ಅಪಹರಣ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ
10-11-15 ರಂದು ರಾತ್ರಿ
10-00 ಗಂಟೆ ಸುಮಾರಿಗೆ ನನ್ನ ಮಗಳು ಫಾತೀಮಾ ವ:17 ವರ್ಷ ಇವಳು ಮನೆಯ ಮುಂದೆ ಅಂಗಳದಲ್ಲಿ ಹಾಲು ಕಾಯಿಸುತ್ತಿದ್ದಳು. ಮನೆಯಲ್ಲಿ ಫಿರ್ಯಾದಿ ಮತ್ತು ಮಗಳಾದ ಮಾಲನಬೀ ಗಂಡ ದಾವೂದ ಇಬ್ಬರು ಇದ್ದಾಗ ಫಿರ್ಯಾದಿದಾರಳ ಮನೆಯ ಪಕ್ಕದಲ್ಲಿ ವಾಸವಾಗಿದ್ದ ಯಾಸ್ಮೀನ ಗಂಡ ನಜೀರ ಎಂಬುವವಳ ತಮ್ಮನಾದ ಬಬಲು @ ಬಾಬಾ ತಂದೆ ಖಾಸೀಂಸಾಬ ಸಾ:ವಟಿವಟಿ ತಾ: ಚಿತ್ತಾಪೂರ ಒಂದು ಮೋಟಾರ ಸೈಕಲ ಮೇಲೆ ಫಿರ್ಯಾದಿದಾರಳ ಮನೆ ಎದುರು ಬಂದವನೇ ನನ್ನ ಮಗಳಾದ ಫಾತೀಮಾಬೇಗಂ ಇವಳಿಗೆ ಪುಸಲಾಯಿಸಿ ಮೋಟಾರ ಸೈಕಲ ಮೇಲೆ ಕೂಡಿಸಿಕೊಂಡು ಅಪಹರಿಸಿಕೊಂಡು ಹೋದನು. ನಂತರ ಬಬಲುನ ಅಕ್ಕ ಯಾಸ್ಮಿನ ಮತ್ತು ಅವಳ ಗಂಡ ನಜೀರ ಇವರಿಗೆ ಕೇಳಲಾಗಿ ಅವರು ಯಾವುದೇ ಸಮರ್ಪಕವಾದ ಉತ್ತರ ಕೊಡಲಿಲ್ಲಾ. ನನ್ನ ಮಗಳಿಗೆ ಹುಡುಕಾಡುವ ಕುರಿತು ಫಿರ್ಯಾದಿ ಮತ್ತು ಮಗ ಈಸೂಫ ಹಾಗೂ ಗಂಡ ಅಹ್ಮದ ಅಲಿ ಎಲ್ಲರೂ ವಟಿ ವಟಿ ಗ್ರಾಮಕ್ಕೆ ಹೋಗಿ ಹುಡಕಾಡಲೂ ಅಲ್ಲಿಗೂ ಕೂಡಾ ಅವರಿಬ್ಬರೂ ಬಂದಿರುವುದಿಲ್ಲಾ ಅಂತಾ ಗೊತ್ತಾಯಿತು, ತಮ್ಮ ಮನೆಯ ಮಾನ ಮರ್ಯಾದೆ ಅಂಜಿ ಪೊಲೀಸ ಕೇಸು ಮಾಡಬಾರದೆಂದು ಬಬಲು ಮತ್ತು ನನ್ನ ಮಗಳಿಗೆ ಕಲಬುರಗಿ ನಗರದಲ್ಲಿ ಮತ್ತು ಇತರೇ ಕಡೆಗಳಲ್ಲಿ ತಿರುಗಾಡಿ ಅಂದಿನಿಂದ ಇಂದಿನವರೆಗೂ ಹುಡುಕಾಡಿದರೂ ಅವರು ಸಿಕ್ಕಿರುವುದಿಲ್ಲಾ. ನನ್ನ ಮಗಳಿಗೆ ಅಪಹರಿಸಿಕೊಂಡು ಹೋದ ಮರು ದಿನದಿಂದ ಬಬಲು ಅಕ್ಕ ಯಾಸ್ಮೀನ ಮತ್ತು ಆಕೆಯ ಗಂಡ ನಜೀರ ಇಬ್ಬರು ಮನೆಗೆ ಬೀಗ ಹಾಕಿಕೊಂಡು ಎಲ್ಲಿಯೂ ಹೋಗಿರುತ್ತಾರೆ. ನನ್ನ ಮಗಳಿಗೆ ಅಪಹರಿಸಿಕೊಂಡು ಹೋಗಲು ಬಬಲುನ ಅಕ್ಕ ಯಾಸ್ಮೀನ ಮತ್ತು ಆಕೆಯ ಗಂಡ ನಜೀರ ಇವರು ಪ್ರಚೋದನೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಕಿರುಕಳ ನೀಡಿ ಬೆಂಕಿ ಹಚ್ಚಿದ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಅಂಜಲಿ ಗಂಡ ಪರಶುರಾಮ ರವರು ತಾಲೂಕಾ
ದಂಡಾಧಿಕಾರಿ ಮಿರಜರವರ ಮುಂದೆ ಕೊಟ್ಟ ಹೇಳಿಕೆ ತಂದು ಹಾಜರ ಪಡಿಸಿದ್ದು, ಈ ಕುರಿತಂತೆ ಅಂಜಲಿ
ಇವರು ಈ ಮೊದಲು ಕೊಟ್ಟ ಹೇಳಿಕೆಗಳು ಮತ್ತು ಪುನಃ ಕೊಟ್ಟ ಹೇಳಿಕೆ ಮರಾಠಿಯಲ್ಲಿದದ್ದು, ಅನುವಾದಿಸಿದ್ದು ಅದರ
ಸಾರಾಂಶವೇನೆಂದರೆ, ನಾನು ಈ ಮೊದಲು ಎರಡು ದಿವಸಗಳ ಹಿಂದೆ ಶುಕ್ರವಾರದ
ಬೆಳಿಗ್ಗೆ ಸಂಭವಿಸಿದ ವಿದ್ಯಮಾನದ ಬಗ್ಗೆ ಹೇಳಿರುವೇನು. ಅಂದರೆ ನನ್ನ ಅತ್ತೆ ಮನೆಯವರ ಕಡೆಯ
ನಾದಿನಿ ರೇಖಾ, ಗಂಡ ಪರಮೇಶ್ವರ, ಅತ್ತೆ ಸುಲೋಚನಾ, ಮಾವ ಜಗನ್ನಾಥ , ಮೈದುನರಾದ ಬಸವೇಶ್ವರ, ಪಾಂಡುರಂಗ, ನೀಲಕಂಠ ಮತ್ತು
ಇನ್ನೊಬ್ಬ ನಾದಿನಿ ಮಾಲಾಶ್ರೀ ಇವರ ಒತ್ತಡದಿಂದಾಗಿ ಅಡುಗೆ ಮಾಡುವಾಗ ದೀಪದಿಂದಾಗಿ ನನ್ನ ಸೀರೆಗೆ
ಬೆಂಕಿ ಹತಿತ್ತು ಎಂದು. ಅದು ಸುಳ್ಳಾಗಿದ್ದು, ಈಗ ನಾನು ನಿಜ
ವಿದ್ಯಮಾನವನ್ನು ತಿಳಿಸುತ್ತಿರುವೇನು . ಮೇಲೆ ತಿಳಿಸಿದ ವಿಳಾಸದಲ್ಲಿ ನಾನು ನನ್ನ ಗಂಡ ಪರಮೇಶ್ವರ
, ಮಗ ಕುಮಾರ ವೇದಾಂತ ವಯಸ್ಸು 2 ವರೆ ವರ್ಷ , ಶ್ರಾವಣಿ 14 ತಿಂಗಳು , ಅತ್ತೆ ಸುಲೋಚನಾ ಮಾವ
ಜಗನ್ನಾಥ, ಮೈದುನರಾದ ಬಸವೇಶ್ವರ , ಪಾಂಡುರಂಗ, ನೀಲಕಂಠ ಮತ್ತು
ನಾದಿನಿಯರಾದ ರೇಖಾ, ಮಾಲಾಶ್ರೀ, ರೇಖಾ ಇವಳ ಮಕ್ಕಳಾದ
ರಾಣಿ, ಶ್ರದ್ದಾ, ಸೋನು ಹೀಗೆ ಅವಿಭಾಜ್ಯ
ಕುಟುಂಬದಲ್ಲಿ ವಾಸಿಸುತ್ತೇವೆ. ನನ್ನ ಗಂಡ ಪರಮೇಶ್ವರ ಇತನು ಫೈನಾನ್ಸ ಕಂಪನಿಯಲ್ಲಿ ನೌಕರಿ ಮಾಡುತ್ತಾನೆ. ನನ್ನ
ನಾದಿನಿ ಮತ್ತು ನನ್ನ ಮಗನ ಮಧ್ಯ ಜಗಳವಾಗಿ ಇಬ್ಬರ ಮಧ್ಯ ವಾದ ವಿವಾದವಾಗಿರುತ್ತದೆ. ನನ್ನ ಸಣ್ಣ
ಮಗನ ಮಧ್ಯದಲ್ಲಿ ಮೈದುನ ಪಾಂಡುರಂಗ ಇತನು ನನ್ನ ಮಗನಿಗೆ ಬೈದು ಸುಮ್ಮನೇ ಕೂಡಲು
ಹೇಳುತ್ತಿರುತ್ತಾನೆ. ಮತ್ತು ನಾದಿನಿ ರೇಖಾ ಇವಳು ನನ್ನ ಸಮಕ್ಷಮ ಹಾಗೂ ಹಿಂದೆ ನನ್ನ ಮಾವ
ಜಗನ್ನಾಥ ಇವರಿಗೆ ನನ್ನ ಬಗ್ಗೆ ಇಲ್ಲ ಸಲ್ಲದ್ದನ್ನು ಹೇಳುತ್ತಿರುತ್ತಾಳೆ. ಗುರುವಾರದಂದು
ಸಾಯಂಕಾಲ 7-00 ಗಂಟೆ ಸುಮಾರಿಗೆ ನಾನು ನನ್ನ ಮಗಳು ಶ್ರಾವಣಿ ಇವಳನ್ನು ತೆಗೆದುಕೊಂಡು ಮನೆಯಲ್ಲಿ
ನಿಂತ್ತಾಗ ನನ್ನ ನಾದಿನಿ ರೇಖಾ ಇವಳು ತನ್ನ ಮಗಳು ಶ್ರದ್ದಾ ಇವಳನ್ನು ಗಂದಾ ಪೌಡರ ಹಚ್ಚುವಾಗ ಮಾವ
ಜಗನ್ನಾಥ ಇವರು ಖುರ್ಚಿಯಲ್ಲಿ ಕುಳಿತಾಗ ನಾನು ಮಾವನವರು ತಂದ ತಿಂಡಿ ತಿನಿಸು ಮಗಳು ಶ್ರಾವಣಿ
ಇವಳಿಗೆ ಕೊಡುತ್ತಿರುವಾಗ ನಾದಿನಿ ರೇಖಾ ಇವಳು ತಿಂಡಿ ತಿನಿಸುಗಳ ಬಗ್ಗೆ ನನ್ನ ಜೊತೆಗೆ ಜಗಳ ಮಾಡಿ
ಬೈದಳು. ಮಾವ ಜಗನ್ನಾಥ ಇವರಿಗೆ ಇಲ್ಲ
ಸಲ್ಲದ್ದನ್ನು ಸುಳ್ಳು, ಗೊಳ್ಳು ಹೇಳತೊಡಗಿದಳು. ಮತ್ತು ಜಗಳ ತೆಗೆದು ನನಗೆ
ಕೈಯಿಂದ ಗಲ್ಲಕ್ಕೆ ಮತ್ತು ಕಿವಿಗೆ ಹೊಡೆದಳು. ನಾನು ಆಗ ನನ್ನ ಭಾವನು ರೇಖಾ ಇವಳಿಗೆ ನೀನು
ಬೇರೆಯಾಗಿ ವಾಸಿಸು ಎಂದು ಹೇಳತೊಡಗಿದನು. ಅದೇ ಸಮಯಕ್ಕೆ ನಾದಿನಿ ರೇಖಾ ಇವಳು ನಾವಿಬ್ಬರೂ ಅಡಿಗೆ
ಮನೆಯಲ್ಲಿದ್ದಾಗ ಅಲ್ಲಿಯ ಪ್ಲಾಸ್ಟಿಕ್ ಕ್ಯಾನಿನಲ್ಲಿಯ ಸೀಮೆ ಎಣ್ಣೆಯನ್ನು ನನ್ನ ಮೈಮೇಲೆ
ಒಮ್ಮೇಲೆ ಸುರಿದು ದೇವರ ಹತ್ತಿರ ಗುರುವಾರ ಮಾರ್ಗಶಿಶ ಮಾಸದ ದೀವಿಗೆಯನ್ನು ಹಚ್ಚಿದ್ದನ್ನು
ಕಾಗದಕ್ಕೆ ಬೆಂಕಿ ಹಚ್ಚಿ ನನ್ನ ಮೈಮೇಲಿನ ಸೀರೆಗೆ ಹಚ್ಚಿ ನನಗೆ ಸುಟ್ಟಳು. ನಾನು ಗಡಿಬಿಡಿಯಿಂದ
ಶ್ರಾವಣಿಯನ್ನು ಮಗ್ಗಲಿಗೆ ಸರಿಸಿದೆನು. ನಾನು ಸ್ವತಃ ನನ್ನ ಮೈಮೇಲೆ ನೀರು ಹಾಕಿಕೊಂಡು ಮನೆಯ
ಹೊರಗೆ ಬಂದೆನು. ಆಗ ಸಣ್ಣ ಮೈದುನ ಬಸವೇಶ್ವರ, ನೆರೆಯ ಜನರು
ರೀಕ್ಷಾದಲ್ಲಿ ನನಗೆ ಬಸವೇಶ್ವರ ಆಸ್ಪತ್ರೆಗೆ ಉಪಚಾರ ಕುರಿತು ದಾಖಲಿಸಿದರು. ಬಸವೇಶ್ವರ
ಆಸ್ಪತ್ರೆಯಲ್ಲಿ ನನಗೆ ಮುಲಾಮ ಪಟ್ಟಿ ಹಚ್ಚಿದ ನಂತರ ನನ್ನ ಗಂಡ ಪರಮೇಶ್ವರ ,ಮೈದುನ ಬಸವೇಶ್ವರ , ಅತ್ತೆ ಸುಲೋಚನಾ ಇವರು
ನನಗೆ ಇಲ್ಲಿಗೆ ಕರೆತಂದು ಮರು ದಿವಸ ಬೆಳಿಗ್ಗೆ ಉಪಚಾರಕ್ಕಾಗಿ ದಾಖಲಿಸಿರುವರು. ನನ್ನ ಮೇಲೆ
ಉಪಚಾರ ನಡೆದಿದ್ದು, ನಾನು ಹೇಳುತ್ತಿರುವ ವಿದ್ಯಮಾನ ಸತ್ಯವಾಗಿದೆ.
ನಾದಿನಿ ರೇಖಾ ಇವಳು ನನಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಕ್ಕಾಗಿ ನನ್ನ ಮುಖ, ಕುತ್ತಿಗೆ, ಬೆನ್ನು, ಎದೆ , ಕೈ ಕಾಲು ಇತರೆ ಕಡೆ
ಸುಟ್ಟಿರುತ್ತದೆ. ನಾದಿನಿ ರೇಖಾ ಇವಳು ಮೇಲಿಂದ ಮೇಲೆ ಸಣ್ಣ ಮಕ್ಕಳ ಜಗಳವನ್ನು ದೊಡ್ಡದು ಮಾಡಿ
ಬೈಯುವದು ಮಾಡುತ್ತಾಳೆ. ಮೂರು ದಿವಸಗಳ ಹಿಂದೆ ಸಣ್ಣ ಮಕ್ಕಳ ಜಗಳದ ಕಾರಣ ನನ್ನ ಮಗಳು ತಿಂಡಿ ತಿನಿಸು
ತೆಗೆದುಕೊಂಡಿದ್ದಕ್ಕಾಗಿ ಆಕೆಯು ನನ್ನನ್ನು ಬೈದು ತನ್ನ ಕೈಯಿಂದ ಹೊಡೆದು ಮೈ ಮೇಲೆ ಸೀಮೆ ಎಣ್ಣೆ
ಸುರಿದು ನನಗೆ ಬೆಂಕಿ ಹಚ್ಚಿರುವಳು ಹೀಗಾಗಿ ನನಗೆ ಸುಟ್ಟ ಗಾಯಗಳಾಗಿವೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment