ಬಾಲ್ಯ ವಿವಾಹ ಮಾಡಿದ ಪ್ರಕರಣ :
ಆಳಂದ ಠಾಣೆ : ದಿನಾಂಕ
22/02/2016 ರಂದು ಮದ್ಯಾಹ್ನ 1:45 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ
ಮಾಡಿದ ಅರ್ಜಿ ತಂದು ಹಾಜರು ಪಡಿಸಿದರ ಸಾರಾಂಶವೆನೆಂದರೆ ಈ ಮೇಲ್ಕಾಣಿಸಿದ ವಿಷಯ ಹಾಗೂ
ಉಲ್ಲೇಖಕ್ಕೆ ಸಂಭಂದಿಸಿ ನಾನು ತುಳಸಾಬಾಯಿ ಎಮ್ ಮಾನು ವಯ:58 ವರ್ಷ ಉ:ಪ್ರಭಾರ ಸಿ.ಡಿ.ಪಿ.ಒ ಆಳಂದ
ವರದಿ ಸಲ್ಲಿಸುವುದೆನೆಂದರೆ ಶ್ರೀ ರೇವಣಸಿದ್ದಪ್ಪ ಕಲಶೆಟ್ಟಿ ಸಾ: ಶಿವಾಜಿ ನಗರ ಕಲಬುರಗಿ ಇವರ
ಮಗಳಾದ ನೀಲಮ್ಮ ಇವಳಿಗೆ 13/05/2011 ರಂದು ಆಳಂದ ತಾಲೂಕಿನ ಕೋತನ ಹಿಪ್ಪರಗಾ ಗ್ರಾಮದ ಶ್ರೀಮಂತ
ತಂದೆ ಶಿವಣಪ್ಪ ಕಲಶೆಟ್ಟಿ ವಯ:30 ವರ್ಷ ಇವರೊಂದಿಗೆ ಮದುವೆಯಾಗಿದ್ದು ನೀಲಮ್ಮಳ ಗಂಡ ಶ್ರೀಮಂತ
ಆಕೆ ಅತ್ತೆ ಶಾಂತಾಬಾಯಿ ಮಾವ ಶಿವಣಪ್ಪ ಮೈದುನ ವಿರುಪಾಕ್ಷಿ ,ನೆಗೆಣಿ
ಸಪ್ನಾ ಗಂಡ ವಿರುಪಾಕ್ಷಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದರಿಂದ ದಿ 13/12/2014 ರಂದು
ಸದರಿಯವರ ವಿರುದ್ದ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇದೆ.ನಂತರ ಶ್ರೀಮಂತನ ತಂದೆ
ತಾಯಿ ತಮ್ಮ ಹಾಗೂ ತಮ್ಮನ ಹೆಂಡತಿ ಹಾಗೂ ಶ್ರೀಮಂತ ಇವರುಗಳು ಈ ಒಂದು ವರ್ಷದ ಹಿಂದೆ ಬಾಲ್ಯ ವಿವಾಹ ನಿಷೇಧ
ಕಾಯ್ದೆ ಉಲ್ಲಂಘಿಸಿ ಉಮರ್ಗಾದ ಅಶ್ವಿನಿ ತಂದೆ ಕಾಶಿನಾಥ ಶಾಸ್ತೂರ ವಯ: 14 ವರ್ಷ ಇವರೊಂದಿಗೆ
ಶ್ರೀಮಂತ ತಂದೆ ಶಿವಣಪ್ಪ ಕಲಶೆಟ್ಟಿ ಸಾ: ಕೋತನ ಹಿಪ್ಪರಗಾ ರವರ ಸಂಗಡ ಬಾಲ್ಯ ವಿವಾಹ ಮೇಲಿನ
ಶ್ರೀಮಂತನ ಸಂಭಂದಿಕರು ಮಾಡಿದ ಬಗ್ಗೆ ಗ್ರಾಮದಲ್ಲಿ ಹೋಗಿ ವಿಚಾರಿಸಲಾಗಿ ಅಶ್ವಿನಿಯೊಂದಿಗೆ
ಬಾಲ್ಯವಿವಾಹವಾದ ಬಗ್ಗೆ ಧೃಡ ಪಟ್ಟಿರುತ್ತದೆ. ಕಾರಣ ಶ್ರೀಮಂತ ತಂದೆ ಶಿವಣಪ್ಪ ಇತನು 30 ವರ್ಷ
ಮೇಲ್ಪಟ್ಟವನಿದ್ದು ಬಾಲ್ಯ ವಿವಾಹ ಕಾಯ್ದೆ ಉಲ್ಲಂಘನೆ ಮಾಡಿ ಅಶ್ವಿನಿ ವಯ:14 ವರ್ಷ ರವರೊಂದಿಗೆ
ಮದುವೆಯಾಗಿದ್ದು ಸದರಿ ಮದುವೆಗೆ ಶ್ರೀಮಂತನ ತಂದೆ ತಾಯಿ ಹಾಗೂ ತಮ್ಮ ರವರು ಅಶ್ವಿನಿ ಅಪ್ರಾಪ್ತ
ವಯಸ್ಸಿನ ಬಾಲಕಿಯಿದ್ದರೂ ಕೂಡಾ ಸದರಿಯವಳೊಂದಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಉಲ್ಲಂಘನೆ ಮಾಡಿ
ಮದುವೆ ಮಾಡಿದ್ದು ಕಂಡುಬಂದಿರುತ್ತದೆ ಅಂತಾ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಲಾಗಿದೆ. ಅಂತಾ ಅರ್ಜಿ ಸಾರಾಂಶದ ಮೇಲಿಂದ ಪ್ರಕಾರ
ಪ್ರಕರಣ ದಾಖಿಲಾಗಿರುತ್ತದೆ.
ಕಿರುಕಳ ನೀಡಿದ್ದರಿಂದ ಆತ್ಮ ಹತ್ಯೆ
ಮಾಡಿಕೊಂಡ ಪ್ರಕರಣ :
ಮಾಡಬೂಳ ಪೊಲೀಸ್ ಠಾಣೆ :
ದಿನಾಂಕಃ 22/02/2016 ರಂದು 1 ಪಿಎಮಕ್ಕೆ
ಮೃತಳ ತಾಯಿ ಮಸ್ತಾನಬಿ ಗಂಡ ಸೈಯ್ಯದ ಸಾಬ
ಇನಾಮದಾರ ಸಾ: ಸೂಗೂರ [ಕೆ] ತಾ: ಚಿತ್ತಾಪೂರ ಇವರು ಠಾಣೆಗೆ ಹಾಜರಾಗಿ ಪುರಾವಣೆ ಹೇಳಿಕೆ ನೀಡಿದರ ಸಾರಾಂಶವೆನೆಂದರೆ ನನ್ನ ಮಗಳು ದಿನಾಂಕ:17/02/2016 ರಂದು
ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುವಾಗ ಮಾಡಬೂಳ ಪೊಲೀಸರು ಆಸ್ಪತ್ರೆಗೆ
ಬಂದು ಬೇಟ್ಟೆ ನೀಡಿ ನನ್ನ ಮಗಳಿಗೆ ವಿಚಾರಿಸಿ ಹೇಳಿಕೆ ನೀಡಿದ್ದನೆಂದರೆ ತನ್ನ ಗಂಡ ಖದಿರ ಅತ್ತೆ
ಫರಿದಾಬಿ ಹಾಗೂ ಭಾವ ಮಹಿಬೂ
ಇವರೆಲ್ಲರು ಮಾನಸಿಕವಾಗಿ ದೈಹಿಕವಾಗಿ ಕಿರುಕುಳ ಕೂಟ್ಟು ಆವಾಚ್ಯ ಶಬ್ದಗಳೀಂದ ಬೈದು ತನ್ನ ಕೈಯಿಂದ
ಹೋಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿದ ಪರಿಣಾಮ ಕಿರುಕುಳ ತಾಳಲಾರೆ ಬೆಸತ್ತು ತಾಳಲಾರದೆ ಬೆಸತ್ತು ಮನೆಯಲ್ಲಿದ್ದ ಸಿಮೆ ಎಣ್ಣಿ
ತೆಗೆದುಕೊಂಡು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು
ಮೈಯಲ್ಲಾ ಸುಟ್ಟಿಕೊಂಡಿರುತ್ತೆನೆ
ಸದರಿ ವಿರುದ್ದ ಸೂಕ್ತ ಕಾನೂನು ಕ್ರಮ
ಕೈಕೊಳ್ಳಿ ಅಂತಾ ವಗೇರಾ ಹೇಳಿಕೆ ನೀಡಿದ್ದು ಸದರಿ
ಹೇಳಿಕೆ ಸಾರಾಂಶದ ಮೇಲಿಂದ
ಈ ಗಾಗಲೇ ಮಾಡಬೂಳ ಪೋಲಿಸ ಠಾಣೆಯಲ್ಲಿ
ಪ್ರಕಾರ ಪ್ರಕರಣ ದಾಖಲಾಗಿದ್ದು ದಿನಾಂಕ
18-02-2016 ನನ್ನ ಮಗಳ ಗರ್ಬದಲ್ಲಿ ಮಗು ಮೃತಪಟ್ಟಿದ್ದು ನನ್ನ ಮಗಳಿಗೆ ಉಪಚಾರ ಫಲಕಾರಿಯಾಗದೆ
ದಿನಾಂಕ 22-02-2016 ರಂದು ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment