POLICE BHAVAN KALABURAGI

POLICE BHAVAN KALABURAGI

10 April 2016

Kalaburagi District Reported Crimes

ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಬಸವಂತಪ್ಪ ತಂದೆ ಮಲ್ಲಪ್ಪ ಹೂಗಾರ ದಿನಾಂಕ 29.03.2016 ರಂದು ಮುಂಜಾನೆ 11:30 ಗಂಟೆ ಸುಮಾರಿಗೆ ನಾನು ನಮ್ಮ ಕಾರ್ಖಾನೆಯಲ್ಲಿದ್ದಾಗ ನಮ್ಮ ಕಾರ್ಖಾನೆಯ ಸಿವ್ಹಿಲ್ ಇಂಜನಿಯರಾದ ಶ್ರೀ ಗೋಪಾಲ ಕಲ್ಲಪ್ಪ ಗೊಂದಳಿ ಸಾ|| ಅನಂತಪೂರ ತಾ|| ಅತಣಿ ಜಿ|| ಬೆಳಗಾವಿ ಇವರು ನನಗೆ ಪೋನ ಮಾಡಿ, ನಾನು ಮತ್ತು ಸಿವಿಲ್ ಸೂಪರವೈಜರ ಆದ ಶ್ರೀ ಸುನೀಲ ಪ್ರಭಾಕರ ದಡಫೆ, ಇಬ್ಬರು ನಮ್ಮ ಕಾರ್ಖಾನೆಗೆ ಸಂಭಂದಿಸಿದ ಐ.ಟಿ.ಐ ಕಾಲೇಜದ ಮುಂದೆ ಇದ್ದಾಗ ನಮ್ಮ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ರಮೇಶ ಅಮೃತ ಸಂಗಮಕರ ಸಾ|| ಘತ್ತರಗಾ ಇವನು ನಮ್ಮ ಹತ್ತಿರ ಬಂದು ನಮ್ಮ ಹೊಲದಲ್ಲಿ ಜಾಲಿಕಂಟಿಗಳನ್ನು ತಗೆಸಬೇಕು ಜೆ.ಸಿ.ಬಿ ಯಾಕೆ ಕೊಡುತ್ತಿಲ್ಲಾ ಅಂತಾ ನನಗೆ ತಡೆದು ನಿಲ್ಲಿಸಿ, ನನಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಾಗೂ ಕೊಡಲಿಯ ಕಾವಿನಿಂದ ಹೊಡೆ ಬಡೆ ಮಾಡಿರುತ್ತಾನೆ, ಹಾಗೂ ಕಾರ್ಖಾನೆಯ ಇತರೆ ಅಧಿಕಾರಿಗಳಿಗೂ ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ. ಸದರಿಯವನು ನನಗೆ ಹೊಡೆ ಬಡೆ ಮಾಡುತ್ತಿದ್ದಾಗ ನನ್ನ ಜೋತೆಗೆ ಇದ್ದ ಸುನೀಲ ಪ್ರಭಾಕರ ದಡಫೆ ಹಾಗೂ ಸೆಕ್ಯೂರ್ಟಿ ಗಾರ್ಡ ಶ್ರೀಮಂತ ಗಾಯಕವಾಡ ಇವರು ನನಗೆ ಹೊಡೆಯುವುದನ್ನು ಬಿಡಿಸಿ ಕಳುಹಿಸಿರುತ್ತಾರೆ ಎಂದು ತಿಳಿಸಿದನು, ಆಗ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ರಮೇಶ ಸಂಗಮಕರ ಈತನು ಅಲ್ಲಿಂದ ಹೊಗಿದ್ದನು, ಗೋಪಾಲ ಗೊಂದಳಿ ರವರಿಗೆ ನೋಡಲು ಅವರಿಗೆ ಸಣ್ಣ ಪುಟ್ಟ ಗುಪ್ತಗಾಯಗಳು ಹಾಗೂ ತರಚಿದ ಗಾಯಗಳು ಆಗಿದ್ದವು, ನಂತರ ಸದರಿ ಗೋಪಾಲ ಗೊಂದಳಿ ರವರು ನಾನು ರಜೆ ಹಾಕಿ ನಮ್ಮೂರಿಗೆ ಹೋಗುತ್ತೇನೆ ಅಂತಾ ಹೇಳಿ ತಮ್ಮ ಊರಿಗೆ ಹೋಗಿರುತ್ತಾರೆ, ಸದರಿ ಗೋಪಾಲ ರವರಿಗೆ ಅಷ್ಟೆನು ಗಾಯಗಳು ಆಗಿರುವುದಿಲ್ಲ. ಸದರಿ ರಮೇಶ ತಂದೆ ಅಮೃತ ಸಂಗಮಕರ ಸಾ|| ಘತ್ತರಗಾ ಈತನು ತನ್ನ ಹೊಲದಲ್ಲಿ ಜಾಲಿ ಕಂಟಿಗಳನ್ನು ತಗೆಯಲು ಜೆ.ಸಿ.ಬಿ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಹಾಗೂ ತನ್ನ ಡ್ಯೂಟಿಗೆ ಬ್ರೇಕ್ ಕೊಟ್ಟಿದ್ದಕ್ಕೆ ಸಿಟ್ಟಾಗಿ ಸಿವಿಲ್ ಇಂಜಿನಿಯರ್ ಆದ ಗೋಪಾಲ ಗೊಂದಳಿ ರವರಿಗೆ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹಾಗೂ ಕೊಡಲಿಯ ಕಾವಿನಿಂದ ಹೊಡೆ ಬಡೆ ಮಾಡಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅ ಸ್ವಾಭಾವಿಕ ಸಾವು ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ನಾಗನಾಥ ತಂದೆ ಭೀಮಶಾ ಪ್ಯಾಟಿ ಸಾ|| ಮಾಡಿಯಾಳ ಇವರು ಮಾಡಿಯಾಳ ಗ್ರಾಮ ಸೀಮಾಂತರದ ತಮ್ಮ ಕಾಕಾನವರಾದ ಶ್ಯಾಮರಾವ ತಂದೆ ಮಲಕಪ್ಪಾ ಪ್ಯಾಟಿ ಇವರ ಹೊಲದಲ್ಲಿ ಒಬ್ಬ ಅಪರಿಚಿತ ಹುಚ್ಚು ಗಂಡು ಮನುಷ್ಯ ಆತನ ವಯಸ್ಸು ಅಂದಾಜ 65-70 ವರ್ಷ ಹೆಸರು ವಿಳಾಸ ಗೊತ್ತಾಗಿರುವದಿಲ್ಲ ಇತನು ಸುಮಾರು 3-4 ದಿವಸಗಳ ಹಿಂದೆ ದಾರಿ ತಪ್ಪಿ ಬಂದು ಭಾರಿ ಬಿಸಿಲಿನಿಂದಲೋ ಅಥವಾ ಯಾವುದೋ ರೋಗದಿಂದ ಬಳಲಿ ಮೃತಪಟ್ಟಿರಬಹುದು ಆತನ ದೇಹದಿಂದ ಭಾರಿ ಬಿಸಿಲಿನಿಂದಾಗಿ ದ್ರವ ಸೋರುತ್ತಿದ್ದು ಮುಖದ ಮೇಲೆ ಹಕ್ಕಿ ಪಕ್ಷಿ ಹುಳ ತಿಂದು ಕಣ್ಣು ಬಾಯಿ ಮುಖದಿಂದ ರಕ್ತ ಸೋರಿ ರಕ್ತ ಕಪ್ಪು ಬಣ್ಣಕ್ಕೆ ತಿರುಗಿ ಮುಖಕ್ಕೆ ಮಸಿ ಬಳದಂತಾಗಿ ಮೃತನ ಮುಖಚರ್ಯ ಸರಿಯಾಗಿ ಗುರುತು ಸಿಗದ ಸ್ಥಿತಿಯಲ್ಲಿದ್ದು ಮೃತನ ಮುಖದ ಮೇಲೆ ಬಿಳಿ ಗಡ್ಡ ಮಿಸೆ ಹಾಗೂ ತಲೆಯ ಮೇಲೆ ಉದ್ದನೆಯ ಬಿಳಿ ಕೂದಲು ಹೊಂದಿರುತ್ತಾನೆ. ಮೈಮೇಲೆ ಒಂದರ ಮೇಲೊಂದು ಶರ್ಟ ಹಾಕಿದ್ದು ಬೂದಿ ಬಣ್ಣದ ಪ್ಯಾಂಟ ತೊಟ್ಟಿರುತ್ತಾನೆ. ಎರಡು ಕೈ ಮತ್ತು ಕಾಲುಗಳ ಚರ್ಮ ಬಿಸಿಲಿಗೆ ಕಿತ್ತಿ ಬಂದಂತೆ ಕಂಡು ಬಂದಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಮಳಸಿದ್ದಪ್ಪ ತಂದೆ ಸಾಯಬಣ್ಣ ನೀಲೂರ ಉ|| ಕೆ.ಇ.ಬಿ ಇಲಾಖೆಯಲ್ಲಿ ಕರಜಗಿ ವಿಭಾಗದ ಶಾಖಾದಿಕಾರಿ ಸಾ|| ಚಿಣಮಗೇರಾ ತಾ|| ಅಫಜಲಪೂರ ಇವರು ದಿನಾಂಕ 03-04-2016 ರಂದು ನಮ್ಮ ಲೈನಮನ್ ಆದ ಭಾಗಣ್ಣ ತಂದೆ ನರಸಪ್ಪ ಜಮಾದಾರ ಸಾ|| ಬಿಲ್ವಾಡ (ಕೆ) ಕ್ಯಾಂಪ ಮಾಶಾಳ ಇವರು ನನಗೆ ಪೋನ ಮಾಡಿ ನಮ್ಮ ಕರಜಗಿ ಶಾಖೆಯ ವ್ಯಾಪ್ತಿಯಲ್ಲಿ ಬರುವ ಮಾಶಾಳ ಗ್ರಾಮದ ಓಂಕಾರೆಪ್ಪ ತಂದೆ ಮಾಹಾದೇವಪ್ಪ ದೇಶೆಟ್ಟಿ ಸರ್ವೆ ನಂಬರ 222 ಇವರ   ಹೊಲದಲ್ಲಿರುವ 63 ಕೆ.ವಿ ವಿದ್ಯೂತ್ ಪರಿವರ್ತಕ (ಟಿ.ಸಿ) ಯನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದ ಮೇರೆಗೆ, ನಾನು ಸ್ಥಳಕ್ಕೆ ಹೋಗಿ ಸ್ಥಳ ಪರೀಶಿಲಿಸಿ, ಸದರಿ ಟಿಸಿ ಕಳ್ಳತನವಾದ ಬಗ್ಗೆ ನಮ್ಮ ಮೇಲಾದಿಕಾರಿಯವರಿಗೆ ವರದಿ ಮಾಡಿ, ಮೇಲಾದಿಕಾರಿಯವರ ಸಲಹೆ ಪಡೆದುಕೊಂಡು ಇಂದು ತಡವಾಗಿ ಠಾಣೆಗೆ ಬಂದು ದೂರು ನಿಡುತ್ತಿರುತ್ತೇನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ಪ್ರಕರಣ :
ದೇವಲಗಾಣಗಾಪೂರ ಠಾಣೆ : ಶ್ರೀಮತಿ ಜಯಶ್ರೀ ಮಾದರ ಸಾ||ಕುರನಹಳ್ಳಿ ತಾ||ಜೇವರ್ಗಿ ಹಾ||||ಚಿನಮಳ್ಳಿ ಇವರ ಮದುವೆಯು ಸುಮಾರು 08 ವರ್ಷದ ಹಿಂದೆ ಕುರನಹಳ್ಳಿ ಗ್ರಾಮದ ಶ್ಯಾಮರಾಯ ಈತನೊಂದಿಗೆ ಮದುವೆಯಾಗಿದ್ದು ಆಗಿದ್ದು. ನನಗೆ ರೇಣುಕಾ, ಮತ್ತು ರಾಹುಲ್ ಅಂತ ಇಬ್ಬರೂ ಮಕ್ಕಳಿದ್ದು ಮದುವೆ ಆದ ಮೇಲೆ ಎರಡು ವರ್ಷಗಳವರೆಗೆ ನನ್ನ ಗಂಡ ನನಗೆ ಚೆನ್ನಾಗಿ ನೋಡಿಕೊಂಡು ನಂತರ ನನ್ನ ಗಂಡನಾದ ಶ್ಯಾಮರಾಯ ಈತನು ನನಗೆ ನಿನು ಚನ್ನಾಗಿಲ್ಲಾ, ನಿನಗೆ ಅಡುಗೆ ಮಾಡಲು ಬರುವುದಿಲ್ಲಾ, ನೀನು ಕೂಲಿಕೆಲಸ ಕ್ಕೆ ಹೋಲಕ್ಕೆ ಹೋಗು ಅಂತಾ ಬೈದಿದ್ದರಿಂದ. ನಾನು ಈಗ ಕಳೆದ 06 ವರ್ಷಗಳಿಂದ ನನ್ನ ತವರೂರಾದ ಚಿನಮಳ್ಳಿ ಗ್ರಾಮಕ್ಕೆ ಬಂದು ತವರೂರಲ್ಲೆ ನಮ್ಮ ತಂದೆ ತಾಯಿಯೊಂದಿಗೆ ಇರುತ್ತೆನೆ.ಈಗ ನನಗೆ ಸುಮಾರು ಒಂದು ವರ್ಷ ಆರು ತಿಂಗಳ ಹಿಂದೆ ಎಡಗೈ, ಮತ್ತು ಎಡಗಾಲಿಗೆ ಲಕ್ವಾ ಹೊಡೆದಿದ್ದು  ದಿನಾಂಕ:08-04-2016 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ನಾನು ನನ್ನ ತಾಯಿ ಪುತಳಾಬಾಯಿ ನಮ್ಮ ಮನೆಯಲ್ಲಿ ಮಾತಾಡುತ್ತಾ ಕುಳಿತಾಗ ಅದೆ ಹೊತ್ತಿಗೆ ನನ್ನ ಗಂಡ ಶ್ಯಾಮರಾಯ ಈತನು ಚಿನಮಳ್ಳಿ ಗ್ರಾಮದ ನಮ್ಮ ಮನೆಗೆ ಬಂದು ನನಗೆ ತಡೆದು ನಿಲ್ಲಿಸಿ ನನಗೆ ಏ ರಂಡಿ ಇನ್ನು ಎಷ್ಟ ದಿನಾ ನಿಮ್ಮ ಅಪ್ಪನ ಮನೆಯಲ್ಲಿ ಇರತಿ ಅಂದಾಗ ನಾನು ನಿಮ್ಮ ಮನೆಯಲ್ಲಿ ನೀನು ನನಗೆ ಚನ್ನಾಗಿ ನೋಡಿಕೊಂಡ್ರೆ ನಾ ಯಾಕ ಇಲ್ಲಿ ಇರತಿದ್ದೆ ಮತ್ತು ನನಗೆ ಲಕ್ವಾ ಹೊಡೆದಿದ್ದು ನನಗೆ ಆರಾಮವಾದ ಮೇಲೆ ಊರಿಗೆ ಬರುತ್ತೇನೆ ಆಂತ ಅಂದಾಗ, ಏ ರಂಡಿ ಈಗ ನೀನು ನಮ್ಮ ಮನೆಗೆ ಬರುತ್ತೀಯಾ ಇಲ್ಲ ಅಂತ ಅಂದು ನನ್ನ ತೆಲೆ ಕೂದಲು ಹಿಡಿದು ಜಗ್ಗಾಡಿ ನನ್ನ ಕೈಯಿಂದ ನನ್ನ ಕಪಾಳಕ್ಕೆ ಹೊಡೆಯುತ್ತಿದ್ದಾಗ ನನ್ನ ತಾಯಿ ಪುತಳಾಬಾಯಿ, ನಮ್ಮ ತಂದೆ ಪ್ರಭುಲಿಂಗ ಮತ್ತು ನಮ್ಮ ಅಣ್ಣನಾದ ಶ್ರೀಶೈಲ ಮತ್ತು ನಮ್ಮ ಪಕ್ಕದರಾದ ನಿಂಗಣ್ಣ ತಂದೆ ಸೈಬಣ್ಣ ವಳಕಟ್ಟಿ, ಸಿದ್ದಪ್ಪ ತಂದೆ ಭೀಮಶ್ಯಾ ಮಾಂಗ  ಇವರು ಜಗಳ ಬಿಡಿಸಿದರು, ನನ್ನ ಗಂಡ ಶ್ಯಾಮರಾಯ ಈತನು ಹೋಗುವಾಗ ಏ ರಂಡಿ ಇವತ್ತು ಜಗಳ ಬಿಡಿಸ್ಯಾರ ಇಲ್ಲದಿದ್ದರೆ ನನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ನಿನ್ನ ಜೀವ ಹೊಡೆಯುತ್ತಿದ್ದೆ ಅಂತ ಅಂದು ಜೀವದ ಭಯ ಹಾಕಿದ ನನ್ನ ಗಂಡನಾದ ಶ್ಯಾಮರಾಯ ಈತನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲ ಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

No comments: