸದಸ್ಯರು,
ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರವು ಡಿ.ವೈ.ಎಸ್.ಪಿ ಮತ್ತು
ಕೆಳಗಿನ ಹಂತದ ಪೊಲೀಸ್ ಅಧಿಕಾರಿ/ ಸಿಬ್ಬಂದಿರವರುಗಳ ವಿರುದ್ದ ಪೊಲೀಸ್ ಅಭಿರಕ್ಷೆಯಲ್ಲಿ ನಡೆದ
ಸಾವು, ತೀವೃ ಸ್ವರೂಪದ
ಗಾಯ ಅಥವಾ ಅತ್ಯಾಚಾರದ ದೂರಿನ ಬಗ್ಗೆ ವಿಚಾರಣೆ ಮಾಡಬಹುದಾಗಿದೆ. ಇದಕ್ಕೆ ಸಂಬಂದಿಸಿದಂತೆ
ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆ, ವೃತ್ತ
ಕಛೇರಿ ಹಾಗೂ ಉಪ ವಿಭಾಗಗಳ ಕಛೇರಿಯ ಮುಂಭಾಗದಲ್ಲಿ ಶಾಶ್ವತ ಫಲಕಗಳನ್ನು ಈಗಾಗಲೇ ಅಳವಡಿಸಲಾಗಿದೆ.
ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರದ ಅರ್ಜಿಯನ್ನು ಜಿಲ್ಲಾಧಿಕಾರಿ ರವರ ಕಛೇರಿ ಹಾಗೂ ಪೊಲೀಸ
ಅಧೀಕ್ಷಕರು ರವರ ಕಛೆರಿ ಕಲಬುರಗಿ ರವರಿಗೆ ಸಲ್ಲಿಸಬಹುದಾಗಿದೆ. ಮತ್ತು ರಾಜ್ಯ ಪೊಲೀಸ ದೂರುಗಳ
ಪ್ರಾಧಿಕಾರದಿಂದ ಸಾರ್ವಜನಿಕರಿಗಾಗಿ ವೆಬ್ ಸೈಟ್ ಪ್ರಾರಂಬಿಸಲಾಗಿರುವ www.karnataka.gov.in/spca ಆಗಿದ್ದು, ಸಾರ್ವಜನಿಕರು ಇದನ್ನು ವೀಕ್ಷಿಸಬಹುದಾಗಿದೆ.
ಅದೇ ರೀತಿ ಕಲಬುರಗಿ ಜಿಲ್ಲಾ ದೂರುಗಳ ಪ್ರಾಧಿಕಾರದ ಇ-ಮೇಲ್ ವಿಳಾಸ dpcagba@karnataka.gov.in ಮುಖಾಂತರ
ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರದ ಅರ್ಜಿಯನ್ನು ಇದರಿಲ್ಲಿಯೂ ಸಹ ಸಲ್ಲಿಸಬಹುದಾಗಿದೆ.
ಸಹಿ/-
ಪೊಲೀಸ್ ಅಧೀಕ್ಷಕರು,
ಕಲಬುರಗಿ.
No comments:
Post a Comment