ಅಪಘಾತ
ಪ್ರಕರಣಗಳು :
ಯಡ್ರಾಮಿ
ಠಾಣೆ : ದಿನಾಂಕ 12-11-2015 ರಂದು ಶ್ರೀ ಹಯ್ಯಾಳಪ್ಪ ತಂದೆ ಮಾಳಪ್ಪ ಪೂಜಾರಿ ಸಾ|| ಕರಕಿಹಳ್ಳಿ ಇವರು ಬೇಳಿಗ್ಗೆ 8-30 ಗಂಟೆಗೆ ನಮ್ಮೂರಿನ ಬಸ್ ನಿಲ್ದಾಣದ
ಎದುರಗಡೆ ನಾನು ನಮ್ಮ ದೊಡ್ಡಪ್ಪನ ಮಗನಾದ ಶರಣಪ್ಪ, ನಮ್ಮ ಕಾಕಾನ ಮಗನಾದ ನಿಂಗಪ್ಪ ಮತ್ತು ನಮ್ಮ
ಅಣ್ಣ-ತಮ್ಮಕೀಯಾ ದೇವಾನಂದ ಹಿಗೆಲ್ಲರೂ ಮಾತನಾಡುತ್ತಾ ನಿಂತುಕೊಂಡಿದ್ದೆವು. ಆಗ ನಮ್ಮ ತಾಯಿಯಾದ
ಮರಿಲಿಂಗಮ್ಮ ಇವಳು ಬಸ್ ಸ್ಟ್ಯಾಂಡ್ ಹತ್ತಿರ ಇರುವ ಸರಕಾರಿ ನಳಕ್ಕೆ ನೀರು ತೆಗೆದುಕೊಂಡು ಮನೆಗೆ
ಬಸ್ ಸ್ಟ್ಯಾಂಡ್ ಪಕ್ಕದ ರೋಡಿನ ಮೇಲಿಂದ ಹೋಗುತ್ತಿದ್ದಾಗ ಯಡ್ರಾಮಿ ಕಡೆಯಿಂದ ಒಬ್ಬ ಮೋಟರ್ ಸೈಕಲ್
ಸವಾರ, ಅತೀವೇಗ ಮತ್ತು ಅಲಕ್ಷತನದಿಂದ ನೆಡೆಸಿಕೊಂಡು ಬಂದು ನನ್ನ ತಾಯಿಗೆ ಡಿಕ್ಕಿ ಪಡಿಸಿದನು. ಆಗ
ನಾವೆಲ್ಲರೂ ಸ್ಥಳಕ್ಕೆ ಹೋಗುತ್ತಿದ್ದಂತೆ ನನ್ನ ತಾಯಿಯ ಹತ್ತಿರ ಮೋಟರ್ ಸೈಕಲ್ ಸವಾರ ತನ್ನ ಮೊಟರ್
ಸೈಕಲನ್ನು ನಿಲ್ಲಿಸಿ ಎಬ್ಬಿಸುತ್ತಿದ್ದಾಗ ನಾವೆಲ್ಲರೂ ಬರುವದನ್ನು ನೋಡಿ ಮೋಟರ್ ಸೈಕಲ್ ಸವಾರನು
ತನ್ನ ಮೋಟರ್ ಸೈಕಲ್ ಚಾಲು ಮಾಡಿಕೊಂಡು ಓಡಿ ಹೋದನು ಮೋಟರ್ ಸೈಕಲ ನಂಬರ ನೋಡಲಾಗಿ ಹೊಂಡಾ ಶೈನ್ ನಂ
ಕೆ ಎ 32 ಇಹೆಚ್ 5336 ಇತ್ತು ನಂತರ ನಾವೆಲ್ಲರೂ ನನ್ನ ತಾಯಿಗೆ ನೋಡಲಾಗಿ ಅವಳ ಬಲಗಡೆ ಕೀವಿಯ
ಮೇಲ್ಭಾಗದ ತೆಲೆಗೆ ಭಾರಿ ಗುಪ್ತ ಪೆಟ್ಟಾಗಿ ಬಲ ಕೀವಿಯಿಂದ ಭಾರಿ ರಕ್ತ ಸೋರ ಹತ್ತಿತು. ನನ್ನ
ತಾಯಿಯನ್ನು ನಾವೆಲ್ಲರೂ ಉಪಚಾರ ಕುರಿತು ಖಾಸಗಿ ವಾಹನದಲ್ಲಿ ಕುಡಿಸಿಕೊಂಡು ಯಡ್ರಾಮಿಯ ಖಾಸಗಿ
ದವಾಖಾನೆಯಲ್ಲಿ ಉಪಚಾರ ಮಾಡಿಸಿ ನಂತರ ಹೆಚ್ಚಿನ ಉಪಚಾರ ಕುರಿತು ಕಲಬುರ್ಗಿಯ ವಾತ್ಸಲ್ಯ ಲೈಫ್
ಆಸ್ಪತ್ರೆಯಲ್ಲಿ ಹೋಯ್ದು ಸೇರಿಕೆ ಮಾಡಿದೆವು. ನನ್ನ
ತಾಯಿಯು ಉಪಚಾರ ಪಡೆಯುತ್ತಾ ಮದ್ಯಾನ 12-30 ಗಂಟೆಗೆ ಮೃತ ಪಟ್ಟಿರುತ್ತಾಳೆ ಅಂತ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ
ಠಾಣೆ : ದಿನಾಂಕ: 12.11.2015 ರಂದು ಸಾಯಂಕಾಲ ಶ್ರೀ ಬಾಬು
ತಂದೆ ಗುರುಸ್ವಾಮಿ ಕಲಕುಟಗಿ ಸಾ : ನೆಲೋಗಿ ಇವರು ರಮೇಶ ಈತನು ಚಲಾಯಿಸುತ್ತಿದ್ದ ಮೋಟಾರು ಸೈಕಲ್ ನಂ ಕೆ.ಎ32 ಈಈ7833 ನೇದ್ದರ ಮೇಲೆ
ಕುಳಿತುಕೊಂಡು ನಮ್ಮೂರಿನಿಂದ ಜೇವರಗಿ ಕಡೆಗೆ ಹೋಗುವ ಕುರಿತು ಜೇವರಗಿ
ಹೇಲಿಪ್ಯಾಡ್ ಹತ್ತಿರ ಜೇವರಗಿ ವಿಜಯಪುರ ರಾಷ್ಟ್ರೀಯ ಹೆದ್ದಾರಿ ಮೇಲೆ ಬರುತ್ತಿದ್ದಾಗ ಅದೇ
ವೇಳೆಗೆ ಎದುರುಗಡೆಯಿಂದ ಒಂದು ಲಾರಿ ನಂ ಕೆ.ಎ22ಸಿ1826 ನೇದ್ದರ ಚಾಲಕನು ತನ್ನ ಲಾರಿಯನ್ನು ಅತಿ
ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಾವು ಕುಳಿತುಕೊಂಡು ಹೋಗುತ್ತಿದ್ದ
ಮೋಟಾರು ಸೈಕಲ್‌ಗೆ ಎದುರಿನಿಂದ ಡಿಕ್ಕಿ ಪಡಿಸಿದ್ದು ನನಗೆ ಮತ್ತು ರಮೇಶ ಇಬ್ಬರಿಗೆ ಭಾರಿ
ಗಾಯಗೊಳಿಸಿ ತನ್ನ ಲಾರಿಯನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮ
ಹತ್ಯೆ ಮಾಡಿಕೊಂಡ ಪ್ರಕರಣ :
ರೇವೂರ ಠಾಣೆ
: ನನ್ನ ಗಂಡನ ಹೆಸರಿನಲ್ಲಿ
ದೇ.ಗಾಣಗಾಪೂರ ಸಿಮಾಂತರದ ಸರ್ವ ನಂ. ನಲ್ಲಿ 3 ಎಕರೆ 20 ಗುಂಟೆ ಹೊಲವಿದ್ದು ಅದಲ್ಲದೆ ಈ ವರ್ಷ
ದೇವಲ ಗಾಣಗಾಪೂರ ಗ್ರಾಮದ ಮಲ್ಲಿಕಾರ್ಜುನ ಪಾಟೀಲ್ ಇವರ 40 ಎಕರೆ ಜಮೀನನ್ನು 3 ಲಕ್ಷ 50 ಸಾವಿರ
ರೂಪಾಯಿಗಳು ಕೊಟ್ಟು ಹೊಲ ಪಾಲಿಗೆ ಮಾಡಿದ್ದು
ಇರುತ್ತದೆ. ನನ್ನ ಗಂಡನು ಒಕ್ಕಲತನ ಕೆಲಸಕ್ಕಾಗಿ ಅತನೂರ ಗ್ರಾಮದ ಕೃಷ್ಣ ಗ್ರಾಮಿಣ ಬ್ಯಾಂಕ ನಲ್ಲಿ
1 ಲಕ್ಷ 15 ಸಾವಿರ ರೂಪಾಯಿ ಮತ್ತು ವಿ.ಎಸ್.ಎಸ್.ಎ
ಗಾಣಗಾಪೂರದಲ್ಲಿ 1 ಲಕ್ಷ 50 ಸಾವಿರ ರೂಪಾಯಿ ಸಾಲ ಮಾಡಿರುತ್ತಾನೆ ಅಲ್ಲದೆ ಗ್ರಾಮದಲ್ಲಿ
ಕೈಗಡ ಅಂತಾ 3 ಲಕ್ಷ ರೂಪಾಯಿ ಸಾಲ ಮಾಡಿರುತ್ತಾನೆ. ಈ ಸಾಲಿನಲ್ಲಿ ಮಳೆ ಸರಿಯಾಗಿ ಆಗದ ಕಾರಣ ಬೆಳೆ
ಸರಿಯಾಗಿ ಬೆಳೆಯದೆ ಇದ್ದುದ್ದರಿಂದ ನನ್ನ ಗಂಡನು ತಾನು ಮಾಡಿದ ಸಾಲ ಮರುಪಾವತಿಸುವುದು ಹೇಗೆ ಎಂದು
ಚಿಂತೆಗಿಡಾಗಿದ್ದನು ನಾನು ನನ್ನ ಮಕ್ಕಳು ಆಗಾಗ ನನ್ನ ಗಂಡನಿಗೆ ಚಿಂತೆಮಾಡಬೇಡ ಈ ವರ್ಷ ಮಳೆ
ಚನ್ನಾಗಿ ಆಗದೆ ಇರಬಹುದು ಮುಂದಿನ ವರ್ಷ ಚನ್ನಾಗಿ ಆಗಬಹುದು ಆಗ ಸಾಲ ತಿರಿಸಿದರೆ ಆಯಿತು ಅಂತಾ
ದೈರ್ಯ ಹೇಳುತಿದ್ದೆವು ಆದರು ಕುಡಾ ನನ್ನ ಗಂಡನು ದೈರ್ಯ ಕಳೆದುಕೊಂಡಿದ್ದನು.ದಿನಾಂಕ:18/09/2015
ರಂದು ನಾನು ಮತ್ತು ನನ್ನ ಮಕ್ಕಳು ಹೊಲಕ್ಕೆ ಹೊದಾಗ ನನ್ನ ಭಾವನಾದ ಶಂಕರ ತಂದೆ ನಿಂಗಪ್ಪ ಉಮರಗೊಳ
ಇತನು ಗಾಬರಿಯಿಂದ 4:15 ಪಿ.ಎಮ್ ಸುಮಾರಿಗೆ ನಾವು ಇದ್ದ ಹೊಲಕ್ಕೆ ಓಡಿಬಂದು ಗುಂಡಪ್ಪನು ಹತ್ತಿಗೆ
ಹೊಡೆಯುವ ಕ್ರೀಮಿನಾಷಕ ಔಷದಿ ಕುಡಿದ್ದಿದಾನೆ ಅಂತಾ ಹೇಳಿದಾಗ ನಾವು ಎಲ್ಲರು ಗಾಬರಿಯಿಂದ ಮನೆಗೆ
ಓಡಿ ಬಂದು ನೋಡಲಾಗಿ ನನ್ನ ಗಂಡನು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯಲ್ಲಿ ಹತ್ತಿ ಬೆಳೆಗೆ
ಹೊಡೆಯಲು ತಂದು ಇಟ್ಟಿದ್ದ ಮೋನೋ ಕ್ರೋಟಫಾಸ ಕ್ರೀಮಿನಾಷಕ ಔಷದಿ ಕುಡಿದಿರುತ್ತಾನೆ ಆಗ ಸರಿಯಾದ
ಸಮಯಕ್ಕೆ ನನ್ನ ಭಾವ ನಮ್ಮ ಮನೆಕಡೆ ಬಂಧಾಗ ನನ್ನ ಗಂಡನು ಔಷಧಿ ಕುಡಿದಿದ್ದು ನೋಡಿರುತ್ತಾನೆ ಅಂತಾ
ಗೊತ್ತಾಯಿತು ಆಗ ನನ್ನ ಗಂಡನಿಗೆ ವಿಚಾರಿಸಲಾಗಿ ನನ್ನ ಗಂಡನು ನನ್ನ ಕಥೆ ಇಲ್ಲಗೆ ಮುಗಿಯಿತು ನಾನು
ಮಾಡಿದ ಸಾಲ ನನಗೆ ತಿರಿಸಲು ಆಗುವುದಿಲ್ಲ ನಾನು ನನಗಾದ ಸಾಲದ ಬಾದೆಯಿಂದ ಮನೆಯಲ್ಲಿ ಯಾರು ಇಲ್ಲದ
ಸಮಯ ನೋಡಿ 4 ಗಂಟೆಯ ಸುಮಾರಿಗೆ ಹತ್ತಿಗೆ ಹೊಡೆಯುವ ಔಷದಿ ಕುಡಿದಿರುತ್ತೆನೆ. ಅಂತಾ ಹೇಳಿ
ನೆಲಕ್ಕೆ ಉರಳಿದನು ಆಗ ನಾನು ಮತ್ತು ನನ್ನ ಭಾವ ಕುಡಿಕೊಂಡು ಶಂಕರ ಹಾಗೂ ನನ್ನ ಮಕ್ಕಳು
ಕುಡಿಕೊಂಡು ಕಲಬುರಗಿಯ ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೆವೆ.ನಂತರ ಅಲ್ಲಿಂದ
ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೆವೆ ಆದರೆ ನನ್ನ ಗಂಡನು ಉಪಚಾರ ಫಲಕಾರಿಯಾಗದೆ
ನಿನ್ನೆ ದಿನಾಂಕ:11/11/2015 ರಂದು ರಾತ್ರಿ 8 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾನೆ. ಅಂತಾ ಶ್ರೀಮತಿ ಸಾಬಮ್ಮ ಗಂಡ
ಗುಂಡಪ್ಪ ಉಮರಗೋಳ ಸಾ:ಇಂಗಳಗಿ(ಬಿ) ಗ್ರಾಮ ತಾ:ಅಫಜಲಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ
ಪ್ರಕಣಗಳು :
ಅಫಜಲಪೂರ
ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ರಾಮಣ್ಣ ರಾಮನಳ್ಳಿ
ಸಾ||ನಂದರಗಾ ಇವರ ಹೊಲದ ಹತ್ತಿರ ನಮ್ಮ ಗ್ರಾಮದ ನಿಂಗಪ್ಪ ತಂದೆ ಪದ್ಮಣ್ಣ ಹಿಕ್ಕಲಗುಂತಿ ಇವರ ಹೊಲ
ಇರುತ್ತದೆ ನಾವು ನಮ್ಮ ಹೊಲಕ್ಕೆ ಹೋಗಲು ನಿಂಗಪ್ಪ
ಇವರ ಹೊಲದಲ್ಲಿನ ದಾರಿ ಇರುತ್ತದೆ.ನಿಂಗಪ್ಪ ಇವರು ನಮ್ಮ ಜೋತೆ ದಾರಿ ಸಂಬಂಧ ಹಲವು ಬಾರಿ ಬಾಯಿ
ಮಾತಿನಿಂದ ಜಗಳ ಮಾಡಿರುತ್ತಾರೆ. ದಿನಾಂಕ
12/11/2015 ರಂದು ಬೆಳಿಗ್ಗೆ 9.30 ಗಂಟೆ ಸುಮಾರಿಗೆ ನಾನು ನನ್ನ ಮಗ ಶಿವಲಿಂಗಪ್ಪ ಇಬ್ಬರು ನಮ್ಮ
ಹೊಲದಲಿದ್ದಾಗ ನನ್ನ ಹಿರಿಯ ಮಗನಾದ ಗುಂಡೇರಾವ ಇತನು ಹೊಲಕ್ಕೆ ಬಂದು ನನಗೆ ತಿಳಿಸಿದ್ದೆನೆಂದರೆ
ನಾನು ನಿಂಗಪ್ಪ ಹಿಕ್ಕಲಗುಂತಿ ರವರ ಹೊಲದಲ್ಲಿನಿಂದ ಬರುತಿದ್ದಾಗ ನಿಂಗಪ್ಪ ಇತನು ನನಗೆ ಏ ಗುಂಡು
ಇಲ್ಲಿ ದಾರಿ ಇಲ್ಲ ಅಂತ ನಿಮ್ಗ ಬಾಳಸಲ ಹೇಳಿದ್ದು ಮತ್ತ ಇಲ್ಲಿಂದೆ ಹೋಗ್ತಿರಿ ಇನ್ನೊಮ್ಮೆ ಇಲ್ಲಿ
ಬರಬ್ಯಾಡ್ರಿ ಅಂತ ಅಂದಿರುತ್ತಾನೆ ಅಂತ ನನ್ನ ಮಗ ನನಗೆ ತಿಳಿಸಿದ್ದು ನಂತರ ನಾನು ನನ್ನ ಮಕ್ಕಳಾದ
ಗುಂಡೆರಾವ, ಶಿವಲಿಂಗ ಮೂರು ಜನರು ಕೂಡಿ ನಿಂಗಪ್ಪ
ಇವರಿಗೆ ಕೇಳಲು ಅವರ ಹೊಲದ ಹತ್ತಿರ ಹೋಗುತಿದ್ದಾಗ ನಿಂಗಪ್ಪ ಹಾಗೂ ಅವರ ತಮ್ಮ ಬಸವರಾಜ ಮತ್ತು
ಕಲ್ಲಪ್ಪ ತಂದೆ ಮಡೆಪ್ಪ ಕಲ್ಲೂರ ಹಾಗೂ ಅವರ ಸಂಧಿಕಲ್ಲಿ ಇನ್ನೊಬ್ಬ ಇದ್ದು ಅವನ ಹೆಸರು ನನಗೆ
ಗೊತ್ತಿರುವುದಿಲ್ಲ ಇವರು ನಮಗೆ ನೋಡಿ ಅವರ ಬಾಂದರಿಗೆ ನಿಂತು ಏರು ದ್ವನಿಯಲ್ಲಿ ಬೈಯುವದನ್ನು ಕೇಳಿ ನಮ್ಮ ಬಾಜು ಹೊಲದವರಾದ ಸರ್ದಾರ
ತಂದೆ ಜಿಲಾನಿ ಜಾಗಿರದಾರ ಹಾಗೂ ತಾರಪಾಷಾ ತಂದೆ ಜೈರೊದ್ದೀನ್ ಜಾಗಿರದಾರ ಇವರು ಓಡಿ ಬಂದಿದ್ದು ನಾನು ನನ್ನ ಮಕ್ಕಳು ಸದರಿಯವರ
ಹತ್ತಿರ ಹೋಗಿ ನಿಂಗಪ್ಪ ಇವರಿಗೆ ನಾನು ಯಾಕ್ರಿ ನಾವು ದಾರಿ ಹಿಡಿದು ನಮ್ಮ ಹೊಲಕ್ಕ ಬಂದ್ರಾ ನಮ್ಮ
ಮಗನಿಗಿ ಬೈತಿರಿ ಅಂತ ಕೇಳುತಿದ್ದಾಗ ನಿಂಗಪ್ಪಾ ಇತನು ರಂಡಿ ಮಗನೆ ನಮ್ಮ ಹೊಲದಲಿಂದ ಹೋಗಿ ನಮ್ಗೆ
ಕೇಳುಕ್ಕ ಬರ್ತಿರಿ ರಂಡಿ ಮಕ್ಕಳ್ಯಾ ಅಂತ ಬೈಯುತಿದ್ದಾಗ ಸರ್ದಾರ ಹಾಗೂ ತಾರಪಾಷಾ ಇವರು
ಸದರಿಯವರಿಗೆ ಯಾಕ್ರಿ ಸುಮ್ನೆ ಜಗಳ ಮಾಡ್ತಿರಿ ಅಂತ ಹೇಳುತಿದ್ದಾಗ ಬಸವರಾಜ ಇತನು ಈ ರಂಡಿ ಮಗ
ಮಲ್ಯಾಂದು ಸೊಕ್ಕ ಬಾಳ ಅದಾ ಅಂತ ಅನ್ನುತಿದ್ದಾಗ ನಿಂಗಪ್ಪ ಇತನು ಒಂದು ಬಡಿಗೆಯಿಂದ ನನ್ನ ಮಗನಾದ
ಶಿವಲಿಂಗಪ್ಪ ಇತನ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದ ಮತ್ತೆ ಅದೇ ಬಡಿಗೆಯನ್ನು ಕಲ್ಲಪ್ಪನು
ತಗೆದುಕೊಂಡು ನನ್ನ ಏಡಗೈ ಬೆರಳುಗಳಿಗೆ ಹಡೆದು
ರಕ್ತಗಾಯ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀಮತಿ ಯಲ್ಲಮ್ಮ ಗಂಡ ಕಲ್ಲಪ್ಪ ಕಲ್ಲೂರ ಸಾ||ನಂದರಗಾ ಇವರು ನನಗೆ ನಮ್ಮ ಗ್ರಾಮದಲ್ಲಿ ಮದುವೆ
ಮಾಡಿಕೊಟ್ಟಿದ್ದು ನಮ್ಮ ತವರು ಮನೆಯವರೆಲ್ಲರು ಅವರ ಹೊಲದಲ್ಲಿನ ಮನೆಯಲ್ಲಿಯೇ ಇರುತ್ತಾರೆ ನಾನು
ನನ್ನ ಗಂಡ ನಮ್ಮ ಮಕ್ಕಳೊಂದಿಗೆ ದಿಪಾವಳಿ ಹಬ್ಬ
ಇದ್ದ ನಿಮಿತ್ಯ ನಮ್ಮ ತವರುಮನೆಗೆ ಬಂದಿರುತ್ತೇವೆ.ನಮ್ಮ ಗ್ರಾಮದ ಮಲ್ಲಿಕಾರ್ಜುನ ತಂದೆ ರಾಮಣ್ಣ
ರಾಮನಳ್ಳಿ ಹಾಗೂ ನಮ್ಮ ತಂದೆಯವರಿಗೂ ಹೊಲದ ದಾರಿ ಸಂಬಂದ ಅವಾಗ ಅವಾಗ ಬಾಯಿ ಮಾತಿನಿಂದ
ಜಗಳವಾಗಿದ್ದು ಇರುತ್ತದೆ.ಇಂದು ದಿನಾಂಕ 12/11/2015 ರಂದು ಬೆಳಿಗ್ಗೆ 9.30 ಗಂಟೆ ಸುಮಾರಿಗೆ
ನಾನು ನನ್ನ ಗಂಡ ಹಾಗೂ ನಮ್ಮ ಅಣ್ಣನಾದ ನಿಂಗಪ್ಪ ನಮ್ಮ ತಮ್ಮನಾದ ಬಸವರಾಜ ನಮ್ಮತಾಯಿ ಹಾಗೂ ನಮ್ಮ
ಆಯಿ ಎಲ್ಲರು ನಮ್ಮ ಹೊಲದಲ್ಲಿನ ಮನೆಯಲಿದ್ದಾಗ ನಮ್ಮ ಗ್ರಾಮದ ಗುಂಡೇರಾವ ತಂದೆ ಮಲ್ಲಿಕಾರ್ಜುನ
ರಾಮನಳ್ಳಿ ಇತನು ಹೊಲದಲ್ಲಿನಿಂದ ಹೋಗುತಿದ್ದಾಗ ನಮ್ಮ ಅಣ್ಣನಾದ ನಿಂಗಪ್ಪ ಇತನು ಸದರಿ ಗುಂಡೇರಾವ
ಇತನಿಗೆ ಏ ಗಂಡು ಇಲ್ಲಿ ದಾರಿ ಇಲ್ಲ ಅಂತ ನಿಮ್ಗ ಬಾಳಸಲ ಹೇಳಿದ್ದು ಮತ್ತ ಇಲ್ಲಿಂದೆ ಹೋಗ್ತಿರಿ
ಇನ್ನೊಮ್ಮೆ ಇಲ್ಲಿ ಬರಬ್ಯಾಡ್ರಿ ಅಂತ ಹೇಳಿದ್ದರು ಗುಂಡೆರಾವ ಇತನು ಸುಮ್ಮನೆ ಹೋಗಿರುತ್ತಾನೆ.
ಸಲ್ಪ ಸಮಯದ ನಂತರ ಯಾರೋ ಚಿರಾಡವದು ಹೇಳಿ ನಾವು ಮನೆಯಿಂದ ಹೊರಗೆ ಬಂದು ನಮ್ಮ ಬಾಂದರಿಗೆ ನಿಂತು
ನೋಡುತಿದ್ದಾಗ ನಮ್ಮ ಗ್ರಾಮದ ಮಲ್ಲಿಕಾರ್ಜುನ ತಂದೆ ರಾಮಣ್ಣ ರಾಮನಳ್ಳಿ ಹಾಗೂ ಅವರ ಮಕ್ಕಳಾದ
ಗುಂಡೇರಾವ ಹಾಗೂ ಶಿವಲಿಂಗಪ್ಪ ಮೂರು ಜನರು ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ನಮ್ಮ ಕಡೆಗೆ
ಬರುತಿದ್ದಾಗ ಸದರಿಯವರು ಏರು ದ್ವನಿಯಲ್ಲಿ
ಬೈಯುವದನ್ನು ಕೇಳಿ ನಮ್ಮ ಬಾಜು ಹೊಲದವರಾದ ಕನ್ನಪ್ಪ ತಂದೆ ಸಿದ್ದಭೀರ ಗೌರ ಹಾಗೂ
ತಾರಪಾಷಾ ತಂದೆ ಜೈರೊದ್ದೀನ್ ಜಾಗಿರದಾರ ಇವರು
ಓಡಿ ಬಂದಿದ್ದು ಮಲ್ಲಿಕಾರ್ಜುನ ಹಾಗೂ ಅವರ ಮಕ್ಕಳು ನಮ್ಮ ಹತ್ತಿರ ಬಂದು ಮಲ್ಲಿಕಾರ್ಜುನ ಇತನು
ನಮ್ಮ ಅಣ್ಣನಿಗೆ ಏನೋ ರಂಡಿ ಮನಗೆ ನಿಮ್ಮ ಹೊಲದದ ದಾರಿಯಲ್ಲಿ ಬಂದ್ರೆ ನನ್ನ ಮಗನಿಗೆ ಬೈತಿ ಬೋಸಡಿಕೆ ಅಂತ ಅಂದು ಬೈಯುತಿದ್ದಾಗ ನಾವೇಲ್ಲರು ಸದರಿಯವರಿಗೆ
ಯಾಕ್ರಿ ಸುಮ್ನೆ ಜಗಳ ಮಾಡ್ತಿರಿ ಅಂತ ಹೇಳುತಿದ್ದಾಗ ಗುಂಡೇರಾವ ಇತನು ಈ ರಂಡಿ ಮಗ ನಿಂಗ್ಯಾಂದು
ಸೊಕ್ಕ ಬಾಳ ಅದಾ ಅಂತ ಅಂದು ತನ್ನ ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಕಬ್ಬು ಕಡಿಯವ ಕೊಯ್ತಾ ಇಂದ
ನಮ್ಮ ಅಣ್ಣನ ತಗೆಗೆ ಹೊಡೆದು ರಕ್ತಗಾಯ ಪಡಿಸಿದ ಮತ್ತೆ ಅದೇ ಕೊಯ್ತಾಯಿಂದ ನಮ್ಮ ತಮ್ಮನಾದ ಬಸವರಾಜ
ಇತನ ಹೆಡಕಿಗೆ ಹೊಡೆದು ರಕ್ತಗಾಯ ಪಡಿಸಿದ ಆಗ ನಾವೇಲ್ಲರು ನಮ್ಮ ಅಣ್ಣ ಹಾಗೂ ನಮ್ಮ ತಮ್ಮನಿಗೆ
ಹೊಡೆಯುವದನ್ನು ಬಿಡಿಸುತ್ತಿದ್ದಾಗ ಮಲ್ಲಿಕಾರ್ಜುನ ಹಾಗೂ ಶಿವಲಿಂಗಪ್ಪ ಇವರು ಕೇಳದೆ ತಮ್ಮ
ಕಾಲಿನಿಂದ ಕೈಯಿಂದ ನಮ್ಮ ಅಣ್ಣನಿಗೆ ಹಾಗೂ ತಮ್ಮನಿಗೆ ಒದೆಯುವದು ಹೊಡೆಯುವದು ಮಾಡುತಿದ್ದು
ನಾವೇಲ್ಲರು ಸದರಿಯವರಿಗೆ ಬಿಡಿಸಿ ಕಳುಯಿಸುತಿದ್ದಾಗ ಸದರಿ ಮಲ್ಲಿಕಾರ್ಜುನ ಹಾಗೂ ಅವರ
ಮಕ್ಕಳಿಬ್ಬರು ನಮ್ಮ ಅಣ್ಣನಿಗೆ ಹಾಗೂ ತಮ್ಮನಿಗೆ ರಂಡಿ ಮಕ್ಕಳೆ ಇನ್ನೊಮ್ಮೆ ನಮ್ಮ ತಂಟೆಗೆ
ಬಂದ್ರಿ ನಿಮ್ಗ ಜೀವಾ ಹೊಡಿತಿವಿ ಅಂತ ಅಂತ ಅಂದು
ಅಲ್ಲಿಂದ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಇಸ್ಪೀಟ ಝುಜಾಟದಲ್ಲಿ ನಿರತವರ ಬಂಧನ :
ಚೌಕ ಠಾಣೆ : ದಿನಾಂಕ 13/11/2015 ರಂದು ಚೌಕ ಠಾಣಾ ವ್ಯಾಪ್ತಿಯ ಸಿಟಿ ಬಸ್ಸ್ ನಿಲ್ದಾಣ ಎದುರಗಡೆ ಇರುವ ದೀಪಂ ಪೈನಾನ್ಸ್ ಎದುರುಗಡೆ ಇರುವ ಸಾರ್ವಜನಿಕ ರಸ್ತೆಯ ದೀಪ ದಿಪದ ಪ್ರಜ್ವಲ ಬೆಳಕಿನ ಖುಲ್ಲಾ ಸ್ಥಳದಲ್ಲಿ ಕೆಲವು ಜನರು
ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಹಾರ ಎಂಬ ಧೈವಲೀಲೆ (ನಶೀಬಿನ) ಇಸ್ಪೇಟ ಜೂಜಾಟ ಆಡುತ್ತಿದ್ದಾರೆ
ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಐ. ಚೌಕ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿಯಂತೆ ಸಿಟಿ ಬಸ್ಸ್ ನಿಲ್ದಾಣ ಹತ್ತಿರ ಹೋಗಿ
ದೀಪಮ್ ಫೈನಾಸ್ಸ ಹತ್ತಿರ ಮರೆಯಲ್ಲಿ ನಿಂತು ನೋಡಲು ಬಯಲು ಜಾಗೆಯಲ್ಲಿ ಸಾರ್ವಜನಿಕ ಸ್ಥಳದ
ಪ್ರಜ್ವಲವಾದ ಲೈಟಿನ ಬೆಳಕಿನಲ್ಲಿ ಸುಮಾರು 20-25
ಜನರು ಗುಂಪಾಗಿ ಕುಳಿತ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಇಸ್ಟೇಟ ಜೂಜಾಟ
ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಒಟ್ಟು 20 ಜನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ
ಆಸಾಮಿಗಳನ್ನು ಹಿಡಿದುಕೊಂಡು ವಿಚಾರಿಸಲು 1] ಗುಂಡಪ್ಪತಂದೆ ಹಣಮಂತರಾವ
ಹಂಗರಗಿ ಸಾ: ಲಾಲಗಿರಿ ಕ್ರಾಸ್ ಕಲಬುರಗಿ 2] ಮರುಳಾರಾದ್ಯಾ ತಂದೆ ಶಿವಶಂಕರಯ್ಯ ಮಠಪತಿ ಸಾ: ಐಯ್ಯರವಾಡಿ ಕಲಬುರಗಿ 3] ರವಿ ತಂದೆ ಚನ್ನಮಲ್ಲಪ್ಪ ಜೋಗಾ ಸಾ; ಸಂಗಾವಿ ತಾ: ಸೇಡಂ ಜಿ:
ಕಲಬುರಗಿ 4] ಪ್ರಕಾಶ ತಂದೆ ಬಸವರಾಜ ಜೋಗಾ ಸಾ; ಸಂಗಾವಿ ತಾ: ಸೇಡಂ ಜಿ:ಕಲಬುರಗಿ 5] ರವಿಂದ್ರ ತಂದೆ ಶಿವರಾಯ ಕಲ್ಲಾ ಸಾ: ಲಕ್ಷ್ಮಿ ಗುಡಿ
ಹತ್ತಿರ ಶಹಾಬಜಾರ ಕಲಬುರಗಿ 6] ಮಲ್ಕಪ್ಪ ತಂದೆ ಗುರುಲಿಂಗಪ್ಪಾ ಬಿರಾದಾರ ಸಾ: ಬಂಬೂ ಬಜಾರ ಕ್ರಾಸ
ಕಲಬುರಗಿ 7] ಶರಣಬಸಪ್ಪ ತಂದೆ ಗೌಡಪ್ಪ ಬಿರದಾರ ಸಾ: ಸಂಗಾವಿ ತಾ: ಸೇಡಂ ಜಿ: ಕಲಬುರಗಿ 8] ರಾಜು
ತಂದೆ ಮಲ್ಲಿನಾಥ ಹಿರೇಮಠ ಸಾ: ಸ್ಷೇಷನ ಏರಿಯಾ ಯಾದಗಿರಿ , ಯಾದಗಿರಿ ಜಿಲ್ಲೆ 9] ವಿಶ್ವರಾಧ್ಯಾ ತಂದೆ ವೀರಯ್ಯ
ಹಿರೇಮಠ ಸಾ: ಶಹಾಬಾದ ತಾ: ಚಿತ್ತಾಪೂರ, ಜಿ: ಕಲಬುರಗಿ 10] ಮಲ್ಲಿಕಾರ್ಜುನ ತಂದೆ ಚಂದ್ರಕಾಂತ ಜೋಕೆ ಸಾ: ಬ್ರಹ್ಮಪೂರ ಕಲಬುರಗಿ 11] ಬಸವರಾಜ ತಂದೆ
ಸದಾಶಿವ ದೇವರಮನೆ ಸಾ: ಬ್ರಹ್ಮಪೂರ ಕಲಬುರಗಿ ಅಂತಾ ತಿಳಿಸಿದ್ದು
ಸದರಿಯವನ 12] ಮಲ್ಲಿಕಾರ್ಜುನ ತಂದೆ ಪಂಚಯ್ಯ ಹಿರೇಮಠ ಸಾ: ಬೆಳಗುಂಪ್ಪಾ ತಾ: ಚಿತ್ತಾಪೂರ ಜಿ:
ಕಲಬುರಗಿ 13] ಸಂಗಮೇಶ ತಂದೆ ಶರಣಪ್ಪ ಹುಂಡಾ ಸಾ: ಬಸವೇಶ್ವರ ಕಾಲೋನಿ ಕಲಬುರಗಿ 14] ಸಂತೋಷ ತಂದೆ ಬಸವ ರಾಜ ಸರಗಡಿ ಸಾ; ಬಸವೇಶ್ವರ ಕಾಲೋನಿ ಕಲಬುರಗಿ 15] ಸಂಗಣ್ಣ ತಂದೆ ಬಸವರಾಜ ಜೋಗಾ ಸಾ: ಸಂಗಾವಿ ತಾ: ಸೇಡಂ, ಜಿ: ಕಲಬುರಗಿ 16] ಸಂತೋಷ ತಂದೆ ನರಸಯ್ಯ ಚಿತ್ತಕೋಟೆ ಸಾ: ಸೂಗುರ ತಾ: ಚಿತ್ತಾಪೂರ ಜಿ: ಕಲಬುರಗಿ 17] ಅಣ್ಣಪ್ಪ ತಂದೆ
ಈರಣ್ಣಾ ವಾಲಿಕರ ಸಾ: ಸಂಗವಿ ತಾ: ಸೇಡಂ ಜಿ: ಕಲಬುರಗಿ 18] ಪೀರಪ್ಪ ತಂದೆ ಸಿದ್ದರಾಮಪ್ಪ ಹೂಗಣ್ಣನವರ, ಸಾ: ಶಿವಾಜಿನಗರ ಕಲಬುರಗಿ 19] ಮದನಗೌಡಾ ತಂದೆ ಬಸವಂತರಾಯ ಪಾಟೀಲ ಸಾ: ಆದರ್ಶ ನಗರ ಕಲಬುರಗಿ 20] ಶ್ರೀಮಂತ ತಂದೆ ಗುಂಡಪ್ಪ ಹಿಪ್ಪರಗಿ ಸಾ; ಶಹಬಜಾರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಒಟ್ಟು ಹಣ 54650 ರೂ. ಮತ್ತು 52 ಇಸ್ಪೇಟ
ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಾಲಾಗಿದೆ.
ಚೌಕ ಠಾಣೆ : ದಿನಾಂಕ 13.11.2015 ರಂದು ಮದ್ಯ ರಾತ್ರಿ ಠಾಣಾ ವ್ಯಾಪ್ತಿಯ ಅವಿನಾಶ ಪೆಟ್ರೋಲ್ ಬಂಕ ಹಿಂದುಗಡೆ
ಇರುವ ರೇವಣಸಿದ್ದೇಶ್ವರ ಅಂಗಡಿಯ
ಎದುರಗಡೆ ಇರುವ ಸಾರ್ವಜನಿಕ ಖುಲ್ಲಾ ಸ್ಥಳದ ಬೀದಿ ಲೈಟಿನ ಕಂಬದ ಕೆಳಗೆ ಕೆಲವು ಜನರು ಹಣವನ್ನು
ಪಣಕ್ಕೆ ಹಚ್ಚಿ ಅಂದರ ಬಹಾರ ಎಂಬ ಧೈವಲೀಲೆ (ನಶೀಬಿನ) ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ
ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಐ. ವಛಕ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿಯಂತೆ
ಅವಿನಾಶ ಪೆಟ್ರೋಲ್ ಬಂಕ ಹತ್ತಿರ ಹೋಗಿ ಅವಿನಾಶ ಪೆಟ್ರೋಲ್ ಬಂಕ ಹತ್ತಿರದ ರೇವಣಶಿದ್ದೇಶ್ವರ
ಅಂಗಡಿ ಮರೆಯಲ್ಲಿ ನಿಂತು ನೋಡಲು ಬೀದಿ ಲೈಟಿನ ಕಂಬದ ಪ್ರಜ್ವಲವಾದ ಲೈಟಿನ ಬೆಳಿಕಿನಲ್ಲಿ
ಸಾರ್ವಜನಿಕ ಸ್ಥಳದಲ್ಲಿ ಸುಮಾರು 7-8 ಜನರು
ಗುಂಪಾಗಿ ಕುಳಿತ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಇಸ್ಟೇಟ ಜೂಜಾಟ ಆಡುತ್ತಿರುವದನ್ನು
ಖಚಿತ ಪಡಿಸಿಕೊಂಡು ದಾಳಿ ಮಾಡಿ 7 ಜನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ ಆಸಾಮಿಗಳನ್ನು
ಹಿಡಿದುಕೊಂಡು ಒಬ್ಬೊಬ್ಬರಂತೆ ಅವರ ಹೆಸರು ವಿಳಾಸ ವಿಚಾರಿಸಲು 1) ನಾಗರಾಜ ತಂದೆ ರೇವಣಸಿದ್ದಪ್ಪಾ
ಹೊಸಮನಿ ಸಾಃ ರಾಮ ನಗರ ಕಲಬುರಗಿ 2) ಮಲ್ಲು ತಂದೆ ಹೊನಪ್ಪ ಕನವಳ್ಳಿ ಸಾಃ ರಾಮ ನಗರ ಕಲಬುರಗಿ 3)
ಧರ್ಮರಾಜ ತಂದೆ ಶಿವಕುಮಾರ ಹೇರೂರ ಸಾಃ ರಾಮ ನಗರ ಕಲಬುರಗಿ 4) ನಾಗರಾಜ ತಂದೆ ಬಸವಂತರಾವ್ ರಾಮನೂರ ಸಾಃ ರಾಮನಗರ ಕಲಬುರಗಿ 5) ನಾಗರಾಜ ತಂದೆ ಅಶೋಕ
ಭೈರಾನ್ ಸಾಃ ರಾಮನಗರ ಕಲಬುರಗಿ 6) ಗುಂಡು ತಂದೆ ಕರಿಬಸಪ್ಪ ಶೇರಿ ಸಾಃ ಶಿವಾಜಿ ನಗರ ಕಲಬುರಗಿ 7)
ನಾಗರಾಜ ತಂದೆ ಶಂಕರ ಬಿರಾದಾರ ಸಾಃ ರಾಮ ನಗರ ಕಲಬುರಗಿ ಅಂತ ತಿಳಿಸಿದ್ದು ಸದರಿಯವರಿಂದ
ಜೂಜಾಟಕ್ಕೆ ಬಳಸಿದ ನಗದು ಹಣ 19350 = 00 ರೂ. ಮತ್ತು 52 ಇಸ್ಪೇಟ ಎಲೆಗಳನ್ನು ವಶಪಡಿಸಿಕೊಂಡು
ಸದರಿಯವರೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
No comments:
Post a Comment