ಇಸ್ಪೀಟ
ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ
ಠಾಣೆ : ದಿನಾಂಕ 31-10-2015 ರಂದು ಮಲ್ಲಾಬಾದ ಸೀಮಾಂತರದಲ್ಲಿರುವ ಸಂತೋಷ ರಂಗದಾಳೆ ರವರ ಹೊಲದ ಹತ್ತಿರ ಕ್ಯಾನಲ್ ರೋಡಿನ ಬಾಜು ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ
ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ
ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಸುರೇಶ ಬೆಂಡೆಗುಂಬಳ ಪಿಎಸ್ ಐ ಅಫಜಲಪೂರ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಬಂದ
ಸ್ಥಳಕ್ಕೆ ಹೋಗಿ, ಮರೆಯಾಗಿ ನಿಂತು ನೊಡಲು ಮಲ್ಲಾಬಾದ ಸೀಮಾಂತರದಲ್ಲಿ ಬರುವ ಸಂತೋಷ ರಂಗದಾಳೆ ರವರ ಹೊಲದ
ಹತ್ತಿರ ಕ್ಯಾನಲ್ ರೋಡಿನ ಬಾಜು ಖುಲ್ಲಾ ಜಾಗದಲ್ಲಿ 6 ಜನರು ದುಂಡಾಗಿ ಕುಳಿತುಕೊಂಡು ಮೋಬೈಲ
ಬ್ಯಾಟರಿ ಬೆಳಕಿನಲ್ಲಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದು ಖಚಿತ
ಪಡಿಸಿಕೊಂಡು ದಾಳಿ ಮಾಡಿ ಐದು ಜನರನ್ನು ಹಿಡಿದಿದ್ದು ಒಬ್ಬನು ಓಡಿ ಹೋಗಿರುತ್ತಾನೆ. ಸದರಿ
ಹಿಡಿದವರು ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ
ಮಾಡಲಾಗಿ 1) ವಿಜಯಕುಮಾರ ತಂದೆ ಹಣಮಂತ ಬಗಲಿ 2) ಶರಣಬಸಪ್ಪ ತಂದೆ ಚಂದ್ರಕಾಂತ ಗಾಡಿ 3) ಶಿವಾನಂದ
ತಂದೆ ಮಲ್ಲೇಶಪ್ಪ ಬಬಲೇಶ್ವರ 4) ಉಮಾಕಾಂತ ತಂದೆ ನಾಮದೇವ ಸೂರ್ಯವಂಶಿ 5) ಹಣಮಂತ ತಂದೆ
ಬೆಳ್ಳೆಪ್ಪ ಪೂಜಾರಿ ಸಾ|| ಎಲ್ಲರು ಮಾತೋಳಿ ಅಂತಾ ತಿಳಿಸಿದ್ದು, ಓಡಿ ಹೋದ ವ್ಯಕ್ತಿಯ ಹೆಸರು ವಿಳಾಸ ಸದರಿಯವರಿಗೆ
ವಿಚಾರಿಸಲಾಗಿ 6) ಏಕನಾಥ ತಂದೆ ಬಾಬು ಆಲಮೇಲ ಸಾ|| ಮಾತೋಳಿ ಅಂತ
ತಿಳಿಸಿರುತ್ತಾರೆ. ಸದರಿ 6 ಜನರ ಮದ್ಯ
ಇಸ್ಪೇಟ ಜೂಜಾಟಕ್ಕೆ ಇಟ್ಟಿದ ನಗದು ಹಣ ಒಟ್ಟು 3640/- ರೂ ಮತ್ತು 52 ಇಸ್ಪೆಟ ಎಲೆಗಳನ್ನು ಜಪ್ತಿ
ಮಾಡಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ
ಜೂಜಾಟದಲ್ಲಿ ನಿರತವರ ಬಂಧನ :
ಜೇವರ್ಗಿ ಠಾಣೆ : ದಿನಾಂಕ 30.10.2015 ರಂದು ಜೇವರಗಿ
ಪಟ್ಟಣದ ಜ್ಯೋತಿ ಹೋಟೆಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಒಂದು ರುಪಾಯಿಗೆ 80
ರೂಪಾಯಿ ಕೊಡುತ್ತೆವೆ ಅಂತ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ
ಬರೆದುಕೊಳ್ಳುತ್ತಿದ್ದು ಬಗ್ಗೆ ಖಚಿತ ಬಾತ್ಮಿ ಮೇರೆಗೆ ಶ್ರೀ. ಲಕ್ಷ್ಮಣ ಬಿರಾದಾರ ಎ.ಎಸ್.ಐ
ಜೇವರಗಿ ಠಾಣೆ ಹಾಗು ಸಿಬ್ಬಂದಿ ಮತ್ತು
ಪಂಚರೊಂದಿಗೆ ಬಾತ್ಮಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಮೂರುಜನರನ್ನು ವಶಕ್ಕೆ ತೆಗೆದುಕೊಂಡು ಅವರ
ಹೆಸರ ವಿಚಾರಿಸಲು 1] ಸಂತೋಷ ತಂದೆ ಸಿದ್ದಣ್ಣ
ಭಾವಿ ಸಾ|| ಲಕ್ಕಪ್ಪ ಲೇಔಟ್ ಜೇವರಗಿ 2] ಪ್ರಕಾಶ ತಂದೆ ಗಂಗಯ್ಯ ವಡ್ಡರ್
ಸಾ : ಜನತಾ ಕಾಲೋನಿ ಜೇವರಗಿ 3] ಶಿವರಾಜ ತಂದೆ ಬಸವರಾಜ ಬಸವಪಟ್ಟಣ
ಸಾ : ಶಾಂತನಗರ ಜೇರವಗಿ ಅಂತಾ ತಿಳಿಸಿದ್ದು ಅವರಿಂದ ಜೂಜಾಟಕ್ಕೆ
ಬಳಸಿದ ನಗದು ಹಣ 1.555/- ರೂ 3 ಬಾಲ್ ಪೆನ್
ಮತ್ತು ಮೂರು ಮಟಕಾ ಚೀಟಿ ಮತ್ತು ಒಂದು ನೋಕಿಯಾ ಮೋಬಾಯಿಲ್ ಅಂ.ಕಿ 300/- ರೂ ಗಳನ್ನು ಜಪ್ತಿ
ಮಾಡಿಕೊಂಡು ಸದರಿಯವರೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
No comments:
Post a Comment