POLICE BHAVAN KALABURAGI

POLICE BHAVAN KALABURAGI

18 October 2015

Kalaburagi District Reported Crimes

ಅಪಹರಣ ಮಾಡಿಕೊಂಡು ಹೋಗಿ ಬಲಾತ್ಕಾರ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಕುಮಾರಿ ಇವಳಿಗೆ ದಿನಾಂಕ 21-09-2015 ರಂದು ಮುಂಜಾನೆ 7 ಗಂಟೆ ಸುಮಾರಿಗೆ ಅಳಿಯನಾದ ಈಶ್ವರ ಇತನು ಅಪಹರಣ ಮಾಡಿಕೊಂಡು ಹೋಗಿರುತ್ತಾನೆ. ನಾವು ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವದಿಲ್ಲ.ಈ ವಗ್ಗೆ ಮಹಿಳಾ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು ದಿನಾಂಕ 17-10-2015 ರಂದು ಆರೋಪಿ ಈಶ್ವರ @ ವಿಶ್ವನಾಥ ಅಪಹರಣಕೊಳಗಾದ ಕುಮಾರಿ ಇವರು ಪತ್ತೆಯಾಗಿದ್ದು ಯಶೋದಾ ಇವಳಿಗೆ  ವಿಚಾರಿಸಿದಾಗ ದಿನಾಂಕ 20-09-2015 ರಂದು ರಾತ್ರಿ 10 ಗಂಟೆಯ ಸುಮಾರಿಗೆ ನಮ್ಮ ಭಾವ ಈಶ್ವರ @ ವಿಶ್ವನಾಥ ಇತನು ನಮ್ಮ ಮನೆಗೆ ಬಂದಿದ್ದು ಬೆಳಗ್ಗೆ 21-10-2015 ರಂದು ಬೆಳಗ್ಗೆ 7 ಗಂಟೆಯ ಸುಮಾರಿಗೆ ನಮ್ಮ ಭಾವ ಈಶ್ವರ @ ವಿಶ್ವನಾಥ ಇತನು ಮನೆಗೆ ಬರುವಾಗ ರಾತ್ರಿಯಾಗಿದ್ದರಿಂದ ತಿಂಡಿ ತರಲು ಆಗಿರುವದಿಲ್ಲ ಏನಾದರು ತಿಂಡಿ ತರೋಣ ಅಂತಾ ಹೇಳಿ ನನಗೆ ಮನೆಯಿಂದ ತನ್ನ ಜೊತೆಗೆ ಹೊರಗಡೆ ಕರೆದುಕೊಂಡು ರೆಲ್ವೆ ಸ್ಟೇಷನಗೆ ಹೋಗಿ ರೈಲ್ವೆ ಮುಖಾಂತರ ಬಾಗಲಕೋಟೆಗೆ ಮತ್ತು ಅಲ್ಲಿಂದ ಇಲ್ಕಲ್ ಹೋಗಿ ಅಲ್ಲಿಂದ ಗೋವಾಕ್ಕೆ ಕರೆದುಕೊಂಡು ಹೋದನು. ಗೋವಾದ ಸೆಂಟ್ರಲ್ ಜೆಲ್ ಹತ್ತಿರ ನಮ್ಮ ಬಾವ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದು ನನಗೆ ಅಲ್ಲಿಗೆ ಕರೆದುಕೊಂಡು ಹೋಗಿ ಅಲ್ಲೇ ಸೆಡ್ ಹಾಕಿದ ಕೋಣೆಯಲ್ಲಿ ದಿನಾಂಕ 22-09-2015 ರಂದು ರಾತ್ರಿ 10 ಗಂಟೆಯ ಸುಮಾರಿಗೆ ನಾನು ಬೇಡವೆಂದರು ನನಗೆ ನನಗೆ ಹೆದರಿಸಿ ನನ್ನೊಂದಿಗೆ ಜಬರದಸ್ತಿಯಿಂದ ದೈಹಿಕ ಸಂಬೋಗ ಮಾಡಿರುತ್ತಾನೆ. ಅಲ್ಲಿಂದ ಇಲ್ಲಿಯವರೆಗೆ ನಮ್ಮ ಬಾವ ಈಶ್ವರ ಇತನು ನನಗೆ ಹೆದರಿಸಿ ಜಬರದಸ್ತಿಯಿಂದ ದೈಹಿಕ ಸಂಬೋಗ ಮಾಡಿರುತ್ತಾನೆ. ಆಂತಾ ಸಲಹಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಜೇವರ್ಗಿ ಠಾಣೆ : ದಿನಾಂಕ .17-10-2015 ರಂದು ನಾನು ಮತ್ತು ಶರಣಗೌಡ ತಂದೆ ಶಿವಣಗೌಡ ಮಾಲಿಪಾಟೀಲ ಇಬ್ಬರೂ ಕೂಡಿಕೊಂಡು ನಾನು ಚಲಾಯಿಸುತ್ತಿದ್ದ ನನ್ನ ಮೊಟಾರ್ ಸೈಕಲ ನಂ ಕೆಎ 32 ಇಇ 8607 ನೇದ್ದರ ಮೇಲೆ ಕೂಳಿತುಕೊಂಡು ಚಹಾ ಕೂಡಿಯಲು ಗುಂಡಗುರ್ತಿ ಧಾಬಾದ ಕಡೆಗೆ ಹೋಗುತ್ತಿದ್ದೆವು, ಜೇವರಗಿ ರಿಯಾನ್ಸ್ ಪೆಟ್ರೊಲ ಪಂಪ ಹತ್ತಿರ ಜೇವರಗಿ-ಕಲಬುರಗಿ ರಾಷ್ಟ್ರೀಯ ಹೆದ್ದಾರಿ ಮೇಲೆ ಹೋಗುತ್ತಿದ್ದಾಗ ಅದೇ ವೇಳೆಗೆ ನಮ್ಮ ಮೊಟಾರ್ ಸೈಕಲ ಹಿಂದುಗಡೆಯಿಂದ ಅಂದರೆ  ಜೇವರಗಿ ಕಡೆಯಿಂದ ಒಂದು ಲಾರಿ ಚಾಲಕನು ತನ್ನ ಲಾರಿಯನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನನ್ನ ಮೊಟಾರ್ ಸೈಕಲಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿ ತನ್ನ ಲಾರಿಯೊಂದಿಗೆ ಓಡಿ ಹೋಗಿದ್ದು ಅಫಘಾತದಲ್ಲಿ ನನಗೆ ಬಲಕೈ ಮೊಳಕೈ ಕೇಳಗೆ ಟೊಂಕಕ್ಕೆ ರಕ್ತಗಾಯವಾಗಿದ್ದು ಮತ್ತು ನನ್ನ ಮೊಟಾರ್ ಸೈಕಲ್ ಹಿಂದುಗಡೆ ಕುಳಿತ ಶರಣಗೌಡ ತಲೆಯ ಹಿಂಬಾಗಕ್ಕೆ ಬಾರಿ ರಕ್ತಗಾಯ, ಮತ್ತು ಮೂಗಿನಿಂದ ಕಿವಿಯಿಂದ ರಕ್ತ ಸೋರುತ್ತಿತ್ತು ಬಲ ಬುಜಕ್ಕೆ ಟೊಂಕಕ್ಕೆ ತರಚಿದ ರಕ್ತಗಾಯವಾಗಿದ್ದವು. ನಂತರ ನಾನು ಶರಣಗೌಡನಿಗೆ ಉಪಚಾರ ಕುರಿತು ಒಂದು ಅಪರಿಚಿತ ಅಟೋದಲ್ಲಿ ಹಾಕಿಕೊಂಡು ಜೇವರಗಿ  ಸರಕಾರಿ  ಆಸ್ಪತ್ರೆಗೆ  ಬರುವಾಗ ಸಂಜೆ 7.20  ಗಂಟೆಗೆ ಜೇವರಗಿ ಹಳೆ ಬಸ್ ನಿಲ್ದಾಣ ಹತ್ತಿರ ಮೃತಪಟ್ಟಿರುತ್ತಾನೆ,  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 08.10.2015 ರಂದು ರಾತ್ರಿ 09:30 ಗಂಟೆಗೆ ನನ್ನ ಗಂಡ ಭೀಮಣ್ಣ ತಂದೆ ಹುಣಚಪ್ಪ ನಾಟೀಕಾರ್  ಸಾ|| ಖಣದಾಳ ಈತನು ತಾನು ಕೆಲಸ ಮಾಡು ಇಟ್ಟಂಗಿ ಭಟ್ಟಿಯಿಂದ ಊರಿಗೆ ಬರುವ ಕುರಿತು ಗಡ್ಡಿ ಫೂಲ್‌ ಹತ್ತಿರ ಜೇವರಗಿ-ಕಲಬುರಗಿ ರಾಷ್ಟ್ರೀಯ ಹೆದ್ದಾರಿ ಮೇಲೆ ನಡೆದುಕೊಂಡು ಬರುತ್ತಿದ್ದಾಗ ಅದೇ ವೇಳೆಗೆ ಮೋಟಾರು ಸೈಕಲ್‌ ನಂ ಕೆ.ಎ32ಇಇ9006 ನೇದ್ದರ ಸವಾರನು ತನ್ನ ಮೋಟಾರು ಸೈಕಲ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ನನ್ನ ಗಂಡನಿಗೆ ಎದುರಿನಿಂದ ಡಿಕ್ಕಿ ಪಡಿಸಿ ತಲೆಗೆ ಭಾರಿ ಗುಪ್ತ ಗಾಯಪಡಿಸಿ ಅಪಘಾತದ ನಂತರ ತನ್ನ ಮೋಟಾರು ಸೈಕಲ್‌ ನೊಂದಿಗೆ ಓಡಿ ಹೋಗಿದ್ದು ನನ್ನ ಗಂಡನಿಗೆ ಉಪಚಾರ ಕುರಿತು ಕಲಬುರಗಿಯ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೆ ದಿನಾಂಕ 16.10.2015 ರಂದು ಮಧ್ಯಾಹ್ನ 03:15 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಷಣ್ಮುಖಪ್ಪ ತಂದೆ ಗುರುಚಾರಪ್ಪ ಜೇವರ್ಗಿ ಸಾ: ವರದಾನಗರ ಉದನೂರ ರೋಡ ಕಲಬುರಗಿ  ಇವರು ಈಗ್ಗೆ 2 ವರ್ಷಗಳಿಂದ ಪಟ್ಟಣ ಗ್ರಾಮದ  ರೈತ ಸಂಪರ್ಕ ಕೇಂದ್ರದಲ್ಲಿ ಸಹಾಯಕ ಕೃಷಿ ಅಧಿಕಾರಿ ಅಂತ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ಈ ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಹಂಗಾಮಿನ ಪ್ರಯುಕ್ತ ಸಾಕಷ್ಟು ಪ್ರಮಾಣದಲ್ಲಿ ವಿವಿಧ ಸಂಸ್ಥೆಯ ಬೀಜ, ಲಘು ಪೋಷಕಾಂಶಗಳು, ಎರೆಹುಳ ಗೊಬ್ಬರ ಮುಂತಾದ ಪರಿಕರಗಳು ದಾಸ್ತಾನು ಮಾಡಿರುತ್ತೇವೆ. ಸದರಿ ದಾಸ್ತಾನು ಮಾಢಿದ ದಾಸ್ತಾವೇಜನ್ನು ಪಟ್ಟಣ ರೈತ ಸಂಪರ್ಕ ಕೇಂದ್ರದಲ್ಲಿ ಅಕೌಂಟೆಂಟ ಮತ್ತು  ಸಿಬ್ಬಂದಿಯವರು ನೋಡಿಕೊಳ್ಳುತ್ತಿದ್ದು ದಿನಾಂಕ: 27/06/2015 ರಂದು ಸಾಯಂಕಾಲ 5-45ಪಿಎಮ್  ಗಂಟೆವರೆಗೆ ಕಾರ್ಯನಿರ್ವಹಿಸಿ ರೈತರಿಗೆ ಬೀಜಗಳ ಮಾರಾಟ ಮಾಡಿ  ಕಛೇರಿ ಶೇಟರಗೆ ಬೀಗ ಹಾಕಿಕೊಂಡು ಹೋಗಿರುತ್ತೇನೆ. ದಿನಾಂಕ: 29/06/2015 ರಂದು ಬೆಳಿಗ್ಗೆ 10-00 ಎಎಮ್ ಕ್ಕೆ ನಾನು ಮತ್ತು ನಮ್ಮ ಕಛೇರಿ ಲೆಕ್ಕಿಗ ಶ್ರೀ ಕಾಶಿರಾಯ ಇವರು ರೈತ ಸಂಪರ್ಕ ಕೇಂದ್ರದ ಶೇಟರ ತೆಗೆಯಲು ಹೋದಾಗ ಸದರಿ ರೈತ ಸಂಪರ್ಕ ಕೇಂದ್ರದ ಶೇಟರ ಬೆಂಡಾಗಿದ್ದು ಒಂದುವರೆ ಅಡಿಯಷ್ಟು ಮೇಲಕ್ಕೆ ಎತ್ತಿದ್ದು ಇರುತ್ತದೆ. ಆಗ ನಾವು ಗಾಬರಿಯಿಂದ ಶೇಟರ್ ತೆಗೆದು ಒಳಗೆ ಹೋಗಿ ನೋಡಿದಾಗ ಸದರಿ ರೈ.ಸಂ.ಕೇಂದ್ರದಲ್ಲಿ ಶೇಖರಿಸಿಟ್ಟಿದ್ದ ದಾಸ್ತಾನು ಅಸ್ತವ್ಯೆಸ್ತವಾಗಿ ಬಿದ್ದಿದ್ದು ಲೆಕ್ಕಪತ್ರಗಳ ಕಡತವಿರುವ ಅಲಮಾರಿಯ ಬಾಗಿಲು ತೆರೆದಿದ್ದು ಕಛೇರಿಯಲ್ಲಿ ಸಾಮಾನುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ನೋಡಲು ಸಂಗ್ರಹಿಸಿಟ್ಟ ದಾಸ್ತಾವೇಜಿನಲ್ಲಿ 2ಕೆಜಿ ತೂಕದ 900/-ರೂ ಬೆಲೆಯ 27 ಪ್ಯಾಕೇಟ ಗಂಗಾ ಕಾವೇರಿ 2002 ಬ್ರಾಂಡಿನ ಅ.ಕಿ= 24300/-ರೂ ಕಿಮ್ಮತ್ತಿನ ಸೂರ್ಯಕಾಂತಿ ಬೀಜವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ರುಸೀನಾ ಮಹವಿನ್ ಗಂಡ ಮಹ್ಮದ ಶಹಾಜ್ ಸಾಃ ಮನೆ ನಂ. 1-1166/6, ಐವನ್ ಶಾಹಿ ಹಾವಃ ಉಸ್ಮಾನಿಯ ಕಾಲೋನಿ ಕಲಬುರಗಿ ಇವರಿಗೆ ಆಕೆಯ ಗಂಡನಾದ ಮಹ್ಮದ ಶಹಾಜ್ ಮತ್ತು ಮಾವನಾದ ಡಾಃ ಅಬ್ದುಲ್, ಅತ್ತೆಯಾದ ಡಾಃ ಶಹನಾಜ್ ಮತ್ತು ಮೈದುನಾದ ಡಾಃ ಮಹ್ಮದ ಫಯಾಜ್ ಇವರೆಲ್ಲರೂ ಕೂಡಿಕೊಂಡು ಮದುವೆ ಸಂದರ್ಭದಲ್ಲಿ ನಕಲಿ ಬಯೋ ಡಾಟಾ ಅಲ್ಲದೇ ಲಗ್ನ ಪತ್ರಿಕೆಯಲ್ಲಿ ಡಾಕ್ಟರ ಅಂತಾ ಮುದ್ರಿಸಿ ಡಾಕ್ಟರ ಅಂತಾ ನಂಬಿಸಿ ನಕಲಿ ದಾಖಲೆಯನ್ನು ಸೃಷ್ಟಿಸಿ ನಂಬಿಕೆ ದ್ರೋಹ ವಂಚನೆ ಮಾಡಿದಲ್ಲದೇ ಎಲ್ಲರೂ ಕೂಡಿ ಫಿರ್ಯಾದಿದಾರಳಿಗೆ ಇನ್ನೂ ತವರು ಮನೆಯಿಂದ 5 ಲಕ್ಷ ರೂಪಾಯಿ ಹಣ ವರದಕ್ಷಿಣೆಯನ್ನು ತೆಗೆದುಕೊಂಡು ಬರುವಂತೆ ಪ್ರತಿನಿತ್ಯ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಕೊಟ್ಟಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ಬೈಯಿದು ಹೊಡೆ ಬಡೆ ಮಾಡಿ ದಿನಾಂಕಃ 16/10/2015 ರಂದು ಸಾಯಂಕಾಲ 05:00 ಗಂಟೆಗೆ ಫಿರ್ಯಾದಿದಾರಳು ತನ್ನ ತಂದೆಯ ಮನೆಯಾದ ಉಸ್ಮಾನಿಯಾ ಕಾಲೋನಿಯಲ್ಲಿದ್ದಾಗ ತನ್ನ ಗಂಡನಾದ ಮಹ್ಮದ ಶಹಾಜ್ ರವರು ತನ್ನ ಮೋಟಾರ ಸೈಕಲ ಮೇಲೆ ಬಂದು ಫಿರ್ಯಾದಿದಾರಳಿಗೆ ಮನೆಯಿಂದ ಹೊರಗಡೆ ಕರೆದು ಏ ರಾಂಡ್ ಹಾಮಾರೆ ಗರಕೋ ಆತೆ ಕ್ಯಾ ನಹಿ, ನಹೀ ತೋ ತುಮಾರೆಕೋ ಖಲಾಸ್ ಕರತೂ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: