POLICE BHAVAN KALABURAGI

POLICE BHAVAN KALABURAGI

14 August 2015

Kalaburagi District Reported Crimes.

ಅಶೋಕ ನಗರ ಠಾಣೆ : ದಿನಾಂಕ 14/08/2015 ರಂದು ಮುಂಜಾನೆ 9-30 ಎಎಂಕ್ಕೆ  ಶ್ರೀ. ದಿಲೀಪ ತಂದೆ ದಿ: ಜೈರಾಮ ರಾಜೊಳಕರ  ಸಾ: ಪ್ಲಾಟ ನಂ. 66 ಜೈರಾಮ ನಿಲಯ  ರೈಲ್ವೆ ಟ್ರ್ಯಾಕ್‌ ಹತ್ತಿರ  ಶಕ್ತಿ ನಗರ ಕಲಬುರಗಿ  ರವರು ಠಾಣೆಗೆ ಬಂದು ಫಿರ್ಯಾದಿ ಹೇಳಿಕೆ ನೀಡಿದ್ದರ ಸಾರಾಂಶವೆನೆಂದರೆ  ನಿನ್ನೆ ದಿನಾಂಕ 13/08/2015 ರಂದು ರಾತ್ರಿ ಊಟ ಮಾಡಿಕೊಂಡು ನಾನು ಮತ್ತು ನನ್ನ ಪತ್ನಿ ಶೋಭಾ, ಮಗಳು ಪ್ರಿಯಾ ಎಲ್ಲರೂ ರಾತ್ರಿ 11 ಗಂಟೆಯ ವರೆಗೆ ಎಚ್ದರವಿದ್ದು ನಂತರ ಬೇಡ ರೂಮಿನಲ್ಲಿ ಮಲಗಿರುತ್ತೆವೆ. ನನ್ನ ತಾಯಿ ಕಮಲಾಬಾಯಿ ರವರು ನಮ್ಮ ಅಣ್ಣನ ಮನೆಗೆ ಹೊಗಿದ್ದರು. ದಿನಾಂಕ 14/08/2015 ರಂದು ಬಳಿಗ್ಗೆ  6-30 ಗಂಟೆಗೆ  ನನ್ನ ಪತ್ನಿ ಶೋಭಾ ರವರು ಎದ್ದು ನೊಡಲು ಅಡುಗೆ ಮನೆಯ ಕಿಟಕಿ ಗ್ರೀಲ್‌  ಮುರಿದಿದ್ದು, ಮತ್ತು ಕಿಚನ ಕಟ್ಟಿಯ ಮೇಲೆ ಬಂಗಾರದ ಖಾಲಿ ಕವರ ಪಾಕೇಟ ಗಳನ್ನು ನೊಡಿ ನನಗೆ ಹೇಳಿದ್ದು ನಾವು ಬೇಡರೂಮಿನಲ್ಲಿ ನೊಡಲು ಅಲಮಾರಾ ತೆರೆದಿದ್ದು ಒಳಗಡೆ ಇಟ್ಟಿದ್ದ ಈ ಕೆಳಕಂಡ ಆಭರಣಗಳು ಕಳವು ಆಗಿವೆ. . 1) ಬಂಗಾರದ ತಾಳಿ  ಚೈನ ಎರಡು ತುಂಡಾಗಿದ್ದು 4 ತೊಲೆ  2) ಬಂಗಾರದ ನಾನ್‌ 2 ತೊಲೆ, 3) ಬಂಗಾರದ ಉಂಗುರು ½ ತೊಲೆ, 4) ಎರಡು ಜೊತೆ ಕಿವಿ ಹೂವುಗಳು ಮತ್ತು ಮಾಟಿ 3 ಗ್ರಾಂ, 5) ನನ್ನ ಸಣ್ಣ ಮಗಳ  ಸಣ್ಣ 4 ಬಂಗಾರದ ಉಂಗುರುಗಳು 4 ಗ್ರಾಂ, 6)ಬೆಳ್ಳಿಯ 3 ಜೊತೆ ಕಾಲ ಚೈನಗಳು, ಒಂದು ಜೊತೆ ಬೆಲ್ಳಿ ಖಡ್ಗಗಳು 10 ತೊಲೆ, 7) ನಗದು ಹಣ 10,000/- ರೂ. ಹೀಗೆ ಒಟ್ಟು ಅಂದಾಜು 1,67,100/- ರೂ ಮೌಲ್ಯದ ಬಂಗಾರ ಬೆಳ್ಳಿ ಆಭರಣಗಳು ಮತ್ತು ನಗದು ಹಣವನ್ನು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು  ನಾವು ಬೇಡ ರೂಮಿನಲ್ಲಿ ಮಲಗಿರುವಾಗ  ಅಡುಗೆ ಕೊಣೆಯ ಕಿಟಕಿ ಗ್ರೀಲ ಮುರಿದು ಅತಿಕ್ರಮ  ಪ್ರವೇಶ ಮಾಡಿ, ಇನ್ನೊಮದು ಬೇಡ ರೂಮಿನಲ್ಲಿದ್ದ ಅಲಮಾರಾ ತೆರೆದು ಈ ಮೆಲೆ ನಮೂದಿಸಿದ ಆಭರಣಗಳನ್ನು ಕಳ್ಳತನ ಮಾಡಕೊಂಡು ಹೊಗಿರುತ್ತಾರೆ. ಪತ್ತೆ ಹಚ್ಚಿ ಕೊಡಬೆಕೆಂದು ವಗೈರೆ ಫಿರ್ಯಾದಿ ಹೇಳಿಕೆಯ ಸಾರಾಂಶದ ಮೇಲಿಂದ ಅಶೋಕ ನಗರ ಪೊಲೀಸ ಠಾಣೆ ಗುನ್ನೆ ನಂ. 107/2015 ಕಲಂ. 457, 380 ಐಪಿಸಿ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.
ನಿಂಬರ್ಗಾ  ಠಾಣೆ : ದಿನಾಂಕ 14/08/2015 ರಂದು 0930 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಶ್ರೀಮಂತ ತಂದೆ ಗುರುಲಿಂಗಪ್ಪ ಮೂಲಗೆ ವ_|| 55 ವರ್ಷ, ಜಾ|| ಲಿಂಗಾಯತ, || ವಾಚಮನೆ ಕೆಲಸ, ಸಾ|| ತಂಬಾಕ ವಾಡಿ ( ಹಾಲ ತಡಕಲ ) ಹಾ|| || ಜಾಧವ ನಗರ ವಡಗಾಂವ ಪುಣೆ ಇವರು ಠಾಣೆಗೆ ಹಾಜರಾಗಿ ಒಂದು ಲೀಖಿತ ಫಿರ್ಯಾದಿ ಸಲ್ಲಿಸಿದ್ದೇನೆಂದರೆ ತನ್ನ ಮಗಳಾದ ಪ್ರಿಯಾಂಕಾ ಇವಳೀಗೆ 2009 ನೇ ಸಾಲಿನ ಮೇ ತಿಂಗಳಲ್ಲಿ ಪರಮೇಶ್ವರ ತಂದೆ ಚಂದ್ರಶಾ ಮಲಶೇಟ್ಟಿ ಸಾ|| ಧುತ್ತರಗಾಂವ ಇವರೊಂದಿಗೆ ವಿವಾಹ ಮಾಡಿ ಕೊಟ್ಟಿರುತ್ತೇವೆ, ಮದುವೆ ಕಾಲಕ್ಕೆ 50,000/- ರೂಪಾಯಿ ಹುಂಡಾ, 3 ತೊಲೆ ಬಂಗಾರ ಇವುಗಳನ್ನು ವರದಕ್ಷಿಣೆ ಅಂತ ನೀಡಿದ್ದು ಕರಾರಿನಂತೆ ಇನ್ನು 2 ತೊಲೆ ಬಂಗಾರ ಕೊಡುವದು ಬಾಕಿ ಇತ್ತು, ಕೊಡಬೇಕಾದ ಇನ್ನು 2 ತೊಲೆ ಬಂಗಾರ, ಇನ್ನು 50000/- ರೂಪಾಯಿ ಇವುಗಳನ್ನು ನಿನ್ನ ತವರು ಮನೆಯಿಂದ ತರುವಂತೆ ನನ್ನ ಮಗಳಿಗೆ ಗಂಡನಾದ ಪರಮೇಶ್ವರ ತಂದೆ ಚಂದ್ರಶಾ ಮಲಶೇಟ್ಟಿ, ಅತ್ತೆ ಶಾಂತಾಬಾಯಿ ಗಂಡ ಪರಮೇಶ್ವರ ಮಲಶೇಟ್ಟಿ, ಭಾವನಾಧ ರಾಜೇಂದ್ರ ತಂದೆ ಚಂದ್ರಶಾ ಮಲಶೇಟ್ಟಿ, ನಗೇಣಿಯಾದ ಪ್ರೇಮಿಳಾ ಗಂಡ ರಾಜೇಂದ್ರ ಮಲಶೇಟ್ಟಿ, ನಾದಿನಿಯಾದ ಜಗದೇವಿ ತಂದೆ ಚಂದ್ರಶಾ ಮಲಶೇಟ್ಟಿ ಇವರೆಲ್ಲರೂ ಮದುವೆಯಾದ 3 ತಿಂಗಳ ನಂತರ ಪ್ರಿಯಾಂಕಳಿಗೆ ವರದಕ್ಷಿಣೆ ಕಿರುಳ ಕೊಟ್ಟು ದಿನಾಂಕ 13/08/2015 ರಂದು ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಹ್ನ 05.00 ಪಿ.ಎಮ ಮಧ್ಯದ ಅವಧೀಯಲ್ಲಿ ಹೊಡೆ ಬಡೆ ಮಾಡಿ ಕೊಲೆ ಮಾಡಿ ತಾವು ಮಾಡಿದ ಕೊಲೆಯನ್ನು ಮುಚ್ಚಿಹಾಕಲು ಮತ್ತು ಸಾಕ್ಷಿ ನಾಶ ಪಡಿಸಲು ಪ್ರಿಯಾಂಕ ಇವಳು ಊರುಲು ಹಾಕಿಕೊಂಡು ಸತ್ತಿರುತ್ತಾಳೆ ಅಂತ ಸುಳ್ಳು ಸುದ್ದಿ ಹಬ್ಬಿರುತ್ತಾರೆ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಕೊಟ್ಟ ಲಿಖಿತ ಫಿರ್ಯಾದಿ ಸಾರಾಂಶದ ಮೇರೆಗೆ ನಿಂಬರ್ಗಾ ಪೊಲೀಸ ಠಾಣೆ ಗುನ್ನೆ ನಂ. 95/2015 ಕಲಂ 323, 498 (), 506, 302, 201, 304 (ಬಿ), ಸಂ 149 ಐಪಿಸಿ ಮತ್ತು 3 , 4 ಡಿಪಿ ಕಾಯ್ದೆ 1961 ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಕಮಲಾಪೂರ ಪೊಲೀಸ ಠಾಣೆ : ದಿನಾಂಕ:14-08-2015 ರಂದು ಬೆಳಿಗ್ಗೆ  09-00 ಗಂಟೆಗೆ ಫಿರ್ಯಾಧಿದಾರರಾದ ಶ್ರೀ ಶಿವಲಿಂಗಪ್ಪಾ ತಂದೆ ಸಂಗಪ್ಪಾ ಪೊಲೀಸ ಪಾಟೀಲ ಸಾ: ದಿನಸಿ (ಕೆ) ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ             ನಾನು ನನ್ನ ವ್ಯವಹಾರಕ್ಕೆ ಅನುಕುಲವಾಗಲು ಮತ್ತು ನಾನು ಖರಿದಿಸಿದ ವಸ್ತುಗಳನ್ನು ಸಾಗಾಟ ಮಾಡುವ ಕುರಿತು ಒಂದು ಲಾರಿ ನಂ ಎಪಿ 22 ಡಬ್ಲೂ 0844 ನೇದ್ದು 6 ಲಕ್ಷ 70 ಸಾವೀರ ರುಪಾಯಿಗೆ ಖರಿದಿ ಮಾಡಿದ್ದು ಸದರಿ ಲಾರಿಯನ್ನು ನನ್ನ ವ್ಯವಹಾರ ಸಂಬಂದ ಬಳಕೆ ಮಾಡುತ್ತಾ ಬಂದಿದ್ದು ಇರುತ್ತದೆ. ಸದರಿ ನನ್ನ ಲಾರಿ ಮೇಲೆ ಶ್ರೀ ಸಿದ್ದು ತಂದೆ ಈರಣ್ಣ ಬಿರಾದಾರ ಸಾ: ಹುಣಚಕೇರಾ ಇತನು ಚಾಲಕ ಅಂತ ಕೆಲಸ ಮಾಡಿಕೊಂಡು ಬಂದಿದ್ದು ಮತ್ತು ಕ್ಲೀನರ ಅಂತ ನಮ್ಮ ಗ್ರಾಮದ ಗುಂಡಪ್ಪ ತಂದೆ ಲಕ್ಷ್ಮಣ ಇತನು ಕೆಲಸ ಮಾಡಿಕೊಂಡಿದ್ದು ನಮ್ಮ ಲಾರಿ ಬಾಡಿಗೆ ಮೇಲೆ ಹೊಗದೆ ಇದ್ದರೆ ಲಾರಿಯನ್ನು ಕಮಲಾಪೂರ ಗ್ರಾಮದ ಮಾಟುರ ಪೇಟ್ರೋಲ ಪಂಪದಲ್ಲಿ ನಿಲ್ಲಿಸುತ್ತಾ ಬಂದಿದ್ದು ಇರುತ್ತದೆ.ನಮ್ಮ ಲಾರಿ ಚಾಲಕನಾದ ಶ್ರೀ ಸಿದ್ದು ಬಿರಾದಾರ ಇತನು ದಿನಾಂಕ 09.08.2015 ರಂದು ರಾತ್ರಿ 10 ಗಂಟೆಯ ಸುಮಾರಿಗೆ ನಮ್ಮ ಲಾರಿ ನಂ ಎಪಿ 22 ಡಬ್ಲೂ 0844 ನೇದ್ದು ಕಮಲಾಪೂರ ಗ್ರಾಮದ ಮಾಟುರ ಪೇಟ್ರೋಲ ಪಂಪದಲ್ಲಿ ನಿಲ್ಲಿಸಿ ನನಗೆ ಪೂನ ಮಾಡಿ ತಿಳಿಸಿದ್ದೆನೆಂದರೆ ನಾನು ತನ್ನ ಗ್ರಾಮಕ್ಕೆ ಹೋಗುತ್ತಿದ್ದು ನಾಳೆ ಬೆಳ್ಳಿಗ್ಗೆ ಬಂದು ಲಾರಿ ತೆಗೆದುಕೊಂಡು ಹೊಗುತ್ತೆನೆ ಅಂತ ಹೇಳಿ ನಮ್ಮ ಲಾರಿಯಲ್ಲಿ ಸದರಿ ಪೇಟ್ರೋಲ ಪಂಪದಲ್ಲಿ ನಿಲ್ಲಿಸಿ ಚಾಲಕನು ತನ್ನ ಗ್ರಾಮಕ್ಕೆ ಹೊಗಿದ್ದು ಕ್ಲೀನರ ಇತನು ನಮ್ಮ ಗ್ರಾಮಕ್ಕೆ ಬಂದಿದ್ದು ಇರುತ್ತದೆ. ದಿನಾಂಕ 10.08.2015 ರಂದು ಬೆಳ್ಳಿಗ್ಗೆ 7 ಗಂಟೆಯ ಸುಮಾರಿಗೆ ನಮ್ಮ ಲಾರಿ ಚಾಲಕನಾದ ಸಿದ್ದು ಬಿರಾದಾರ ಇತನು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ಮಾಟುರ ಪೇಟ್ರೊಲ ಪಂಪದಲ್ಲಿ ನಿಲ್ಲಿಸಿದ ನಮ್ಮ ಲಾರಿ ಕಾಣುತ್ತಿಲ್ಲ ಅಂತ ಹೆಳಿದ್ದು ಆಗ ನಾನು ಗಾಬರಿಗೊಂಡು ಕ್ಲೀನರನನ್ನು ಕರೆದುಕೊಂಡು ಕಮಲಾಪೂರದಲ್ಲಿರುವ ಮಾಟೂರ ಪೇಟ್ರೋಲ ಪಂಪಕ್ಕೆ ಬಂದು ನೋಡಲು ನಮ್ಮ ಲಾರಿ ಇರಲಿಲ್ಲ. ನಾನು ನಮ್ಮ ಚಾಲಕ ಮತ್ತು ಕ್ಲೀನರ ಕೂಡಿಕೊಂಡು ಎಲ್ಲಾ ಕಡೆಗೆ ಹುಡುಕಾಡಿದ್ದು ಪತ್ತೆಯಾಗಿರುವದಿಲ್ಲ. ಸದರಿ ನಮ್ಮ ಲಾರಿ ಪತ್ತೆ ಕುರಿತು ನಾವು ಹುಮನಾಬಾದ, ಬಸವಕಲ್ಯಾಣ, ಬೀದರ ಉಮಗರ್ಾ ಇತ್ಯಾದಿ ಕಡೆಗಳಲ್ಲಿ ಹುಡುಕಾಡಿದ್ದು ಮತ್ತು ನಮಗೆ ಪರಿಚಯಸ್ಥರಲ್ಲಿ ವಿಚಾರಿಸಿದ್ದು ಪತ್ತೆಯಾಗಿರುವದಿಲ್ಲ. ದಿನಾಂಕ 09.08.2015 ರಂದು ರಾತ್ರಿ 10 ಗಂಟೆಯಿಂದ ದಿನಾಂಕ 10.08.2015 ರಂದು ಬೆಳ್ಳಿಗ್ಗೆ 7 ಗಂಟೆಯ ಮಧ್ಯದಲ್ಲಿ ಮಾಟುರ ಪೇಟ್ರೋಲ ಪಂಪದಲ್ಲಿ ನಿಲ್ಲಿಸಿದ್ದ ನಮ್ಮ ಲಾರಿ ನಂ ಎಪಿ 22 ಡಬ್ಲೂ 0844 :ಕಿ: 6 ಲಕ್ಷ 70 ಸಾವೀರ ರೂಪಾಯಿ ನೇದ್ದು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಸದರಿ ಲಾರಿ ಪತ್ತೆ ಕುರಿತು ಹೋಗಿದ್ದರಿಂದ ಫಿಯರ್ಾದಿ ನೀಡಲು ತಡವಾಗಿರುತ್ತದೆ. ಕಾರಣ ಮಾನ್ಯರವರು ಕಳುವಾದ ನಮ್ಮ ಲಾರಿ ಪತ್ತೆ ಮಾಡಿಕುಡಬೇಕು ಮತ್ತು ನಮ್ಮ ಲಾರಿ ಕಳ್ಳತನ ಮಾಡಿಕೊಂಡು ಹೋದವರ ವಿರುಧ್ದ ಕಾನುನ ಕ್ರಮ ಕೈಕೊಳ್ಳಬೇಕು ಅಂತ ಹೇಳಿಕೆ ಫಿರ್ಯಾಧ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ-106/2015 ಕಲಂ.379,.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲಾಗಿರುತ್ತದೆ. 

No comments: