POLICE BHAVAN KALABURAGI

POLICE BHAVAN KALABURAGI

01 May 2016

KALABURAGI DISTRICT CRIME REPORTS.

ಹೆಚ್ಚುವರಿ ಸಂಚಾರಿ   ಠಾಣೆ : ದಿನಾಂಕ 30.04.16 ರಂದು ಬೆಳಿಗ್ಗೆ 9-50 ಗಂಟೆ ಸುಮಾರಿಗೆ ಮೃತ ರುಕ್ಮಣಪ್ಪಾ ಇತನು ತನ್ನ ಹೊಸ ಜೇವಗರ್ಿ ರೋಡನಲ್ಲಿ ಬರುವ ನೀಲಾಂಬಿಕಾ ಕಲ್ಯಾಣ ಮಂಟಪಕ್ಕೆ ಸಂಬಂದಿಕರ ಮನೆಗೆ ಹೋಗುವ ಕುರಿತು ಮೋಟಾರ ಸೈಕಲ ನಂ ಕೆಎ-32-ಜೆ-7417 ನೇದ್ದನ್ನು ಚಲಾಯಿಸಿಕೊಂಡು ರೋಡ ಎಡಗಡೆಯಿಂದ ಹೋಗುವಾಗ ಚಿತಾರಿ ಅಡ್ಡಾ ಎದುರು ರೋಡ ಮೇಲೆ ಎನ್.ಈ.ಕೆ.ಆರ.ಟಿ.ಸಿ ಬಸ್ಸ ನಂ ಕೆಎ-28-ಎಫ್-1713 ನೇದ್ದರ ಚಾಲಕ ರಂಗು ಇತನು ತನ್ನ ಬಸ್ಸನ್ನು ಆರ.ಪಿ. ಸರ್ಕಲ ಕಡೆಯಿಂದ ರಾಮಮಂದಿರ ರಿಂಗ ರೋಡ ಕಡೆಗೆ ಹೋಗುವ ಕುರಿತು  ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೃತ ರುಕ್ಮಣಪ್ಪಾ ಇತನು ಚಲಾಯಿಸಿಕೊಂಡು ಹೋಗುತಿದ್ದ ಮೋಟಾರ ಸೈಕಲಕ್ಕೆ ಎಡಗಡೆಯಿಂದ ಡಿಕ್ಕಿಪಡಿಸಿ ಅಪಘಾತ ಮಾಡಿದಾಗ ರುಕ್ಮಣಪ್ಪಾ ಇತನು ಕೆಳಗಡೆ ಬಿದ್ದಾಗ ಬಸ್ಸ ಚಾಲಕ ಬಸ್ಸ ಆತನ ಮೇಲೆ ಚಲಾಯಿಸಿದ್ದರಿಂದ ಮೃತ ರುಕ್ಮಣಪ್ಪಾ ಇತನಿಗೆ ತೆಲೆಯ ಮೇಲೆ ಭಾರಿ ಪೆಟ್ಟು ಬಿದ್ದು ರಕ್ತಗಾಯ ಬಲಬುಜಕ್ಕೆ ಭಾರಿ ಗುಪ್ತ ಪೆಟ್ಟು, ಬಾಲಗಾಲು ಮೊಳಕಾಲ ಕೆಳಗೆ ಭಾರಿ ಪೇಟ್ಟು, ಬಲಗಡೆ ಹೊಟ್ಟೆಯ ಮೇಲೆ , ಟೊಂಕಿನ ಮೇಲೆ ಬಸ್ಸಿನ ಗಾಲಿ ಹೋಗಿ ಭಾರಿ ಗುಪ್ತ ಪೆಟ್ಟು ಬಿದ್ದು ಸ್ಥಳದಲ್ಲಿ ಮೃತಪಟ್ಟಿದ್ದು ಇರುತ್ತದೆ.
ಗ್ರಾಮೀಣ ಠಾಣೆ : ದಿನಾಂಕ: 30/4/2016  ರಂದು 5-00 ಪಿ.ಎಮ್ ಕ್ಕೆ ಫಿರ್ಯಾದಿ ಗುರುರಾಜ ತಂದೆ ಶ್ರೀಶೈಲ್  ಸ್ಥಾವರ ಮಠ ವಯ;28 ವರ್ಷ ಉ;ಅಕೌಂಟೆಂಟ  ವಿಳಾಸ; ಮಾಣೀಕಪ್ರಬು ಕಾಲೂನಿ ಉದನೂರ ರೋಡ ಕಲಬುರಗಿ  ಇವರು ಠಾಣೆಗೆ ಹಾಜರಾಗಿ ದೂರು ಕೊಟ್ಟಿದ್ದರ ಸಾರಾಂಶವೆನೆಂದರೆ; ದಿನಾಂಕ. 22-4-2016 ರಂದು ರಾತ್ರಿ 10-30 ಪಿ.ಎಂ.ಕ್ಕೆ ತನ್ನ ಹೋಂಡಾ ಸಿ.ಬಿ.ಶೈನ್ ಮೋಟಾರಸೈಕಲ್ ನಂ. ಕೆ.ಎ.32 ಇಕೆ.6008  ಅಕಿ. 49,000/- ರೂ ಬೆಲೆಬಾಳುವದನ್ನು ತನ್ನ ಮನೆಯ ಎದರುಗಡೆ ನಿಲ್ಲಿಸಿ ಮಲಗಿಕೊಂಡಿದ್ದು ದಿನಾಂಕ. 23-4-2016 ರಂದು 6-30 ಎ.ಎಂ.ಕ್ಕೆ. ಬೆಳೆಗ್ಗೆ ಎದ್ದು ನೋಡಲಾಗಿ  ತನ್ನ ಮೋಟಾರ ಸೈಕಲ್ ಇರಲಿಲ್ಲಾ  ಎಲ್ಲಾ ಕಡೆಗೂ ಹುಡುಕಾಡಿದರೂ ಸಿಕ್ಕಿರುವದಿಲ್ಲಾ. ಆದುದರಿಂದ ದಿನಾಂಕ.22-4-2016 ರಂದು ರಾತ್ರಿ 10-30ಪಿ.ಎಂ.ದಿಂದ ದಿನಾಂಕ.23-4-2016ರಂದು ಬೆಳಗ್ಗೆ 6-30 ಎ.ಎಂ.ದ ಮದ್ಯದ ಅವಧಿಯಲ್ಲಿ ನನ್ನ ಮನೆಯ ಎದರುಗಡೆ ನಿಲ್ಲಿಸಿದ್ದ ನನ್ನ ಹೋಂಡಾ ಸಿ.ಬಿ.ಶೈನ್ ಮೋಟಾರಸೈಕಲ್ ನಂ.ಕೆ.ಎ.32ಇಕೆ.6008ಅಕಿ. 49,000/-ರೂಬೆಲೆಬಾಳುವದನ್ನುಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಳುವು ಆದ ನನ್ನ ಮೋಟಾರ ಸೈಕಲನ್ನು ಪತ್ತೆ ಹಚ್ಚಿವ ಕಾನೂನು ಕ್ರಮ ಕೈಕೊಳ್ಳಬೇಕೆಂದು ತಮ್ಮಲ್ಲಿ ಪ್ರಾರ್ಥನ . ಕಳವು ಆದ ನನ್ನ ಮೋಟಾರ ಸೈಕಲನ್ನು ಪತ್ತೆ ಕುರಿತು ಎಲ್ಲಾ ಕಡೆಗೆ ಹುಡುಕಾಡಿ ಸಿಗದ ಕಾರಣ  ಇಂದು ತಮ್ಮಲ್ಲಿ  ತಡವಾಗಿ ಬಂದು ಫಿರ್ಯಾದಿ ನೀಡಲು ವಿಳಂಬವಾಗಿರುತ್ತದೆ ಅಂತಾ ವಗೈರೆ ಕೊಟ್ಟ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 164/2016 ಕಲಂ. 379  ಐಪಿಸಿ ಪ್ರಕಾರ ಗುನ್ನೆ ಧಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

No comments: