ಕಳವು ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ:
14/06/2016 ರಂದು ರಾತ್ರಿ 8-00 ಪಿಎಮ್ ಕ್ಕೆ ನನ್ನ ದಾಲಮಿಲದ ಕೆಲಸ ಮುಗಿಸಿಕೊಂಡು ದಾಲಮಿಲದ
ಶೇಟರ ಕೀಲಿ ಹಾಕಿಕೊಂಡು ಮನೆಗೆ ಬಂದಿರುತ್ತೇನೆ. ನಂತರ ದಿನಾಂಕ: 15/06/2016 ರಂದು ಬೆಳೆಗ್ಗೆ
ನಮ್ಮ ದಾಲಮಿಲದ ಮುನೀಮ ಶಬ್ಬೀರ ಇತನು ಫೋನ ಮಾಡಿ ದಾಲಮಿಲದ ಕಿಟಕಿ ಹತ್ತಿರ ಮತ್ತು ಕಾಂಪೌಂಡ
ಹತ್ತಿರ ಬೆಳೆ ಬಿದ್ದಿದ್ದು ದಾಲಮಿಲದ ಕಿಟಕಿಯ ರಾಡ ಸಹ ಮುರಿದಿದ್ದು ದಾಲಮಿಲ ಕಳ್ಳತನವಾಗಿರಬಹುದು
ಬೇಗ ಬನ್ನಿ ಅಂತ ತಿಳಿಸಿದ್ದು ಫಿರ್ಯಾದಿ ತನ್ನ
ಅಣ್ಣನೊಂದಿಗೆ ಹೋಗಿ ನೋಡಲು ತಮ್ಮ ದಾಲಮಿಲದ
ಕಿಟಕಿ ರಾಡ ಮುರಿದಿದ್ದು ಕಿಟಕಿಯಿಂದ ಕಾಂಪೌಂಡವರೆಗೆ ತಮ್ಮ ದಾಲಮಿಲದ ಬೆಳೆ ಬಿದ್ದಿದ್ದು
ಗಾಬರಿಯಿಂದ ಒಳಗೆ ಹೋಗಿ ನೋಡಲು ಬೆಂಗಳೂರಿಗೆ ಕಳುಹಿಸಲು ಇಟ್ಟಿದ್ದ ಪ್ರತಿ 100 ಕೆಜಿ ತೂಕವುಳ್ಳ
30 ಚೀಲ ತೋಗರಿ ಅಂದರೆ 30 ಕ್ವಿಂಟಲ್ ತೊಗರಿ ಅ.ಕಿ= 348000/-ರೂ ನೇದ್ದನ್ನು ಯಾರೋ ಕಳ್ಳರು ದಿನಾಂಕ: 14/06/2016
ರಂದು 08-00 ಪಿಎಮ್ ಗಂಟೆಯಿಂದ ದಿನಾಂಕ: 15/06/2016ರ
10-00 ಎಎಮ್ ಗಂಟೆಯ ಮಧ್ಯದ ಅವಧಿಯಲ್ಲಿ ದಾಲಮಿಲದ ಕಿಟಕಿ ರಾಡ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಶ್ರೀ
ಮೊಹಮ್ಮದ್ದ ಇದ್ರೀಸ್
ತಂದೆ ಮೊಹಮ್ಮದ್ ಹನೀಫ್ ಐಸ್ ಫ್ಯಾಕ್ಟರಿವಾಲೇ ಸಾ : ಮಿಜಗುರಿ ಕಲಬುರಗಿ ರವರು ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ :
ದಿನಾಂಕ 18-06-2016 ರಂದು ಬೆಳಿಗ್ಗೆ ನಾನು ಹಳೆ ಆರ್.ಜಿ. ನಗರದಲ್ಲಿರುವ ನವಿಲಸರ್ ಇವರ ಮನೆಗೆ
ವೇದಾಂತ ಪಾಠ ಕೇಳಲು ನಾನು ಒಬ್ಬನೆ ನಡೆದುಕೊಂಡು ಹೋಗಿ ವೇದಾಂತ ಪಾಠ ಮುಗಿದ ನಂತರ ವಾಪಸ್ಸ ಮನೆಯ
ಕಡೆಗೆ ಹೋಗುವ ಸಲುವಾಗಿ ನಡೆದುಕೊಂಡು ಹೋಗುತ್ತಿರುವಾಗ ದಾರಿ ಮದ್ಯ ತಿಳಗುಳ ಆಸ್ಪತ್ರೆಯ ಎದುರು
ರೋಡ ಮೇಲೆ ಮೋಟಾರ ಸೈಕಲ ನಂ ಕೆಎ-32-ಎಕ್ಸ-3974 ನೇದ್ದರ ಸವಾರನು ತನ್ನ ಮೋಟಾರ ಸೈಕಲನ್ನು
ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ನನಗೆ ಡಿಕ್ಕಿಪಡಿಸಿ ಅಪಘಾತ
ಮಾಡಿ ಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ
: ದಿನಾಂಕ 18-06-2016 ರಂದು ಮದ್ಯಾಹ್ನ ನಾನು
ಮತ್ತು ನನ್ನ ಗಂಡನಾದ ಶರಣಪ್ಪಾ ಇಬ್ಬರೂ ಕೂಡಿಕೊಂಡು ನನ್ನ ಮಗನಾದ ಶರತ ಇತನಿಗೆ ಕಲಬುರಗಿಯ ಮಕ್ಕಳ
ಡಾಕ್ಟರ್ ಅನರುಪ ಶಹಾ ಹತ್ತಿರ ತೊರಸಲಿಕ್ಕೆ ಊರಿನಿಂದ ನನ್ನ ಗಂಡ ಚಲಾಯಿಸುತ್ತಿರುವ ಮೋಟಾರ ಸೈಕಲ
ನಂ ಕೆಎ-32-ಇಎಫ್-9769 ನೇದ್ದರ ಮೇಲೆ ಬಂದು ಆಸ್ಪತ್ರೆಯಲ್ಲಿ ತೋರಿಸಿಕೊಂಡು ವಾಪಸ್ಸ ಕೇಂದ್ರ
ಬಸ್ಸ ನಿಲ್ದಾಣ ಹತ್ತಿರ ಬರುವ ಸ್ಕ್ಯಾನಿಂಗ ಸೆಂಟರನಲ್ಲಿ ಸ್ಕ್ಯಾನಿಂಗ ಮಾಡಿಸುವ ಸಲುವಾಗಿ ಸುಪರ
ಮಾರ್ಕೆಟನಿಂದ ಕೊರ್ಟ ಕ್ರಾಸ ಮುಖಾಂತರವಾಗಿ ನನ್ನ ಗಂಡನು ಮೋಟಾರ ಸೈಕಲ ಎಸ.ವಿ.ಪಿ. ಸರ್ಕಲ ಕಡೆಗೆ
ಸುತ್ತಾಕಿಕೊಂಡು ಕೇಂದ್ರ ಬಸ್ಸ ನಿಲ್ದಾಣ ಕಡೆಗೆ ಹೋಗುವ ಕುರಿತು ಮೋಟಾರ ಸೈಕಲ ಚಲಾಯಿಸಿಕೊಂಡು
ಹೋಗುವಾಗ ಎಸ.ವಿ.ಪಿ. ಸರ್ಕಲ ಹತ್ತೀರ ರೋಡ ಮೇಲೆ ಕೇಂಧ್ರ ಬಸ್ಸ ನಿಲ್ದಾಣ ರೋಡ ಕಡೆಯಿಂದ ಜಗತ
ಸರ್ಕಲ ರೋಡ ಕಡೆಗೆ ಹೋಗುವ ಕುರಿತು ಟಂ ಟಂ ಗೂಡ್ಸನಂಬರ ಕೆಎ-32-ಬಿ-8684 ನೇದ್ದರ ಚಾಲಕನು ತನ್ನ ಟಂ
ಟಂ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಕ್ಕೆ
ಡಿಕ್ಕಿಪಡಿಸಿ ಅಪಘಾತ ಮಾಡಿ ಗಾಯಗೊಳಿಸಿ ತನ್ನ ಟಂ ಟಂ ಗೂಡ್ಸ ವಾಹನ ಅಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವು
ಕಚ್ಚಿ ಮೃತಪಟ್ಟ ಪ್ರಕರಣ :
ರೇವೂರ ಠಾಣೆ :
ದಿನಾಂಕ:16-06-2016 ರಂದು ರಾತ್ರಿ ನಾನು ಮತ್ತು ನನ್ನ
ಹೆಂಡತಿಯಾದ ನಿಂಗಮ್ಮ ಹಾಗೂ ನನ್ನ ಮೂರು ಜನ ಮಕ್ಕಳು ಎಲ್ಲರೂ ಕೂಡಿಕೊಂಡು ಊಟ ಮಾಡಿ ನಮ್ಮ ಮನೆಯ
ಪಡಸಾಲಿಗೆಯಲ್ಲಿ ಮಲಗಿಕೊಂಡಿದ್ದೆವು. ದಿನಾಂಕ:17-06-2016 ರಂದು 5 ಎ.ಎಮ್.ಸುಮಾರಿಗೆ ನನ್ನ
ಹಿರಿಯ ಮಗನಾದ ಶ್ರೀಕಾಂತ ಈತನು ನನಗೆ ಎಬ್ಬಿಸಿ ಅಪ್ಪಾ ನನ್ನ ಎಡಗಾಲ ಬೆರಳಿಗೆ ಏನೋ ಕಚ್ಚಿದಂತೆ
ಆಗಿದೆ ನನಗೆ ಚರಚರನೆ ಊರಿದಂತಾಗುತ್ತಿದೆ ಅಂತಾ ಹೇಳಿದನು. ನಾನು ಆಗ ನನ್ನ ಹೆಂಡತಿಗೆ ಎಬ್ಬಿಸಿ
ಇಬ್ಬರು ಕೂಡಿ ನೋಡಲಾಗಿ ನನ್ನ ಮಗ ಶ್ರೀಕಾಂತನ ಎಡಕಾಲಿನ ಕಿರುಬೆರಳಿನ ಪಕ್ಕದ ಬೆರಳಿನ
ಕೆಳಭಾಗದಲ್ಲಿ ಸೂಜಿಯಿಂದ ಚೂರಿದ ಹಾಗೆ ಗಾಯವಾಗಿದ್ದು ಕಂಡು ನಾವು ಇರುವೆ ಕಡಿದಿರಬಹುದೆಂದು
ಭಾವಿಸಿ ಹಾಗೆ ಮಲಗಿಸಿ ನಾವು ಮಲಗಿದೇವು. ನಂತರ 6 ಎ,ಎಮ್.ಸುಮಾರಿಗೆ ಶ್ರೀಕಾಂತನು ನನ್ನ ಕಾಲ ಬೆರಳು ಬಹಳ
ಉರಿಯುತ್ತಿದೆ ಅಂತಾ ಅಂದಾಗ ನಮಗೆ ಹಾವು ಕಡಿದಿರಬಹುದೆಂದು ಸಂಶಯ ಬಂದು ನಾನು, ನನ್ನ ಹೆಂಡತಿ ಮತ್ತು ನನ್ನ ಚಿಕ್ಕಪ್ಪನ ಮಗನಾದ
ಸಿದ್ದು ತಂದೆ ಮಹಾಂತಪ್ಪ ಮೂರು ಜನ ಕೂಡಿ ಶ್ರೀಕಾಂತನಿಗೆ ಭೈರಾಮಡಗಿ ಗ್ರಾಮಕ್ಕೆ ಕರೆದುಕೊಂಡು
ಹೋಗಿ ನಾಟಿ ಔಷದ ಕೋಡಿಸಿರುತ್ತೇವೆ. ಆದರು ನೋವು ಕಡಿಮೆ ಯಾಗದ ಕಾರಣ ನಾನು ಮತ್ತು ನನ್ನ
ಚಿಕ್ಕಪ್ಪನ ಮಗನಾದ ಸಿದ್ದು ತಂದೆ ಮಹಾಂತಪ್ಪ ಹಡಪದ ಇಬ್ಬರು ಕೂಡಿಕೊಂಡು ನಮ್ಮ ಗ್ರಾಮದ ಸಿದ್ದು
ತಂದೆ ಮಹಾದೇವಪ್ಪ ಮಾಲಿಪಾಟೀಲ ರವರ ಜೀಪಿನಲ್ಲಿ ನನ್ನ ಮಗ ಶ್ರೀಕಾಂತನಿಗೆ ಕರೆದುಕೊಂಡು ಬಸವೇಶ್ವರ
ಆಸ್ಪತ್ರೆಗೆ ಉಪಚಾರ ಕುರಿತು ದಾಖಲು
ಮಾಡಿರುತ್ತೇವೆ. ನನ್ನ ಮಗ ಉಪಚಾರ ಫಲಿಸದೆ ಇಂದು ದಿನಾಂಕಃ 18/06/2016 ರಂದು 8-20 ಎ,ಎಮ್ ಕ್ಕೆ ಆಸ್ಪತ್ರೆಯಲ್ಲಿಯೇ ಮೃತ
ಪಟ್ಟಿರುತ್ತಾನೆ. ಅಂತಾ ಶ್ರೀ ಮಲ್ಲಿಕಾರ್ಜುನ ತಂದೆ ಅಂಬಾರಾಯ ಹಡಪದ ಸಾ:ಮದರಾ(ಬಿ) ಗ್ರಾಮ
ತಾ:ಅಫಜಲಪೂರ ರವರು ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ
ಜಾತಿ ನಿಂದನೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ
: ದಿನಾಂಕ
17-06-2016 ರಂದು ಬೆಳಿಗ್ಗೆ ನನ್ನ ಹೊಲವನ್ನು ಬಿತ್ತಲು ಹೊರ ಊರಿನ ಟ್ರಾಕ್ಟರನ್ನು
ಕರೆಯಿಸಿ ನಾನು ನನ್ನ ಅಳಿಯ ಸಿದ್ದಪ್ಪ, ನನ್ನ ಹೆಂಡತಿಯಾದ ಚೆಂದ್ರಭಾಗವ್ವ,
ಮಗನಾದ ಲಕ್ಷ್ಮಣ ಹಾಗು ನಮ್ಮೂರಿನ ನಿಂಗಪ್ಪ ಮತ್ತು ನನ್ನ ಮಗಳ ಗಂಡನಾದ ನಾಗಪ್ಪ ಹಿಗೆಲ್ಲರೂ
ಕೂಡಿಕೊಂಡು ಟ್ರಾಕ್ಟರ್ ತೆಗೆದುಕೊಂಡು ನಮ್ಮ ಹೊಲಕ್ಕೆ ಹೋಗಿ ಅಲ್ಲಿ ಟ್ರಾಕ್ಟರ್ ಮುಖಾಂತರ ಹೊಲವನ್ನು
ಬಿತ್ತುತ್ತಿದ್ದೆವು ಆಗ ನಮ್ಮೂರಿನ 1) ಹುಲಕಂಠರಾಯ ತಂದೆ ಬಸವಂತ್ರಾಯ ಹೇರೂರ,
2) ಶಿವಶರಣಪ್ಪ ತಂದೆ ಬಸವಂತ್ರಾಯ ಹೆರೂರ 3) ಸೋಮನಿಂಗಪ್ಪ
ತಂದೆ ಬಸವಂತ್ರಾಯ ಹೇರೂರ, 4) ಬಸವಂತ್ರಾಯ ತಂದೆ ಸೊಮನಿಂಗಪ್ಪ ಹೇರೂರ,
5) ಚಂದ್ರಾಮ ತಂದೆ ರಾವುತಪ್ಪ ಚಿರಲಿಂಗ, 6) ಸಿದ್ದವ್ವ
ಗಂಡ ಬಸವಂತ್ರಾಯ ಹೆರೂರ, 7) ಲಲಿತಾಬಾಯಿ ಗಂಡ ಸೋಮನಿಂಗಪ್ಪ ಹೆರೂರ
8) ಗುರುಬಾಯಿ ಗಂಡ ಹುಲಕಂಠರಾಯ ಹೆರೂರ ಹಿಗೆಲ್ಲರೂ ಕೂಡಿಕೊಂಡು ಬಂದವರೆ ಅವರೆಲ್ಲರೂ
ನನ್ನ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ನನಗೆ ಅವರಲ್ಲಿ ಹುಲಕಂಠರಾಯ ಇತನು “ ಏ ಮಾದಿಗ ಸೂಳೆ ಮಗನೆ, ನಿನಗೆ ಎಷ್ಟು ಸೊಕ್ಕು ನಮಗೆ ಹೊಲ ಖರಿದಿಕೊಟ್ಟು ನಮ್ಮ ಮೇಲೆ ಜೇವರ್ಗಿ ಠಾಣೆಯಲ್ಲಿಯೂ ಕೇಸು
ಮಾಡಿಸಿದ್ದಿ” ಅಂತಾ ಜಾತಿ ನಿಂದನೆ ಮಾಡಿ ಬೈಯುತ್ತಿದ್ದಾಗ ಸೊಮನಿಂಗಪ್ಪ, ಬಸವಂತ್ರಾಯ ನನಗೆ ತಡೆದು
ನಿಲ್ಲಿಸಿ ಕೈಯಿಂದ ಹೊಟ್ಟೆಗೆ, ಬೆನ್ನಿಗೆ, ಮೈ
ಕೈಗೆ ಹೊಡೆ ಬಡೆ ಮಾಡಿ ಗುಪ್ತ ಪೆಟ್ಟು ಮಾಡಿರುತ್ತಾರೆ. ಆಗ ನನ್ನ ಹೆಂಡತಿಯ
ತಮ್ಮನಾದ ಸಿದ್ದಪ್ಪ ಜಗಳ ಬಿಡಿಸಲು ಬಂದಾಗ ಶಿವಶರಣಪ್ಪ ಇತನು ಕಲ್ಲಿನಿಂದ ಅವನ ತೆಲೆಗೆ ಹೊಡೆದು ರಕ್ತಗಾಯ
ಪಡಿಸಿದನು. ಆಗ ಹುಲಕಂಠರಾಯ ಇತನು ಬಡಿಗೆಯಿಂದ ಅವನ ಬೆನ್ನಿಗೆ ಹೊಡೆದನು.
ಅಲ್ಲದೆ ಸೊಮನಿಂಗಪ್ಪ, ಬಸವಂತ್ರಾಯ ಇಬ್ಬರು ನನಗೆ ಹೋಡೆಯುವದನ್ನು
ಬಿಟ್ಟು ಸಿದ್ದಪ್ಪನಿಗೆ ನೆಲಕ್ಕೆ ಹಾಕಿ ಕಾಲಿನಿಂದ ಒದ್ದಿರುತ್ತಾರೆ. ನನ್ನ
ಹೆಂಡತಿಯಾದ ಚಂದ್ರಭಾಗವ್ವ ಜಗಳವನ್ನು ಬಿಡಿಸಿಕೊಳ್ಳಲು ಬಂದಾಗ ಅವಳಿಗೆ ಚಂದ್ರಾಮ ಚಿರಲಿಂಗ ಇತನು ಸೀರೆ
ಹಿಡಿದು ಎಳೆದಾಡಿ ಕೈ ಹಿಡಿದು ಜೋರಾಗಿ ಜಗ್ಗಾಡಿ ಮಾನಭಂಗ ಮಾಡಿರುತ್ತಾನೆ. ನನ್ನ ಹೆಂಡತಿಗೆ ಜಗ್ಗಾಡುವದನ್ನು ನನ್ನ ಮಗ ಬಿಡಿಸಿಕೊಳ್ಳಲು ಹೊದಾಗ ಚಂದ್ರಾಮ ಇತನು ಕೈಯಿಂದ
ನನ್ನ ಮಗನ ಹೊಟ್ಟೆಯಲ್ಲಿ ಹೊಡೆದಿರುತ್ತಾನೆ. ಸಿದ್ದವ್ವ ಹೇರೂರ,
ಲಲೀತಾಬಾಯಿ ಹೆರೂರು, ಗುರುಬಾಯಿ ಹೆರೂರು ಇವರೆಲ್ಲರೂ ನನ್ನ
ಹೆಂಡತಿಗೆ ರಂಡಿ ಬೋಸಡಿ ಹೊಲವು ಮಾರಿ ಮತ್ತೆ ಹೊಲದಲ್ಲಿ ಬಿತ್ತಿಸಲು ಬಂದಿದ್ದಿ ಅಂತಾ ಬೈದು ಅವರೆಲ್ಲರೂ
ನೆಲಕ್ಕೆ ಹಾಕಿ ಕೈಯಿಂದ ಮೈ ಕೈಗೆ ಬೆನ್ನಿಗೆ, ಹೊಟ್ಟೆಗೆ ಹೊಡೆ-ಮಾಡಿ ಗುಪ್ತ ಪೆಟ್ಟು ಮಾಡಿರುತ್ತಾರೆ. ಆಗ ನನ್ನ ಅಳಿಯ ನಾಗಪ್ಪ
ಹಾಗು ನನ್ನೊಂದಿಗೆ ಇದ್ದ ನಮ್ಮೂರಿನ ನಿಂಗಪ್ಪ ಜಗಳ ಬಿಡಿಸಿಕೊಂಡಿರುತ್ತಾರೆ. ಅವರೆಲ್ಲರೂ ಅಲ್ಲಿಂದ ಹೋಗುವಾಗ “ಮಾದಿಗ ಸೂಳೆ ಮಗನೆ ಇನ್ನೊಮ್ಮೆ ಹೊಲದಲ್ಲಿ ಕಾಲು ಇಟ್ಟರೆ ನಿನಗೆ ಖಲಾಸ ಮಾಡಿಯೇ ಬಿಡುತ್ತೆವೆ” ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಶ್ರೀ ಕಾಮಣ್ಣ ತಂದೆ ಸಾಯಬಣ್ಣ
ಜಡಗೆ, ಸಾ- ಮುರಗಾನುರ ಗ್ರಾಮ ತಾ||
ಜೇವರ್ಗಿ ರವರು ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment