POLICE BHAVAN KALABURAGI

POLICE BHAVAN KALABURAGI

16 March 2016

Kalaburagi District Reported Crimes

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ. ಗುರು@ಗುರುಶಾಂತ ತಂದೆ ಚಂದ್ರಶೇಖರ ಹಾವಾ ಸಾ;ತಾಜಸುಲ್ತಾನಪೂರ ಇವರು  ದಿನಾಂಕ15-3-2016 ರಂದು ತಾನು ಮತ್ತು ತನ್ನ ಗೆಳೆಯ ಇಬ್ಬರು ಕೂಡಿಕೊಂಡು ಕಲ್ಲಹಂಗರಗಾ ರೋಡಿಗೆ ಇರುವ ಹೊಲಕ್ಕೆ ನೋಡಿಕೊಂಡು ಬರುವ ಕುರಿತು ಹೊಲಕ್ಕೆ ಹೋಗಿ ಮರಳಿ ಬರುವಾಗ ಪಕ್ಕದ ಮಾಸ್ತರನ ಹಾವುನೂರ ಹೊಲದಲ್ಲಿ  ಒಬ್ಬ ಅಪರಿಚಿತ ವ್ಯಕ್ತಿ ವಯಸ್ಸು ಅಂದಾಜು 30-35 ವಯಸ್ಸಿನವನು ಅಂಗಾತವಾಗಿ ಬಿದ್ದಿದ್ದು ಮುಖದ ಮೇಲೆ ಹಣೆಯ ಮದ್ಯದಲ್ಲಿ ಗಟ್ಟಿ ಭಾರವಾದ ವಸ್ತುವಿನಿಂದ ಹೊಡೆದ ಗಾಯವಿದ್ದು ಎಡಗಣ್ಣಿಗೆ ಭಾರಿಗಾಯವಾಗಿ ಕಣ್ಣಿನ ಗುಡ್ಡಿ ಹೊರಬಂದಿರುತ್ತದೆ ಹಣಗೆ, ಬಾಯಿಗೆ ಭಾರಿ ಪೆಟ್ಟಾಗಿ ರಕ್ತಸ್ರಾವವಾಗಿರುತಿತ್ತು , ತಲೆಯ ಹಿಂದುಗಡೆ ಪೆಟ್ಟಾಗಿದ್ದು ,  ಕಿವಿಯಿಂದ ರಕ್ತಸ್ರಾವವಾಗಿರುತ್ತದೆ ಮುಖದ ಮೇಲೆ ರಕ್ತದ ಕಲೆಗಳು ಆಗಿದ್ದು ಮುಖಬಾವು ಬಂದಂತೆಯಾಗಿ ಕಪ್ಪಾಗಿರುತ್ತದೆ , ಮತ್ತು ಕುತ್ತಿಗೆಯ ಹತ್ತಿರ ಪೆಟ್ಟಾಗಿ ಕಪ್ಪಾಗಿ ಬಾವು ಬಂದಂತೆಯಾಗಿರುತ್ತದೆ ,ಮೈ ಮೇಲೆ ಒಂದುಬಿಳಿ ಕಲರನನೀಲಿ ಚೌಕಡಿ ಇರುವ ಶರ್ಟ ಇದ್ದು ಪಕ್ಕದಲ್ಲಿ ಪ್ಯಾಂಟ ಮತ್ತು ,ಅಂಡರವಿಯರ ಬಿದ್ದಿದ್ದವು ಯಾರೋ ದುಷ್ಕರಮಿಗಳು ಯಾವುದ ಉದ್ದೇಶದಿಂದ ಈ ವ್ಯಕ್ತಿಗೆ  ಎಲ್ಲಿಯೋ ಹೊಡೆಬಡಿ ಮಾಡಿ ಕೊಲೆ ಮಾಡಿ ಸಾಕ್ಷಿನಾಶಪಡಿಸುವ ಕುರಿತು ಸದರಿ ಹೊಲದಲ್ಲಿ ತಂದು ಬಿಸಾಡಿಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಲೆಮರಿಸಿಕೊಂಡ ಆರೋಪಿತನ ಬಂಧನ :
ನರೋಣಾ ಠಾಣೆ : ಶ್ರೀ ಪಾಂಡು ತಂದೆ ಗುಂಡು ಚವ್ಹಾಣ ಸಾ: ಗೋಳಾ(ಬಿ) ಗ್ರಾಮ ಇವರು ದಿನಾಂಕ 16/11/1976 ರಂದು ಬೆಳಗಿನ ಜಾವ ಶಂಕರರಾವ ಪಾಟೀಲ ಇವರ ಹೊಲದಲ್ಲಿ ಸುಮಾರು 300 ರೂ. ಮೌಲ್ಯದ ನಿಂಬೆ ಹಣ್ಣಿನ ಚೀಲಾ ಕದ್ದಿದ್ದಾರೆ ಅಂತಾ ದೂರು ಸಲ್ಲಿಸಿದ ಮೇಲಿಂದಾ ನರೋಣಾ ಪೊಲೀಸ್ ಠಾಣೆ ಗುನ್ನೆ ನಂ. 60/1976 ಕಲಂ 379 ಐಪಿಸಿ ಪ್ರಕರಣ ದಾಖಲಾಗಿದ್ದು ಈ ಪ್ರಕರಣದಲ್ಲಿನ ಆಪಾದಿತರಾದ ಎ1 ದಶರಥ ತಂದೆ ಹಣಮಂತ ಪಾರದಿ ಸಾ: ಭೀಮಳ್ಳಿ , 2 ದಾಡು ತಂದೆ ಪದ್ದು ಪಾರದಿ ಸಾ: ಭೀಮಳ್ಳಿ ಇಬ್ಬರು ಆರೊಪಿತರು ಘಟನೆ ಜರುಗಿದಾಗಿನಿಂದ ತಲೆಮರೆಸಿಕೊಂಡಿದ್ದು ಇರುತ್ತದೆ. ಮಾನ್ಯ ನ್ಯಾಯಾಲಯವು ದಿನಾಂಕ 13/02/1985 ರಂದು ಎಲ್.ಪಿ.ಆರ್ ಅಂತಾ ಪರಿಗಣಿಸಿದ್ದು ಇರುತ್ತದೆ. ಈ ಪ್ರಕರಣದಲ್ಲಿ ಎ1 ಆಪಾದಿತನು ಸುಮಾರು 40 ವರ್ಷಗಳವರೆಗೆ ತಲೆಮರೆಸಿಕೊಂಡು ತಿರುಗಾಡುತ್ತಿದ್ದು ದಿನಾಂಕ 14/03/2016 ರಂದು ಆಪಾದಿತನ ಬಗ್ಗೆ ಖಚಿತ ಬಾತ್ಮಿ ತಿಳಿದುಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಮಾನ್ಯ ಸಿಪಿಐ ಸಾಹೇಬ ಆಳಂದ ರವರ ಮಾರ್ಗದರ್ಶನದಲ್ಲಿ ಶ್ರೀ ಶಿವಶಂಕರ ಸಾಹು ಪಿ.ಎಸ್.ಐ ಹಾಗೂ ಸಿಬ್ಬಂದಿಯವರಾದ ಬಸವರಾಜ ಸಿಪಿಸಿ 672 , ಮಹೇಶ ಸಿಪಿಸಿ 790, ಸುರೇಶ ಸಿಪಿಸಿ 710, ಶಿವಾಜಿ ಸಿಪಿಸಿ 860 ರವರೊಂದಿಗೆ ಕಲಬುರಗಿ ತಾಜಸುಲ್ತಾನಪೂರದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹತ್ತಿರ ಆರೋಪಿತನಾದ ದಶರಥ ತಂದೆ ಹಣಮಂತ ಪಾರದಿ ಸಾ: ಭೀಮಳ್ಳಿ ಈತನನ್ನು ಹಿಡಿದು ವಿಚಾರಿಸಿ ಖಚಿತ ಪಡಿಸಿಕೊಂಡು ವಶಕ್ಕೆ ತೆಗೆದುಕೊಂಡು ದಿನಾಂಕ 14/03/2016 ರಂದು ನ್ಯಾಯಾಂಗ ಬಂದನ ಕುರಿತು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತಾರೆ.

No comments: