ಬೆಂಕಿ ಹಚ್ಚಿ ಸ್ವತ್ತನ್ನು ನಾಶಪಡಿಸಿದ ಪ್ರಕರಣ
:
ಗ್ರಾಮೀಣ ಠಾಣೆ : ಶ್ರೀ ಮಿಟನಪ್ಪ ತಂದೆ ಪದ್ಮಾಜೀ ಕಾಳೇ ಸಾ:ಶರಣಸಿರಸಗಿ ನಾಗಯ್ಯಾನ ಗುಡಿಯ ಹತ್ತಿರ ತಾ:ಜಿ:ಕಲಬುರಗಿ ಇವರು ದಿನಾಂಕ:-20/03/2016 ರಂದು ರಾತ್ರಿ ಊಟ ಮಾಡಿ ಫಿರ್ಯಾದಿ ಮಿಟನಪ್ಪಾ ಹಾಗು ಹೆಂಡತಿ ಮಕ್ಕಳೊಂದಿಗೆ ಬೇಸಿಗೆ ಇರುವುದ್ದರಿಂದ್ದ ಮನೆಯ ಮುಂದೆ ಖಲ್ಲಾ ಜಾಗೆಯಲ್ಲಿ ಮಲಗಿಕೊಂಡಾಗ ದಿನಾಂಕ:-20/03/2016 ರಂದು ರಾತ್ರಿ 10:30 ಗಂಟೆಯಿಂದ ದಿನಾಂಕ:-21/03/2016 ರಂದು 03:00 ಗಂಟೆಯ ಮದ್ಯದ ಅವದಿಯಲ್ಲಿ ಯರೋ ದುಷ್ಕರ್ಮಿಗಳು ಯಾವುದೋ ಉದ್ದೇಶದಿಂದ ಫಿರ್ಯಾದಿ ಮಿಟನಪ್ಪ ಇತನ ಮನೆಯಲ್ಲಿ ಬೆಂಕಿ ಹಚ್ಚಿ ಮನೆಯಲ್ಲಿದ್ದ ಅಂದಾಜ
22,700/-ರೂ ಬೆಲೆ ಬಾಳುವ ಸ್ವತ್ತಿಗೆ ಬೆಂಕಿ ಹಚ್ಚಿ ನಾಶ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕಳವು ಪ್ರಕರಣ :
ಸೇಡಂ ಠಾಣೆ : ಶ್ರೀ ಮಹಾದೇವಪ್ಪ ತಂದೆ
ಗುಂಡಪ್ಪ ಗೌನಳ್ಳಿ ಸಾ:ಹೊಸಳ್ಳಿ, ತಾ:ಸೇಡಂ ಇವರು ಹೊಸಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ
ಮುಖ್ಯಗುರುಗಳಾಗಿದ್ದು ದಿ:19-03-2016 ರಂದು 12-00 ಪಿ.ಎಮ್.ಕ್ಕೆ ಶಾಲೆಯ ಬೀಗ ಹಾಕಿಕೊಂಡು ಮನೆಗೆ
ಹೋಗಿದ್ದು ಹೀಗಿದ್ದು ದಿ:21-03-2016 ರಂದು 09-10 ಎ.ಎಮ್.ಕ್ಕೆ ಶಾಲೆಗೆ ಹಾಕಿದ
ಬೀಗ ಮುರಿದಿರುತ್ತಾರೆ ಅಂತ ಗೊತ್ತಾಗಿ ನಾನು ಶಾಲೆಗೆ ಹೋಗಿ ನೋಡಲಾಗಿ, ನಮ್ಮ ಶಾಲೆಯ ಬಿಸಿಊಟದ ಕೊಣೆಯ
ಬೀಗ, ಕಾರ್ಯಾಲಯದ ಬೀಗ ಹಾಗೂ ನಲಿ-ಕಲಿ ಕೋಣೆಯ ಬೀಗಗಳನ್ನು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ
ಮುರಿದು 50 ಕೆ.ಜಿಯ ಎರಡು ಅಕ್ಕಿ ಚೀಲಗಳು, ಅಂ.ಕಿ 1000/- ರೂಪಾಯಿ, 37 ಕೆ.ಜಿ. ಗೋದಿ ಅಂ.ಕಿ 350/-ರೂ, 83 ಕೆ.ಜಿ ಬೆಳೆ ಅಂ.ಕಿ 6000/- ರೂ ಮತ್ತು 27 ಕೆ.ಜಿ ಅಡುಗೆ ಎಣ್ಣೆ ಅಂ.ಕಿ 1050/- ರೂ ಮತ್ತು ಶಾಲೆಯ
ಕಾರ್ಯಾಲಯದಲ್ಲಿಯ ಒಂದು ಫ್ಯಾನ ಅಂ.ಕಿ 500/- ರೂಪಾಯಿಗಳು, 5 ಜೊತೆ 8 ನಂಬರಿನ ಶೂ(ಬೂಟ) ಅಂ.ಇ 500/- ರೂ ಗಳನ್ನು ಯಾರೋ ಕಳ್ಳರು
ಕಳವು ಮಾಡಿಕೊಂಡು ಹೋಗಿರುತ್ತಾರೆ. ಒಟ್ಟು ಅಂ.ಕಿ 9400/- ರೂಪಾಯಿಗಳ ಕಿಮ್ಮತ್ತಿನ
ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕಸ್ಮಿಕ
ಬೆಂಕಿ ಪ್ರಕರಣ :
ಸೇಡಂ ಠಾಣೆ : ಶ್ರೀ ವಿಶ್ವನಾಥರೆಡ್ಡಿ ತಂದೆ ಸೊಮನಾಥರೆಡ್ಡಿ ತಿಪ್ಪಣ್ಣೋರ
ಸಾ : ಹಂದರಕಿ
ತಾ : ಸೇಡಂ ಇವರು ದಿನಾಂಕ:21-03-2016 ರಂದು ನಾನು ಮತ್ತು ನಮ್ಮ ಮನೆಯಲ್ಲಿ ಕೆಲಸಕ್ಕಾಗಿ ಇರುವ
ಚಂದಪ್ಪ ತಂದೆ ಭೀಮಣ್ಣ ಮತ್ತು ಬುಗ್ಗಣ್ಣ ತಂದೆ ಯಲ್ಲಪ್ಪ ಮೂರು ಜನ ಕೂಡಿಕೊಂಡು ಬೆಸಿಗೆ
ಕಾಲವಿದ್ದರಿಂದ ನಮ್ಮ ದನಕರುಗಳಿಗೆ ಮತ್ತು ಎತ್ತುಗಳಿಗೆ ಮಧ್ಯಾಹ್ನ 12-30 ಸುಮಾರಿಗೆ ನೀರು ಕೂಡಿಸಿ ಅಲ್ಲೆ ಪಕ್ಕದ ಕೊಟ್ಟಿಗೆಯಲ್ಲಿ
ಕಟ್ಟಿ ಮೇವು ಹಾಕಿ ನಾವು ಮೂರು ಜನರು
ಊಟಕ್ಕಾಗಿ ಮನೆಗೆ ಹೊಗಿರುತ್ತೇವೆ. ನಂತರ ಸ್ವಲ್ಪ
ಸಮಯದಲ್ಲೆ ನಮ್ಮ ಎರಡನೆ ತಮ್ಮನಾದ ಚನ್ನಬಸರೆಡ್ಡಿ ಇವರು ಗಾಬರಿಯಿಂದ ನನಗೆ ತಿಳಿಸಿದ್ದೆನೆಂದರೆ
ನಮ್ಮ ದೊಡ್ಡಿಯಲ್ಲಿದ್ದ ಕಣಿಕೆ ಬಣವೆಗೆ ಆಕಸ್ಮಿಕವಾಗಿ ಬೆಂಕಿ ಹತ್ತಿರುತ್ತದೆ ನೀವು
ಬೇಗ ಬನ್ನಿರಿ ಅಂತಾ ತಿಳಿಸಿದಾಗ ನಾನು ಹೊಗಿ ನೋಡಲಾಗಿ ಸದರಿ ನಮ್ಮ ಕಣಿಕೆ ಬಣವೆಗೆ ಬೆಂಕಿ ಹತ್ತಿ
ಉರಿಯುತ್ತಿತ್ತು ಆಗ ನಾನು ಮತ್ತು ನಮ್ಮ ಕೂಲಿ ಆಳುಗಳು ನಮ್ಮ ಎತ್ತುಗಳಿಗೆ ಮತ್ತು ದನಕರುಗಳಿಗೆ
ಹಗ್ಗ ಬಿಚ್ಚಿ ಹೊರಗಡೆ ಬಿಟ್ಟರು ನಂತರ ನಾನು ಈ ವಿಷಯವನ್ನು ನನ್ನ ತಮ್ಮನಾದ ಜಗನ್ನಾಥರೆಡ್ಡಿ
ಇವರಿಗೆ ತಿಳಿಸಿದ್ದು ಅವರು ಸೇಡಂ ಪೊಲೀಸ್ ಠಾಣೆಗೆ ಮತ್ತು ಅಗ್ನಿಶಾಮಕ ಠಾಣೆಗೆ ಮಾಹಿತಿ
ತಿಳಿಸಿದ್ದು ಸ್ವಲ್ಪ ಸಮಯದ ನಂತರ ಅಗ್ನಿಶಾಮಕ ದಳದವರು ಬಂದು ಬೆಂಕಿ ಆರಿಸಿದ್ದು ಅಲ್ಲದೆ ನಮ್ಮೂರ
ಜನರು ನಾವು ಅಣ್ಣತಮ್ಮಂದಿರು ನಮ್ಮ ಆಳುಗಳು ಎಲ್ಲರು ಕೂಡಿ ರಾತ್ರಿ 9 ಗಂಟೆಯವರೆಗೆ
ಬೆಂಕಿಯನ್ನು ಆರಿಸಿದ್ದು ಸದರಿ ಘಟನೆಯಲ್ಲಿ ನಮಗೆ
26 ಟ್ರಾಕ್ಟರ ಕಣಿಕೆ ಅ.ಕಿ 260000/- 8 ಟ್ರಾಕ್ಟರ ಕವಳಿ ಹುಲ್ಲು ಅ.ಕಿ 40000/- 3 ಟ್ರಾಕ್ಟರ
ತೊಗರಿ ಒಟ್ಟು ಅ.ಕಿ 36000/- ಅಲ್ಲದೆ ತೊಗರಿ ಒಟ್ಟು ಹಾಕಿದ ರೂಮಿನ ಜಂತಿಗಳು, ಸರಗಳು
ಪೂರ್ತಿಯಾಗಿ ಸುಟ್ಟಿರುತ್ತವೆ ಹಾಗೂ ಕೃಷಿ ಸಾಮಾನುಗಳಾದ ಕುಂಟಿ, ದಿಂಡು, ನೇಗಿಲು
ಎಲ್ಲವು ಸೇರಿ ಒಟ್ಟು 30000/- ಎಲ್ಲಾ ಒಟ್ಟು 3,66,000/-
ರೂ. ಬೆಲೆಬಾಳುವ ಮೇವು ಮತ್ತು ಕೃಷಿ ಸಾಮಾನುಗಳು ಬೆಂಕಿಯಿಂದ ಸುಟ್ಟು ನಾಶವಾಗಿರುತ್ತದೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment