POLICE BHAVAN KALABURAGI

POLICE BHAVAN KALABURAGI

23 July 2016

Press Note

B ಪತ್ರಿಕಾ ಪ್ರಕಟಣೆ B
ಸಕಾರವು ಸಫಾಯಿ ಕರ್ಮಚಾರಿ ಕಾಯಿದೆ (The Employment of Manual Scavengers and Construciton of Dry Latrines (Prohibition) Act 1993) ಯನ್ನು ಜಾರಿಗ ತಂದಿದ್ದು ಸಫಾಯಿ ಕರ್ಮಚಾರಿಗಳು ಮ್ಯಾನು ಹೋಲ್‌ ಒಳಗಡೆ ಇಳಿದು ಶುಚಿಗೊಳಿಸುವ ಕಾರ್ಯವನ್ನು ನಿಷೇಧಿಸಿದೆ.  ಆದಗ್ಯೂ ಸಹ ಸಫಾಯಿ  ಕರ್ಮಚಾರಿಗಳಿಂದ ಮ್ಯಾನು ಹೋಲ್‌ಗಳನ್ನು ಹಾಗೂ ಚರಂಡಿಗಳಣ್ನು ಸ್ವಚ್ಚಗೊಳಿಸುವ ಕಾರ್ಯ ಮುಂದುವರೆದಿದ್ದು, ಇದರಿಂದ ಅನೇಕರು ಪ್ರಾಣವನ್ನು ಕಳೆದುಕೊಂಡಿರುವ ಪ್ರಕರಣಗಳು ವರಿದಯಾಗುತ್ತಿದೆ.
     ಮಳೆಗಾಲ ಪ್ರಾರಂಭವಾಗಿದ್ದು, ಮಳೆ ನೀರಿನಿಂದ ಎಲ್ಲೆಡೆ ಮ್ಯಾನ ಹೊಲ್‌ಗಳು ಹಾಗೂ ಚರಂಡಿಗಳೂ ಮುಚ್ಚಿಕೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ಇವುಗಳನ್ನು ಸ್ವಚ್ಚಗೊಳಿಸಲು ಸರ್ಕಾರಿ ಸಂಸ್ಥೆಗಳು ಖಾಸಗಿ ಸಂಸ್ಥೆಗಳು ಅಥವಾ ಬೇರೆ ಗುತ್ತಿಗೆದಾರರು ಕರ್ಮಚಾರಿಗಳನ್ನು ಮ್ಯಾನು ಹೋಲ್‌ನಲ್ಲಿ ಇಳಿಸಿ ಚರಂಡಿಗಳನ್ನು ಶುದ್ದಗೊಳಿಸುವ ಕಾರ್ಯಗಳನ್ನು ಕೈಗೊಳ್ಳುತ್ತಾರೆ.
     ಮ್ಯಾನು ಹೋಲ್‌ಗಳನ್ನು ಸಕ್ಕಿಂಗ್‌ ಮಷಿನಗಳ ಮೂಲಕವೇ ಶುಚಿಗೊಳಿಸಬೇಕು ಹೊರತು ಯಾವುದೇ ವ್ಯಕ್ತಿಯನ್ನು ಇಳಿಸಿ ಶುಚಿಗೊಳಿಸುವ ಕಾರ್ಯ ಸಫಾಯಿ ಕರ್ಮಚಾರಿ ಕಾಯಿದೆ. (The Employment of Manual Scavengers and Construciton of Dry Latrines (Prohibition) Act 1993) ಪ್ರಕಾರ ನಿಷೇಧಿಸಿದ್ದು ಶೀಕ್ಷಾರ್ಹ ಅಪರಾಧವಾಗಿರುತ್ತದೆ. ಸದರಿ ಕಾಯಿದೆಯನ್ನು ಕಟ್ಟು ನಿಟ್ಟಾಗಿ ಅನುಷ್ಠಾನಗೊಳಿಸುವುದು ಹಾಗೂ ಇಂತಹ ಪ್ರಕರಣಗಳು ವರದಿಯಾದಾಗ ಸದರಿ ಕಾಯಿದೆಯಡಿಯಲ್ಲಿ ಆಪಾದಿತರ ವಿರುದ್ದ ಪ್ರಕರಣಗಳನ್ನು  ದಾಖಲಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. 

No comments: