POLICE BHAVAN KALABURAGI

POLICE BHAVAN KALABURAGI

13 June 2016

Kalaburagi District Reported Crimes

ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ  ದತ್ತಾತ್ರೇಯ ತಂದೆ ಮುಕಿಂದಪ್ಪ ಬಂಡಗಾರ ಸಾ: ಉಡಚಣ ಹಟ್ಟಿ ಗ್ರಾಮ ತಾ:ಅಫಜಲಪೂರ ಜಿ: ಕಲಬುರಗಿ ರವರು ಕೆ.ಹೆಚ.ಬಿ. ಕಾಲನಿಯಲ್ಲಿ ಸತೀಷ ಪಾಟೀಲ ಇವರ ಮನೆಯಲ್ಲಿ ದಿನಾಂಕ 07-06-2016 ರಂದು ಬಾಡಿಗೆ ರೂಪದಲ್ಲಿ ಹಿಡಿದಿದ್ದು, ಅದೇ ದಿನ ನಮ್ಮ ಸ್ವಗ್ರಾಮವಾದ ಉಡಚಣ ಹಟ್ಟಿಯಿಂದ ನಮ್ಮ ಮನೆಯ ಸಾಮಾನುಗಳು ಬಾಡಿಗೆ ಹಿಡಿದು ಮನೆಯಲ್ಲಿ ಎಲಲ್ಲಾ ಗೃಹಪಯೋಗಿ ಸಾಮಾನುಗಳು ಹಚ್ಚಿ ಬೀಗ ಹಾಕಿಕೊಂಡು ನಮ್ಮ ಊರಿಗೆ ಹೋಗಿದ್ದು. ದಿನಾಂಕ 13-06-16 ರಂದು ಸೋಮವಾರ ದಿವಸ ಮನೆಯಲ್ಲಿ ವಾಸ ಮಾಡಲಿಕ್ಕೆ ಹೆಂಡತಿ ಮಕ್ಕಳೊಂದಿಗೆ ಬರುವ ಕುರಿತು ಊರಿಗೆ ಹೋಗಿದ್ದು  ದಿನಾಂಕ 12-06-16 ರಂದು ಬೆಳಿಗ್ಗೆ 08-30 ಗಂಟೆ ಸುಮಾರಿಗೆ ನಾನು ಊರಿನಲ್ಲಿ ಇದ್ದಾಗ ನಮ್ಮ ಮನೆಯ ಮಾಲೀಕರಾದ ಶ್ರೀ ಸತೀಷ ಪಾಟೀಲ ಇವರು ನನ್ನ ಮೋಬಾಯಿಲಿಗೆ ಪೋನ ಮಾಡಿ ತಿಳಿಸಿದ್ದೆನೆಂದೆರೆ, ನಿಮ್ಮ ಮನೆಯ ಬಾಗಿಲ ಕೀಲಿ ಕೊಂಡಿ ಮುರಿದಿದೆ ಮನೆ ಕಳ್ಳತನವಾಗಿದೆ ಎಂದು ಅನಿಸುತ್ತದೆ ಬೇಗನೆ ಬರ್ರೀ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಹೆಂಡತಿ ಸಂತೋಷಿ ಹಾಗೂ ಸಂಜಯ ಮೂವರು ಕೂಡಿಕೊಂಡು ಕಲಬುರಗಿ ನಗರದಲ್ಲಿ ಬಾಡಿಗೆ ಹಿಡಿದ ಮನೆಗೆ ಬಂದು ನೋಡಲಾಗಿ ಮನೆಯ ಬಾಗಿಲ ಕೊಂಡಿ ಮುರಿದಿದ್ದು ನೋಡಿ ನಾನು ಮತ್ತು ತಮ್ಮ ಸಂಜಯ, ಹೆಂಡತಿ ಸಂತೋಷಿ  ಹಾಗೂ ಮನೆಯ ಮಾಲೀಕ ಸತೀಷ ಪಾಟೀಲ ನಾಲ್ಕು ಜನರು ಕೂಡಿಕೊಂಡು ಮನೆಯ ಬೆಡ ರೂಮುನಲ್ಲಿ ಇಟ್ಟ ಕಬ್ಬಿಣದ ಅಲಮಾರಿ ಪಕ್ಕದಲ್ಲಿ  ಬ್ಯಾಗನಲ್ಲಿ ಇಟ್ಟ ಅಲಮಾರಿ ಕೀಲಿ ಕೀಯಿಂದ ಅಲಮಾರಿ ತೆಗೆದು ಅಲಮಾರಿಯ ಲಾಕರನಲ್ಲಿದ್ದ 4 ತೊಲಿಯ ಬಂಗಾರದ ಚಪಾಲಹಾರ ಮತ್ತು ಮೂರು ಅರ್ಧ ತೊಲಿಯ ಸುತ್ತುಂಗುರು ಮತ್ತು ಬೆಳ್ಳಿಯ, ಪ್ಲೇಟ್, ಗ್ಲಾಸು, ಆರತಿ ಸೆಟ್ಟ್, ತಂಬಿಗೆ, ಕುಂಕುಮ ಡಬ್ಬಿ ಹೀಗೆ ಒಟ್ಟು 2 ವರೆ ಕಿಲೋ ತೂಕವುಳ್ಳದ್ದು ಕಳ್ಳತನವಾಗಿರುತ್ತದೆ. ಹೀಗೆ ಒಟ್ಟು 5 ವರೆ ತೊಲಿ ಬಂಗಾರ ಅ;ಕಿ: 1,54,000/- ರೂ. ಮತ್ತು ಬೆಳ್ಳಿ 2 1/2  ಕೆ.ಜಿ. ಅ:ಕಿ: 75,000/- ರೂ. ಒಟ್ಟು 2,29,000/-ರೂ. ಕಳ್ಳತನವಾಗಿರುತ್ತೇವೆ. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ದಿನಾಂಕ-11/06/2016 ರಂದು ಸಾಯಂಕಾಲ  ನನ್ನ ಮಗ ರವಿ ಈತನು ತನ್ನ ತಂಗಿಯ ಮನೆಗೆ ಹೋಗಿ ಬರುವುದಾಗಿ ತಿಳಿಸಿದ್ದು ನಂತರ ನಾನು ಮತ್ತು ನನ್ನ ಹೆಂಡತಿ ಮನೆಯಲ್ಲಿದ್ದಾಗ ಶ್ರೀನಿವಾಸ ಇವರು ಫೊನ್ ಮಾಡಿ ನಿಮ್ಮ ಮಗನಾದ ರವಿ ಈತನಿಗೆ ನಮ್ಮ ಗ್ರಾಮದ ಪಂಚಾಯತ ಮುಂದಗಡೆ ಕಲಬುರಗಿಯಿಂದ ಸೇಡಂ ಕಡೆಗೆ ಹೋಗುವ ರಾಜ್ಯ ಹೆದ್ದಾರಿ ಮೇಲೆ ಎಡ ಪಕ್ಕದಲ್ಲಿ ಆತನು ಹೋಗುತ್ತಿರುವಾಗ ಹಿಂದುಗಡೆಯಿಂದ ಒಬ್ಬ ಕಾರ ಚಾಲಕ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹಿಂದಿನಿಂದ ಡಿಕ್ಕಿ ಪಡಿಸಿ ಹಾಗೆ ಚಲಾಯಿಸಿಕೊಂಡು ಹೋಗಿದ್ದು ನಂತರ ನಾನು ರವಿ ಈತನಿಗೆ ನೋಡಲಾಗಿ ತೆಲೆಗೆ ಭಾರಿ ರಕ್ತಗಾಯ ಬಲ ಸೊಂಟಕ್ಕೆ ಹಾಗೂ ಇತರ ಕಡೆಗೆ ತರಚಿದ ಗಾಯವಾಗಿದ್ದು ಬೆಹೋಷಾಗಿ ಬಿದಿದ್ದು ಆತನಿಗೆ ಜಿ.ವ್ಹಿ.ಆರ್ ಅಂಬುಲೈನ್ಸನಲ್ಲಿ ಹಾಕಿಕೊಂಡು ಕಲಬುರಗಿಯ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವುದಾಗಿ ತಿಳಿಸಿದ ಮೇರೆಗೆ ನಾವು ಗಾಬರಿಗೊಂಡು ಕಲಬುರಗಿಯ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ನನ್ನ ಮಗನಿಗೆ ನೋಡಲಾಗಿ ಬಲಗೈ ಹತ್ತಿರ ಹಾಗೂ ಬಲ ಸೊಂಟಕ್ಕೆ ಹಾಗೂ ಇತರ ಕಡೆ ಗುಪ್ತಗಾಯಗಳಾಗಿ ನನ್ನ ಮಗ ಮೃತ ಪಟ್ಟಿರುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದು ಸದರಿ ಘಟನೆ ಬಗ್ಗೆ ಹಾಜರಿದ್ದ ನಮ್ಮೂರಿನ ಶ್ರೀನಿವಾಸ ಈತನಿಗೆ ವಿಚಾರಿಸಲು ತಿಳಿಸಿದನೆಂದರೆ ನನ್ನ ಮೋಟಾರ ಸೈಕಲ ಮೇಲೆ ಗುಂಡಗುರ್ತಿ ಗ್ರಾಮಕ್ಕೆ ಬರುತ್ತಿರುವಾಗ 7-30 ಪಿ.ಎಮ್ ಸುಮಾರಿಗೆ ಕಲಬುರಗಿಯಿಂದ ಸೇಡಂಕ್ಕೆ ಹೋಗುವ ಒಬ್ಬ ಕಾರ ಚಾಲಕನು ತನ್ನ ಕಾರನ್ನು ಅತಿವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವನೆ ರವಿ ಪಂಚಾಯತ ಮುಂದುಗಡೆ ಸ್ವಲ್ಪ ದೂರದಲ್ಲಿ ನಡೆದು ಹೋಗುತ್ತಿರುವಾಗ ಆತನಿಗೆ ಹಿಂದಿನಿಂದ ಡಿಕ್ಕಿ ಪಡಿಸಿದ ಪರಿಣಾಮ ನಿಮ್ಮ ಮಗ ರೋಡಿನ ಎಡಪಕ್ಕದಲ್ಲಿ ಬಿದಿದ್ದು ಕಾರಿನ ಚಾಲಕ ಸ್ವಲ್ಪ ನಿಧಾನ ಮಾಡಿದಾಗ ನನ್ನ ಮೋಟಾರ ಸೈಕಲ ಲೈಟಿನ ಬೆಳಕಿನಲ್ಲಿ ಕಾರ ನಂಬರ ನೋಡಲಾಗಿ ಕೆಎ-20 ಬ-4123 ನೇದ್ದು ಇದ್ದು ಸದರಿ ಕಾರ ಹಾಗೆ ಚಲಾಯಿಸಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀ ಅನೀಲ ತಂದೆ ರಾಮು ಪಾಟ್ರೋಟ ಸಾ|| ತುರಬೆ, ತಾ|| ಬೇಲಾಪೂರ, ಜಿ|| ಥಾನೆ, ಮಹಾರಾಷ್ಟ್ರ ಇವರು ದಿನಾಂಕ 10-06-2016 ರಂದು ಮಾಡಿಯಾಳ ಗ್ರಾಮದ ಹತ್ತಿರ ಕುಲಾಲಿ ಕಡೆಗೆ ಹೋಗುವ ಡಾಂಬರ ರಸ್ತೆಯ ಮೇಲೆ ಸಂಡಾಸ ಕುಳಿತು ಮರಳಿ ಮನೆ ಕಡೆ ಹೊರಟಾಗ ನಿಂಬರ್ಗಾ ಕಡೆಯಿಂದ ಬಂದ ಕಾರಿನ ಚಾಲಕನು ಕಾರನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಡಿಕ್ಕಿಪಡಿಸಿ ನಿಲ್ಲದೆ ಹೋಗಿದ್ದು ಸದರಿ ಅಪಘಾತದಲ್ಲಿ ಕಾಲಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಿಸಿ ಅತ್ಯಾಚಾರ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 08-06-2016 ರಂದು ಬೆಳಿಗ್ಗೆ 08;00 ಗಂಟೆಗೆ ನನ್ನ ಮಗಳಾದ ಶ್ರೀಮತಿ ಹಾಗು ನಮ್ಮ ತಾಂಡಾದ ಸೋನಾಬಾಯಿ ತಂದೆ ಶೇವು ರಾಠೋಡ ಇವರಿಬ್ಬರು ಕೂಡಿಕೊಂಡು ನಮ್ಮೂರಿನ ಡಾ : ಛಾಯಾ ಇವರ ಮನೆ ಕಟ್ಟಡ ಕೆಲಸಕ್ಕೆ ಹೋಗಿದ್ದು ರಾತ್ರಿಯಾದರು ನಮ್ಮ ಮಗಳು ಮನೆಗೆ ಬರಲಿಲ್ಲಾ, ನಂತರ ನಾನು ಮತ್ತು ನನ್ನ ಹೆಂಡತಿ ಕೂಡಿಕೊಂಡು ಎಲ್ಲಾಕಡೆ ಹುಡಕಾಡಿದರು ನಮ್ಮ ಮಗಳು ಸಿಗಲಿಲ್ಲಾ. ನಂತರ ನನಗೆ ಸೋಮಲು ತಂದೆ ಜೈರಾಮ ರಾಠೋಡ, ಪ್ರಭಾಕರ ತಂದೆ ಶಂಕ್ರು ರಾಠೋಡ ರವರು ಹೇಳಿದ್ದೇನೆಂದರೆ, ನಿನ್ನ ಮಗಳು ನಮ್ಮ ತಾಂಡಾದ ಗೋವಿಂದ ತಂದೆ ಮೋತು ರಾಠೋಡ ಇವನು ದಿನಾಂಕ 08-06-2016 ರಂದು ಬೆಳಿಗ್ಗೆ 11;00 ಗಂಟೆ ಸುಮಾರಿಗೆ ಬಸ್ಸ ನಿಲ್ದಾಣದ ಕಡೆಗಡೆ ಪುಸಲಾಯಿಸಿ ಕೈಹಿಡಿದು ಎಳೆದುಕೊಂಡು ಹೋಗಿರುತ್ತಾನೆ ಆಗ ಸೋನಾಬಾಯಿ ತಂದೆ ಶೇವು ರಾಠೋಡ ಮತ್ತು ಸುರೇಶ ತಂದೆ ದಾರಾಸಿಂಗ ಜಾಧವ ರವರು ಗೋವಿಂದ ರಾಠೋಡ ರವನೊಂದಿಗೆ ಮಾತಾಡುತ್ತಾ ನೀವಿಬ್ಬರು ಮುಂದೆ ಹೋಗರಿ, ನಾವಿಬ್ಬರು ಹಿಂದೆ ಬರುತ್ತೇವೆ ಅಂತಾ ಅನ್ನುತ್ತಿದ್ದರು ಅಂತಾ ಹೇಳಿದರು. ನನ್ನ ಮಗಳನ್ನು ಹುಡಕಾಡಿ ಸಿಕ್ಕಿರುವುದಿಲ್ಲಾ ದಿನಾಂಕ 08-06-2016 ರಂದು ಬೆಳಿಗ್ಗೆ 11;00 ಗಂಟೆ ಸುಮಾರಿಗೆ ನನ್ನ ಮಗಳಿಗೆ ನಮ್ಮ ತಾಂಡಾದ ಸೋನಾಬಾಯಿ ತಂದೆ ಶೇವು ರಾಠೋಡ ಹಾಗು ಸುರೇಶ ತಂದೆ ದಾರಾಸಿಂಗ ಜಾಧವ ರವರ ಪ್ರಚೋದನೆ ಮೇರೆಗೆ ಗೋವಿಂದ ತಂದೆ ಮೋತು ರಾಠೋಡ  ಈತನು ಅಪಹರಿಸಿಕೊಂಡು ಹೋಗಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಿನಾಂಕ: 12-06-2016 ರಂದು ಅಪಹರಣಕ್ಕೊಳಗಾದ ಶ್ರೀಮತಿ ಹಾಗು ಅವರ ತಂದೆ ತಾಯಿಯೊಂದಿಗೆ ಠಾಣೆಗೆ ಬಂದಿದ್ದು ನನಗೆ ಸುಮಾರು 5-6 ತಿಂಗಳಿಂದ ನಮ್ಮ ತಾಂಡಾದ ಗೋವಿಂದ ತಂದೆ ಮೋತು ರಾಠೋಡ ಈತನು ಚುಡಾಯಿಸುವುದು ಮತ್ತು ಹಿಂಬಾಲಿಸುವುದು ಮಾಡಿ ನನಗೆ ಮದುವೆಯಾಗುತ್ತೇನೆ ಅಂತಾ ಅನ್ನುತ್ತಿದ್ದನು, ಈ ಬಗ್ಗೆ ನಾನು ನಮ್ಮ ತಂದೆ ತಾಯಿಗೆ ಹೇಳಿದ್ದು ನಮ್ಮ ತಂದೆ ತಾಯಿ ಗೋವಿಂದನಿಗೆ ತಿಳವಳಿಕೆ ಹೇಳಿದರು ಸಹ ನನಗೆ ಚುಡಾಯಿಸುತ್ತಾ ಬಂದಿದ್ದು  ದಿನಾಂಕ 08-06-2016 ರಂದು ಬೆಳಿಗ್ಗೆ 08;00 ಗಂಟೆಗೆ ನಾನು ಮತ್ತು ನಮ್ಮ ತಾಂಡಾದ ಸೋನಾಬಾಯಿ ತಂದೆ ಶೇವು ರಾಠೋಡ ಇಬ್ಬರು ಕೂಡಿಕೊಂಡು ನಮ್ಮೂರಿನ ಡಾ: ಛಾಯಾ ಇವರ ಮನೆ ಕಟ್ಟಡ ಕೆಲಸಕ್ಕೆ ಹೋಗಿದ್ದು ಇರುತ್ತದೆ. ಅಂದು ಬೆಳಿಗ್ಗೆ 11;00 ಗಂಟೆ ಸುಮಾರಿಗೆ ನಾನು ಕೆಲಸದ ಮೇಲೆ ಇದ್ದಾಗ ಗೋವಿಂದ ರಾಠೋಡ ಈತನು ನನ್ನ ಹತ್ತಿರ ಬಂದು ನಿನಗೆ ನಾನು ಮದುವೇಮಾಡಿಕೊಳ್ಳುತ್ತೇನೆ, ಅಂತಾ ಅಂದಾಗ ನಾನು ನಿರಾಕರಿಸಲು ನಿನನೆ ನಿನು ನನ್ನೊಂದಿಗೆ ಬರದೆ ಇದ್ದರೆ ನಿನಗೆ ಖಲಾಸ ಮಾಡುತ್ತೇನೆ ಅಂತ ಜೀವದ ಬೇದರಿಕೆ ಹಾಕಿದ್ದು ಅವನೊಂದಿಗೆ ಬಂದ ಸುರೇಶ ಜಾಧವ ಹಾಗು ಸೋನಾಬಾಯಿ ರವರು ಗೋವಿಂದನಿಗೆ ಆಕೆಗೆ ತೆಗೆದುಕೊಂಡು ನಡಿ ಏನು ಬಂದಿದು ನೋಡಿಕೊಳ್ಳುತ್ತೇವೆ. ಅಂತ  ಪ್ರಚೋದಿಸಿದ್ದು  ನೀನು ಸುರೇಖಾಳನ್ನು ಮುಂದೆ ಕರೆದುಕೊಂಡು ಹೋಗು,ನಾವಿಬ್ಬರು ಹಿಂದೆ ಬರುತ್ತೇವೆ ಅಂತಾ ಹೇಳಲು ಗೋವಿಂದ ಈತನು ನನ್ನ ಕೈಹಿಡಿದು ಕರೆದುಕೊಂಡು ಬಸ್ಸ ನಿಲ್ದಾಣದ ದಾಟಿ ಮುಂದೆ ಕೆನಾಲ ಹತ್ತಿರ ನಾನು ಅಂಜಿ ಸುಮನ್ನಿದ್ದೇನು. ನಂತರ ನನಗೆ ಕೆನಾಲದ ಪಕ್ಕದಲ್ಲಿರುವ ಗಿಡಗಂಟಿಗಳಲ್ಲಿ ಎಳೆದುಕೊಂಡು ಹೋಗಿ ನಾನು ನಿರಾಕರಿಸಿದರು, ಒತ್ತಾಯಪೂರ್ವಕವಾಗಿ ಜಬರಿ ಸಂಭೋಗ ಮಾಡಿ ನಂತರ ಅಲ್ಲಿಂದ ಮೇನ ರಸ್ತೆಯ ಮೇಲೆ ತಂದು ಒಂದು ಬಸ್ಸಿನಲ್ಲಿ ಕರೆದುಕೊಂಡು ಜೇವರ್ಗಿಗೆ ಹೋಗಿ ನಂತರ ಅಲ್ಲಿಂದ ಮಹಾರಾಷ್ಟ್ರಾದ ಭಿಮಂಡಿಗೆ ಬಸ್ಸಿನಲ್ಲಿ ಕರೆದುಕೊಂಡು ಹೋಗಿ ಎರಡು ದಿನ ಜೋಪಡಪಟ್ಟಿಯಲ್ಲಿ ಇಟ್ಟು ನನಗೆ ಮೇಲಿಂದ ಮೇಲೆ ಜಬರಿಸಂಭೋಗ ಮಾಡಿರುತ್ತಾನೆ, ನಾನು ಅಳುತ್ತಾ ಕುಳತಿದ್ದರಿಂದ ನಿನಗೆ ನಿಮ್ಮ ಮನೆಗೆ ಕರೆದುಕೊಂಡು ಹೋಗಿ ಬಿಡುತ್ತೇನೆ ನಡಿ ಅಂತಾ ಹೇಳಿ ನಿನ್ನೆ ದಿನಾಂಕ 11-06-2016 ರಂದು ರಾತ್ರಿ ನಾವಿಬ್ಬರು ಬಸ್ಸ ಮುಖಾಂತರ ಬಂದಿರುತ್ತೆನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರಿ ಕರ್ತವ್ಯಕ್ಕೆ ಅಡೆತಡೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಬಸವರಾಜ ತಂದೆ ಅಮೃತ ಮಸರೆ ಉ|| ಬಸ ಚಾಲಕ ಕಂ. ನಿರ್ವಾಹಕ ಬ್ಯಾಜ ನಂ. 634 ಆಳಂದ ಬಸ ಡಿಪೊ, ಸಾ|| ಧುತ್ತರಗಾಂವ ಇವರು ಬಸ ನಂ. ಕೆ.ಎ 32, ಎಫ 1653 ನೇದ್ದರಲ್ಲಿ ಕರ್ತವ್ಯಕ್ಕೆ ಅಂತ ಆಳಂದ ಕಲಬುರಗಿ ತುಳಜಾಪೂರ ಮಾರ್ಗದ ಬಸ್ಸನ್ನು ದಿನಾಂಕ 11/06/2016 ರಂದು ಬಸ ಡಿಪೊದಿಂದ ಒಯ್ದು ತುಳಜಾಪೂರದಲ್ಲಿ ವಾಸ್ತವ್ಯ ಮಾಡಿ ದಿನಾಂಕ 12/06/2016 ರಂದು ತುಳಜಾಪೂರದಿಂದ ಹೊರಟು ಕಲಬುರಗಿಗೆ ಹೊರಟಾಗ ಧುತ್ತರಗಾಂವ ಗ್ರಾಮದ ಹಳೆಯ ನೀರಿನ ಟ್ಯಾಂಕ ಹತ್ತಿರ ಡಾಂಬರ ರಸ್ತೆಗೆ ಆಪಾದಿತನಾದ ಚಂದ್ರಕಾಂತ ತಂದೆ ಮಾಣಿಕ ಫುಲಾರ @ ಹೂಗಾರ ಇವನು ಮುಳ್ಳು ಕಂಟಿ ಹಚ್ಚಿದ್ದರಿಂದ ನಾನು ತೆಗೆಯಲು ಹೋಗಿದ್ದಕ್ಕೆ ಆತನು ಅವಾಚ್ಯವಾಗಿ ಬೈದು ತನ್ನ ಕೈಯಲ್ಲಿದ್ದ ಕೊಡಲಿಯಿಂದ ಹೊಡೆದು ಜೀವ ಭಯಪಡಿಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಕೈಯಲ್ಲಿದ್ದ ಟಿಕೇಟ ರೀಡರ ಮಶೀನ ಕಸಿದುಕೊಂಡು ನೆಲಕ್ಕೆ ಹೊಡೆದು ಒಡೆದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀಮತಿ ಸುರೇಖಾ ಗಂಡ ಶಿವಾನಂದ @ ಶಿವಕುಮಾರ ಹೊಟ್ಕರ, ಸಾ|| ಭೂಸನೂರ ಇವರು ದಿನಾಂಕ 16/12/2015 ರಂದು ಶಿವಾನಂದ @ ಶಿವಕುಮಾರ ತಂದೆ ನಾರಾಯಣ ಹೊಟ್ಕರ ಇವನೊಂದಿಗೆ ವಿವಾಹವಾಗಿದ್ದು ವಿವಾಹ ಕಾಲಕ್ಕೆ 11,000/- ರೂಪಾಯಿ ನಗದು ಹಣ, ಒಂದು ತೊಲೆ ಬಂಗಾರ, ಗಾದಿ, ಪಲಂಗ, ಟಿಜೋರಿ, ಹಾಂಡ್ಯಾ ಬಾಂಡ್ಯಾ ಇವುಗಳನ್ನು ವರದಕ್ಷಿಣೆ ಅಂತ ಕೊಟ್ಟು ವಿವಾಹ ಮಾಡಿದ್ದು, ವಿವಾಹ ಆದಾಗಿನಿಂದ ಇಲ್ಲಿಯವರೆಗೆ ಆಪಾದಿತರೆಲ್ಲರೂ ಸೇರಿ ಫಿರ್ಯಾದಿಗೆ ಹೊಲಸು ಬೈದು ಕೈಯಿಂದ ಹಲ್ಲೆ ಮಾಡಿ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಟ್ಟು ಮತ್ತು ನಿನ್ನ ತವರು ಮನೆಯಿಂದ ಇನ್ನು 50,000/- ರೂಪಾಯಿ ನಗದು ಹಣ, ಮೋಟಾರ ಸೈಕಲ ತರುವಂತೆ ವರದಕ್ಷಿಣೆ ಕಿರುಕುಳ ನೀಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ  ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀಮತಿ ನಿಂಗಮ್ಮಾ ಗಂಡ ರಮೇಶ ನವಲೆ ಸಾ: ಅಣೂರ ಗ್ರಾಮ ತಾ:ಆಳಂದ ರವರನ್ನು 3 ವರ್ಷಗಳ ಹಿಂದ ಅಣುರ ಗ್ರಾಮದ ರಮೇಶ ತಂದೆ ಬಾಬು ನವಲೆ ಇತನೊಂದಿಗೆ ನಮ್ಮ ದಾರ್ಮಿಕ ಪದ್ದತಿಯಂತೆ ಅಣೂರ ಗ್ರಾಮದಲ್ಲಿ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ನಾವು ಗಂಡ ಹೆಂಡಿರು ಒಂದು ವರ್ಷ ಚೆನ್ನಾಗಿ ಇದ್ದು ನಮಗೆ ಸದ್ಯ ಒಂದೂವರೆ ವರ್ಷ ಬಬಿತಾ ಅಂತಾ ಹೆಣ್ಣು ಮಗಳು ಇರುತ್ತಾಳೆ. ನನ್ನ ಗಂಡನ ಮನೆಯಲ್ಲಿ ನನ್ನ ಅತ್ತೆ ರುಕ್ಮೂಣಿ .ಅವಳ ತಮ್ಮ ಸಂಜು ತಂದೆ ನಾಗಪ್ಪ ನವಲೆ , ನಮ್ಮ ಅತ್ತೆಯ ತಂದೆ ನಾಗಪ್ಪ , ತಾಯಿ ಅಂಜನಾ ಇವರೆಲ್ಲರೂ ಕೂಡಿ ಒಂದೇ ಮನೆಯಲ್ಲಿ ವಾಸವಾಗಿರುತ್ತೇವೆ. ನಾನು ಎಲ್ಲರಿಗೂ ಅಡಿಗೆ ಮಾಡುವುದು ಮನೆಯ ಎಲ್ಲಾ ಕೆಲಸ ಮಾಡುವುದು ಮಾಡುತ್ತಾ ಬಂದಿರುತ್ತೇನೆ. ನಂತರ ನನ್ನ ಗಂಡನಿಗೆ ನನ್ನ ಅತ್ತೆ ಮತ್ತು ಅವರ ಸಂಬಂದಿಕರು ನನ್ನ ಗಂಡನಿಗೆ ಇಲ್ಲದೊಂದು ಹೇಳುತ್ತಾ ಅವನ ತಲೆ ಯಲ್ಲಿ ನನಗೆ ಹೊಲ ಮನೆ ಕೆಲಸ ಬರುವುದಿಲ್ಲಾ ನೀನು ಸರಿ ಇಲ್ಲಾ ಅಂತಾ ಇಲ್ಲದೊಂದು ಹೇಳಿ ತಲೆ ಕೆಡಿಸಿದ್ದರಿಂದ ಅವನು ರಂಡಿ ನೀನು ಮನೆ ಬಿಟ್ಟು ಹೋಗು ನಾನು ಬೇರೆ ಮದುವೆ ಮಾಡಿಕೊಳ್ಳುತ್ತೇನೆ ಎಂದು ಕುಡಿದು ಬಂದು ಆಗಾಗ ನನಗೆ ಹೊಡೆಬಡೆ ಮಾಡಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಾ  ಬಂದಿರುತ್ತಾನೆ. ಅದಕ್ಕೆ ನಮ್ಮ ಅತ್ತೆ ಮತ್ತು ಮನೆಯವರು ಕೂಡಿ ಹೇಗಾದರೂ ಮಾಡಿ ನನ್ನ ಗಂಡನ ಮನೆಯಿಂದ ಕಳುಹಿಸಿ ಬೇರೊಂದು ಮದುವೆ ಮಾಡಬೇಕೆಂದು ಕಿರಕುಳ ನೀಡುತ್ತಿದ್ದರು. ಮತ್ತು ವಿನಾಕಾರಣ ಕೆಲಸ ಸರಿ ಮಾಡಿಲ್ಲಾ ರಂಡಿ ನಿನಗೆ ಕೆಲಸ ಬುರುವುದಿಲ್ಲಾ ನಮ್ಮ ಮನೆಯಲ್ಲಿ ಇರಬೇಡ ಅಂತಾ ಹೊಡೆಬಡೆ ಮಾಡಿ ನನಗೆ ಮನೆಯಿಂದ ಹೊರಹಾಕಿದಾಗ ನಾನು ವಿಷಯ ನನ್ನ ತಾಯಿಗೆ ತಿಳಿಸಿದಾಗ ಅವಳು ಹೇಳಿ ತಿಳಿಸಿ ನನಗೆ ಗಂಡನ ಮನೆಯಲ್ಲಿ ಬಿಟ್ಟು ಬಂದಿರುತ್ತಾಳೆ. ಆದರೂ ಸಹ ಮನೆಯವರು ಕೂಡುತ್ತಿದ್ದ ಕಿರುಕುಳ ತಾಳಿಕೊಂಡು ಬಂದಿರುತ್ತೇನೆ ದಿನಾಂಕ 17/05/2016 ರಂದು ರಾತ್ರಿ ಎಂದಿನಂತೆ ಊಟ ಮಾಡಿ ಮಲಗುವ ಕೋಣೆಯಲ್ಲಿ ಮಲಗಿದ್ದು ನನ್ನ ಗಂಡನು ಅಂಗಳದಲ್ಲಿ ಮಲಗಿದ್ದು ರಾತ್ರಿ 01:00 ಗಂಟೆ ಸುಮಾರಿಗೆ ನಾನು ಗಾಡ ನಿದ್ರೆಯಲ್ಲಿದ್ದಾಗ ನನ್ನ ಮೇಲೆ ಸೀಮೆ ಎಣ್ಣೆ ಬಿದ್ದದರಿಂದ ನನಗೆ ಎಚ್ಚರವಾಗಿ ನೋಡಲು ನನಗೆ ಕೋಲೆ ಮಾಡುವ ಉದ್ದೇಶದಿಂದ ನನ್ನ ಅತ್ತೆ ಸೀಮೆ ಎಣ್ಣೆ ಡೆಬ್ಬಿ ಹಿಡಿದು ಸಾಯಿಸರಿ ರಂಡಿಗ ಬಿಡಬ್ಯಾಡ್ರಿ ಅಂತಾ ಸೀಮೆ ಎಣ್ಣೆ ಹಾಕುತ್ತಿದ್ದು ಸಂಜು ನವಲೆ ಮತ್ತು ನಾಗಪ್ಪ ನವಲೆ ರವರು ನನ್ನ ಎರಡು ಕೈ ಹಿಡಿದಿದ್ದು ನಾನು ಚಿರಾಡುತ್ತಿರುವಾಗ ಅಂಜನಾ ಗಂಡ ನಾಗಪ್ಪ ನವಲೆ ಇವಳು ಬಾಯಿಯಲ್ಲಿ ಅರಬಿ ತುರಕಿದ್ದು ನನ್ನ ಗಂಡನು ಕಾಲು ಹಿಡಿದು ನೆಲೆಕ್ಕೆ ಕೆಡವಿದಾಗ ರುಕ್ಮಣಿ ಇವಳು ಬೆಂಕಿ ಕಡ್ಡಿ ಕೊರೆದು ಉರಿ ಹಚ್ಚಿದಳು ನಾನು ಒದ್ದಾಡಿ ಚೀರುತ್ತಾ ಹೊರಗಡೆ ಬಂದಾಗ ಚಿರಾಡುವ ಸಪ್ಪಳ ಕೇಳಿ ಯಾರೋ ಬಂದು ಉರಿ ಆರಿಸಿರುತ್ತಾರೆ. ಈ ಘಟನೆಯನ್ನು ಮನೆಯ ಅಕ್ಕಪಕ್ಕದವರು ನೋಡಿರುತ್ತಾರೆ. ಮತ್ತು ನನಗೆ ಹೊಟ್ಟೆಗೆ ಎದೆಗೆ ,ಬೆನ್ನಿಗೆ , ಕೈಗೆ ಸುಟ್ಟಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: