ವರದಕ್ಷಣೆ ಕಿರುಕಳ ಪ್ರಕರಣ :
ಶಾಹಾಬಾದ ನಗರ
ಠಾಣೆ : ಶ್ರೀಮತಿ
ಸಂಗೀತಾ ಗಂಡ ಭೀಮು @ ಭೀಮಶ್ಯಾ ಇವರನ್ನು ದಿನಾಂಕ :
28/04/2015 ರಂದು ಮರತೂರ ಗ್ರಾಮದದಲ್ಲಿ ಭೀಮು @ ಭೀಮಶ್ಯಾ
ಇತನ ಸಂಗಡ ಮದುವೆ ಮಾಡಿಕೊಂಟಿದ್ದು ಮದುವೆ ಸಮಯದಲ್ಲಿ 2 ತೋಲಿ ಬಂಗಾರ ಮತ್ತು 15,000/- ರೂ ಬೆಲೆ
ಬಾಳುವ ಉಪಕರಣಗಳು ಕೊಟ್ಟಿದ್ದು ಲಗ್ನ ನಂತರ ತಾನು ಗಂಡನ ಮನೆಯಲ್ಲಿ ನಡೆಯಲು ಹೋದಾಗ ತನ್ನ ಗಂಡ ಭೀಮು ಅತ್ತೆ ಸುಬ್ಬಮ್ಮ ಮಾವ
ಶಂಕರ ಗಂಡನ ತಂಗಿ ಸಂತೋಷಿ ಇವರಲ್ಲಿಯ ತವರುಮನಯಿಂದ ವರದಕ್ಷಿಣಗೆ ತರಬೇಕು ನಿನಗೆ ಅಡುಗೆ ಮಾಡಲು
ಬರುವುದಿಲ್ಲ ಅಂತಾ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಾ ಕೈಯಿಂದ ಹೊಡೆ ಬಡೆ ಮಾಡಿದ್ದು
ಅದೆ ನಂತರ ತಾನು ತನ್ನ ಗಂಡ ಭೀಮು @ ಭೀಮಶ್ಯಾ
ಮಾವ ಶಂಕರ ಮತ್ತು ಗಂಡನ ಸಹೋದರಿಯಾದ ರಾಧಾಬಾಯಿ , ಅಂಬಿಕಾ
ಇವರೆಲ್ಲಾರೂ ಪುಣೆಯಲ್ಲಿ ಜಗಳ ತೆಗೆದು ಹೊಡೆ ಬಡೆ ಮಾಡಿ ವರದಕ್ಷಣೆ ಕಿರುಕುಳ ನೀಡಿರುತ್ತಾರೆ ಅಂಥಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ. 26-7-2016 ರಂದು ಮುಂಜಾನೆ 8-30
ಎ.ಎಂ.ಕ್ಕೆ. ನನ್ನ ಗಂಡ ಶಿವಾನಂದ ಪೊಲೀಸ್ ಪಾಟೀಲ್ ಇವರು ತಮ್ಮ ಮೋಟಾರ ಸೈಕಲ ಮೇಲೆ ಕಲಬುರಗಿಯಿಂದ
ಹರಸೂರಕ್ಕೆ ಹೋಗುವಾಗ ಹುಮನಾಬಾದ ರಿಂಗರೋಡ ಮೇಲೆ ಸೇಡಂ ರಿಂಗರೋಡ ಕಡೆಯಿಂದ ಟ್ಯಾಂಕರ ಲಾರಿ
ನಂ.ಎಂ.ಹೆಚ12 ಹೆಚ.ಡಿ.5173 ನೆದ್ದರ ಚಾಲಕ ತನ್ನ
ಟ್ಯಾಂಕರನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನನ್ನಗಂಡನಿಗೆ ಜೋರಾಗಿ ಡಿಕ್ಕಿ ಹೊಡೆದಿದ್ದು ಲಾರಿಯ ಟೈರ ಹೊಟ್ಟೆಯ
ಮೇಲೆ ಹೋಗಿದ್ದರಿಂದ ಹೊಟ್ಟೆಗೆ , ಎದೆಗೆ
,ಭಾರಿಗಾಯಗಳಾಗಿ ಮೃತ ಪಟ್ಟಿದ್ದು
ಇದ್ದು , ಸದರಿ ಟ್ಯಾಂಕರ ಚಾಲಕ
ವಾಹನ ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿದ್ದು. ಸದರಿ ಟ್ಯಾಂಕರ ಲಾರಿ ನಂ. ಎಂ.ಹೆಚ.12 ಹೆಚಡಿ.5173
ನೆದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀಮತಿ ಸರಸ್ವತಿ ಗಂಡ ಶಿವಾನಂದ ಪೊಲೀಸ್ ಪಾಟೀಲ್ ಸಾ;ಹರಸೂರ
ತಾ;ಜಿ;ಕಲಬುರಗಿ
ಹಾವ; ಜಗತ್ತ ಕಲಬುರಗಿ ರವರು ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment