POLICE BHAVAN KALABURAGI

POLICE BHAVAN KALABURAGI

17 August 2015

Kalaburagi District Reported Crimes

ನಿಂಬರ್ಗಾ ಪೊಲೀಸ ಠಾಣೆ : ದಿನಾಂಕ 17/08/2015 ರಂದು 1600 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಅಣವೀರಪ್ಪ ತಂದೆ ಮಹಾದೇವಪ್ಪ ಉಮದಿ ವ|| 35 ವರ್ಷ, ಜಾ|| ಲಿಂಗಾಯತ|| ಡ್ರೈವರ ಕೆಲಸ, ಸಾ|| ಮಾಡಿಯಾಳ ಇವರು ಠಾಣೆಗೆ ಬಂದು ಲಿಖಿತ ಫಿರ್ಯಾದಿ ಸಲ್ಲಿಸಿದ್ದೇನೆಂದರೆ ನನಗೆ 2001 ರಲ್ಲಿ ಅತನೂರ ಗ್ರಾಮದ ಸಿದ್ದಾರಾಮ ತಂದೆ ವೀರುಪಾಕ್ಷಪ್ಪ ಬಳೂರ್ಗಿ ಇವರ ಮಗಳಾದ ಶೋಭಾ ಇವಳೊಂದಿಗೆ ವಿವಾಹವಾಗಿರುತ್ತದೆ. ನಮ್ಮಿಬ್ಬರಿಗೂ ಒಟ್ಟು ನಾಲ್ಕು ಜನ ಹೆಣ್ಣುಮಕ್ಕಳಿದ್ದು ಕೊನೆಯ ಮಗು ಮೇಘಾಶ್ರೀ ಇವಳು ಜನಿಸಿ 3 ವರ್ಷಗಳಾಗಿದ್ದು, ಮೇಘಾಶ್ರೀ ಹುಟ್ಟಿದ 2-3 ತಿಂಗಳ ನಂತರ ನನ್ನ ಹೆಂಡತಿಯು ಮಾನಸಿಕವಾಗಿ ಅಶ್ವಸ್ಥಳಂತೆ ವರ್ತಿಸುತ್ತಿದ್ದು, ಮಾತು ಬಿಟ್ಟು ಮಾತನಾಡುವದು, ಯಾವುದೊ ಒಂದು ವಿಷಯ ತಲೆಯಲ್ಲಿಟ್ಟುಕೊಂಡು ದಿನಾಲೂ ನನ್ನೊಂದಿಗೆ ಮತ್ತು ನನ್ನ ಮನೆಯವರೊಂದಿಗೆ ರೇಗಾಡುವದು ಮಾಡುತ್ತಿದ್ದಳು ಊರಲ್ಲಿ ನನ್ನ ಮಗಳಾದ ಮೇಘಾಶ್ರೀ ಇವಳನ್ನು ಹೊತ್ತುಕೊಂಡು ತಿರುಗಾಡುವದು, ತನಗೆ ಹಸಿವಾದಾಗ ಹೊಟೇಲ ಹತ್ತಿರ ಅವರಿವರ ಹತ್ತಿರ ಬೇಡಿ ಊಟ ಮಾಡುತ್ತಿದ್ದಳು, ಅವಳಿಗೆ ತಾನು ಏನು ಮಾಡುತ್ತಿದ್ದೇನೆ ಅನ್ನುವದರ ಬಗ್ಗೆ ಅರಿವು ಇರುತ್ತಿರಲಿಲ್ಲ, ಇದರ ಬಗ್ಗೆ ನಾನು , ನನ್ನ ಹೆಂಡತಿಯ ತವರು ಮನೆಯವರು ಕೂಡಿಕೊಂಡು ಧಾರವಾಡ, ಕಲಬುರಗಿ, ಪುಣೆಯ ಮಾನಸಿಕ ಆಸ್ಪತ್ರೆಗಳಿಗೆ ತೋರಿಸಿರುತ್ತೇವೆ ಆದರೂ ಸಹ ಪ್ರಯೋಜನವಾಗಿಲ್ಲ, ಅವಳಿಗೆ ನಾವೆಲ್ಲರೂ ಒಂದು ಮಗುವಿನಂತೆ ಸಂಬಾಳಿಸುತ್ತಾ ಬಂದಿರುತ್ತೇವೆ. ತಾನೋಬ್ಬಳೆ ಯಾರಿಗೂ ಹೇಳದೆ ಕೇಳದೆ ಮಗುವನ್ನು ತೆಗೆದುಕೊಂಡು ಹೋಗುವದು ಮತ್ತೆ 2-3 ದಿವಸಗಳ ನಂತರ ಮರಳಿ ಮನೆಗೆ ಬರುವದು ಮಾಡುತ್ತಾ ಬಂದಿರುತ್ತಾಳೆ. ಇದರ ಬಗ್ಗೆ ನಾವು ಅಷ್ಟೊಂದ್ದು ತಲೆ ಕೆಡಿಸಿಕೊಂಡಿರುವದಿಲ್ಲ, ಆದರೆ ದಿನಾಂಕ 16/06/2015 ರಂದು ಅಂದಾಜ ಮಧ್ಯಾಹ್ನ 0200 ಪಿ.ಎಮಕ್ಕೆ ಮಗಳಾದ ಮೇಘಶ್ರೀ ಇವಳೊಂದಿಗೆ ನನ್ನ ಹೆಂಡತಿಯಾದ ಶೋಭಾ ಇವಳು ಮನೆಯಿಂದ ಹೊರಗಡೆ ಹೋದವಳು ಇಲ್ಲಿಯವರೆಗೆ ಮರಳಿ ಮನೆಗೆ ಬರದೆ ಕಾಣೆಯಾಗಿರುತ್ತಾಳೆ. ದಿನಾಂಕ 16/06/2015 ರಿಂದ ಇಲ್ಲಿಯತನಕ ನಾವು ಅತನೂರ, ಕಲಬುರಗಿ, ಅಕ್ಕಲಕೋಟ,ಸೊಲ್ಲಾಪೂರ,ಶಹಾಪೂರ, ಆಳಂದ, ಉಮ್ಮರ್ಗಾ, ಸೇಡಂ ಅಫಜಲಪೂರ, ವಿಜಯಪೂರ ಹೀಗೆ ಅನೇಕ ಕಡೆ ತಿರುಗಾಡಿ ಹುಡುಕಲಾಗಿ ನನ್ನ ಹೆಂಡತಿ ಮತ್ತು ಮಗು ಸಿಕ್ಕಿರುವದಿಲ್ಲ ಕಾಣೆಯಾಗಿರುತ್ತಾರೆ. ನನ್ನ ಹೆಂಡತಿಯು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು ಅವಳಿಗೆ ತಿಳಿಯದೆ ದಾರಿ ತಪ್ಪಿ ಎಲ್ಲೊ ಹೋಗಿ ಕಾಣೆಯಾಗಿರುತ್ತಾಳೆ. ನನ್ನ ಹೆಂಡತಿ ಮತ್ತು ಮಗಳನ್ನು ಯಾರು ಅಪಹರಣ ವಗೈರೆ ಮಾಡಿರುವದಿಲ್ಲ, ಕಾರಣ ಕಾಣೆಯಾದ ಹೆಂಡತಿ ಮತ್ತು ಮಗಳನ್ನು ಪತ್ತೆ ಹಚ್ಚಿ ಕೊಡಲು ವಿನಂತಿ ಅಂತ ಕೊಟ್ಟ ಲೀಖಿತ ಫಿರ್ಯಾದಿ ಸಾರಾಂಶದ ಮೇಲಿಂದ  ನಿಂಬರ್ಗಾ ಪೊಲೀಸ್ ಠಾಣೆಯ ಗುನ್ನೆ ನಂ 97/2015 ಕಲಂ ಮಹಿಳೆ ಮತ್ತು ಮಗು ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. 

No comments: