ಜೂಜುಕೋರರ ಬಂಧನ:
ಜೇವರ್ಗಿ ಪೊಲೀಸ ಠಾಣೆ : ದಿನಾಂಕ: 04-11-2015 ರಂದು ಜೇವರಗಿ ಪಟ್ಟಣದ ಎ.ಪಿ.ಎಮ್.ಸಿ ಆವರಣದ ಹನುಮಾನ ಗುಡಿಯ
ಹತ್ತಿರ ಕೆಲವು ಜನರು ಇಸ್ಪಿಟ್ ಎಲೆಗಳ ಸಹಾಯದಿಂದ ಅಂದರ್-ಭಾಹರ್ ಜೂಜಾಟ ಆಡುತ್ತಿರುವ ಬಗ್ಗೆ
ಮಾಹಿತಿ ಬಂದ ಮೇರೆಗೆ ಮಾಹಿತಿ ಖಚಿತ ಪಡಿಸಿಕೊಂಡು ಠಾಣೆಯ ಶ್ರೀ. ಲಕ್ಷ್ಮಣ ಬಿರಾದಾರ್ ಎ.ಎಸ್.ಐ ರವರು
ಸಿಬ್ಬಂದಿ ಜನರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಅವರಿಂದ ಜೂಜಾಟಕ್ಕೆ ತೊಡಗಿಸಿದ್ದ 11.430/-
ರೂ ಗಳು ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಜಾಜಾಟದಲ್ಲಿ ತೊಡಗಿದ್ದ 1)
ಬಸಯ್ಯ ತಂದೆ ಸಿದ್ರಾಮಯ್ಯ ಹಿರೆಮಠ ಸಾ:ಹರವಾಳ, 2) ದೇವಿಂದ್ರಪ್ಪ ತಂದೆ ಸಿದ್ದಣ್ಣ ಮಾಲಿ
ಬಿರಾದಾರ್ ಸಾ:ಗುಳ್ಯಾಳ, 3) ಮಹಾಂತಗೌಡ ತಂದೆ ಸಂಗಣ್ಣಗೌಡ ಬಿರಾದಾರ್ ಸಾ:ಚೆನ್ನೂರ, 4) ಶಿವಶಂಕರ ತಂದೆ ಕಲ್ಲಪ್ಪಗೌಡ ಪಾಟೀಲ್ ಸಾ:ಬಸವೇಶ್ವರ
ನಗರ ಜೇವರಗಿ, 5) ದೇವಿಂದ್ರಪ್ಪ ತಂದೆ
ಭೀಮರಾಯ ಸುರಪುರ ಸಾ:ಶಾಂತ ನಗರ ಜೇವರಗಿ, 6) ಸಿದ್ರಾಮಯ್ಯ ತಂದೆ ದೊಡ್ಡಯ್ಯ ಸ್ವಾಮಿ ಸಾ:ವಿಧ್ಯಾ
ನಗರ ಜೇವರಗಿ, 7) ಸಿದ್ರಾಮ ತಂದೆ
ಸುಭಾಶ್ಚಂದ್ರ ಪೊಲೀಸ್ ಪಾಟೀಲ್ ಸಾ: ಟೀಚರ್ ಕಾಲೋನಿ ಜೇವರಗಿ ರವರನ್ನು ದಸ್ತಗೀರ ಮಾಡಿ ಅವರ
ವಿರುದ್ಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಕ್ರಮ ಮರಳು ಸಾಗಿಸುತ್ತಿದ್ದ ಲಾರಿ ಜಪ್ತಿ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ: ದಿನಾಂಕ:- 04/11/2015 ರಂದುಶ್ರೀ ಗೌಸೋದ್ದಿನ್ ತಹಶೀಲ್ದಾರರು, ಅಫಜಲಪೂರ ರವರು ಘತ್ತರಗಾ
ರಸ್ತೆ ಲಕ್ಷ್ಮಿ ಗುಡಿ ಹತ್ತಿರ ಅಕ್ರಮವಾಗಿ ಸಾಗಿಸುತ್ತಿದ್ದ ಮರಳು ಲಾರಿ ಸಂ. ಎಮ್.ಹೆಚ್-10
ಜೆಡ್-2381 ನೇದ್ದನ್ನು ಜಪ್ತಿ ಮಾಡಿ ಕಂದಾಯ ನಿರೀಕ್ಷಕರು ಅಫಜಲಪೂರ ರವರ ಮುಖಾಂತರ ಅಕ್ರಮವಾಗಿ
ಮರಳು ಸಾಗಿಸುತ್ತಿರುವ ಲಾರಿ ಮತ್ತು ಲಾರಿ ಚಾಲಕ ಗುರಪ್ಪ ಇವರನ್ನು ಹಾಜರುಪಡಿಸಿ ನೀಡಿದ
ಪಂಚನಾಮೆಯ ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸ ಇ ತನಿಖೇ ಕೈಕೊಳ್ಳಲಾಗಿದೆ.
No comments:
Post a Comment