POLICE BHAVAN KALABURAGI

POLICE BHAVAN KALABURAGI

05 February 2016

Kalaburagi District Reported Crimes.

ಧೈಹಿಕ ಪರೀಕ್ಷೆಯಲ್ಲಿ ಎತ್ತರ ಹೆಚ್ಚಿಸಿಕೊಳ್ಳಲು ತಲೆಗೆ ಯಾವುದೋ ವಸ್ತು ಅಂಟಿಸಿಕೊಂಡು ಎತ್ತರ ಹೆಚ್ಚಿಸಿಕೊಂಡು ಮೊಸ ಮಾಡಿದವನ ಬಂಧನ :
ಸ್ಟೇಷನ ಬಜಾರ ಠಾಣೆ : ಶ್ರೀ ಬಸವರಾಜ ಜಿಳ್ಳೆ ಕಮಾಂಡೆಂಟ್ ಕೆ.ಎಸ್.ಆರ್.ಪಿ 6ನೇ ಪಡೆ ಕಲಬುರಗಿ ಕ್ಯಾಂಪ್ ಡಿಎಆರ್ ಪರೇಡ ಮೈದಾನ ಕಲಬುರಗಿ ರವರು ದಿನಾಂಕ: 04/02/2016 ರಂದು ಸಶಸ್ತ್ರ ಮಿಸಲು ಪೊಲೀಸ್ ಸಬ್ ಇನ್ಸಪೆಕ್ಟರ್ (ಸಿಆರ್/ಡಿಆರ್) ಪುರುಷ ಹುದ್ದೆ ನೇಮಕಾತಿಗೆ ಸಂಬಂಧಪಟ್ಟಂತೆ ನನಗೆ (ದೈಹಿಕ ಪರೀಕ್ಷೆ) ಯಲ್ಲಿ ಹಾಜರಾದ ಅಭ್ಯರ್ಥಿಗಳ ಎತ್ತರ ಹಾಗೂ ಎದೆ ಅಳತೆ ತಪಾಸಣೆ ಕುರಿತು ನೇಮಕಾತಿ ಅಧ್ಯಕ್ಷರು ಈಶಾನ್ಯ ವಲಯದ ಮಾನ್ಯ ಪೊಲೀಸ ಮಹಾ ನಿರೀಕ್ಷಕರು ಕಲಬುರಗಿ ರವರು ನೇಮಕ ಮಾಡಿದ್ದು, ಅದರಂತೆ ಈ ದಿನ ಶರಣಪ್ಪ ಆರ್.ಪಿ.ಐ ಡಿಎಆರ್ ಕಲಬುರಗಿ, ರವಿಂದ್ರ ಎಪಿಸಿ-441 6ನೇ ಬೆಟಾಲಿಯನ್ ಕಲಬುರಗಿ ಹೈಟ ಚೆಕ್ ಮಷೀನ ನಿರ್ವಾಹಕ, ಗಣಕ ಯಂತ್ರ ನಿರ್ವಾಹಕರಾದ ಮಲ್ಲಿಕಾರ್ಜುನ್ ಎ.ಪಿ.ಸಿ-144 ಮತ್ತು ಮಲ್ಲಿನಾಥ ಎಪಿಸಿ-21 ಹಾಗೂ ಚಂದ್ರಶೇಖರ ಸಿ.ಪಿ.ಸಿ 250 ಡಿ.ಪಿ.ಓ ಕಂಪ್ಯೂಟರ್ ವಿಭಾಗ ಕಲಬುರಗಿ, ಶ್ರೀ ಶಂಕರಲಿಂಗ್ ಸಿಪಿಸಿ-1128 ವಿಡಿಯೋ ಗ್ರಾಫರ್ ಚೌಕ ಪೊಲೀಸ್ ಠಾಣೆ ಕಲಬುರಗಿ ನಾವೆಲ್ಲರೂ ಸೇರಿ ಬೆಳಿಗ್ಗೆ 10:30 ಗಂಟೆಗೆ ಅಭ್ಯರ್ಥಿಗಳ ಎತ್ತರದ ತಪಾಸಣೆ ಮಾಡುತ್ತಿರುವ ಸಂದರ್ಭದಲ್ಲಿ ಶೆಶಿದರ್ ವಸ್ತ್ರದ ಅರ್ಜಿ ಸಂಖ್ಯೆ 6004906 ಕ್ರಮ ಸಂ: 1214 ಇವರನ್ನು ಬಿ.ಎಮ್.ಐ ಯಂತ್ರದ ಮುಖಾಂತರ ತಪಾಸಣೆ ಮಾಡುತ್ತಿರುವಾಗ ಈತನು ತಲೆಯ ಮೇಲೆ ಯಾವುದೋ ಒಂದು ಪದಾರ್ಥವನ್ನು ಕೂದಲುಗಳ ಮದ್ಯ ಅಂಟಿಸಿಕೊಂಡು ಬಂದಿರುವ ಬಗ್ಗೆ ಅನುಮಾನಗೊಂಡು ರವಿಂದ್ರ ಎಪಿಸಿ-441 ಇತನು ನನ್ನ ಗಮನಕ್ಕೆ ತರಲಾಗಿ ನಾನು ಆತನ ತಲೆಯನ್ನು ಚೆಕ್ ಮಾಡಿ ನೋಡಲಾಗಿ ಒಂದು ಪದಾರ್ಥವನ್ನು ಕೂದಲುಗಳ ಮದ್ಯ ಅಂಟಿಸಿಕೊಂಡಿದ್ದು ಈತನು ತನ್ನ ಎತ್ತರವನ್ನು ಹೆಚ್ಚಿಸಿಕೊಂಡು ತೇರ್ಗಡೆ ಹೊಂದಿ ಆರ್.ಎಸ್.ಐ ಹುದ್ದೆಗೆ ಆಯ್ಕೆಯಾಗಲು ತನ್ನ ಎತ್ತರವನ್ನು ಹೆಚ್ಚಿಸಿಕೊಂಡು ಮೋಸ ಮಾಡಿರುತ್ತಾನೆ.ಆದ್ದರಿಂದ ತನ್ನ ಎತ್ತರ 168 ಸೆ.ಮಿ ಕ್ಕಿಂತ ಕಡಿಮೆ ಇದೆ ಅಂತಾ ತಿಳಿದು ಯಾವುದೋ ಒಂದು ಪದಾರ್ಥವನ್ನು ಕೂದಲುಗಳ ಮದ್ಯ ಅಂಟಿಸಿಕೊಂಡು ಮೋಸ ಮಾಡಿದ ಈತನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಿದ್ದಪ್ಪ ತಂದೆ ಚಂದಪ್ಪ ಪೂಜಾರಿ ಸಾ|| ಗೌರ (ಬಿ) ಇವರು 5 ಜನ ಅಣ್ಣ ತಮ್ಮರಿದ್ದು 1) ನಾನು 2) ನೌಲಪ್ಪ 3) ತಿಪ್ಪಣ್ಣ 4) ಹಿರಿಗೆಪ್ಪ 5) ಗಿರೆಪ್ಪ ಈ ರೀತಿ ಇದ್ದು, ತಿಪ್ಪಣ್ಣ ಮತ್ತು ಗಿರೆಪ್ಪ ಮೃತಪಟ್ಟಿರುತ್ತಾರೆ, ನಾವು 5 ಜನ ಅಣ್ಣ ತಮ್ಮರ ಮದ್ಯ ಒಟ್ಟು 23 ಎಕರೆ ಜಮೀನು ಇದ್ದು, ಸದರಿ ನಮ್ಮೆಲ್ಲರ ಮದ್ಯದಲ್ಲಿ ನನ್ನ ಹೆಸರಿನಲ್ಲಿದ್ದ ಹೊಲವನ್ನು ಈಗ 5-6 ವರ್ಷಗಳ ಹಿಂದೆ ಪಾಲು ಮಾಡಿಕೊಂಡು ನನ್ನ ತಮ್ಮಂದಿರ ಸಮ್ಮತಿಯಲ್ಲೆ ಅವರ ಹೆಸರಿಗೆ ಹಾಗೂ ಅವರ ಮಕ್ಕಳ ಹೆಸರಿಗೆ ಮಾಡಿರುತ್ತೇನೆ, ಹೀಗಿದ್ದು ನನ್ನ ತಮ್ಮನಾದ ಹಿರಿಗೆಪ್ಪ ಈತನ ಪಾಲಿಗೆ ಬಂದ ಹೊಲವನ್ನು ಅವನ ಸಮ್ಮತಿಯಲ್ಲೆ ಅವನ ಮಕ್ಕಳ ಹೆಸರಿಗೆ ಮಾಡಿರುತ್ತೇನೆ. ಆದರೆ ಹಿರಿಗೆಪ್ಪನು ಹೊಲ ಅವನ ಮಕ್ಕಳ ಹೆಸರಿಗೆ ಮಾಡುವ ಸಮಯದಲ್ಲಿ ಒಪ್ಪಿಗೆ ಕೊಟ್ಟು ಈಗ ನನಗೆ ಮಗನೆ ನೀನು ಹೊಲವನ್ನು ನನ್ನ ಮಕ್ಕಳ ಹೆಸರಿಗೆ ಯಾಕ ಮಾಡಿದಿ ನನ್ನ ಹೆಸರಿಗೆ ಮಾಡು ಅಂತಾ ಆಗಾಗ ನನ್ನೊಂದಿಗೆ ಜಗಳ ಮಾಡುತ್ತಾ ಬಂದಿರುತ್ತಾನೆ. ಹೀಗಿದ್ದು ದಿನಾಂಕ 29-01-2016 ರಂದು ಸಾಯಂಕಾಲ 5:00 ಗಂಟೆ ಸುಮಾರಿಗೆ ನಾನು ನಮ್ಮೂರಲ್ಲಿ ಮಠದ ಕಡೆಯಿಂದ ಹೊಲಕ್ಕೆ ಹೋಗುತ್ತಿದ್ದಾಗ ಆನಂದಪ್ಪ ಬಿರಾದಾರ ಇವರ ಕಿರಾಣಿ ಅಂಗಡಿಯ ಮುಂದೆ ಹೋಗುತ್ತಿದ್ದಂತೆ ನನ್ನ ತಮ್ಮನಾದ ಹಿರಿಗೆಪ್ಪ ತಂದೆ ಚಂದಪ್ಪ ಪೂಜಾರಿ ಈತನು ನನ್ನ ಏದರುಗೆ ಬಂದು ನನಗೆ ಏನೋ ಬೋಸಡಿ ಮಗನೆ ನನಗೆ ಬರಬೇಕಾದ ಹೊಲವನ್ನು ನನ್ನ ಮಕ್ಕಳ ಹೆಸರಿಗೆ ಮಾಡುತ್ತಿ ಅಂತಾ ನನ್ನ ಏದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಬೆನ್ನಿಗೆ ಹೊಡೆದನು, ಆಗ ಅಲ್ಲೆ ಕಿರಾಣಿಯ ಅಂಗಡಿಯ ಮುಂದೆ ಕುಳಿತ ಆನಂದಪ್ಪ ಬಿರಾದಾರ ಮತ್ತು ಬಾಲಯ್ಯ ಗುತ್ತೆದಾರ ಇವರು ನನಗೆ ಹೊಡೆಯುವುದನ್ನು ಬಿಡಿಸಲು ಬಂದಾಗ ಹಿರಿಗೆಪ್ಪನು ಅವರನ್ನು ಕೆಳದೆ ಅಲ್ಲೆ ಸ್ವಲ್ಪ ದೂರದಲ್ಲಿ ಬಿದ್ದಿದ್ದ ಒಂದು ಬಡಿಗೆಯನ್ನು ತಗೆದುಕೊಂಡು ಬಂದು ಬಡಿಗೆಯಿಂದ ನನ್ನ ಏರಡು ಕಾಲುಗಳ ಮೇಲೆ ಮೈಗೆ ಹಾಗೂ ಕೈಗಳ ಮೇಲೆ ಹೊಡೆದನು, ಆಗ ನಾನು ಕೇಳಗೆ ಬಿದ್ದಾಗ ಕಾಲಿನಿಂದ ಒದ್ದು ಮಗನೆ ನೀನು ಹೊಲ ನನ್ನ ಹಸರಿಗೆ ಮಾಡದಿದ್ದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಹೇಳಿ ಅಲ್ಲಿಂದ ಹೊದನು, ನಂತರ ಆನಂದಪ್ಪ, ಬಾಲಯ್ಯ ಇವರು ನನಗೆ ನೀರು ಹಾಕಿ ಉಪಚರಿಸಿ ನನ್ನ ಮಗ ಶರಣಪ್ಪನಿಗೆ ಮಾಹಿತಿ ತಿಳಿಸಿದಾಗ ನನ್ನ ಮಗ ಶರಣಪ್ಪ ಹಾಗೂ ನನ್ನ ತಮ್ಮನ ಮಗ ಪ್ರಭು ಇಬ್ಬರು ಕೂಡಿ ನನಗೆ ಉಪಚಾರ ಕುರಿತು ಕಲಬುರಗಿಗೆ ಕರೆದುಕೊಂಡು ಹೋಗಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 04-02-2016 ರಂದು 4:00 ಎ.ಎಮ್ ಕ್ಕೆ ದೇಸಾಯಿ ಕಲ್ಲೂರ ಗ್ರಾಮದ ಹತ್ತಿರ ಇರುವ ಭೀಮಾನದಿಯಿಂದ ಟ್ರಾಕ್ಟರಗಳಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ದತ್ತಾತ್ರೇಯ ಎಎಸ್ಐ ಡಿಸಿಐಬಿ ಘಟಕ ಕಲಬುರಗಿ ರವರು ನಮ್ಮ ಮೇಲಾಧೀಕಾರಿರವರಾದ ಮಾನ್ಯ ಪಿಐ ಸಾಹೇಬರು ಡಿಸಿಐಬಿ ಘಟಕ ಕಲಬುರಗಿ ಅವರ ಮಾರ್ಗದರ್ಶನದಂತೆ ನಮ್ಮ ಸಿಬ್ಬಂದಿಯವರಾದ 1) ಶ್ರೀ ಪ್ರಕಾಶ ಸಿಹೆಚ್ ಸಿ-370 2) ಶ್ರೀ ಅಂಬಾರಾಯ ಹೆಚ್ ಸಿ-54 3) ಶ್ರೀ ಮಲ್ಲಿಕಾರ್ಜುನ ಹೆಚ್ ಸಿ 1574) ಆನಂದ ಪ್ರಸಾದ ಸಿಹೆಚ್ ಸಿ- 198 5) ಅಯುಬ್ ಸಿಹೆಚ್ ಸಿ-191 ರವರು ಹಾಗು ಶ್ರಿ ಸಿದರಾಯ ಭೋಸಗಿ  ಪಿ.ಎಸ್.ಐ. ಅಫಜಲಪೂರ ಮತ್ತು ಪಂಚರೊಂದಿಗೆ ದೇಸಾಯಿ ಕಲ್ಲೂರ ಗ್ರಾಮದ ಹರಿಜನ ವಾಡದ ಹತ್ತಿರ ಹೋಗುತ್ತಿದ್ದಗ ನಮ್ಮ ಎದುರಿನಿಂದ ಟ್ರಾಕ್ಟರಗಳು ಬರುತಿದ್ದವು ನಾವು ನಮ್ಮ ವಾಹನ ನಿಲ್ಲಿಸಿ ಸದರಿ ಟ್ರಾಕ್ಟರ ಚಾಲಕರಿಗೆ ಟ್ರಾಕ್ಟರ ನಿಲ್ಲಿಸುವಂತೆ ಕೈ ಸೂಚನೆ ಮಾಡಿದಾಗ ಟ್ರಾಕ್ಟರ ಚಾಲಕರು ತಮ್ಮ ಟ್ರಾಕ್ಟರಗಳನ್ನು  ನಿಲ್ಲಿಸಿ ಓಡಿ ಹೋದರು ನಾವು ಪಂಚರ ಸಮಕ್ಷಮ ಸದರಿ ಟ್ರಾಕ್ಟರಗಳನ್ನು  ಚೆಕ್ ಮಾಡಿ ನೋಡಲು, ಮೂರು ಟ್ರಾಕ್ಟರಗಳಲ್ಲಿ   ಮರಳು ತುಂಬಿದ್ದು ಇದ್ದು ಅವುಗಳ ನಂಬರ 1) SWARAJ ಕಂಪನಿಯ ಟ್ರಾಕ್ಟರ ನಂ ಕೆಎ-32 ಟಿಎ-7837  ಟ್ರಾಕ್ಟರ ಅಕಿ 5,00,000/-ರೂ 2) SWARAJ ಕಂಪನಿಯ ಟ್ರಾಕರ ENG NO 43.3008/STA00398 CHASSIS NO WXCA40906089195 ಟ್ರಾಕ್ಟರ ಅಕಿ 5,00,000/-ರೂ 3) JOHN DEERE ಕೆಎ-32 ಟಿಎ-9531 ಟ್ರಾಕ್ಟರ ಅಕಿ 5,00,000/-ರೂ ಈ ರೀತಿ ಇರುತ್ತವೆ. ಸದರಿ ಟ್ರಾಕ್ಟರಗಳಲ್ಲಿ ತುಂಬಿದ ಮರಳಿನ  ಒಟ್ಟು ಅಂದಾಜು ಕಿಮ್ಮತ್ತು 9,000/- ರೂ ಆಗಬಹುದು.ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಮೂರು ಟ್ರಾಕ್ಟರಗಳು ಪಂಚರ ಸಮಕ್ಷಮ  ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು. ಸದರಿ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿ ಮರಳು ಸಾಗಿಸುತಿದ್ದ  ಮೂರು  ಟ್ರಾಕ್ಟರಗಳನ್ನು   ನಮ್ಮ ಸಿಬ್ಬಂದಿಯವರ ಸಹಾಯದಿಂದ ಅಫಜಲಪೂರ ಪೊಲೀಸ್ ಠಾಣೆಗೆ ತಂದು ಪ್ರಕರಣ ದಾಖಲಿಸಲಾಗಿದೆ. 

No comments: