ಅಪಘಾತ ಪ್ರಕರಣ
:
ಮಾಡಬೂಳ ಠಾಣೆ : ಶ್ರೀ ಮರೆಪ್ಪಾ ತಂದೆ ಶರಣಪ್ಪಾ
ಸಾಃ ಪಾಳಾ ಇವರು ತನ್ನ ಪರಿಚಯದವನಾದ ತನ್ನ ಗ್ರಾಮದ
ಮೃತ ಕೃಷ್ಣಾ ತಂದೆ ಸಾಯಿಬಣ್ಣ ಕಟ್ಟಿಮನಿ ಈತನ ಕರಿ
ಬಣ್ಣದ ಪಲ್ಸರ ಮೋಟಾರ ಸೈಕಲ ನಂ ಕೆಎ- 32 ಡಿ-7891 ನೇದ್ದನ್ನು ತೆಗೆದುಕೊಂಡು ಫಿರ್ಯಾದಿಯ ಅಕ್ಕಳಾದ
ಮಹಾಂತಮ್ಮ ಇವಳಿಗೆ ಮಾತಾಡಿಕೊಂಡು ಬರಲು ಹಾಗೂ ಫಿರ್ಯಾದಿಯ ಇನ್ನೊಬ್ಬ ಅಕ್ಕನ ಮಗನಾದ ಮಲ್ಲಪ್ಪ ತಂದೆ
ಆನಂದ ಈತನಿಗೆ ತನ್ನ ಅಕ್ಕನ ಹತ್ತಿರ ಬಿಟ್ಟು ಬರುವ ಸಂಬಂಧ ದಿನಾಂಕ 02-01-2016 ರಂದು ಸಾಯಂಕಾಲ ಪಾಳಾ
ಗ್ರಾಮದಿಂದ ಮೂರು ಜನರು ಮೊಟಾರ ಸೈಕಲ ಮೇಲೆ ಹೊರಟರು. ಮೋಟಾರ ಸೈಕಲನ್ನು ಕೃಷ್ಣಾ ಈತನು ಚಲಾಯಿಸುತ್ತಿದ್ದು, ಹಿಂದುಗಡೆ ಫಿರ್ಯಾದಿ ಹಾಗೂ ಮಲ್ಲಪ್ಪಾ ಇವರು ಕುಳಿತುಕೊಂಡಿದ್ದರು. ಫಿರ್ಯಾದಿದಾರರು ತಮ್ಮ ಮೋಟಾರ
ಸೈಕಲನ್ನು ಹಾಗರಗಾ ಹೆಬ್ಬಾಳ ರೋಡಿನ ಮೇಲೆ ಹೊಗುತ್ತಿರುವಾಗ , ಹೆಬ್ಬಾಳ ರೋಡಿನ ಕೆ.ಇ.ಬಿ ಮುಂದಿರುವ ಕೆ.ಇ.ಬಿ
ಕಛೇರಿಯ 100 ಮೀಟರ ಅಂತರದಲ್ಲಿ ಸಮಯ ಮೋಟಾರ ಸೈಕಲ ಎದುರುಗಡೆಯಿಂದ ಅಂದರೆ ಹೆಬ್ಬಾಳ ಗ್ರಾಮದ ಕಡೆಯಿಂದ
ಬುಲೇರೋ ವಾಹನ ನಂ ಕೆಎ-32 ಎನ್-3554 ನೇದ್ದರ ಚಾಲಕ ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ತನದಿಂದ
ಚಲಾಯಿಸಿಕೊಂಡು ಬಂದು ಕೃಷ್ಣಾ ಈತನು ಚಲಾಯಿಸುತ್ತಿದ್ದ ಪಲಕ್ಸರ ಮೊಟಾರ ಸೈಕಲ ನಂ ಕೆಎ-32 ಇಡಿ-7891
ನೇದ್ದಕ್ಕೆ ಡಿಕ್ಕಿಪಡಿಸಿದ ಪರಿಣಾಮ ಮೋಟಾಋ ಸೈಕಲ ಮೇಲೆ ಇದ್ದ ಎಲ್ಲರೂ ರೋಡಿನ ಮೇಲೆ ಬಿದಿದ್ದು, ಕೃಷ್ಣಾ ಈತನಿಗೆ ತಲೆಗೆ ಹಾಗೂ ಗುಪ್ತಾಂಗಕ್ಕೆ ಹಾಗೂ ಎರಡು ತೊಟೆ ಹತ್ತಿರ
ಭಾರಿ ಗುಪ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು,
ಫಿರ್ಯಾದಿಗೆ ಮೂಗಿನ ಮತ್ತು
ತುಟಿಯ ಹತ್ತಿರ, ರಕ್ತಗಾಯ, ಹಾಗೂ ಅಲಲ್ಲಿ ತರಚಿದ ಗಾಯಗಾಗಳಾಗಿದ್ದು, ಮಲ್ಲಪ್ಪಾ ಈತನಿಗೆ ತಲೆಗೆ ಒಳಪೆಟ್ಟಾಗಿದ್ದು, ಅಪಘಾತಪಡಿಸಿದ ಬುಲೆರೋ ಚಾಲಕನು ತನ್ನ ಅಪಘಾತಪಡಿಸಿದ ನಂತರ ತನ್ನ ವಾಹನವನ್ನು
ಸ್ಥಳದಲ್ಲಿಯೇ ನಿಲ್ಲಿಸಿದ ಪರಾರಿ ಆಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು
:
ರಾಘವೇಂದ್ರ ನಗರ ಠಾಣೆ : ಶ್ರೀ ಮಹೀಬೂಬ
ತಂದೆ ಅಬ್ದುಲಗನಿ ಕೇರಿಭೋಸಗಾ ಸಾ:ಖಾದ್ರಿ ಚೌಕ ಆಳಂದ ರಸ್ತೆ ಕಲಬುರಗಿ ರವರ ತಂಗಿಯಾದ ಅಫ್ರೀನ್
ಬೇಗಂ ಗಂಡ ಶೇಖರೋಷನ ಇವಳ ಖಾದ್ರಿ ಚೌಕ ಹತ್ತಿರ ಎರಡು ಶಟರವುಳ್ಳ ಅಂಗಡಿಯಿದ್ದು ಒಂದು ಶಟರ ಅಂಗಡಿಯು
ಶೀತಲ ಕುಮಾರ ತಂದೆ ಬಾಬುರಾವ ಇವರಿಗೆ ಬಾಡಿಗೆಯಿಂದ ಕೊಟ್ಟಿರುತ್ತಾಳೆ. ಮತ್ತು ಅಂಗಡಿಯ ಹಿಂದೆ ನನ್ನ
ತಂಗಿಯು ಕೂಡಾ ವಾಸವಾಗಿರುವ ಮನೆ ಇರುತ್ತದೆ. ದಿನಾಂಕ:03/01/2016 ರಂದು ಸಾಯಂಕಾಲ 4.00 ಗಂಟೆ ಸುಮಾರಿಗೆ ನಾನು ನನ್ನ ತಂಗಿಯವರ ಮನೆಗೆ ಹೋಗಿ ಬರಬೇಕು
ಅಂತಾ ನಾನ ಹೋದಾಗ ಸದರಿ ನನ್ನ ತಂಗಿಯು ಶೀತಲ ಕುಮಾರ ಇವರಿಗೆ ಬಾಡಿಗೆಯಿಂದ ಕೊಟ್ಟಿದ್ದ ಶಟರ
ಅಂಗಡಿಯ ಮುಂದೆ ಶೀತಲ ಕುಮಾರ ಮತ್ತು ಆತನ ತಮ್ಮ ಸಚಿನ ಮತ್ತು ಆತನ ತಂದೆ ಬಾಬುರಾವ ಮೂರು ಜನರು
ಇದ್ದು ಶೀತಲ ಕುಮಾರ ಇವನು ಏ ರಾಂಡ ಕೇ ಭೇಟೆ ಮಹೇಬೂಬ ತೂ ಗಯೇ ಸಾಲ ಮೇರೆಸೆ ಜಗಡಾ ಕೀವು ಕರೆ ಅಂತಾ
ನನ್ನ ಜೊತೆಯಲ್ಲಿ ಜಗಳಕ್ಕೆ ಬಿದ್ದು ಕೈಯಿಂದ ಬೆನ್ನಿನ ಮೇಲೆ ಹೊಡೆಬಡೆ ಮಾಡಿರುತ್ತಾನೆ. ಸಚಿನ
ಇವನು ಈ ಮಗನಿಗೆ ಬಿಡಬಾರದು ಖಲಾಸ ಮಾಡಿರಿ ಹೋದ ವರ್ಷ ನಮ್ಮ ಜೊತೆಯಲ್ಲಿ ಜಗಳ ಮಾಡಿ ಹೊಡೆಬಡೆ
ಮಾಡಿರುತ್ತಾನೆ ಅಂತಾ ಹೇಳುತ್ತಾ ಕಾಲಿನಿಂದ ಹೊಟ್ಟೆಯ ಮೇಲೆ ಒದೆಯ ಹತ್ತಿದನು ಬಾಬುರಾವ ಇವನು
ಹೋಡಿರಿ ಸುಳ್ಯಾ ಮಗನಿಗೆ ಅಂತಾ ಕೈಯಿಂದ ಬೆನ್ನಿನ ಮೇಲೆ ಹೊಡೆದು ಒಂದು ಕಲ್ಲಿನಿಂದ ನನ್ನ ಹೊಟ್ಟೆಯ
ಮೇಲೆ ಹೊಡೆದಿದ್ದರಿಂದ ಗುಪ್ತಗಾಯ ವಾಗಿರುತ್ತದೆ. ಶೀತಲ ಕುಮಾರ ಇವನು ನನಗೆ ಕೊಲೆ ಮಾಡುವ ಉದ್ದೇಶದಿಂದ
ಒಂದು ಹಗ್ಗ ನನ್ನ ಕುತ್ತಿಗೆಗೆ ಹಾಕಿ ಜೋರಾಗಿ ಎಳೆದಾಡಿ ಬೆನ್ನಿನ ಮೇಲೆ ಹೊಟ್ಟೆಯ ಮೇಲೆ
ಕೈಯಿಂದ ಹೊಡಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ದಿನಾಂಕ:03/01/2016 ರಂದು ಸಾಯಂಕಾಲ 4.40 ಗಂಟೆಗೆ ಮಹೇಬೂಬ, ಅಮಜದ, ನಜೀರ ಮತ್ತು ಪ್ರೂಟ್ ಮಹೇಬೂಬ ಹಾಗೂ ಹಲವು ವ್ಯಕ್ತಿಗಳು ನನ್ನ ಜೀವ ತೆಗೆಯುವ ಪ್ರಯತ್ನದಲ್ಲಿ ನನ್ನ ಮೇಲೆ ಹಲ್ಲೆ ಮಾಡಿರುತ್ತಾರೆ. 8-10
ಜನರು ನನಗೆ ಪರಿಚಯ ಇರುತ್ತಾರೆ ನನಗೆ
ಜೀವ ಹೊಡೆಯುವ ಬೆದರಿಕೆ ಹಾಕಿದ್ದು ನನ್ನ ವ್ಯವಹಾರ ಹಾಗೂ ನನ್ನ ಏಳಿಗೆ
ಸಹಿಸದೆ ನನ್ನ ಅಂಗಡಿಗೆ ನುಗ್ಗಿ ನನ್ನ ಕೌಂಟರನಲ್ಲಿದ್ದ 50000/-ರೂ ದಿಂದ 60000/-ರೂ ಲೂಟಿ ಮಾಡಿರುತ್ತಾರೆ ಮತ್ತು ನೀನು ಜೀವಂತ ಇರುವದಿಲ್ಲಾ ಅಂತಾ ನನಗೆ ಹಲವು ಬಾರಿ ಬೈದಿರುತ್ತಾರೆ ಅಂತಾ ಕಾರಣ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಶ್ರೀ ಶೀತಲಕುಮಾರ ತಂದೆ ಬಾಬುರಾವ ಪಾಟೀಲ ಸಾ:ದೇವಿ ನಗರ
ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment