POLICE BHAVAN KALABURAGI

POLICE BHAVAN KALABURAGI

09 February 2016

Kalaburagi District Press Note

ಪತ್ರಿಕಾ ಪ್ರಕಟಣೆ
            ಕಲಬುರಗಿ ಮಕ್ಕಳ ವಿಶೇಷ  ಪೊಲೀಸ್ ಘಟಕದ ವತಿಯಿಂದ ಆಪರೇಷನ್ ಸ್ಮಾಯಿಲ್-2 ರ ಭಾಗವಾಗಿ ಕಾಣೆಯಾದ ಮಕ್ಕಳ, ಬಾಲಕಾರ್ಮಿಕ, ಭಿಕ್ಷಾಟಣೆ ಒಳಗಾದಂತಹ ಮಕ್ಕಳ ಪತ್ತೆಯ ಕಾರ್ಯಾಚರಣೆಯನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಕಲಬುರಗಿ ಮತ್ತು ಅಪರ ಪೊಲೀಸ್ ಅಧೀಕ್ಷಕರು, ಕಲಬುರಗಿರವರ ನಿರ್ದೇಶನದ ಮೇರೆಗೆ ಮಕ್ಕಳ ವಿಶೇಷ ಪೊಲೀಸ್ ಘಟಕದ ಹಿರಿಯ ಮಕ್ಕಳ ಕಲ್ಯಾಣ ಅಧಿಕಾರಿಗಳು ಹಾಗೂ ಪೊಲೀಸ್ ಇನ್ಸಪೇಕ್ಟರ ರವರಾದ ಶ್ರೀ ಕೆ.ಎಮ್ ಸತೀಶ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರಿವೀಕ್ಷಣಾ ಅಧಿಕಾರಿ ಶ್ರೀ ಭರತೇಶ ಶೀಲವಂತರ ಹಾಗೂ ಶ್ರೀ ಬಸವರಾಜ ಎ.ಎಸ್.ಐ  ರವರ ನೇತೃತ್ವದಲ್ಲಿ  ಮಕ್ಕಳ ಸಹಾಯವಾಣಿ, ಮತ್ತು ಡಾನ್ ಬಾಸ್ಕೋ ಸಂಸ್ಥೆ ಮತ್ತು ಇತರೆ ಸರ್ಕಾರೇತರ ಸ್ವಂಯ ಸಂಸ್ಥೆಗಳು ಮತ್ತು ಮಾರ್ಗದರ್ಶಿ ಸಂಸ್ಥೆ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಶ್ರೀ ವಿಠಲ್ ಚೀಕಣಿ ಹಾಗೂ ಶ್ರೀ ಆನಂದ ರಾಜ, ಸಹಾಯಕ ಶಿಶು ಅಭೀವೃದ್ದಿ ಯೋಜನಾ ಅಧಿಕಾರಿಯವರಾದ ಶ್ರೀಮತಿ. ಪಾಪಮ್ಮ ಹಾಬಳಕರ ಮತ್ತು ಜಿಲ್ಲಾ ಕಾರ್ಮಿಕ ಇಲಾಖೆಯ ಸಹಕಾರದೊಂದಿಗೆ ಇಂದು ದಿನಾಂಕ: 09/02/2016 ರಂದು ಕಲಬುರಗಿ ನಗರದ ಹೊರ ವಲಯದ ಸುಲ್ತಾನಪುರ ರಸ್ತೆಯಲ್ಲಿರುವ ಇಟ್ಟಂಗಿ ಭಟ್ಟಿಯಲ್ಲಿ, ಕಲಬುರಗಿ ನಗರದ ಹುಮನಾಬಾದ ರಿಂಗ್‌ ರೋಡ ಕ್ರಾಸ್‌ದ ಬಳಿ ಗ್ಯಾರೇಜ ಮತ್ತು ಅಂಗಡಿಯಲ್ಲಿ ಕೆಲಸ ಮಾಡುವಂತಹ ಒಟ್ಟು 15 ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಿ ಸ್ವಾಧಿನಕ್ಕೆ ಪಡೆದುಕೊಂಡು ಬಾಲಕರ ಬಾಲ ಮಂದಿರ ಮತ್ತು ಬಾಲಕೀಯರ ಬಾಲ ಮಂದಿರ ಕಲಬುರಗಿರವರಲ್ಲಿ ಮುಂದಿನ ಪುರ್ನವಸತಿಗಾಗಿ ಒಪ್ಪಿಸಲಾಯಿತು. ಈ ಯೋಜನೆಯ ವಿವರವನ್ನು ಸಹ ಸಾರ್ವಜನಿಕರಿಗೆ ಮನವರಿಕೆ ಆಗುವಂತೆ ತಿಳುವಳಿಕೆ ನೀಡಲಾಯಿತು.
          ಕಾಣೆಯಾದ ಅನೇಕ ಮಕ್ಕಳು ಭಿಕ್ಷೆಯಾಟನೆಯಲ್ಲಿ ಹಾಗೂ ಬಾಲ ಕಾರ್ಮಿಕತೆಯಲ್ಲಿ ತೊಡಗಿದ್ದು, ಆ ಮಕ್ಕಳನ್ನು ಪತ್ತೆ ಹಚ್ಚಿ ಮತ್ತೆ ಮನೆಗೆ ತಲುಪಿಸಿ ಪಾಲಕರ ಮುಖದಲ್ಲಿ ನಗೇ ಮೂಡಿಸುವ ಹಾಗೂ ಮಕ್ಕಳ ರಕ್ಷಣೆಗಾಗಿ ಸದರಿ ಕಾರ್ಯಾಚಾರಣೆಯನ್ನು ಕೈಕೊಳ್ಳಲಾಗಿದೆ ಎಂದು ಹಿರಿಯ ಮಕ್ಕಳ ಕಲ್ಯಾಣ ಅಧಿಕಾರಿಗಳು ಹಾಗೂ ಪೊಲೀಸ್ ನಿರೀಕ್ಷಕರು ಶ್ರೀ ಸತೀಸ ಕೆ,ಎಮ್.  ರವರು ತಿಳಿಸಿದ್ದಾರೆ.
            ಯಾವುದೇ ಮಗು ಪತ್ತೆಯಾದಲ್ಲಿ ಅಥವಾ 18 ವರ್ಷದ ಒಳಗಿನ ಯಾವುದೇ ಮಗು ತೊಂದರೆಗೆ ಒಳಗಾದಲ್ಲಿ ಉಚಿತ ಮಕ್ಕಳ ಸಹಾಯವಾಣಿ 1098, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಹಾಗೂ ಮಕ್ಕಳ ವಿಶೇಷ ಪೊಲೀಸ್ ಘಟಕಕ್ಕೆ ತಿಳಿಸಲು ಕೋರಿರುತ್ತಾರೆ.
            ಈ ಕಾರ್ಯಚಾರಣೆಯಲ್ಲಿ ಮಕ್ಕಳ ಸಹಾಯವಾಣಿ ಕೇಂದ್ರದ ಶ್ರೀ ಮಲ್ಲಪ್ಪ ರಾಚೂರು,  ಶ್ರೀ ಬಸವರಾಜು ಟೆಂಗಳಿ, ಕುಮಾರ ರಾಠೋಡ, ಕಾಣೆಯಾದ ಮಕ್ಕಳ ಬ್ಯೂರೋದ ಮಾಪಣ್ಣ, ಜ್ಯೋತಿ, ಡಾನ ಬಾಸ್ಕೋ ನಿರ್ದೇಶಕರಾದ ಫಾದರ ಪ್ರಸಾದ, ಹಾಗೂ ಸಂತೋಷ ಮತ್ತು ಕಾರ್ಮೀಕ ನಿರೀಕ್ಷಕರು ಹಾಜಾರಿದ್ದರು.

No comments: