ರೇವೂರ ಪೊಲೀಸ ಠಾಣೆ : ದಿನಾಂಕ:29-09-2015 ರಂದು ಹೆಚ್.ಸಿ-406 ರವರು ಸರ್ಕಾರಿ
ಆಸ್ಪತ್ರೇ ಕಲಬುರ್ಗಿಯಲ್ಲಿ ಉಪಚಾರ ಕುರಿತು ಸೇರಿಕೆಯಾದ ಪ್ರೇಮನಾಥ ತಂದೆ ಕಲ್ಯಾಣಿ ದೊಡ್ಡಮನಿ
ಸಾ:ಭೋಗನಳ್ಳಿ ಗ್ರಾಮ ಈತನ ಹೇಳಿಕೆ ಪಡೆದುಕೊಂಡು 2 ಪಿ.ಎಮ್.ಕ್ಕೆ ಠಾಣೆಗೆ ಬಂದು ಹೇಳಿಕೆ ಸಾರಾಂಶ
ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ ನಿನ್ನೆ ದಿನಾಂಕ:28-09-2015 ರಂದು 7 ಪಿ,ಎಮ್.ಕ್ಕೆ ನನ್ನತಮ್ಮ ರಾಜಶೇಖರನು ಭೋಗಲಿಂಗೇಶ್ವರ ದೇವಾಲಯಕ್ಕೆ
ಹೋಗಿ ತೆಂಗಿನಕಾಯಿ ವಡೆದುಕೊಂಡು ಬಂದನಂತರ 8-00 ಪಿ,ಎಮ್.ಕ್ಕೆ ಸುಮಾರಿಗೆ ಬಸ್ ನಿಲ್ದಾಣದ ಹತ್ತೀರ ಇದ್ದಂತಹ ಕಟ್ಟಿಗೆ
ಸಾಮಾನುಗಳನ್ನು ತರಲು ನಾನು ನನ್ನ ತಂದೆಯವರಾದ ಕಲ್ಯಾಣಿ ನ್ನ ತಮ್ಮನಾದ ರಾಜಶೇಖರ ಹಾಗೂ ನಮ್ಮ
ಸಮಾಜದವರಾದ ಶ್ರೀ ಭೋಗಪ್ಪ ತಂದೆ ಬುದ್ದಪ್ಪ ಮೇಲ್ಮನಿ ಶಂಕರ ತಂದೆ ವಿಠ್ಠಲ
ಗೌಡಗಾಂವ ಚಂದಪ್ಪ ತಂದೆ ಬಸಣ್ಣ ದೊಡಮನಿ ಎಲ್ಲರೂ ಸರಕಾರಿ ಶಾಲೆಯ ಮುಂದಿನ ರಸ್ತೆಯಲ್ಲಿ
ಹೋಗುತ್ತಿದ್ದಾಗ ಭೋಗಲಿಂಗೆಶ್ವರ ದೇವಾಲಯದ ಪೂಜಾರಿಗಳಾದ 1) ಬಸವರಾಜ ತಂದೆ ದತ್ತು ಸುತಾರ 2)
ದತ್ತು ತಂದೆ ಹಣಮಂತ ಸುತಾರ 3) ನಂದು ತಂದೆ ದತ್ತು ಸುತಾರ 4) ಮಲ್ಲು ತಂದೆ ದತ್ತು ಸುತಾರ 5) ಈರಣ್ಣಾ ತಂದೆ ದತ್ತು
ಸುತಾರ 6) ದೇವಿಂದ್ರ ತಂದೆ ಹಣಮಂತ ಸುತಾರ 7) ಲಕ್ಷ್ಮಿಕಾಂತ ತಂದೆ ಭೀಮಾ ಸುತಾರ 8) ಸುರೇಶ ತಂದೆ
ಸಿದ್ದಣ್ಣಾ ಸುತಾರ ಹಾಗೂ ನಮ್ಮ ಸಮಾಜದ ಮೇಲೆ ಹಿಂದಿನಿಂದ ದ್ವೆಷ ಸಾದಿಸುತ್ತಾ ಬಂದಂತ 9) ಭಾಷಾ
ಪಟೇಲ ತಂದೆ ಹಸನ ಪಟೇಲ 10) ನಜೀರ ಪಟೇಲ ತಂದೆ ಹಸನ ಪಟೇಲ 11) ಮುಕ್ತಾರ ಪಟೇಲ ತಂದೆ ಅನ್ವರ ಪಟೇಲ
12) ಅಲ್ಲಾವುದ್ದಿನ್ ತಂದೆ ಮಶಾಕ ಪಟೇಲ ಎಲ್ಲರೂ ಗುಂಪು ಕಟ್ಟಿಕೊಂಡು ಬಂದು ಏ ರಂಡಿ ಮಕಳ್ಯಾ
ಹೋಲ್ಯಾರೇ ದೇವರಗುಡಿ ಒಳಗಡೆ ಬಂದು ತೆಂಗಿನಕಾಯಿ ಒಡಿಯುತ್ತಿರಾ ಅಂತಾ ಬಸವರಾಜನು ಬೈಯುತ್ತಾ
ಎಲ್ಲರೂ ನಮಗೆ ತಡೆದು ನಿಲ್ಲಿಸಿ ಮತ್ತೆ ಬಸವರಾಜನು ನನ್ನ ತಮ್ಮ ರಾಜಶೇಖರ ಎದೆಯ ಮೇಲಿನ
ಅಂಗಿಯನ್ನು ಹಿಡಿದು ಕೈಯಿಂದ ಕಪಾಳ ಮೇಲೆ ಹೊಡೆದು ನೇಲಕ್ಕೆ ಕಾಕಿದಾಗ ದತ್ತು,ಮಲ್ಲು,ನಂದು,ಎಲ್ಲರೂ ಕಾಲಿನಿಂದ
ಒದ್ದಿರುತ್ತಾರೆ.ನನಗೆ ಈರಣ್ಣನು ನನಗೆ ಕೈಯಿಂದ ಕಾಪಾಳ ಮೇಲೆ ಹೊಡೆದಾಗ ಲಕ್ಷ್ಮಿಕಾಂತನು ಅಲ್ಲೆ
ಬಿದ್ದ ಬಡಿಗೆಯಿಂದ ನನ್ನ ತೆಲೆಯ ಹಿಂಭಾಗಕ್ಕೆ ಹೊಡೆದು ದೇವಿಂದ್ರನು ಅಲ್ಲೆಬಿದ್ದ ಕಲ್ಲನ್ನು
ತೆಗೆದುಕೊಂಡು ನನ್ನ ಮುಗಿನ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ.ಸುರೇಶನು ಭೋಗಪ್ಪನಿಗೆ
ಕೈಯಿಂದ ಕಪಾಳ ಮೇಲೆ ಹೊಡೆದಿರುತ್ತಾನೆ.ಆಗ ಭಾಷಾ ಪಟೇಲ & ನಜೀರ ಪಟೇಲ ರವರು ರಂಡಿ ಮಕ್ಕಳ್ಯಾ
ಹೊಲೇರ್ಯಾ ಊರಲ್ಲಿ ನಿಮ್ಮದೆ ಧಿಮಾಕ್ಕ ಮಾಡತಿರ್ಯಾ ಅಂತಾ ನನ್ನ ತಂದೆಯವರಿಗೆ ಬೈದ್ದು ಶಂಕರನಿಗೆ
ಬೆನ್ನ ಮೇಲೆ ಭಾಷಾ ಪಟೇಲನು & ಭೋಗಪ್ಪನಿಗೆ ನಜೀರ ಪಟೇಲನು ಕಪಾಳ ಮೇಲೆ ಕೈಯಿಂದ ಹೊಡೆದರು ಚಂದಪ್ಪನಿಗೆ ನೆಲಕ್ಕೆ ಹಾಕಿ
ಮುಕ್ತಾರ ಪಟೇಲ & ಅಲ್ಲವುದ್ದಿನ್ ಇಬ್ಬರು ಕಾಲಿನಿಂದ ಒದ್ದಿರುತ್ತಾರೆ ಆಗ ನಮ್ಮ
ಗ್ರಾಮದವರಾದ ಸರದಾರ ಪಟೇಲ,ಲಾಲ ಅಹ್ಮದ ಪಟೇಲ, ಗುಂಡಪ್ಪ ಜಮಾದಾರ,ಮಕ್ಬುಲ ಪಟೇಲ ತಂದೆ ಇಬ್ರಾಹಿಂ
ಪಟೇಲ ಹಾಗೂ ಸಿದ್ದಮ್ಮಾ ಗಂಡ ಉದ್ದಂಡಪ್ಪ ಎಲ್ಲರೂ ಬಂದು ಜಗಳ ಬಿಡಿಸಿದರು.ಆಗ ಮತ್ತೆ ಬಸವರಾಜನು
ನಮಗೆ ಇವತ್ತು ಇವರು ಬಂದು ಬಿಡಿಸದಿದ್ದರೆ ನಿಮಗೆ ಜೀವ ಸಹಿತ ಬಿಡುತ್ತಿರಲಿಲ್ಲಾ ಅಂತಾ ಜೀವದ
ಬೇದರಿಕೆ ಹಾಕಿ ಹೊದರು ಅಂತಾ ಕೊಟ್ಟ ಫಿರ್ಯಾದಿ ಹೇಳಿಕೆ ಸರಾಂಶದ ಮೇಲಿಂದ ಪ್ರಕರಣ
ದಾಖಲಾಗಿರುತ್ತದೆ.
ಗ್ರಾಮೀಣ ಪೊಲೀಸ ಠಾಣೆ : ದಿನಾಂಕ: 29/09/2015 ರಂದು
09-30 ಎಎಮ್ ಕ್ಕೆ ಫಿರ್ಯಾದಿದಾರರು ಠಾಣೆಗೆ
ಹಾಜರಾಗಿ ನೀಡಿದ ಒಂದು ಲಿಖಿತ ಫಿರ್ಯಾದಿ ಸಾರಾಂಶವೆನೆಂದರೆ, ತಾನು ತಮ್ಮ ದಾಲಮಿಲನಿಂದ ದಿನಾಂಕ:
27/09/2015 ರಂದು 7-00 ಪಿಎಮ್ ಕ್ಕೆ ಎ.ಪಿ.ಎಮ್.ಸಿ ಮಾರ್ಕೇಟ ವಾಸಿ ಮುಂಬೈಗೆ ಆರ್ಡರ್
ಇದ್ದುದ್ದರಿಂದ ಕೆಎ-32 ಬಿ-2343ನಂಬರಿನ ನ್ಯಾಶನಲ್ ಕಲರ್ 10ಟಯರನ ಲಾರಿಯಲ್ಲಿ ನಮ್ಮ ದಾಲಮಿಲ್
ಬಿಲ್ ನಂ 211. 212, 213, 214 ನಂಬರನ 30ಕೆಜಿ
ತೂಕದ 534 ಬ್ಯಾಗ ತೋಗರಿ ಬೆಳೆಯನ್ನು 77 ಬ್ರ್ಯಾಂಡನ ಗುರುತುಳ್ಳ ಚೀಲದಲ್ಲಿ ತುಂಬಿ ಕಳುಹಿಸಿರುತ್ತೇನೆ.
ಸದರಿ ಲಾರಿ ಚಾಲಕ ಮೆಹಬೂಬ ಎಂಬಾತನು ದಿನಾಂಕ: 28/09/2015 ರಂದು 12-00 ಪಿಎಮ್ ಗಂಟೆ ಸುಮಾರಿಗೆ
ಪೋನ ಮಾಡಿ ತೊಗರಿ ಬೆಳೆ ತುಂಬಿದ ನನ್ನ ಲಾರಿಯನ್ನು ರಾತ್ರಿ ಮಿಜಬಾನಗರದ ಸಾಧಿಕ್ ಎಲೆಕ್ಟ್ರೀಕಲ್
ಶಾಪ ಎದರುಗಡೆ ರೋಡಿನ ಎಡಬದಿಯಲ್ಲಿ ನಿಲ್ಲಿಸಿ ದಿನಾಂಕ: 28/09/2015 ರಂದು 4-00 ಎಎಮ್ ವರೆಗೆ
ಲಾರಿಯಲ್ಲಿಯೇ ಮಲಗಿಕೊಂಡಿದ್ದು 4-00 ಎಎಮ್ ಕ್ಕೆ ಎದ್ದು ಲಾರಿ ಲಾಕ ಮಾಡಿಕೊಂಡು ಮನೆಗೆ ಹೋಗಿ 9-00
ಎಎಮ್ ಸುಮಾರಿಗೆ ಬಂದು ನೋಡಲು ನಾನು ನಿಲ್ಲಿಸಿದ್ದ ನನ್ನ ಕೆಎ-32 ಬಿ-2343 ನಂಬರಿನ ತೊಗರಿ ಬೆಳೆ
ತುಂಬಿದ ಲಾರಿ ಕಾಣಿಸುತ್ತಿಲ್ಲ ಅಂತ ಪೋನ ಮಾಡಿ ತಿಳಿಸಿದ್ದು ತಕ್ಷಣ ನಾನು ಮತ್ತು ನನ್ನ ಸ್ನೇಹಿತ
ಪಂಪಣ್ಣಗೌಡ ಇಟಗಿ ಇವರು ಸ್ಥಳಕ್ಕೆ ಹೋಗಿ ನೋಡಲು ಲಾರಿ ಚಾಲಕ ಮೆಹಬೂಬ ಹೇಳಿದ ವಿಷಯ ನಿಜವಿದ್ದು
ಸ್ಥಳದಲ್ಲಿ ಲಾರಿ ಇರಲಿಲ್ಲ. ಎಲ್ಲಾಕಡೆ ಹುಡುಕಾಡಿದರೂ 77 ಬ್ರ್ಯಾಂಡನ 30 ಕೆಜಿ ತೂಕದ 534
ಬ್ಯಾಗ ತೋಗರಿ ಬೆಳೆ (ಒಟ್ಟು= 160 ಕ್ವಿಂಟಲ್ 20ಕೆಜಿ)
ತುಂಬಿದ್ದ ಅ.ಕಿ= 1747500/-ರೂ ಹಾಗೂ ಕೆಎ-32 ಬಿ-2343 ನಂಬರಿನ ನ್ಯಾಶನಲ್ ಕಲರ್ 10
ವ್ಹೀಲ್ ಚೆಸ್ಸಿ ನಂ MBICMDWZAA753 ಇಂಜಿನ ನಂ SAH631872 ಇರುವ
ಅ.ಕಿ= 1000000/-ರೂ ಹೀಗೆ ಒಟ್ಟು 2747500/-ರೂ ಕಿಮ್ಮತ್ತಿನ ತೊಗರಿ ಬೆಳೆ ತುಂಬಿದ ಲಾರಿಯನ್ನು
ದಿನಾಂಕ: 28/09/2015 ರಂದು 4-00 ಎಎಮ್ ದಿಂದ 9-00 ಎಎಮ್ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು
ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಳ್ಳತನವಾದ ತೊಗರಿ 30ಕೆಜಿ ತೂಕದ 534 ಬ್ಯಾಗ ತೊಗರಿ
ಬೆಳೆ ತುಂಬಿದ ಲಾರಿಯನ್ನು ಪತ್ತೆ ಹಚ್ಚಿ ನಮ್ಮ ತೊಗರಿ ಬೆಳೆ ಮತ್ತು ಲಾರಿಯನ್ನು ನಮಗೆ ವಾಪಸ
ಕೊಡಿಸಬೇಕು ಮತ್ತು ಕಳ್ಳತನ ಮಾಡಿದ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕಂತ ವಗೈರೆ ನೀಡಿದ ಫಿರ್ಯಾದಿ
ಹೇಳಿಕೆ ಮೇಲಿಂದ ಪ್ರಕರಣ ಧಾಖಲಾಗಿರುತ್ತದೆ.
No comments:
Post a Comment