POLICE BHAVAN KALABURAGI

POLICE BHAVAN KALABURAGI

02 July 2016

Kalaburgi District Reported Crimes

ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ  ಶಿವಮ್ಮ ಗಂಡ ಹಣಮಂತರಾಯ ಮಾಕಾಶಿ ಸಾ :ಹದನಾಳ ತಾ: ದೇವದುರ್ಗ ಹಾ. ಈಶ್ವರನಗರ ಕ್ಯಾಂಪ ನಾಗರಳ್ಳಿ ತಾ:ಜೇವರಗಿ ಇವರು ಒಂದು ವರ್ಷದಿಂದ ಜೇವರಗಿ ತಾಲೂಕಿನ ನಾಗರಳ್ಳಿ ಸಿಮಾಂತರದಲ್ಲಿರುವ ಈಶ್ವರ ನಗರ ಕ್ಯಾಂಪನಲ್ಲಿ ಇರುವ ಬಿ.ಡಿ. ರಾಮಕ್ರೀಷ್ಣರವರ ಹತ್ತಿರ ನನ್ನ ಗಂಡ ಕೂಲಿ ಕೆಲಸಕೆಂದು ಬಂದು ಅವರಲ್ಲಿಯೇ ದಿನಾಲು ಕೂಲಿ ಕೆಲಸ ಮಾಡಿಕೊಂಡು ನಾನು ನನ್ನ ಗಂಡ ಹಾಗೂ ನನ್ನ ಮಗನೊಂದಿಗೆ ಈಶ್ವರ ನಗರ ಕ್ಯಾಂಪನಲ್ಲಿ ವಾಸವಾಗಿರುತ್ತೇನೆ. ದಿನಾಂಕ: 01-07-2016 ರಂದು ಬೆಳಗ್ಗೆ 8-45 ಗಂಟೆಗೆ ನನ್ನ ಗಂಡ ಮತ್ತು . ಬಿ.ಡಿ. ರಾಮಕೃಷ್ಣ  ಇವರ ಹೊಲಕ್ಕೆ ತಮ್ಮ ಟ್ರ್ಯಾಕ್ಟರ ನಂ ಕೆ.-36 ಟಿ.ಸಿ-5016 ಜಾನ್ ಡಿಯರ್ ಟ್ರ್ಯಾಕ್ಟರನ್ನು ತೆಗೆದುಕೊಂಡು ಅದರಲ್ಲಿ ಚಾಲಕ ಬಿ.ಡಿ. ರಾಮಕೃಷ್ಣರವರು ನಡೆಸುತ್ತಿದ್ದು, ನನ್ನ ಗಂಡ ಟ್ರ್ಯಾಕ್ಟರದ ಮೆಟ್ ಗಾರ್ಡದ ಎಡಭಾಗದಲ್ಲಿ ಕುಳಿತುಕೊಂಡು ಹೋದರು. ಸ್ವಲ್ಪ ಸಮಯದ ನಂತರ ನಾನು ಮನೆಯಲ್ಲಿದ್ದಾಗ ಈಶ್ವರ ನಗರ ಕ್ಯಾಂಪಿನಲ್ಲಿ ವಾಸವಾಗಿರುವ ಜಿ.ಸೂರ್ಯನಾರಾಯಣ ಇವರು ಬಂದು ಹೇಳಿದ್ದೇನೆಂದರೆ ನಾನು ಟ್ರ್ಯಾಕ್ಟರ ಹಿಂದೆ ನನ್ನ ಮೊಟಾರ ಸೈಕಲ ಮೇಲೆ ಹೋಗುತ್ತಿದ್ದಾಗ ನನ್ನ ಮುಂದುಗಡೆ ಕೆನಾಲ ರಸ್ತೆಯ ಮೇಲೆ ಬಿ. ರಾಮಕೃಷ್ಣ ಇವರು ಟ್ರ್ಯಾಕ್ಟರ ನಡೆಸುತ್ತಿದ್ದು, ರಾಜಶೇಖರ ಹದನೂರ ಎಂಬುವರ ಹೊಲದ ಹತ್ತಿರ ಹೋಗುತ್ತಿದಂತೆ ದನಗಳು ಬಂದಾಗ ಬಿ.ಡಿ.ರಾಮಕೃಷ್ಣ ಇವರು ತನ್ನ ಟ್ರ್ಯಾಕ್ಟರನು ನಿಷ್ಕಾಳಜಿತನದಿಂದ ಕಟ್ ಹೊಡೆಯಲು ಟ್ರ್ಯಾಕ್ಟರ ಕೆನಾಲ ಎಡಬದಿಗೆ ಉರುಳತ್ತಿದ್ದಾಗ ಚಾಲಕ ಬಿ.ಡಿ.ರಾಮಕೃಷ್ಣ ಇವರು ಟ್ರ್ಯಾಕ್ಟರದಿಂದ ಕೆಳಗೆ ಹಾರಿದರು ಆಗ ಟ್ರ್ಯಾಕ್ಟರ ಪಲ್ಟಿಯಾಗಿ ನಾಲ್ಕು ಗಾಲಿಗಳು ಮೇಲಾಗಿ ಬಿದ್ದು, ಒಳಗಡೆ ನಿನ್ನ ಗಂಡ ಸಿಕ್ಕುಬಿದ್ದು, ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಂತ ಹೇಳಿದ ಕೂಡಲೆ ನಾನು ಗಾಬರಿಗೊಂಡು ನನ್ನೊಂದಿಗೆ ನಮ್ಮೂರಿನ ಬಸವರಾಜ ಇಬ್ಬರು ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ರಾಜೇಶೇಖರ  ಇವರು ಹೊಲದ ಕೆನಾಲ ರಸ್ತೆಯ ಎಡಬದಿಯಲ್ಲಿ ಟ್ರ್ಯಾಕ್ಟರನು ನಾಲ್ಕು ಗಾಲಿಗಳು ಮೇಲಾಗಿ ಬಿದ್ದು, ಅದರ ಕೆಳಗಡೆ ನನ್ನ ಗಂಡನು ಕೆಳಗಿ ಮುಖ ಮಾಡಿ ಬಿದ್ದಿದ್ದು, ಅವನ ತಲೆಯ ಮೇಲ್ಬಾಗದಲ್ಲಿ ಎರಡು ದೊಡ್ಡ ಗಾಲಿಯ ಇಂಜನ್ ಬಿದ್ದು, ಭಾರಿ ಗುಪ್ತಪೆಟ್ಟಾಗಿ ಚಪ್ಪಟೆಯಾಗಿ ಉಸಿಉಗಟ್ಟಿ ಮೃತಪಟ್ಟಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಗುಂಡಪ್ಪ ತಂದೆ ತಮ್ಮಣ್ಣ ಮರಗಮಕೋಳಿ ಸಾ|| ನಿಂಬರ್ಗಾ ಇವರು ದಿನಾಂಕ 28/06/2016 ರಂದು ನಿಂಬರ್ಗಾ ಗ್ರಾಮದ ಸರ್ಕಾರಿ ಆಸ್ಪತ್ರೆ ಮುಂದೆ ತಾನು ಮತ್ತು ತನ್ನ ಹೆಂಡತಿಯಾದ ಕಾಶಿಬಾಯಿ ಇಬ್ಬರೂ ಹಾಯ್ದು ಹೋಗುವಾಗ ಶಂಕರ ತಂದೆ ಸುಂಕಪ್ಪ ಮರಗಮಕೋಳಿ ಸಂಗಡ 2 ಜನರು ಸಾ|| ನಿಂಬರ್ಗಾ ಕುಡಿಕೊಂಡು ಹಳೆಯ ವೈಷಮ್ಯದಿಂದ ತಮ್ಮಿಬ್ಬರಿಗೆ ತಡೆದು ಹಲ್ಲೆ ಮಾಡಿ ಅವಾಚ್ಯವಾಗಿ ಬೈದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: