ಕೊಲೆ ಯತ್ನ
ಪ್ರಕರಣ:
ಚೌಕ ಪೊಲೀಸ್ ಠಾಣೆ : ಸತೀಶ
ತಂದೆ ನರಸಿಂಗರಾವ ಪವಾರ ಸಾ: ಅಯ್ಯರ ವಾಡಿ ಕಲಬುರಗಿ
ರವರು ಫಿರ್ಯಾದಿ ಸಲ್ಲಿಸಿದ್ದೇನೆಂದರೆ ತಾನು ಪೆಂಟಿಂಗ ಮತ್ತು ಬಾಳೆ ದಿಂಡು & ಕಬ್ಬಿನ ವ್ಯಾಪಾರ ಮಾಡುತ್ತಿದ್ದು ಸಂಗಮ
ಟಾಕೀಜ ಹತ್ತಿರ ಖಾನಾವಳಿ ಇಟ್ಟುಕೊಂಡಿರುವ
ಅಪ್ಪುಶಾ @ ಬಂಡಯ್ಯಾ
ಸ್ವಾಮಿ ಸಾ: ಮಾಹಾದೇವ ನಗರ ಕಲಬುರಗಿ ಇತನು ನನಗೆ ಪರಿಚಯ ಇದ್ದು ಕಳೆದ 5-6 ತಿಂಗಳ ಹಿಂದೆ ಸಂಗಮ
ಟಾಕೀಜ ಹತ್ತಿರ ಅಪ್ಪುಶಾ @ ಬಂಡಯ್ಯಾ ಸ್ವಾಮಿ ಈತನಬು ನನಗೆ ವಿನಾಃಕಾರಣ ಜಗಳ ತೆಗೆದು ಕೈಯಿಂದ
ಹೊಡೆಬಡೆ ಮಾಡಿ ಗುಪ್ತಗಾಯ ಪಡಿಸಿ ಜೀವ ಭಯಹಾಕಿದ್ದು ನಾನು ಅಂದು ಯಾರಿಗೂ ಹೇಳದೇ ಮತ್ತು ಪೊಲಿಸ್
ಠಾಣೆಯಲ್ಲಿ ದೂರು ಸಹ ಕೊಟ್ಟಿರುವುದಿಲ್ಲಾ ಅಂದಿನಿಂದ ಇತನು ನನಗೆ ಆಗಾಗ್ಗೆ ಹೆದರಿಸುತ್ತಾ ಬಂದಿರುತ್ತಾನೆ.ಹೀಗಿದ್ದು
ದಿನಾಂಕ 06/11/2015 ರಂದು ಸೂಪರ ಮಾರ್ಕೇಟ ಹನುಮಾನ ಗುಡಿಯ ಹತ್ತಿರ ರಸ್ತೆಯ ಬದಿಯಲ್ಲಿ ಬಾಳೆ
ದಿಂಡು ಮತ್ತು ಕಬ್ಬಿನ ವ್ಯಾಪಾರ ಮಾಡುತ್ತಾ ಅಂದಾಜು ರಾತ್ರಿ 7-30 ಗಂಟೆ ಸುಮಾರಿಗೆ ಅಪ್ಪು ಶಾ @ ಬಂಡಯ್ಯಾ ಸ್ವಾಮಿ ಈತನು ದ್ವಿಚಕ್ರ ವಾಹನ
ಮೇಲೆ ಬಂದು ಸ್ವಲ್ಪ ದೂರದಲ್ಲಿ ನಿಂತುಕೊಂಡು ನನಗೆ ನೋಡಿ ಅವಾಚ್ಯ ಶಬ್ದಗಳಿಂದ ಬಯ್ದ ಕಾರಣ ನನಗೇಕೆ
ಈ ರೀತಿ ಬಯ್ಯುತ್ತಿ ಎಂದು ಕೇಳಿದಾಗ ತನ್ನ ಹತ್ತಿರ ಇದ್ದ ಚಾಕು ತೆಗೆದುಕೊಂಡು ಗಾಡಿಯ ಮೇಲಿಂದ
ಇಳಿದು ಬಂದವನೇ ನನ್ನ ಹೊಟ್ಟೆಗೆ ಚಾಕುವನ್ನು ಜೊರಾಗಿ ಚುಚ್ಚಿ ಭಾರಿ ರಕ್ತಗಾಯ ಮಾಡಿದ್ದು ನಾನು
ಚಿರುತ್ತಾ ಕೆಳಗಡೆ ಬಿದ್ದಾಗ ಅಲ್ಲಿಯ ವ್ಯಾಪಾರ ಮಾಡುತ್ತಿದ್ದ ದೈಯಿ ವಡಾ ವ್ಯಾಪಾರಿ ಮತ್ತು ಬಜಿ
ಬಂಡಿ ವ್ಯಾಪಾರದವರು ಮತ್ತು ಅಲ್ಲಿಯೆ ಸ್ವಲ್ಪ ದೂರದಲ್ಲಿದ್ದ ನಮ್ಮ ಸಂಬಂಧಿಯಾಗಿರುವ ರವಿ
ಅನ್ನುವವರು ಓಡಿ ಬರುವುದನ್ನು ನೋಡಿ ಅಪ್ಪು ಶಾ @ ಬಂಡಯ್ಯಾ ಸ್ವಾಮಿ ಇತನು ಓಡಿ ಹೋಗಿದ್ದು
ಅಲ್ಲಿದ್ದ ಎಲ್ಲರೊ ನನಗೆ ಉಪಚಾರ ಕುರಿತು ಆಸ್ಪತ್ರೆಗೆ ಸೇರ್ಪಡೆ ಮಾಡಿದ್ದು. ಕಾರಣ ನನಗೆ ಹಳೆಯ
ವೈಶಮ್ಯದಿಂದಲೇ ಕೊಲೆ ಮಾಡುವ ಉದ್ದೇಶ ಇಟ್ಟುಕೊಂಡು ಚಾಕುವಿನಿಂದ ಹೊಟ್ಟೆಗೆ ಚುಚ್ಚಿ (ತಿವಿದು)
ಮರಣಾಂತೀಕ ಹಲ್ಲೆ ಮಾಡಿದ್ದ ನನಗೆ ಅಪ್ಪುಶಾ @ ಬಂಡಯ್ಯಾ ಸ್ವಾಮಿ ಇತನ ವಿರುದ್ದ ಕಾನೂನು ಕ್ರಮ ಜರಿಗಿಸುವಂತೆ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕೈಕೊಳ್ಳಲಾಗಿದೆ.
ಅಸಹಜ ಸಾವು ಪ್ರಕರಣ:
ನೆಲೋಗಿ ಪೊಲೀಸ್ ಠಾಣೆ : ದಿನಾಂಕ:06/`11/2015 ರಂದು ಶ್ರೀಮತಿ ತಿಪ್ಪವ್ವ ಗಂಡ ಬಾಬು ಹವಾರಳ ಸಾ:ನೆಲೋಗಿ
ಇವರು ಠಾಣೆಗೆ ಹಾಜರಾಗಿ ನನಗೆ ನನ್ನ ತವರು ಮನೆಯವರು 2 ಎಕರೆ ಜಮೀನು ಕೊಟ್ಟಿದ್ದು ಹೊಲ ಸರ್ವೇ
ನಂ:113 ಇದ್ದು ನನ್ನ ಗಂಡ ಹಾಗೂ ಮಕ್ಕಳೊಂದಿಗೆ ನೆಲೋಗಿ ಗ್ರಾಮದಲ್ಲಿಯೇ ವಾಸವಾಗಿರುತ್ತೇವೆ
.ನನಗೆ ಒಂದು ಗಂಡು 2 ಹೆಣ್ಣು ಮಕ್ಕಳಿದ್ದು ನನ್ನ
ಹೆಸರಿನಲ್ಲಿ ಇದ್ದ ಜಮೀನಿನ ಮೇಲೆ ಕೆ.ಜಿ.ಬಿ. ಬ್ಯಾಂಕಿನಲ್ಲಿ
ರೂ 50,000/- ಸಾಲ ಮಾಡಿದ್ದು ಮತ್ತು ಖಾಸಗಿಯಾಗಿ ರೂ 2 ಲಕ್ಷ ಸಾಲ ಮಾಡಿದ್ದು ಮತ್ತು
ಬೇರೆಯವರ ಹೊಲ ಕೂಡಾ ಪಾಲಿಗೆ ಮಾಡಿದ್ದು ಈ ವರ್ಷ ಮಳೆ ಸರಿಯಾಗಿ ಆಗದೆ ಬೇಳೆ ಸರಿಯಾಗಿ ಬಂದಿರುವುದಿಲ್ಲ
ಇದರ ಬಗ್ಗೆ ನನ್ನ ಗಂಡ ಹಲವಾರು ಬಾರಿ ನನ್ನೊಂದಿಗೆ ಹೊಲಕ್ಕಾಗಿ ಮಾಡಿದ
ಸಾಲ ಬ್ಯಾಂಕಿನ ಸಾಲ ಹೇಗೆ ತಿರಿಸುವದು ಅಂತ ಚಿಂತೆ ಮಾಡುತ್ತಾ ಇಂದು
ದಿನಾಂಕ:06/11/2015 ರಂದು ಬೆಳಿಗ್ಗೆ 7-00 ಗಂಟೆ
ಸುಮಾರಿಗೆ ನಾನು ಮನೆಯ ಅಂಗಳದಲ್ಲಿ ಕೆಲಸ ಮಾಡುತ್ತಿರುವಾಗ ನನ್ನ ಗಂಡ ಮನೆಯಲ್ಲಿ ಇದ್ದ ಹತ್ತಿ
ಬೇಳೆಗೆ ಹೊಡೆಯುವ ಕ್ರೀಮಿನಾಷಕ ಔಷದ ಕುಡಿದು ಒದ್ದಾಡುತ್ತಿರುವಾಗ ನಾನು ಮತ್ತು ನಮ್ಮ
ಅಣ್ಣತಮ್ಮಂದಿರರು ಸರಕಾರಿ ಆಸ್ಪತ್ರೆ ನೆಲೋಗಿ ತಗೆದುಕೊಂಡು ಹೋಗುವಾಗ ಹಾದಿಯಲ್ಲಿ ಮೃತಪಟ್ಟಿದ್ದು..
ನನ್ನ ಗಂಡನು ನನ್ನ ಹೆಸರಿನಲ್ಲಿ ಇದ್ದ ಹೊಲದ ಮೇಲೆ ಮಾಡಿದ ಸಾಲ ಮತ್ತು ಊರಲ್ಲಿ ಮಡಿದ ಸಾಲ
ತಿರಿಸದೇ ಆಗದೇ ಇದ್ದುದಕ್ಕೆ ಮನಸ್ಸಿನ ಮೇಲೆ ಪರಣಾಮ ಮಾಡಿಕೊಂಡು ಮನೆಯಲ್ಲಿ ಇಟ್ಟಿದ ಕ್ರೀಮಿ
ನಾಷಕ ಔಷದ ಸೇವನೆ ಮಾಡಿ ಮೃತಪಟ್ಟಿದ್ದು. ಮಾನ್ಯರು ಮುಂದಿನ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು
ಸಾರಾಂಶದ ಮೇಲಿಂಧ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment