POLICE BHAVAN KALABURAGI

POLICE BHAVAN KALABURAGI

18 March 2016

Kalaburagi District Reported Crimes

ಅಪಹರಣ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 13.03.2016 ರಂದು ಮುಂಜಾನೆ 04:30 ಗಂಟೆಯ ಸುಮಾರಿಗೆ ನನ್ನ ಮಗಳಾದ ಶರಣಮ್ಮ ತಂದೆ ನಾಗರೆಡ್ಡಿ ಹತ್ತಿಕುಣಿ ವಯಾ : 17 ವರ್ಷ ಸಾ : ಬಿರಾಳ ಕೆ ಇವಳು ಬಹಿರ್ದೇಸೆ ಕುರಿತು ಹೋಗಿ ಮರಳಿ ಮನೆಯ ಕಡೆಗೆ ಬರುತ್ತಿದ್ದಾಗ ದಾರಿಯ ಮಧ್ಯದಲ್ಲಿ 1) ಶಮಸೋದ್ದಿನ್ ತಂದೆ ಮದರಸ 2) ಖಾಸೀಂ ತಂದೆ ಮದರಸ 3) ಬಾಬು ತಂದೆ ಮದರಸ  4) ಸರ್ವರ್‌ಸಾಬ್ ತಂದೆ ಮದರಸ 5) ವಜೀರ್‌ ತಂದೆ ಮದರಸ 6) ಮಶಾಕ್ ತಂದೆ ಮಹೇಬೂಬ  ಸಾ|| ಎಲ್ಲರು ಬಿರಾಳ ಕೆ. ಎಲ್ಲರು  ಕೂಡಿಕೊಂಡು ತಮ್ಮ ಕ್ರೂಜರ್‌ ಜೀಪ ನಂ ಕೆ.ಎ23ಎನ್‌1509 ನೇದ್ದರಲ್ಲಿ ನನ್ನ ಮಗಳಿಗೆ ಯಾವುದೋ ಒಂದು ಬಲವಾದ ಕಾರಣಕ್ಕಾಗಿ ಬಲವಂತವಾಗಿ ಎಳೆದುಕೊಂಡು ಜೀಪ್‌ನಲ್ಲಿ ಹಾಕಿ ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ನಾಗರೆಡ್ಡಿ ತಂದೆ ಚಂದ್ರರೆಡ್ಡಿ ಹತ್ತಿಕುಣಿ ಸಾ : ಬಿರಾಳ ಕೆ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆ ಪ್ರಕರಣ :
ನೆಲೋಗಿ ಠಾಣೆ : ಶ್ರೀಮತಿ ಜನಬಾಯಿ ಗಂಡ ಜಗನು ಪವಾರ ಸಾ : ಬದನಿ ಹಾಳತಾಂಡಾ ತಾ :  ಜೇವರ್ಗಿ ಜಿ: ಕಲಬುರ್ಗಿ ಇವರು ಗಂಡ ಜಗನು ತಂದೆ ಸೋಮಲು ಪವಾರ  ಇವರ ಹೆಸರಿನಿಂದ ಸಿಂದಗಿ ತಾಲುಕಿನ ನಾಗಾವಿ ಸಿಮಾಂತರದಲ್ಲಿ ಹೊಲ ಸರ್ವೆ ನಂಬರ 58 ವಿಸ್ತೀರ್ಣ ಎರಡು ಎಕರೆ 7 ಗುಂಟೆ ( 2 ಎ 7 ಗು ) ಜಮಿನು ಇರುತ್ತದೆ.ನನ್ನ ಗಂಡನ ಸದರ ಜಮೀನಿನ ಮೇಲೆ ಕೃಷಿಗಾಗಿ ಮತ್ತು ಸಂಸಾರದ ಅಡಚಣೆಗಾಗಿ ಸ್ಟೆಟ ಬ್ಯಾಂಕ ಆಪ್ ಇಂಡಿಯಾ ಸಿಂದಗಿಯಲ್ಲಿ  40,000/ ರೂಪಾಯಿ ಸಾಲ ಮಾಡಿದ್ದು ಮತ್ತು ಕಲಬುರರ್ಗಿಯ ಚೋಲಾ ಪೈನಾನ್ಸಲ್ಲಿ 3,50,000/ ರೂಪಾಯಿ ಸಾಲ ಮಾಡಿದ್ದು ಮತ್ತು ಊರ ಮನೆಯವರ ಹತ್ತಿರ ಕೈಗಡ ಹಾಗೆ 2,00,000/ರೂಪಾಯಿ ಹೀಗೆ ಒಟ್ಟು 5,90,000/ ಸಾಲ ಮಾಡಿದ್ದು ಈ ವರ್ಷ ಮಳೆ ಆಗದೆ ಬೆಳೆ ಬೆಳೆಯದೆ ಇದ್ದಿದ್ದರಿಂದ ಮಾಡಿದ ಸಾಲ ಹೇಗೆ ತಿರಿಸಬೇಕೆಂದು ನ್ನನ್ನ ಗಂಡ ಚಿಂತಿಸುತ್ತಿದ್ದನು. ನಾನು ನನ್ನ ಮಗ  ಪರಶುರಾಮ ನನ್ನ  ಗಂಡನಿಗೆ ಮುಂದಿನ ವರ್ಷ ಸಾಲ ತಿರಿಸಿದರಾಯಿತು ಅಂತ ಸಾತ್ವನ ಹೇಳುತ್ತಿದ್ದೆವು ಆದರು ನನ್ನ ಗಂಡ ಯಾವಗಲೂ ಸಾಲದ ವಿಚಾರದಲ್ಲಿ ಚಿಂತಿಸುತ್ತಿದ್ದನು. ದಿನಾಂಕ:17-03-2016 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ನಮ್ಮೂರ ಶ್ರೀ ಮಲ್ಲಿಕಾರ್ಜುನ ಚಾಣಕ್ಯ ಕೋಚಿಂಗ ಸ್ಕೂಲ ಅಲ್ಲಿ ಬೀಳ್ಕೊಡುಗೆ ಸಮಾರಂಭದ ನಿಮಿತ್ಯ ನಾವೆಲ್ಲರು ಕಾರ್ಯಕ್ರಮಕ್ಕೆ ಹೊಗಿದ್ದೆವು ಮನೆಯಲ್ಲಿ ನನ್ನ ಗಂಡ ಒಬ್ಬನೆ ಇದ್ದನು . ನಾವು ಕಾರ್ಯಕ್ರಮ ಮುಗಿಸಿಕೊಂಡು 6;30 ಗಂಟೆ ಸುಮಾರಿಗೆ ಮನೆಗೆ ಬಂದು ನೋಡಲಾಗಿ ನನ್ನ ಗಂಡ ಜಗನು ಹೊಟ್ಟೆ ಉರಿತಾಯಿದೆ ಅಂತ ಒದ್ದಾದಡುತ್ತಿದ್ದಾಗ ನಾನು ಮತ್ತು ನನ್ನ ಮಗ ಪರಶುರಾಮ ಏನಾಗಿದೆ ಅಂತ ವಿಚಾರಿಸಲಾಗಿ ಸಾಲದ ಭಾದೆಯಿಂದ ತಾನು ಗುಳಿಗೆಗಳನ್ನು ಸೇವಿಸಿರುವುದಾಗಿ ತಿಳಿಸಿದಾಗ ನಾನು ಗಾಬರಿಯಾಗಿ ನನ್ನ ಮಕ್ಕಳಾದ ಪರಶುರಾಮ ಮತ್ತು ವಸುರಾಮ ಮತ್ತು ನಮ್ಮ ಸಂಬಂದಿ ನಾಥು ಪವಾರ ಎಲ್ಲರೂ ಕೂಡಿ ಖಾಸಗಿ ವಾಹನದಲ್ಲಿ ನನ್ನ ಗಂಡನಿಗೆ ಉಪಚಾರಕ್ಕೆ ಕರೆದುಕೊಂಡು ಹೋಗುತ್ತಿರುವಾಗ ದಿನಾಂಕ: 17-03-2016 ರಂಧು 10-00 ಪಿ.ಎಮ್ ಸುಮಾರಿಗೆ ಜೇರಟಗಿಯ ಹತ್ತಿರ ನನ್ನ ಗಂಡನು ಗುಳಿಗೆ ಸೇವಿಸಿದ್ದರಿಂದ ಮೃತಪಟ್ಟಿರುತ್ತಾನೆ, ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ರಾಜಶ್ರೀ ಗಂಡ ಬಾಬು ಜಗದೆ ಸಾ:ಪ್ಲಾಟ ನಂ.141 ಸ್ವಾಮಿ ವಿವೇಕಾನಂದ ಕಾಲೋನಿ ಆಳಂದ ರಸ್ತೆ ಕಲಬುರಗಿ ಇವರು ದಿನಾಂಕ:16/02/2016 ರಂದು ರಾತ್ರಿ 8.00 ಗಂಟೆಗೆ ನಮ್ಮ ಮನೆಗೆ ಬೀಗ ಹಾಕಿ ಬೆಂಗಳೂರಿನಲ್ಲಿ ಕೆ.ಇ.ಬಿ ಯಲ್ಲಿ ಕೆಲಸ ಮಾಡುತ್ತಿರುವ ನನ್ನ ಮಗ ರಾಕೇಶ ಬಳಿ ಹೋಗಿದ್ದು ದಿನಾಂಕ:26/02/2016 ರಂದು ಬೆಳಗ್ಗೆ 7.00 ಗಂಟೆಗೆ ಮರಳಿ ಕಲಬುರಗಿಗೆ ನಮ್ಮ ಮನೆಗೆ ಬಂದು ನೋಡಲು ಮನೆಯ ಬಾಗಿಲು ತೆರೆದಿತ್ತು ನಾನು ಗಾಬರಿಗೊಂಡು ಮನೆಯೊಳಗೆ ಹೋಗಿ ನೋಡಲಾಗಿ  ಬಂಗಾರದ ಆಭರಣಗಳು ಮತ್ತು ನಗದು ಹಣ ಹೀಗೆ ಒಟ್ಟು  2 ಲಕ್ಷ 9 ಸಾವಿರ ರೂಪಾಯಿಗಳಷ್ಟು ಕಳ್ಳತನವಾಗಿದ್ದು ಪತ್ತೆ ಹಚ್ಚಿ ಕೊಡಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಿಪ್ಪರ ಕಳವು ಪ್ರಕರಣ :
ಜೇವರಗಿ ಠಾಣೆ : ದಿನಾಂಕ 16.03.2016 ರಂದು 04:30 ಗಂಟೆಯಿಂದ 06:30 ಗಂಟೆಯ ಮಧ್ಯದ ಅವಧೀಯಲ್ಲಿ ಜೇವರಗಿ ಪಟ್ಟಣದ ದತ್ತನಗರದಲ್ಲಿನ ಭೀಮು ಪವಾರ್ ಇವರ ಕಾಂಪ್ಲೇಕ್ ಮುಂದೆ ನಿಲ್ಲಿಸದ್ದ ನನ್ನ ಟಿಪ್ಪರ್ ನಂ ಕೆ.ಎ32ಎ8405 ಅಂ.ಕಿ 8.00.000/- ರೂ ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಾರಣ ಸದರಿ ಕಳ್ಳರನ್ನು ಹಾಗು ಕಳ್ಳತನವಾದ ಟಿಪ್ಪರ್‌ ನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಅಂತಾ  ಶ್ರೀ ಪ್ರಭು ತಂದೆ ಭೋಜು ಜಾಧವ ಸಾ : ಜೇವರಗಿ ತಾಂಡಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: