POLICE BHAVAN KALABURAGI

POLICE BHAVAN KALABURAGI

21 June 2016

Kalaburagi District Reported Crimes

ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ದತ್ತು ತಂದೆ ಅಣ್ಣಪ್ಪ ಕೊಳಿ ಸಾ: ಮಣ್ಣೂರ ರವರು ತಮ್ಮೂರಿನ ಮಹಾದೇವ ತಂ/ಜಟ್ಟೆಪ್ಪ ತಳವಾರ ರವರಲ್ಲಿ ಕೆಲಸಕ್ಕೆ ಇದ್ದು, ನನ್ನ ಹೆಂಡತಿ ಮಕ್ಕಳೊಂದಿಗೆ ಅವರ ಹೊಲದಲ್ಲಿನ ಮೆಟಗಿಯಲ್ಲಿ ವಾಸವಾಗಿರುತ್ತೇನೆ. ನಮ್ಮ ಮಾಲಿಕರು ಮಹಾರಾಷ್ಟ್ರದ ಅಕ್ಲೂಜ್ ನಲ್ಲಿ ವಾಸವಾಗಿದ್ದು ಆಗಾಗ ಬಂದು ಹೊಲದ ಕೆಲಸಗಳನ್ನು ನೋಡಿಕೊಂಡು ಹೋಗುತ್ತಾರೆ. ನಮ್ಮ ಮಾಲಿಕರ ಹೊಲದಲ್ಲಿ ಕಬ್ಬು ಬೆಳೆದಿರುತ್ತೇವೆ. ದಿನಾಂಕ:18-06-2016 ರಂದು ಬೆಳಿಗ್ಗೆ 07-00 ಗಂಟೆ ಸುಮಾರಿಗೆ ನಾನು ಕಬ್ಬಿನ ಗದ್ದೆಯಲ್ಲಿ ಕಬ್ಬಿಗೆ ನೀರುಣಿಸುತ್ತಾ ಹೋದಾಗ ಕಬ್ಬಿನ ಕವಲಿ(ಸಾಲು) ಗಳಲ್ಲಿ ಒಬ್ಬ ಗಂಡು ವ್ಯಕ್ತಿಯ ಶವ ಬೋರಲಾಗಿ ಬಿದ್ದಿದ್ದು ಕಂಡುಬಂದಿರುತ್ತದೆ. ಕೂಡಲೆ ನಾನು ಈ ವಿಷಯವನ್ನು ನಮ್ಮ ಮಾಲಿಕರಾದ ಮಹಾದೇವ ತಳವಾರರವರಿಗೆ ಪೋನ ಮೂಲಕ ತಿಳಿಸಿರುತ್ತೇನೆ. ಅವರು ಈ ವಿಷಯವನ್ನು ಅಫಜಲಪೂರ ಪೊಲೀಸ್ ಠಾಣೆಗೆ ತಿಳಿಸಿದ್ದು, ಪೊಲೀಸನವರು ಬಂದ ನಂತರ ಮೃತ ವ್ಯಕ್ತಿಯ ಶವವನ್ನು ಹೊರಳಿಸಿ ನೋಡಿದ್ದು ಸದರಿಯವನ ಮೈಮೇಲೆ ಒಂದು ಬೂದು ಬಣ್ಣದ ಪ್ಯಾಂಟ ಮತ್ತು ಬಿಳಿ ಬಣ್ಣದ ನೀಲಿ ಹಾಗು ಹಸಿರು ಪಟ್ಟಿಗಳುಳ್ಳ ಚೌಕಡಿ ಶರ್ಟ ಇರುತ್ತದೆ. ಶರ್ಟಿನ ಕಾಲರ್ ಮೇಲೆ LIFE STYLE INDI ಎಂಬ ಲೇಬಲ್ ಇರುತ್ತದೆ. ಸದರಿಯವನ ವಯಸ್ಸು ಅಂದಾಜು 25 ರಿಂದ 30 ವರ್ಷ ಇದ್ದು ಸೊಂಟದಲ್ಲಿ ದಾರದ ಉಡದಾರ ಮತ್ತು ಕೊರಳಲ್ಲಿ ಸಣ್ಣ ರುದ್ರಾಕ್ಷಿ ಇದ್ದುದರಿಂದ ಹಿಂದೂ ಇದ್ದಂತೆ ಕಂಡುಬರುತ್ತದೆ. ಸದರಿಯವನಿಗೆ ಯಾರೋ ದುಷ್ಕರ್ಮಿಗಳು ಯಾವುದೊ ದುರುದ್ದೇಶದಿಂದ ನಮ್ಮ ಮಾಲಿಕರ ಹೊಲದ ಪಕ್ಕದ ಮಲ್ಲಪ್ಪ ಪೂಜಾರಿ ರವರ ಹೊಲದಲ್ಲಿ ಯಾವುದೊ ಹರಿತವಾದ ಆಯುಧಗಳಿಂದ ಕುತ್ತಿಗೆಗೆ, ಗದ್ದಕ್ಕೆ, ಬಾಯಿಗೆ, ಮೂಗಿನ ಮೇಲೆ, ತಲೆಗೆ, ಎರಡೂ ಕೈಗಳ ಮೇಲೆ ಮತ್ತು ಶರೀರದ ಇನ್ನಿತರ ಕಡೆಗಳಲ್ಲಿ ಹೊಡೆದು ಭಾರಿರಕ್ತಗಾಯಗಳು ಪಡಿಸಿ ಕೊಲೆ ಮಾಡಿ ಸಾಕ್ಷಿ ಪುರಾವೆಗಳು ನಾಶಪಡಿಸುವ ಉದ್ದೇಶದಿಂದ ಶವವನ್ನು ನಮ್ಮ ಮಾಲಿಕರ ಕಬ್ಬಿನ ಗದ್ದೆಯಲ್ಲಿ ಎಸೆದಿರುತ್ತಾರೆ. ಸದರಿಯವನಿಗೆ ಕೊಲೆ ಮಾಡಿದ ಸ್ಥಳದಲ್ಲಿ ಹಲ್ಲುಗಳು, ತಲೆಮೇಲಿನ ಕೂದಲು ಮತ್ತು ರಕ್ತ ಬಿದ್ದಿರುತ್ತದೆ. ಸದರಿ ಮೃತನ ಎತ್ತರ ಅಂದಾಜು 05 ಫೀಟ್ 05 ಇಂಚು ಇದ್ದು, ಗೋದಿಗೆಂಪು ಬಣ್ಣ ಇರುತ್ತದೆಸದರಿ ಘಟನೆಯು ದಿನಾಂಕ-17-06-2016 ಮತ್ತು ದಿನಾಂಕ-18-06-2016 ರ ಬೆಳಿಗ್ಗೆ 07-00 ಗಂಟೆಯ ಮದ್ಯದ ಅವಧಿಯಲ್ಲಿ ಸಂಭವಿಸಿರಬಹುದು. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ: 20/06/2016 ರಂದು ಬೆಳ್ಳಿಗೆ ದೇವಿ ನಗರ ಬಡಾವಣೆಯ ಭವಾನಿ ಗುಡಿಯ ಮುಂದುಗಡೆ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ಯುವಕನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟ ನಡೇಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶ್ರೀ ಡಬ್ಲೂ.ಹೆಚ್‌.ಕೊತ್ವಾಲ್‌ ಪಿಎಸ್‌‌ಐ ರಾಘವೇಂದ್ರ ನಗರ ಪೊಲೀಸ ಠಾಣೆರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಾಗಿ ನಿಂತು ನೋಡಿ ಖಚಿತಪಡಿಸಿಕೊಂಡು ದಾಳಿ ಮಾಡಿ ಒಬ್ಬ ಯುವಕನನ್ನು ಹೀಡಿದು ಆತನ ಹೆಸರು ವಿಚಾರಿಸಲು ಅವನು ತನ್ನ ಹೆಸರು ಭೀಮಾಶಂಕರ ತಂದೆ ಕಾಶೀನಾಥ ಗೇಣಿ ಸಾ: ದುದನಿ ತಾ: ಅಕ್ಕಲಕೊಟ ಮಹಾರಾಷ್ಟ್ರ ಹಾ:ವ: ಜೆ.ಆರ್ ನಗರ ಕಲಬುರಗಿ ಅಂತಾ ತಿಳಿಸಿದನು . ಆತನ ಅಂಗ ಶೋದನೆ ಮಾಡಲು ಅವನ ಹತ್ತಿರ ಮಟಕಾ ಜೂಜಾಟ ಸಂಬಂಧಿಸಿದ ನಗದು ಹಣ 2770=00 ರೂ ಮತ್ತು 5 ಮಟಕಾ ನಂಬರ ಬರೆದ ಚಿಟಿಗಳು ಮತ್ತು ಒಂದು ಬಾಲ ಪೇನ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

No comments: