POLICE BHAVAN KALABURAGI

POLICE BHAVAN KALABURAGI

14 January 2016

Kalaburagi District Reported Crimes

 ಕೊಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ನಾಗಪ್ಪ ತಂದೆ ಶಿವರಾಯ ಕುಪನೂರು ಸಾಃ ಹೆಬ್ಬಾಳ ಚಿಂಚೋಳಿ ತಾಃ ಚಿತಾಪೂರ್ ಇವರ ತಂಗಿಯ ಗಂಡನಾದ ಸಾಯಿಬಣ್ಣ ಈತನಿಗೆ ಆತನ ಹೆಂಡತಿಯಾದ ನೀಲಮ್ಮ ಇವಳು ಯಾವಾಗಲೂ ಕಿರಿಕಿರಿ ಕೊಡುತ್ತ ಜಗಳ ಮಾಡುತ್ತಿದ್ದು, ಇದರಿಂದ ಸಾಯಿಬಣ್ಣ ಈತನು ತುಂಬಾ ನೊಂದಿದ್ದು, ನೆಮ್ಮದಿ ಇಲ್ಲದಂತಾಗಿದ್ದರಿಂದ ಆರೋಪಿತನಾದ ಸಾಯಿಬಣ್ಣ ಈತನು ದಿನಾಂಕಃ 12/01/2016 ರಂದು 1.00 ಎಎಂ ಕ್ಕೆ ತನ್ನ ವಾಸದ ಮನೆಯಾದ ಬಸವೇಶ್ವರ ಕಾಲೋನಿಯಲ್ಲಿ  ತನ್ನ ಹೆಂಡತಿಯಾದ ನೀಲಮ್ಮ ಇವಳಿಗೆ ಚಾಕುವಿನಿಂದ ಕುತ್ತಿಗೆ ಕೊಯ್ದು ನಂತರ ಕತ್ತು ಹಿಸುಕಿ ಕೊಲೆ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅತ್ಯಾಚಾರ ಮಾಡಿದ ಪ್ರಕರಣ :
ಮುಧೋಳ ಠಾಣೆ : ಕುಮಾರಿ ವಯಾ; 14 ವರ್ಷ ಇವರ ಅಣ್ಣ ಬಾಲು ಇತನ ಗೇಳೆಯನಾದ ನಮ್ಮ ತಾಂಡಾದ ಶ್ರಾವಣಕುಮಾರ ತಂದೆ ಹುನ್ಯಾನಾಯಕ ಚವ್ಹಾಣ ಇತನು ಆಗಾಗ ನಮ್ಮ ಅಣ್ಣನ ಹತ್ತಿರ ಮಾತಾಡಲು ನಮ್ಮ ಮನೆಗೆ ಬರುತಿದ್ದನು ನನ್ನೋಂದಿಗೆ ಮಾತಾಡುತಿದ್ದನು . ಇಗ 10-15 ದಿನಗಳಿಂದ ಶ್ರಾವಣಕುಮಾರ ಇತನು ನನಗೆ ಆಗಾಗ ಪೋನ ಮಾಡಿ ನಾನು ನಿನಗೆ ಲವ್ ಮಾಡುತಿದ್ದೆನೆ ಅಂತಾ ಹೇಳುತಿದ್ದನು ನಾನು ಆತನಿಗೆ ನಿನು ಈ ಬಗ್ಗೆ  ಮಾತಾಡಬೇಡ ನಾನು ಚಿಕ್ಕವಳಿದ್ದನೆ  ಅಂತಾ ಹೇಳಿದ್ದು ಆದರು ಸಹ ಕೆಳದೆ ಆತನು ನನಗೆ ಹಾಗೆ ಆಗಾಗ  ಪೋನ ಮಾಡಿ ಮಾತಾಡುತಿದ್ದನು ಇಗ 8-10  ದಿನಗಳ ಹಿಂದೆ ದಿನಾಂಕ 04-1-2016 ರಾತ್ರಿ 8-00 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ತಾಂಡಾದ ಶ್ರಾವಣಕುಮಾರ ತಂದೆ ಹುನ್ಯಾನಾಯಕ ಇತನು ನನಗೆ ಪೋನ ಮಾಡಿ ನಾನು ನಿನ್ನ ಜೊತೆ ಮತಾಡುವದಿದೆ ನಿಮ್ಮ ಮನೆಯ ಹಿಂದುಗಡೆ ಬಾ ಅಂತಾ ಕರೆದನು ಆಗಾ ನಾನು ಆತನಿಗೆ ನಾನು ಬರುವದಿಲ್ಲಾ ಅಂತ ಹೇಳಿದಾಗ ಆತನು ನನಗೆ ನಾನು ನಿನಗೆ ಎನು ಮಾಡುವದಿಲ್ಲಾ ಸ್ವಲ್ಪ ಹೊತ್ತು ಬಂದು ಹೊಗು ಅಂತಾ ಹೇಳಿದನು ಆಗಾ ನಾನು ನಮ್ಮ ಮನೆಯ ಹಿಂದುಗಡೆ ಹೊದಾಗ ಶ್ರಾವಣ ಕುಮಾರ ಇತನು ನನಗೆ ಅಲ್ಲೆ ನಮ್ಮ ಮನೆಯ ಹಿಂದುಗಡೆ ಯಂಕ್ಯಾನಾಯಕ ಇವರ ಖುಲ್ಲಾ ಜಾಗದಲ್ಲಿ ಕಲ್ಲಿನ ಗುಂಪಿಯ ಮರೆಯಲ್ಲಿ ಕರೆದು ನನಗೆ ನಿನ್ನ ಮೆಲೆ ಆಸೆ ಆಗಿದೆ ನಿನು ನಾನು ಹೆಳಿದಂತೆ ಕೇಳು ಅಂತಾ ನನಗೆ ಕೈ ಹಿಡಿದು ಎಳೆದು ಒತ್ತಿ ಹಿಡಿದು ಕೇಳಗೆ ಹಾಕಿ ನಾನು ಬೆಡವೆಂದರು ಜಬರದಸ್ತಯಿಂದ ಬಲತ್ಕಾರ ಮಾಡಿದ್ದು  ಅಲ್ಲದೆ        ದಿನಾಂಕ 10-1-2016 ರಂದು ರವಿವಾರದಂದು ಶಾಲೆಗೆ ರಜೆ ಇದ್ದರಿಂದ ಮದ್ಯಾನ ನಾನು ನಮ್ಮ ಮೆಕೆಗಳನ್ನು ಮೆಯಿಸಲು ನಮ್ಮ ತಾಂಡಾದ ಸಮೀಪದಲ್ಲಿರುವ ಚಂದ್ಯಾನಾಯಕ ತಂದೆ ಹಣಮ್ಯಾನಾಯಕ ಇವರ ತೊಗರಿ ಕಟಾವು ಮಾಡಿದ ಹೊಲದಲ್ಲಿ ನಮ್ಮ ಮೇಕೆಗಳನ್ನು ಮೇಯಿಸುತಿದ್ದಾಗ ನಮ್ಮ ತಾಂಡಾದ ಶ್ರಾವಣಕುಮಾರ ತಂದೆ ಹುನ್ಯಾನಾಯಕ ಇತನು ತನ್ನ ದನಗಳನ್ನು ಮೆಯಿಸಲು ನಾನು ಮೆಕೆಗಳನ್ನು ಮೇಯಿಸುತಿದ್ದ  ತೊಗರಿ ಹೊಲದಲ್ಲಿ ಬಂದು ನನ್ನೊಂದಿಗೆ ಮತಾಡುತ್ತಾ ನನ್ನ ಹಿಂದೆ ಹಿಂದೆ ಬರುತಿದ್ದನು ನಾನು ನಮ್ಮ ಮೆಕೆಗಳನ್ನು ಮೇಯಿಸುತ್ತಾ ಹೊಲದಲ್ಲಿ ಗೀಡದ ನೇರಳಲ್ಲಿ ಕುಳಿತಾಗ ಸದರಿ ಶ್ರಾವಣ ಕುಮಾರ ಇತನು ಹಿಂದಿನಿಂದ ಬಂದು ನನಗೆ ಒತ್ತಿಹಿಡಿದುಕೊಂಡನು ನಾನು ಆತನಿಗೆ ನಾನು ಚಿಕ್ಕಳಿದ್ದನೆ ನನಗೆ ಎನು ಮಾಡಬೇಡ ಬಿಡು  ನನ್ನ ಮೈ ಮುಟ್ಟ ಬೇಡಾ ಅಂತಾ ಹೇಳಿದರು ಸಹ ಕೇಳದೆ ನನಗೆ ಶ್ರಾವಣಕುಮಾರ ಇತನು  ಜಬರದಸ್ತಿಯಿಂದ ಕೇಳಗೆ ಹಾಕಿ ಬಲತ್ಕಾರ ಮಾಡಿ ಈ ವಿಷಯವನ್ನು ಯಾರಿಗೆ ಹೇಳಬೇಡಾ ಅಂತಾ ಹೇಳಿ ಆತನು ಅಲ್ಲಿಂದ ಮನೆಗೆ ಹೊದನು ನಾನು ಆತನಿಗೆ ನಿನು ಇನ್ನೊಮೆ ನನಗೆ ಮಾತಾಡಬೇಡಾ ನನ್ನ ಹತ್ತಿರ ಬರ ಬೇಡಾ ನಿನು ನನ್ನ ಹತ್ತಿರ ಬಂದರೆ ನಮ್ಮ ತಂದೆ ತಾಯಿಗೆ ಹೇಳುತ್ತೆನೆ ಅಂತಾ ಹೇಳಿದ್ದು ಆತನು ನನಗೆ ಹಾಗೆ ಪೋನ ಮಾಡುತಿದ್ದನು. ದಿನಾಂಕ  13-01-2015 ರಂದು ಮದ್ಯರಾತ್ರಿ 12-30 ಗಂಟೆ ಸುಮಾರಿಗೆ ನಾನು ಹಾಗು ನಮ್ಮ ತಾಯಿ ಮಂಗಲಿಬಾಯಿ ಇಬ್ಬರು ಮನೆಯಲ್ಲಿ ಮಲಗಿಕೊಂಡಿದ್ದಾಗ ನಮ್ಮ ತಾಂಡಾದ ಶ್ರಾವಣಕುಮಾರ ಇತನು ನಮ್ಮ ಮನೆಯ ಬಾಗಿಲ ಕೊಂಡಿಯನ್ನು ಕೈ ಹಾಕಿ ತೆಗೆದು ನಿಧಾನವಾಗಿ ನಮ್ಮ ಮನೆಯಲ್ಲಿ ಬಂದು ನಮ್ಮ ತಾಯಿ ಹತ್ತಿರ ಮಲಗಿದ್ದ ನನಗೆ ಕೈ ಹಿಡಿದು ಎಳೆದು ನಾನು ಚಿರಾಡುತ್ತೆನೆ ಅಂತಾ ನನ್ನ ಬಾಯಿ ಒತ್ತಿ ಹಿಡಿದುಕೊಂಡು ಮನೆಯಿಂದ ಹೊರೆಗೆ ನಮ್ಮ ಮೇಕೆಗಳು ಇದ್ದ ರೂಮಿನಲ್ಲಿ ಕರೆದುಕೊಂಡು ಹೊಗಿ ನನಗೆ ಮಾತಾಡುತಿದ್ದಾಗ ಮನೆಯಲ್ಲಿದ್ದ ನಮ್ಮ ತಾಯಿ ಎದ್ದು  ಮನೆಯಲ್ಲಿ ಇಲ್ಲದನ್ನು ನೊಡಿ ನಮ್ಮ ತಾಯಿ ಮನೆಯಿಂದ ಹೊರಗಡೆ ಬಂದಿದ್ದು ನಮ್ಮ ತಾಯಿ ನನಗೆ ಶ್ರಾವಣ ಕುಮಾರ ಇತನು ಮಾತಾಡುವದನ್ನು   ನೊಡಿ ಆತನಿಗೆ ನೀನು ಈ ರಾತ್ರಿ ಹೊತ್ತಿನಲ್ಲಿ ನಮ್ಮ ಮನೆಗೆ ಯಾಕೆ? ಬಂದಿದ್ದಿ ನನ್ನ ಮಗಳಿಗೆ ಎನು ಮಾಡುತಿದ್ದಿ ಅಂತಾ ಕೇಳಿದಾಗ ಅವನು ನಮ್ಮ ತಾಯಿಗೆ ದೊಬ್ಬಿಕೊಟ್ಟು ಓಡಿ ಹೊದನು. ನಾನು ಈ ವಿಷಯವನ್ನು ನಮ್ಮ ತಾಯಿ ಹತ್ತಿರ ತಿಳಿಸಿದ್ದು ನಮ್ಮ ತಾಯಿ ನಾಳೆ ತಾಂಡಾದಲ್ಲಿ ಪಂಚಾಯಿತಿ ಹಾಕುತ್ತೆನೆ ಅವನಿಗೆ ಬಿಡುವದಿಲ್ಲಾ ಅಂತಾ ಹೇಳಿದ್ದು ಇದಿಂದ ನಾನು ನನ್ನ ಮರ್ಯಾದೆ ಹೊಗಿದೆ ತಾಂಡಾದಲ್ಲಿ ಜನರಿಗೆ ಮುಖ ಹೇಗೆ ತೊರಿಸಲಿ ನನಗೆ ಯಾರು ಮದುವೆ ಮಾಡಿಕೊಳ್ಳುತ್ತಾರೆ ಅಂತಾ ಮಾನಸಿಕ ಮಾಡಿಕೊಂಡು ಇಂದು ಮುಂಜಾನೆ 6-30 ಗಂಟೆ ಸುಮಾರಿಗೆ ನಮ್ಮ ತಾಯಿ ಮನೆಯಿಂದ ಹೊರಗಡೆ ಹೊದಾಗ ನಾನು ಮನೆಯಲ್ಲಿದ್ದ ತೊಗರಿಗೆ ಹೊಡುವ ಔಷದಿ ಕುಡಿದಿದ್ದು ನಮ್ಮ ತಾಯಿ ಹೊರಗಿನಿಂದ ಮನೆಗೆ ಬಂದಾಗ್ ನಾನು ನಮ್ಮ ತಾಯಿಗೆ ನಾನು ಸಾಯಬೆಕೆಂದು ಔಷದಿ ಕುಡಿದಿರುತ್ತೆನೆ ಅಂತಾ ತಿಳಿಸಿದ್ದು ಆಗಾ ನಮ್ಮ ತಾಯಿ ಹಾಗು ಹೊಲದಿಂದ ಮನೆಗೆ ಬಂದಿದ್ದ ನಮ್ಮ ತಂದೆ ಇಬ್ಬರು ಕೂಡಿ ನನಗೆ ಒಂದು ಅಟೋದಲ್ಲಿ ಹಾಕಿಕೊಂಡು ಉಪಚಾರ ಕುರಿತು ಮುಧೋಳ ಸರಕಾರಿ ದವಖಾನೆಗೆ ತಂದು ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಅಂಬುಲೆನ್ಸದಲ್ಲಿ ಹಾಕಿಕೊಂಡು ಸರಕಾರಿ ಅಸ್ಪತ್ರೆ ಸೇಡಂದಲ್ಲಿ ಸೆರಿಕೆ ಮಾಡಿದ್ದು ನಾನು ಇಲ್ಲಿಉಪಚಾರ ಪಡೆಯುತಿದ್ದೆನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಈರಣ್ಣ ತಂದೆ ಶಂಕ್ರೆಪ್ಪ  ಕಾಂಬಳೆ  ಸಾ||ಅವರಾದ(ಬಿ) ತಾ||ಜಿ|| ಕಲಬುರಗಿ ರವರು ದಿನಾಂಕ:12/01/2016 ರಂದು ಮದ್ಯಾಹ್ನ 3 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಗೆಳೆಯ ವಿನೋದ ಕಾಂಬಳೆ ಇಬ್ಬರು ಕೂಡಿಕೊಂಡು ಸಿಮ್‌ ಕಾರ್ಡ ಖರದಿ ಮಾಡುವ ಸಲುವಾಗಿ ಕಲಬುರಗಿ ಕೇಂದ್ರ ಬಸ್‌ ನಿಲ್ದಾಣದ ಹತ್ತಿರ ಬಂದಿದ್ದು ನಂತರ ಕೇಂದ್ರ ಬಸ್‌ ನಿಲ್ದಾಣಕ್ಕೆ ಬಂದು ಸಿಮ್‌ ಕಾರ್ಡನ್ನು ಖರಿದಿ ಮಾಡಿಕೊಂಡು ರಾತ್ರಿ 8 ಗಂಟೆಯ ಸುಮಾರಿಗೆ ನಾವಿಬ್ಬರು ಕೂಡಿಕೊಂಡು ನಮ್ಮೂರಿಗೆ ಹೋಗುವ ಸಲುವಾಗಿ ಕೇಂದ್ರ ಬಸ್‌ ನಿಲ್ದಾಣದ ಒಳಗೆ ಹೋಗುತ್ತಿರುವಾಗ, ನಾವಿಬ್ಬರು ಇಲ್ಲಿ ಎಲ್ಲೊ ಮಾಲಗಳು ಸಿಗುತ್ತವೆ ಅಂತ ಒಬ್ಬರಿಗೊಬ್ಬರು ಮಾತನಾಡುತ್ತಾ ಹೋಗುತ್ತಿರುವಾಗ ಯಾರೋ ಇಬ್ಬರು ವ್ಯಕ್ತಿಗಳು ನಮ್ಮ ಹಿಂದಿನಿಂದ ಬಂದು ನಮ್ಮ ಹೆಗಲ ಮೇಲೆ ಕೈ ಹಾಕಿ ನಾವು ನಿಮಗೆ ಮಾಲು ಕೊಡುಸುತ್ತೆವೆ ನಡೆಯಿರಿ ಅಂತ ನಮ್ಮನ್ನು ಬಸ್‌ ನಿಲ್ದಾಣದ ಮುಂದುಗಡೆ ಇರುವ ಆಟೋಗಳು ನಿಲ್ಲುವ  ಸ್ಥಳದಲ್ಲಿ ಕರೆದುಕೊಂಡು ಹೊದರು. ಅಲ್ಲಿ ಹೋದ ನಂತರ ಅದರಲ್ಲಿದ್ದ ಒಬ್ಬನು ನಮಗೆ ಬೈಯುತ್ತಾ ಮಕ್ಕಳೆ ನಿಮ್ಮ ಹತ್ತಿರ ಎಷ್ಟು ರೊಕ್ಕ ಅವ ಹೊರಗೆ ತೆಗೆಯಿರಿ ಅಂತ ಅಂದನು. ಆಗ ನಾವು ನಾವೇಕೆ ನಿಮಗೆ ರೊಕ್ಕ ಕೊಡಬೇಕು ಅಂದಾಗ ಮತ್ತೊಬ್ಬನು ಮಗನೆ ರೊಕ್ಕ ಕೊಡಲ್ಲಂತಿ ಅಂತ ಅಂದು  ಜಬರದಸ್ತಿಯಿಂದ ನನ್ನ ಪ್ಯಾಂಟಿನ ಜೇಬಿನಲ್ಲಿದ್ದ ಅಂದಾಜು 8,000/- ಕಿಮ್ಮತ್ತಿನ ಮೈಕ್ರೊಸಾಫ್ಟ ಕಂಪನಿಯ ಒಂದು ಮೋಬೈಲ್‌ ಫೊನ್‌ ಮತ್ತು ನಗದು ಹಣ 500/- ರೂಪಾಯಿ ಕಸಿದುಕೊಂಡನು. ನಂತರ ಮತ್ತೊಬ್ಬನು ನನ್ನ ಗೆಳೆಯನಾದ ವಿನೋದನ ಜೇಬಿನಲ್ಲಿದ್ದ ಅಂದಾಜು 3000/- ಕಿಮ್ಮತ್ತಿನ ಜೀಯೋನಿ ಕಂಪನಿಯ ಮೋಬೈಲ್‌ ಫೋನ್‌ ಕಸಿದುಕೊಂಡರು. ನಂತರ ಅವರು ನಮಗೆ ಅಲ್ಲೆ ಬಿಟ್ಟು ಎಮ್‌ಎಸ್‌ ಕೆ ಮಿಲ್‌  ಕಡೆಗೆ ಹೋಗಿರುತ್ತಾರೆ. ಅವರಿಬ್ಬರು ಒಬ್ಬರಿಗೊಬ್ಬರು ಮಾತನಾಡುತ್ತಿದ್ದುದ್ದರಿಂದ ನನ್ನ ಹತ್ತಿರ ಇದ್ದ ಮೋಬೈಲ್‌ ಫೋನ್‌ ಮತ್ತು ನಗದು ಹಣ ಜಬರದಸ್ತಿಯಿಂದ ಕಸಿದುಕೊಂಡುವನ ಹೆಸರು ಶಿವಶರಣ ದೊಡ್ಡಮನಿ ಅಂತಾ ಗೊತ್ತಾಗಿದ್ದು ಮತ್ತು ನನ್ನ ಗೆಳೆಯ ವಿನೋದ ಇತನಿಂದ ಮೋಬೈಲ್‌ ಫೊನ್‌ ಜಬರದಸ್ತಿಯಿಂದ ಕಸಿದಿಕೊಂಡವನ ಹೆಸರು ಚಾಂದಪಾಷಾ ಅಂತ ಗೊತ್ತಾಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: