ವರದಕ್ಷಣೆ
ಕಿರುಕಳ ಪ್ರಕರಣ :
ನೆಲೋಗಿ ಠಾಣೆ
: ಶ್ರೀಮತಿ. ದೇವಮ್ಮಾ ಗಂಡ ಸಿದ್ದಣ್ಣ ಗುತ್ತೇದಾರ ಸಾ|| ದೇಸಣಗಿ ತಾ|| ಜೇವರ್ಗಿ ಜಿ-ಕಲಬುರ್ಗಿ ಇವರನ್ನು ಈಗ ಸುಮಾರು 12 ವರ್ಷದ
ಹಿಂದೆ ಜೇವರ್ಗಿ ತಾಲೂಕದ ದೇಸಣಗಿ ಗ್ರಾಮದ ಸಿದ್ದಣ್ಣ ತಂದೆ ಈರಣ್ಣ ಗುತ್ತೇದಾರ ಈತನೊಂದಿಗೆ ಮದುವೆ
ಆಗಿದ್ದು ಈಗ ನನಗೆ 8 ವರ್ಷದ ಕಾವೇರಿ ಎನ್ನುವ ಹೆಣ್ಣು ಮಗಳು ಇರುತ್ತಾಳೆ 10 ವರ್ಷದ ವರೆಗೆ ನನ್ನ
ಗಂಡನು ನನ್ನ ಸಂಗಡ ಸರಿಯಾಗಿ ಇದ್ದು ಈಗ 2 ವರ್ಷದಿಂಧ ನನಗೆ ನಿನ್ನ ತವರು ಮನೆಯಿಂದ ಬಂಗಾರ ಹಣ
ತಗೆದುಕೊಂಡು ಬಾ ನಿನಗೆ ಕೆಸಲ ಸರಿಯಾಗಿ ಬರುವದಿಲ್ಲಾ ನೀನು ಹಾಗೆ ಇದ್ದಿ ಹೀಗಿ ಇದ್ದಿ ಅಂತ ದಿನ
ನಿತ್ಯ ಹೊಡೆಯುವದು ಬಡೆಯುವುದು ಮಾಡಿ ಮಾನಸಿಕ ಹಾಗೂ ದೈಹಿಕ ತೊಂದರೆ ಕೊಡುತ್ತಾ ಬಂದಿದ್ದು ಈ
ವಿಷಯ ನನ್ನ ತಂದೆ ತಾಯಿಗೆ ಹಬ್ಬಕ್ಕೆ ಹೊದಾಗ ಹಾಗೂ ಫೋನ ಮುಖಾಂತರ ತಿಳುಸುತ್ತಾ ಬಂದಿದ್ದು ಅವರು
ನಿನ್ನ ಗಂಡನಿಂದಾನೆ ಇಂದಿಲ್ಲಾ ನಾಳೆ ಸುದಾರಿಸುತ್ತಾನೆ ಅಂತ ನನಗೆ ತಿಳುವಳಿಕೆ ಹೇಳುತ್ತಾ
ಬಂದಿದ್ದರು ನಿನ್ನೆ ದಿನಾಂಕ: 31/03/2016 ರಂದು ರಾತ್ರಿ 10:00 ಪಿ.ಎಂಕ್ಕೆ ಭೋಸಡಿ ರಂಡಿ
ಇಷ್ಟು ದಿನ ಹೇಳಿದರು ನೀನು ನಿನ್ನ ತವರ ಮನೆಯಿಂದ ಹಣ ಬಂಗಾರ ತಂದಿರುವದಿಲ್ಲಾ ಇನ್ನು ಮುಂದೆ
ಕೂಡಾ ನೀನು ನಿನ್ನ ತವರ ಮನೆಯಿಂದ ಹಣ ಬಂಗಾರ ತರುವದಿಲ್ಲಾ ನೀನಗೆ ಖಲಾಸ ಮಾಡುತ್ತೇನೆ. ಅಂತ ಹೇಳಿ
ಮನೆಯಲ್ಲಿ ಇದ್ದ ಕೂಡಗೊಲನ್ನು ಒಲೆಯ ಬೆಂಕಿಯಲ್ಲಿಟ್ಟು ಕಾಯಿಸಿ ನೀನಗೆ ಖಲಾಸ ಮಾಡುತ್ತೇನೆಂದು
ಕುತ್ತಿಗೆಯ ಮೇಲೆ ಕಾಯಿದ ಕೂಡಗೊಲನ್ನು ಇಡಲು ಬಂದಾಗ ನಾನು ಹೊರಳಿದಾಗ ಆ ಕಾಯಿದ ಕೂಡಗೊಲು ನನ್ನ
ಬಲಗೈ ಮುಗೈ ಮೇಲೆ ಹತ್ತಿ ಮೈ ಸೂಟ್ಟಿದ್ದು ಆಗ ನಾನು ಚಿರಾಡಿದಾಗ ನಮ್ಮ ಮಾವ ಈರಣ್ಣ ಗುತ್ತೇದಾರ, ಸಂಕಮ್ಮಾ ಚಿನ್ನಾಗೋಳ ಮತ್ತು ನನ್ನ ಮೈದುನ ಭೀಮರಾಯ ಗುತ್ತೇದಾರ ಅವನ ಹೆಂಡತಿ ಜಯಶ್ರೀ ಇವರು
ಬಂದು ಜಗಳ ಬಿಡಿಸಿರುತ್ತಾರೆ. ಈಗ 2 ವರ್ಷದಿಂದ ನಾವು ದೇಸಣಗಿ ಗ್ರಾಮದಲ್ಲಿ ಹೊಟೇಲ ಇಟ್ಟಿಕೊಂಡು
ಇದ್ದು ನಮ್ಮ ಹೊಟೇಲಕ್ಕೆ ಬರುವ ಜನರ ಮೇಲೆ ನನ್ನ ಗಂಡನು ಶಂಸೆ ಪಟ್ಟು ವಿನಾಕಾರಣ ಜಗಳ ತಗೆಯುತ್ತಾ
ಬಂದಿದ್ದು ಅದೇ ವಿಷಯವಾಗಿ ಹಾಗೂ ನನ್ನ ತವರ ಮನೆಯಿಂದ ಬಂಗಾರ ಹಣ ತರುವಂತೆ ಮಾನಸಿಕ ಹಾಗೂ ದೈಹಿಕ
ತೊಂದರೆ ಕೊಟ್ಟು ಹೊಡೆ ಬಡೆ ಮಾಡಿ ಕೂಡಗೋಲ ಕಾಯಿಸಿ ಕುತ್ತಿಗೆ ಮೇಲೆ ಒತ್ತಿ ಕೊಲೆ ಮಾಡಲು
ಪ್ರಯತ್ನ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಅಪಘಾತ ಪ್ರಕರಣ
:
ಗ್ರಾಮೀಣ
ಠಾಣೆ : ದಿನಾಂಕ
31.03.2016 ರಂದು ರಾತ್ರಿ 00:45 ಗಂಟೆಯ ಸುಮಾರಿಗೆ ಲಾರಿ ನಂ ಎಪಿ27ಟಿ5299 ನೇದ್ದರ ಚಾಲಕನು
ತನ್ನ ಲಾರಿಯನ್ನು ಜೇವರಗಿ ಶಹಾಪುರ ಮೇನ್ ರೊಡ್ ಮೇಲೆ ಚಿಗರಳ್ಳಿ ಕ್ರಾಸ್ ದಾಟಿ ಮುಂದೆ
ರೋಡಿನಲ್ಲಿ ತನ್ನ ಲಾರಿಯನ್ನು ಯಾವುದೆ ಸಂಚಾರಿ ನಿಯಮವನ್ನು ಪಾಲಿಸದೆ ಮತ್ತು ಯಾವುದೆ
ಸೂಚನೆಯನ್ನು ನೀಡದೆ ಹಾಗು ಇಂಡಿಕೇಟರ್ ಅನ್ನು ಹಾಕದೆ ನಿಷ್ಕಾಳಜಿತನದಿಂದ ರಸ್ತೆಯ ಮೇಲೆ
ನಿಲ್ಲಿಸಿದ್ದು ಸದರಿ ಲಾರಿಗೆ ಶಹಾಪುರ ಕಡೆಯಿಂದ ಬಂದ ಲಾರಿ ನಂ ಹೆಚ್.ಆರ್74-8819 ನೇದ್ದರ
ಚಾಲಕನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ರಸ್ತೆಯ ಮೇಲೆ ನಿಂತಿದ್ದ ಲಾರಿಗೆ
ಹಿಂದಿನಿಂದಿ ಡಿಕ್ಕಿ ಪಡಿಸಿದ್ದು ಕಾರಣ ಸದರಿ ಲಾರಿ ಚಾಲಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಈ
ಮೂಲಕ ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment