POLICE BHAVAN KALABURAGI

POLICE BHAVAN KALABURAGI

27 February 2016

Kalaburagi District Reported Crimes

ಮೋಸ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಪ್ರತೀಮಾ ಗಂಡ ದೇವರಾಜ ಕುಲಕರ್ಣೀ ಸಾ:ಬೇಕನಾಳ ತಾ:ಸಿಂದಗಿ ಜಿ:ವಿಜಯಪುರ ಇವರು ತಂದೆ ತಾಯಿಗೆ ನಾವಿಬ್ಬರೂ ಅಕ್ಕ ತಂಗಿಯರು ಇದ್ದು ನಮ್ಮ ಸ್ವಂತ ಊರು ಬಾಗಲಕೋಟ ಜಿಲ್ಲೆ ಇದ್ದು ಕೆಲವು ವರ್ಷಗಳ ಹಿಂದೆ ನಮ್ಮ ಮನೆ ಬಿದ್ದಿದ್ದರಿಂದ ಅದರಲ್ಲಿ ನಮ್ಮ ತಂದೆ ತಾಯಿಯವರು ಮೃತ ಪಟ್ಟಿರುತ್ತಾರೆ. ನಮಗೆ ನೋಡಿಕೊಳ್ಳುವವರು ಯಾರು ಇರಲಿಲ್ಲ ನಿಮಗೆ ಬೇಕಾದವರು ನನಗೆ ಮತ್ತು ನಮ್ಮ ಅಕ್ಕ ಪೂರ್ಣೀಮಾಳಿಗೆ ಕಲಬುರಗಿಯ ಸರ್ಕಾರಿ ರಾಜ್ಯ ಮಹಿಳಾ ನಿಲಯದಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ. ನಮ್ಮ ತಂದೆ ತಾಯಿ ಮೃತ ಪಟ್ಟಿದ್ದರಿಂದ ಪರಿಹಾರ ಧನ ಅಂತಾ ಸರ್ಕಾರ ನಮಗೆ ದುಡ್ಡು ನೀಡಿದ್ದರಿಂದ ಆ ಹಣ ಬಾಗಲಕೋಟದಲ್ಲಿ ಪೋಸ್ಟ್‌‌ ಆಫೀಸ್‌‌ದಲ್ಲಿ ನಮ್ಮ ಹೆಸರಿನಲ್ಲಿ ಇಡಲಾಯಿತು. ನಾವು ಕಲಬುರಗಿಯಲ್ಲಿ ಇರುವದರಿಂದ ರಾಜ್ಯ ಮಹಿಳಾ ನಿಲಯದ ಅಧೀಕ್ಷಕರಾದ ಶ್ರೀಮತಿ ಎಲ್‌.ಎಮ್‌ ಮೇಡಮ್‌ ಇವರು ಆ ಹಣ ಬಾಗಲಕೋಟದಿಂದ ಕಲಬುರಗಿ ಶಾಬಜಾರದಲ್ಲಿ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಗೆ ವರ್ಗಾಯಿಸಿರುತ್ತಾರೆ ಎಲ್‌.ಎಮ್‌‌ ಮೇಡಮ್‌ ಅಧೀಕ್ಷಕರು ಇಲ್ಲಿಂದ ವರ್ಗಾವಣೆಯಾಗಿ ಬೇರೆಕಡೆ ಹೋಗಿದ್ದರು ಅವರ ಸ್ಥಾನದಲ್ಲಿ ದ್ರೋಪತಿ ಕೆ ನಾಯಕ ಎಂಬುವರು ಅಧೀಕ್ಷಕರು ರಾಜ್ಯ ಮಹಿಳಾ ನಿಲಯ ಬಂದಿದ್ದರು ನನ್ನ ಹಣದ ಬಗ್ಗೆ ತಿಳಿದುಕೊಂಡು ದಿನಾಂಕ:04/12/2013 ರಂದು ನನಗೆ ದ್ರೋಪತಿ ಕೆ ನಾಯಕ ಅಧೀಕ್ಷಕರು ಒಂದು ಆಟೋ ರೀಕ್ಷಾದಲ್ಲಿ ಕೂಡಿಸಿಕೊಂಡು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಗೆ ಕರೆದುಕೊಂಡು ಹೋಗಿ ಒಂದು ಬ್ಯಾಂಕಿನ ಓಚರ ಮೇಲೆ ರುಜು ಹಾಕಲು ಹೇಳಿದರು ನಾನು ಅವರು ಹೇಳಿದ ಹಾಗೆ ರುಜು ಹಾಕಿ ಕೊಟ್ಟಿರುತ್ತೇನೆ. ಮತ್ತೋಮ್ಮೆ ಮತ್ತೋಂದು ಓಚರ ತಂದು ಇದರ ಮೇಲೆ ರುಜು ಹಾಕು ಎಂದು ಹೇಳಿದ್ದರಿಂದ ನಾನು ರುಜು ಹಾಕಿದ್ದು ನೀನು ಇಲ್ಲೇ ನಿಲ್ಲು ಎಂದು ಹೇಳಿ ನನಗೆ ಹೊರಗೆ ನಿಲ್ಲಿಸಿ ಬ್ಯಾಂಕಿನ ಒಳಗೆ ಹೋಗಿ ನನ್ನ ಹೆಸರಿನಲ್ಲಿ ಇದ್ದ ಹಣ ತೆಗೆದುಕೊಂಡು ಮತ್ತೆ ಆಟೋ ರೀಕ್ಷಾದಲ್ಲಿ ಕೂಡಿಸಿಕೊಂಡು ಮಹಿಳಾ ನಿಲಯಕ್ಕೆ ತಂದು ಬಿಟ್ಟಿದ್ದರು ಮುಂದೆ 5-6 ತಿಂಗಳು ಕಳೆದಿರಬಹುದು ನನಗೆ ಮದುವೆ ಮಾಡಿಕೊಳ್ಳಲು ಬ್ರಾಹ್ಮಣ ಸಮಾಜದ ದೇವರಾಜ ತಂದೆ ಚಂದ್ರಶೇಖರ ಕುಲಕರ್ಣಿ ಮು:ಬೇಕನಾಳ ತಾ:ಸಿಂದಗಿ ಜಿ:ವಿಜಯಪುರ ಇವರು ರಾಜ್ಯ ಮಹಿಳಾ ನಿಲಯ ಕಲಬುರಗಿಗೆ ಬಂದು ನನಗೆ ನೋಡಿ ದಿನಾಂಕ:04/06/2014 ರಂದು ಮದುವೆ ಮಾಡಿಕೊಂಡು ತಮ್ಮ ಊರಿಗೆ ಕರೆದುಕೊಂಡು ಬಂದರು ಆ ಮೇಲೆ ನನಗೆ ಮೇಲಿಂದ ಮೇಲೆ ಕಲಬುರಗಿಗೆ ಬರಲು ಪೋನ ಮಾಡುತ್ತಿದ್ದಾಗ ನನ್ನ ಗಂಡನಿಗೆ ಹೇಳಿ ಅವರೊಂದಿಗೆ ದಿ:17/12/2014 ರಂದು ರಾಜ್ಯ ಮಹಿಳಾ ನಿಲಯ ಕಲಬುರಗಿಗೆ ಬಂದಿರುತ್ತೇನೆ ಅಂದು ಮತ್ತೆ ಒಂದು ಆಟೋ ರೀಕ್ಷಾದಲ್ಲಿ ಕೂಡಿಸಿಕೊಂಡು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಗೆ ಕರೆದುಕೊಂಡು ಹೋಗಿ ಮೊದಲಿನ ಹಾಗೆ ಬ್ಯಾಂಕಿನ ಓಚರ ತೆಗೆದುಕೊಂಡು ರುಜು ಮಾಡು ಅಂತಾ ಹೇಳಿದಾಗ ನನ್ನ ಪಾಸಬುಕಗಳು ನನಗೆ ಮರಳಿ ಕೊಡಿರಿ ಏಕೆ ನನಗೆ ತೊಂದರೆ ಮಾಡಿ ನನ್ನ ಖಾತೆಯಿಂದ ಹಣ ತೆಗೆದುಕೊಳ್ಳುತ್ತಿರಿ ಎಂದು ಕೇಳಿದ್ದಕ್ಕೆ ನೀನು ಸುಮ್ಮನಿರು ನಿನ್ನ ಮದುವೆ ಮಾಡಿಸಿದ್ದೇನೆ ಪಾಸಬುಕ ಯಾವುದೇ ನಿನಗೆ ಕೊಡುವದಿಲ್ಲಾ ಎಂದು ನನಗೆ ಅಂಜಿಕೆ ಹಾಕಿದ್ದರಿಂದ ನಾನು ಸುಮ್ಮನಾದೆ ಆಮೇಲೆ ದಿ:28/09/2015 ರಂದು ರಾಜ್ಯ ಮಹಿಳಾ ನಿಲಯ ಕಲಬುರಗಿಗೆ ಬಂದು ದ್ರೋಪತಿ ಕೆ ನಾಯಕ ಅಧೀಕ್ಷಕರು ಇವರ ಮೇಲೆ ದೂರು ಕೊಟ್ಟೆನು ನನ್ನ ಮದುವೆ ಮುಂಚೆ 80000/-ರೂ ಗಳು ಮೋಸದಿಂದ ತೆಗೆದುಕೊಂಡು ಮದುವೆ ನಂತರ 60000/-ರೂಗಳು ನನ್ನ ಖಾತೆಯಿಂದ ತೆಗೆದುಕೊಂಡಿದ್ದು ಹೀಗೆ ಒಟ್ಟು 1,40,000/-ರೂ ತೆಗೆದುಕೊಂಡು ನನಗೆ ಕೊಡದೆ ಮೋಸ ಮಾಡಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಾಡಬೂಳ ಠಾಣೆ : ದಿನಾಂಕ: 25/02/16 ರಂದು ರಾತ್ರಿ ನನ್ನ ತಂದೆಯವರ ಮೋಬೈಲಗೆ ಫೋನ ಮಾಡಿ ವಾಡಿ ಫ್ಯಾಕ್ಟ್ರಿಯಲ್ಲಿ ಎಚ.ಆರ ಡಿರ್ಪಾಟಮೆಂಟನಲ್ಲಿ ಕೆಲಸ ಮಾಡುವ ಪ್ರಮೋದ ಸಿನ್ಹಾ ಇವರ ಕೆಎ-32-ಎಲ್-2541 ನೇದ್ದರ ಮೋಟರ ಸೈಕಲ ಸರ್ವಿಸ ಮಾಡಿಸಿಕೊಂಡು ಬರುವುದಿದೆ ಸರ್ವಿಸಿಂಗ ಮಾಡಿಸಿಕೊಂಡು ಬರಲು ತಿಳಿಸಿದ್ದು ನಾನು ಅವರ ಮೋಟರ ಸೈಕಲ ತೆಗೆದುಕೊಂಡು ಕಲಬುರಗಿಗೆ ಬರುತ್ತಿದ್ದೆ ಅಂತ ತಿಳಿಸಿದನು. ನನ್ನ ಗಂಡ ರಾತ್ರಿ ಆದರೂ ಮನೆಗೆ ಬರಲಿಲ್ಲಾ.  ನನ್ನ ಗಂಡನ ಮೋಬೈಲ ಫೋನಿಗೆ ಫೋನ ಮಾಡಲು ಫೋನ ಕರೆಗಳು ಸ್ವೀಕರಿಸುತ್ತಿರಲಿಲ್ಲಾ. ಏನಾದರೂ ಕೆಲಸ ಮುಗಿಸಿಕೊಡು ಬರಬಹುದು ಬೆಳಿಗ್ಗೆ ವೇಳೆಗೆ ಅಂತ ವಿಚಾರ ಮಾಡಿ ರಾತ್ರಿ ವೇಳೆಗೆ ನಾವೆಲ್ಲರೂ ಮನೆಯಲ್ಲಿಯೇ ಮಲಗಿಕೊಂಡೇವು. ಇಂದು ದಿನಾಂಕ:26/2/16 ರಂದು ಬೆಳಿಗ್ಗೆ 8 ಎಎಂದ ಸುಮಾರಿಗೆ ನಾವೆಲ್ಲರೂ ಮನೆಯಲ್ಲಿದ್ದಾಗ ಆಗ ನಮಗೆ ಪರಿಚಯದವರಾದ ವಾಡಿಯಲ್ಲಿ ವಾಸವಾಗಿರುವ ಭೀಮರಾಯ  ಇವರೂ ನನ್ನ ತಂದೆಯ ಮೋಬೈಲಿಗೆ ಫೋನ ಮಾಡಿ ನಾನು ಖಾಸಗಿ ಕೆಲಸದ ನಿಮಿತ್ಯ ವಾಡಿಯಿಂದ ಕಲಬುರಗಿಗೆ ಮೋಟರ ಸೈಕಲ ಮೇಲೆ ಮುಗುಳನಾಗಾಂವ ಪೇಠಶಿರೂರ ಗ್ರಾಮದ ಕಡೆಗೆ ಹೋಗುವ ಕ್ರಾಸ ರೋಡ ದಾಟಿ ಮುಂದುಗಡೆ ರೋಡಿನ ಮೇಲೆ ಬ್ರೀಡ್ಜ ರೋಡಿನ ಹತ್ತಿರ ಹೋಗುತ್ತಿದಂತೆ ಒಬ್ಬ ವ್ಯಕ್ತಿ ಮೋಟರ ಸೈಕಲ ಸಮೇತ ಸತ್ತಂತೆ ಬಿದಿದ್ದನು ನೋಡಿ ಸಮೀಪ ಹೋಗಿ ನೋಡಲು ನನಗೆ ಪರಿಚಯದವನಾದ ನಮ್ಮೂರಿನ ಶರಣು ತಂದೆ ಬಸಣ್ಣಾ ಇರುವುದನ್ನು ನೋಡಿ ಗುರ್ತಿಸಿ ಸದರಿಯವನಿಗೆ ನೋಡಲಾಗಿ ಬಾಯಿ,ಮೂಗು,ಹಣೆ ಕಣ್ಣಿನ ಹತ್ತಿರ ಭಾರಿ ರಕ್ತಗಾಯವಾಗಿ ಸತ್ತಂತೆ ಬಿದ್ದಿರುತ್ತಾನೆ ಮೋಟರ ಸೈಕಲ ನಂ.ಕೆಎ-32-ಎಲ-2541 ನೇದ್ದು ಇರುತ್ತದೆ ತಾವು ಬೇಗ ಬನ್ನಿ ಅಂತ ತಿಳಿಸಿದ ಮೇರೆಗೆ ನಾವು ಗಾಭರಿಗೊಂಡು ನನ್ನ ತಂದೆ ನಾನು ನನ್ನ ಅಣ್ಣ ಎಲ್ಲರೂ ಮನೆಯಿಂದ ಹೊರಟು 9 ಎಎಂಕ್ಕೆ ಘಟನಾ ಸ್ಥಳವಾದ ಮುಗುಳನಾಗಾಂವ-ಪೇಠಶಿರೂರ ಕ್ರಾಸ ಸಮೀಪದ ಬ್ರಿಡ್ಜ ಹತ್ತಿರ ರೋಡಿನಲ್ಲಿ ಹೋಗಿ ನೋಡಲಾಗಿ ನನ್ನ ಗಂಡನ ಮೂಗು,ಬಾಯಿ,ಹಣೆ,ಕಣ್ಣಿನ ಹತ್ತಿರ ಭಾರಿ ರಕ್ತಗಾಯವಾಗಿ ಬಾರಲು ಬಿದಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಂತಾ ಶ್ರೀಮತಿ ಪ್ರಭಾವತಿ ಗಂಡ ಶರಣು ನೀಲಿ ಸಾ : ವಾಡಿ ತಾ : ಚಿತ್ತಾಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: