ವರದಕ್ಷಿಣಿ
ಕಿರುಕುಳ ಪ್ರಕರಣ:
ಮಹಿಳಾ ಪೊಲೀಸ ಠಾಣೆ : ದಿನಾಂಕ: 16.11.2015 ರಂದು ಶ್ರೀಮತಿ ಜರೀನಾ ಗಂಡ ಸ್ಮಾಯಿಲ್ ಸಾಬ ಖಾದ್ರಿ ಸಾ: ಹರನೂರ ತಾ:ಜೆವರ್ಗಿ ಜಿ: ಕಲಬುರಗಿ ಹಾ:ವ: ಖಾಜಾ
ಕಾಲೋನಿ ಜೇವರ್ಗಿ ಇವರು ಠಾಣೆ ಹಾಜರಾಗಿ ಸುಮಾರು
6 ವರ್ಷಗಳ ಹಿಂದೆ ಹರನೂರ ಗ್ರಾಮದ ಇಸ್ಮಾಯಿಲ್ ಸಾಬ ತಂದೆ ಅಲ್ಲಾವುದ್ದಿನ್ ಸಾಬ ಖಾದ್ರಿ ಇವರ
ಜೊತೆ ಮದುವೆಯಾಗಿದ್ದು
ಮದುವೆ ಕಾಲಕ್ಕೆ ವರದಕ್ಷಿಣೆ
ರೂಪದಲ್ಲಿ 25 ಸಾವಿರ ರೂಪಾಯಿ ನಗದು ಹಣ 3 ತೊಲೆ ಬಂಗಾರ ಮತ್ತು ಗೃಹ ಬಳಕೆಯ ಸಾಮಾನುಗಳು
ಕೊಟ್ಟಿದ್ದು. ನನಗೆ ಒಂದು ಹೆಣ್ಣು, ಒಂದು
ಗಂಡು ಮಗು
ಇದ್ದು. ಮದುವೆ
ಆದಾಗಿನಿಂದ ನನ್ನ ಗಂಡ ಇಸ್ಮಾಯಿಲ್ ಸಾಬನು ನನಗೆ ತವರು ಮನೆಯಿಂದ 2 ಲಕ್ಷ ರೂಪಾಯಿ ಮತ್ತು 2 ತೊಲೆ
ಬಂಗಾರ ತರುವಂತೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಕೊಡುತ್ತಾ ಬಂದಿದ್ದು. ನನ್ನ ನಾದಿನಿ ಫರೀದಾಬೇಗಂ ಅತ್ತೆಯಾದ ಸೋಫನಬಿ ಮಾವ
ಅಲ್ಲಾವುದ್ದೀನ, ನೆಗೆಣಿ ನಸೀಮಾ ಇವರು ಕೂಡ 2 ಲಕ್ಷ ರೂಪಾಯಿ 2 ತೊಲೆ ಬಂಗಾರ ತೆಗೆದುಕೊಂಡು ಬಂದರೆ ಮಾತ್ರ ನಮ್ಮ
ಮನೆಯಲ್ಲಿ ನಿಗೆ ಜಾಗವಿದೆ ಇಲ್ಲವಾದರೆ ನಿನಗೆ ಜೀವ ಸಹಿತ ಉಳಿಸುವದಿಲ್ಲ ಅಂತಾ ಜೀವದ ಬೆದರಿಕೆ
ಹಾಕಿರುತ್ತಾರೆ. ನನ್ನ ಗಂಡ ನನಗೆ ಗೊತ್ತಿಲ್ಲದ ಹಾಗೆ ಮತ್ತೊಂದು ಮದುವೆ ಸಹ ಕೂಡ ಮಾಡಿಕೊಂಡಿರುತ್ತಾನೆ. ದಿ. 26-07-2015 ರಂದು 11 ಗಂಟೆಯ ಸುಮಾರಿಗೆ ನಾನು ನನ್ನ ಎರಡು ಮಕ್ಕಳು ಹಾಗೂ ನನ್ನ ತಂದೆ
ಸಿಕಂದರ ರವರೊಂದಿಗೆ
ನನ್ನ ಗಂಡನ ಮನೆಯಾದ ಹರನೂರ
ಗ್ರಾಮಕ್ಕೆ ಹೋದಾಗ ಆಗ ಮೇಲೆ ನಮೂದಿಸಿದವರರೆಲ್ಲರೂ ಕೂಡಿ ನೀನು ನಮ್ಮ ಮನೆಗೆ ಏಕೆ ಬಂದಿದ್ದಿ ಒಂದು
ವೇಳೆ ನೀನು ನಮ್ಮ ಮನೆಯಲ್ಲಿ ಇರಬೇಕಾದರೆ 2 ಲಕ್ಷ ರೂಪಾಯಿ 2 ತೊಲೆ ಬಂಗಾರ ತಂದರೆ ನಿನಗೆ ನಮ್ಮ
ಇಟ್ಟುಕೊಳ್ಳುತ್ತೇವೆ. ಇಲ್ಲವಾದರೆ ನಿನಗೆ ಖಲಾಸ ಮಾಡುತ್ತೇವೆ ಅಂತಾ ಬೈದು ಮನೆಯಿಂದ ಹೊರಗೆ
ಹಾಕಿರುತ್ತಾರೆ. ನಾನು ಗಂಡನ ಜೊತೆಗೆ ಜೀವನ ಮಾಡಬೇಕು ಅಂತಾ ಅವರು ಕೊಟ್ಟ ಹಿಂಸೆಯನ್ನು
ಸಹಿಸಿಕೊಂಡು ಬಂದಿರುತ್ತೇನೆ ಇಷ್ಟು ದಿವಸ ಕಳೆದರು ಕೂಡ ಅವರು ನನ್ನೊಂದಿಗೆ ಜೀವನ ಮಾಡಲು
ಸಿದ್ದವಿಲ್ಲ ಆದ್ದರಿಂದ ನನಗೆ ಮದುವೆ ಆದಾಗಿನಿಂದ ತವರು ಮನೆಯಿಂದ ವರದಕ್ಷಿಣೆ ಹಣ ಬಂಗಾರ ತೆಗೆದುಕೊಂಡು ಬಾ ಅಂತಾ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಟ್ಟ ನನ್ನ
ಗಂಡ ಹಾಗೂ
ಅವರ ಮನೆಯವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ
ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
No comments:
Post a Comment