POLICE BHAVAN KALABURAGI

POLICE BHAVAN KALABURAGI

11 June 2016

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಠಾಣೆ : ಶ್ರೀ ಕೃಷ್ಣಾಜಿ ತಂದೆ ಶಂಕರರಾವ್ ಕುಲಕರ್ಣಿ ಸಾ: ವಿವೇಕ ನಗರ ವಿದ್ಯಾಗಿರಿ ದಾರವಾಡ ಇದ್ದು ನನ್ನ ಖಾಸಗಿ ಕೆಲಸದ ಸಲುವಾಗಿ ದಾರವಾಡದಿಂದ ನಾನು ಮತ್ತು ನಮ್ಮ ತಮ್ಮ ಶ್ರೀನಿವಾಸ ಕುಲಕರ್ಣಿ ನಮ್ಮೂರ ಮೂಂಜುನಾಥ, ರಾಜು ಎಲ್ಲರೂ ಕೂಡಿಕೊಂಡು ನಮ್ಮ ಕಾರ್ ಡ್ರೈವರ್ ಜಾವೇದ್ ಸಾ: ದಾರವಾಡ ಈತನು ನಡೆಸುವ ನಮ್ಮ ಮಾರುತಿ ಓಮಿನಿ ಕಾರ ನಂ ಕೆಎ 25ಪಿ-6645 ನೇದ್ದರಲ್ಲಿ ಕುಳಿತು ಕಲಬುರಗಿಗೆ ಬಂದಿದ್ದೇವು. ನಂತರ ಸದರಿ ನಮ್ಮ ಖಾಸಗಿ ಕೆಲಸ ಮುಗಿಸಿಕೊಂಡು ಮೊನ್ನೆ ದಿನಾಂಕ: 05.06.2016 ರಂದು ಸಾಯಂಕಾಲ ಸಮಯದಲ್ಲಿ ಜೇವರಗಿ ಮುಖಾಂತರ ಮರಳಿ ದಾರವಾಡಕ್ಕೆ ಹೋಗುತ್ತಿದ್ದೇವು. ಸಾಯಂಕಾಲ 6.45 ಗಂಟೆ ಸುಮಾರಿಗೆ ಜೇವರಗಿ ಪಟ್ಟಣದ ಹೊರವಲಯದ ರೀಲಾಯನ್ಸ ಪೆಟ್ರೋಲ ಪಂಪ ಹತ್ತಿರ ಜೇವರಗಿ-ಕಲಬುರಗಿ ಮೇನ್ ರೋಡ ರೋಡಿನಲ್ಲಿ ನಮ್ಮ ಚಾಲಕನು ಕಾರ್‌ ನ್ನು  ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೋಗಿ ಎದುರಿಗೆ ರೋಡಿನಲ್ಲಿ ಬರುತ್ತಿದ್ದ ಒಂದು ಬುಲೇರೋ ವಾಹನಕ್ಕೆ ಡಿಕ್ಕಿ ಪಡಿಸಿದನು. ನಂತರ ನಾವು ಕಾರಿನಿಂದ ಇಳಿದು ನೋಡಲಾಗಿ ನಮ್ಮ ಕಾರಿನ ಮುಂಭಾಗ ಪೂರ್ತಿ ಜಖಂಗೊಂಡಿದ್ದು ಮತ್ತು ಬುಲೇರೋ ವಾಹನ ನಂ ನೋಡಲು ಕೆ.ಎ32ಎನ್5482 ನೇದ್ದು ಇತ್ತು ಅದರ ಚಾಲಕನ ಹೆಸರು ಕೇಳಲಾಗಿ ತನ್ನ ಹೆಸರನ್ನು ಅಂಬರೀಷ ತಂದೆ ಮರೆಪ್ಪ ಹಳ್ಳಿ ಸಾ|| ಗಾಂಧೀ ನಗರ ಜೇವರಗಿ ಅಂತ ತಿಳಿಸಿದನು. ಸದರಿ ಅಪಘಾತದಲ್ಲಿ ಯಾರಿಗೂ ಯಾವುದೆ ಗಾಯ ವಗೈರೆ ಆಗಿರುವದಿಲ್ಲ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಪ್ರಕಾಶ ತಂದೆ ಶಾಂತಪ್ಪಾ ಪಾಟೀಲ ಸಾ:ಮನೆ.ನಂ.11-184 ಅಪ್ಪರ ಲೈನ್‌ ಬ್ರಹ್ಮಪೂರ ಕಲಬುರಗಿ ಇವರು ದಿನಾಂಕ:05/05/2016 ರಂದು ರಾತ್ರಿ 8.30 ಗಂಟೆ ಸುಮಾರಿಗೆ ನನ್ನ ಟಿ.ವಿ.ಎಸ್‌‌ ಸ್ಟಾರ ಸಿಟಿ ಮೋಟಾರ ಸೈಕಲ ನಂ.ಕೆಎ-32 ಎಸ್‌‌-4796 ನೇದ್ದನ್ನು ನನ್ನ ಮನೆಯ ಮುಂದೆ ನಿಲ್ಲಿಸಿದ್ದು ಬೆಳಗ್ಗೆ ದಿನಾಂಕ: 06/05/2016 ರಂದು ಬೆಳಗ್ಗೆ 6.00 ಗಂಟೆ ಸುಮಾರಿಗೆ ನಾನು ಮನೆಯಿಂದ ಹೊರಗೆ ಬಂದಿದ್ದು ನನ್ನ ಮೋಟಾರ ಸೈಕಲ ಇರಲಿಲ್ಲ ನಾನು ಅಂದಿನಿಂದ ಎಲ್ಲಾ ಕಡೆ ಹುಡುಕಾಡಿದರು ನನ್ನ ಮೋಟಾರ ಸೈಕಲ ಸಿಕ್ಕಿರುವದಿಲ್ಲಾ ನನ್ನ ಟಿ.ವಿ.ಎಸ್‌‌ ಸ್ಟಾರ ಸಿಟಿ ಸಿಲ್ವರ್‌‌ ಬಣ್ಣದ ಮೋಟಾರ ಸೈಕಲ ನಂ.KA 32 S 4796, CHASSIS NO.MD625KF5871C55908, ENGINE NO.BF5C71126634 ಅ.ಕಿ.14000/-ರೂ ಬೆಲೆಬಾಳುವದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಡುಗಿ ಕಾಣೆಯಾದ ಪ್ರಕರಣ :
ದೇವಲಗಾಣಗಾಪೂರ ಠಾಣೆ : ಶ್ರೀಮತಿ ಲಕ್ಷ್ಮೀಬಾಯಿ ಹಳ್ಳಿ ಸಾ : ಗೊಬ್ಬುರ (ಬಿ) ಇವರ ಇವರ ಮಗಳಾದ ಸಂಪತ ಇವಳು ದಿನಾಂಕ 09-06-2016 ರಂದು ರಾತ್ರಿ ಮಲವಿಸರ್ಜನೆ ಮಾಡಿ ಬರುತ್ತೆನೆ ಅಂತಾ ಹೇಳಿ ಹೋಗಿದ್ದು ನಂತರ ರಾತ್ರಿ 11 ಗಂಟೆಯಾದರೂ ನನ್ನ ಮಗಳು ಸಂಪತ ಇವಳು ಮನೆಗೆ ಬಾರದೆ ಇರುವುದರಿಂದ ಗಾಬರಿಯಾಗಿ ನನ್ನ ಮಗನಾದ ಜೈಬೀಮ, ಆತನ ಹೆಂಡತಿ ಪ್ರಮಾ ಮತ್ತು ನಮ್ಮೂರಿನ ಸುನಿತಾ ಎಲ್ಲರೂ ಕೂಡಿ ರಾತ್ರಿ ಊರಲ್ಲಿ ಹುಡುಕಾಡಿದರು ಸಿಗಲ್ಲಿಲ್ಲ. ನಂತರ ನಮ್ಮ ಸಂಬಂದಿಕರ ಊರಾದ ಕಲಬುರಗಿ ಬೇಲೂರ ಕಣ್ಣಿ ಸಾವಳಗಿ ಕುಮಸಿ ಗ್ರಾಮಗಳಿಗೆ ನನ್ನ ಮಗಳು ಸಂಪತಬಾಯಿ ಇವಳ ಬಗ್ಗೆ  ವಿಚಾರಿಸಲಾಗಿ ಯಾವುದೇ ಮಾಹಿತಿ ಸಿಕಿರುವುದಿಲ್ಲ.ಕಾಣೆಯಾದ ನನ್ನ ಮಗಳು ಸಂಪತಬಾಯಿ ಇವಳಿಗೆ ಹುಡುಕಾಡಿ ಬರಲು ತಡವಾಗಿರುತ್ತದೆ. ನನ್ನ ಮಗಳ ಚಹರೆ ಪಟ್ಟಿ - ಕೋಲು ಮುಖ, ನೆಟ್ಟನೆ ಮೂಗು ಸಾದಕಪ್ಪು ಮೈಬಣ್ಣ ಸಧೃಡ ಮೈಕಟ್ಟು 4.4" ಎತ್ತರ ಇದ್ದು ಕನ್ನಡ ಮಾತಾಡುತ್ತಾಳೆ. ಮನೆಯಿಂದ ಹೋಗುವಾಗ ಹಳದಿ ಬಣ್ಣದ ಚೂಡಿದಾರ ಹಾಕಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: