POLICE BHAVAN KALABURAGI

POLICE BHAVAN KALABURAGI

22 July 2015

Kalaburagi District Reported Crime

ಆಕ್ರಮ ಮರಳು ಸಾಗಿಸುತ್ತಿದ್ದ ವಾಹನಗಳ ಜಪ್ತಿ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 21-07-2015 ರಂದು ಆನೂರ ರೋಡಿಗೆ ಇರುವ ಡಿಗ್ರಿ ಕಾಲೇಜ ಹತ್ತಿರ ಟಿಪ್ಪರ ನಂಬರ ಕೆಎ-32 ಸಿ-726 ನೇದ್ದರಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಮೇರೆಗೆ ಶಿವರಾಯ ಎ.ಎಸ್.ಐ ಅಫಜಲಪೂರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಡಿಗ್ರಿ ಕಾಲೇಜ ಹತ್ತಿರ ಹೋಗಿ ನೋಡಲಾಗಿ ಶಿವುಕುಮಾರ ನಾಟಿಕಾರ ಇವರು ಮತ್ತು ಅವರ ಜೋತೆಗೆ ಮಲ್ಲು ನಾಟಿಕಾರ ಇವರು ಇದ್ದು, ಸದರಿಯವರಿಗೆ ವಿಚಾರಿಸಿದಾಗ, ಶಿವುಕುಮಾರ ನಾಟಿಕಾರ ಇವರು ಮರಳು ತುಂಬಿದ ಟಿಪ್ಪರನ್ನು ತೋರಿಸಿ ಇದೆ ಟಿಪ್ಪರನಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಹೇಳಿ ಟಿಪ್ಪರನ್ನು ತೋರಿಸಿದರು, ಸದರಿ ಟಿಪ್ಪರನ ಚಾಲಕ ಓಡಿ ಹೋಗಿದ್ದನು. ನಂತರ ಸದರಿ ಟಿಪ್ಪರನ್ನು ಪಂಚರ ಸಮಕ್ಷಮ ಚಕ್ಕ ಮಾಡಲು, ಮರಳು ತುಂಬಿದ್ದು ಇದ್ದು ಅದರ ನಂ ಕೆಎ-32 ಸಿ-726 ಅಂತಾ ಇದ್ದಿತ್ತು. ಸದರಿ ಟಿಪ್ಪರನಲ್ಲಿದ್ದ ಮರಳಿ ಅಂದಾಜು ಕಿಮ್ಮತ್ತು 5000/- ರೂ ಇರಬಹುದು ನಂತರ ಸದರಿ ಮರಳು ತುಂಬಿದ ಟಿಪ್ಪರನ್ನು  ಪಂಚರ ಸಮಕ್ಷಮ  ಜಪ್ತಿ ಮಾಡಿಕೊಂಡು  ಮರಳಿ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 21-07-2015 ರಂದು ಶಿವಪೂರ ಬನ್ನಟ್ಟಿ  ಗ್ರಾಮದ ಕಡೆಯಿಂದ ಅಕ್ರಮವಾಗಿ ಕಳ್ಳತನದಿಂದ ಟ್ರಾಕ್ಟರದಲ್ಲಿ  ಮರಳು ತುಂಬಿಕೊಂಡು ಹೊಗುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ  ಸುರೇಶ ಬೆಂಡೆಗುಂಬಳ ಪಿ.ಎಸ್.ಐ ಅಫಜಲಪೂರ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಫಜಲಪೂರ ಆನೂರ ರೋಡ ಡಿಗ್ರಿ ಕಾಲೇಜ ಹತ್ತಿರ  ಇದ್ದಾಗ  ಎದುರುಗಡೆಯಿಂದ ಒಂದು ಟ್ರಾಕ್ಟರ ಬರುತ್ತಿದ್ದು ಸದರಿ ಟ್ರಾಕ್ಟರ ಚಾಲಕ ನಮ್ಮ ಜೀಪ ನೋಡಿ ತನ್ನ  ಟ್ರಾಕ್ಟರನ್ನು  ನಿಲ್ಲಿಸಿ  ಓಡಿ ಹೋಗಿದ್ದು. ನಂತರ  ಪಂಚರ ಸಮಕ್ಷಮ ಟ್ರಾಕ್ಟರ  ಚಕ್ಕ ಮಾಡಲು, 1) ARJUN MAHINDRA  ಕಂಪನಿಯದ್ದು ಇದ್ದು ಅದರ ಮಾಡೆಲ್ ನಂ- 605DI SL No- NSCA01140BE ಅಂತ ಇದ್ದು, ಸದರಿ ಟ್ರಾಕ್ಟರ ಟ್ರೈಲಿಯಲ್ಲಿ ಮರಳು ತುಂಬಿದ್ದು ಇದ್ದಿತ್ತು. ಸದರಿ ಟ್ರಾಕ್ಟರನಲಿದ್ದ ಮರಳಿ ಅಂದಾಜು ಕಿಮ್ಮತ್ತು 3000/- ರೂ ಇರಬಹುದು ನಂತರ ಸದರಿ ಮರಳು ತುಂಬಿದ ಟ್ರಾಕ್ಟರನ್ನು  ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು  ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 21-07-2015 ರಂದು ಶಿವಪೂರ ಗ್ರಾಮ ಕಡೆಯಿಂದ ಒಂದು ಟ್ರಾಕ್ಟರದಲ್ಲಿ ಮರಳು ತುಂಬಿಕೊಂಡು ಅಫಜಲಪೂರ ಕಡೆ ಹೊರಟಿರುತ್ತಾರೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ಶಿವರಾಯ ಎಎಸ್ಐ  ಅಫಜಲಪೂರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಫಜಲಪೂರದ ಆನೂರ ರೋಡಿನ ಡಿಗ್ರಿ ಕಾಲೇಜ  ಹತ್ತಿರ ಇದ್ದಾಗ ಶಿವಪೂರ ಬನ್ನಟ್ಟಿ ಗ್ರಾಮದ ಕಡೆಯಿಂದ ಒಂದು ಟ್ರಾಕ್ಟರ ಮರಳು ತುಂಬಿಕೊಂಡು ಬರುತ್ತಿದ್ದು , ಸದರಿ ಟ್ರಾಕ್ಟರ ಚಾಲಕನು ನಮ್ಮನ್ನು ನೋಡಿ ತನ್ನ  ಟ್ರಾಕ್ಟರನ್ನು ಸ್ಥಲದಲ್ಲೆ ಬಿಟ್ಟು ಓಡಿ ಹೋದನು, ನಂತರ ನಾನು ಪಂಚರ ಸಮಕ್ಷಮ ಟ್ರಾಕ್ಟರ ಚಕ್ಕ ಮಾಡಲು ಸದರಿ ಟ್ರಾಕ್ಟರದಲ್ಲಿ  ಮರಳು ಇತ್ತು, ಸದರಿ ಟ್ರಾಕ್ಟರ ನಂಬರ ನೋಡಲಾಗಿ  ಸ್ವರಾಜ ಕಂಪನಿಯ ಟ್ರ್ಯಾಕ್ಟರ ಇಂಜಿನ  ನಂ 47-3029SSDO3407 ಅಂತಾ ಇದ್ದು ಅದರ ಟ್ರೈಲಿ ನಂ ಕೆಎ-32 ಟಿಎ-479 ಅಂತ ಇದ್ದು ಸದರಿ ಟ್ರ್ಯಾಕ್ಟರದಲ್ಲಿದ್ದ ಮರಳಿನ ಅಂದಾಜ ಕಿಮ್ಮತ 3,000/- ರೂ ಆಗಬಹುದು, ನಂತರ ಸದರಿ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಿಸುತ್ತಿದ್ದ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮೀಟರ ಬಡ್ಡಿ ಹಣ ಕೊಡುವಂತೆ ಒತ್ತಾಯಿಸಿ ಜೀವದ ಬೆದರಿಕೆ ಹಾಕಿದ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಶಿವರಣಪ್ಪ ತಂದೆ ಮಲಕಾಜಪ್ಪ ಯಳಸಂಗಿ ಇವರು 1999 ನೇ ಸಾಲಿನಲ್ಲಿ ಮನೆಯ ಪ್ರಾಪಂಚಿಕ ಅಡಚಣೆಗಾಗಿ ಶ್ರೀ ಚಂದ್ರಶಾ ತಂದೆ ರೇವಣಸಿದ್ದ ಬುರಾಣಪೂರ ಸಾ|| ಕುಡಕಿ ಇತನಿಂದ ರೂಪಾಯಿ 1,00,000/- [ ಒಂದು ಲಕ್ಷ ರೂಪಾಯಿ ] ಪ್ರತಿ ತಿಂಗಳಿಗೆ ಶಕಡಾ 5 ರಂತೆ ಪಡೆದುಕೊಂಡಿರುತ್ತಾರೆ. ಅದರಂತೆ ಪ್ರತಿ ತಿಂಗಳಿಗೆ 5,000/- ರೂಪಾಯಿಯಂತೆ 3 ವರ್ಷಕ್ಕೆ 1,80,000/- ರೂಪಾಯಿ ಬಡ್ಡಿ ಹಾಗೂ 1,00,000/- ರೂ. ಅಸಲು ಹೀಗೆ ಒಟ್ಟು 2,80,000/- ರೂಪಾಯಿ ಹಣವನ್ನು 2002 ನೇ ಸಾಲಿನಲ್ಲಿ ಮರಳಿ ಕೊಟ್ಟಿರುತ್ತಾರೆ. ಆದರೆ ಪ್ರತಿ ತಿಂಗಳಿಗೆ ಬಡ್ಡಿ 5000/- ರೂಪಾಯಿಗಳಿಗೆ ಶೆಕಡಾ 5 ರಂತೆ ಚಕ್ರ ಬಡ್ಡಿ ಸೇರಿಸಿ ಒಟ್ಟು 250/- ಪ್ರತಿ ತಿಂಗಳಂತೆ 36 ತಿಂಗಳುಗಳಿಗೆ ಇನ್ನು ಹೆಚ್ಚಿನ 9,000/- ರೂಪಾಯಿ ಹಣವನ್ನು ಕೊಡಬೇಕು ಅಂತ ತಕರಾರು ಮಾಡಿ ಬಿಟ್ಟಿದ್ದ 2002 ನೇ ಸಾಲಿನಿಂದ ಇಲ್ಲಿಯವರೆಗೆ 9000/- ರೂಪಾಯಿ ಚಕ್ರ ಬಡ್ಡಿ ಹಣಕ್ಕೆ ಶೆಕಡಾ 5 ರಂತೆ ಪ್ರತಿ ತಿಂಗಳು 450/- ರೂಪಾಯಿನಂತೆ ಒಟ್ಟು 13 ವರ್ಷಗಳಿಗೆ 70,200/- ರೂಪಾಯಿ ಹಣ ಇನ್ನು ಕೊಡಬೇಕು ಅಂತ ನನಗೂ ಮತ್ತು ನನ್ನ ಗಂಡನಿಗೆ ಸತಾಯಿಸುತ್ತಿದ್ದಾನೆ, ಇದರ ಬಗ್ಗೆ ನಾವು ನಮ್ಮೂರಿನ ಹಿರಿಯರಸ ಮಕ್ಷಮದಲ್ಲಿ ಅವನಿಗೆ ಮತ್ತು ಆತನ ತಮ್ಮನಾದ ಶಿವಣ್ಣ ತಂದೆ ರೇವಣಸಿದ್ದ ಬುರಾಣಪೂರ ಇತನಿಗೆ ಕರೆಯಿಸಿ ಎಷ್ಟೆ ತಿಳುವಳಿಕೆ ಹೇಳಿದರು ಸಹ ಅದಕ್ಕೆ ಒಪ್ಪದೆ ಇಬ್ಬರೂ ಸೇರಿ ನಮ್ಮ ಮನೆಗೆ ಬರುವದು, ನನಗೆ ಮತ್ತು ನನ್ನ ಗಂಡನಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಭಯಪಡಿಸುವದು ಮಾಡುತ್ತಾ ಬಂದಿರುತ್ತಾರೆ. ಅಲ್ಲದೆ 3 ವರ್ಷಗಳಿಂದ ನಮಗೆ ಅಂಜಿಸಿ ನಮ್ಮ ಹೊಲ ಸರ್ವೆ ನಂ. 365 ಅದು 6 ಎಕರೆ 37 ಗುಂಟೆ ಜಮೀನಿದ್ದು ಸದರಿ ಜಮೀನನ್ನು ದಬ್ಬಾಳಿಕೆಯಿಂದ ಅವರೆ ಸಾಗುವಳಿ ಮಾಡಿ ಅದರ ಮಾಲು ಅವರೆ ಉಣ್ಣುತ್ತಿದ್ದಾರೆ. ನಾನು ಮತ್ತು ನನ್ನ ಗಂಡ ದಿನಾಂಕ 14/07/2015 ರಂದು ಹೊಲ ನೋಡಿಕೊಂಡು ಬರಲು ಊರಿಗೆ ಹೋದಾಗ ಚಂದ್ರಶಾ ತಂದೆ ರೇವಣಸಿದ್ದು ಬುರಾಣಪೂರ, ಶಿವಣ್ಣ ತಂದೆ ರೇವಣಸಿದ್ದು ಬುರಾಣಪೂರ, ರಾಮಣ್ಣ , ಗುಂಡಪ್ಪ ಈ ನಾಲ್ಕು ಜನರು ಮಾಡಿಯಾಳ ಗ್ರಾಮದ ನಮ್ಮ ಮನೆಯ ಹತ್ತಿರ ಬಂದು ಮೀಟರ ಬಡ್ಡಿ ಹಣ ಇನ್ನು 70,200/- ರೂಪಾಯಿ ಹಣ ಕೊಡದೆ ಹೋದಲ್ಲಿ ಒಂದು ವಾರದಲ್ಲಿ ನಿಮ್ಮಿಬ್ಬರಿಗೂ ಊರಲ್ಲಿ ಇಡುವದಿಲ್ಲ ಅಂತ ಸಾಯಂಕಾಲ ಮೋಟಾರ ಸೈಕಲ ಮೇಲೆ ಬಂದು ಭಯಪಡಿಸಿ ಹೋಗಿರುತ್ತಾರೆ. ನನ್ನ ಗಂಡ ತೆಗೆದುಕೊಂಡ 1,00,000/- ರೂಪಾಯಿ ಹಣಕ್ಕೆ ಕೇವಲ 3 ವರ್ಷಗಳಲ್ಲಿ 1,80,000/- ಬಡ್ಡಿ ಹಣ ಸೇರಿಸಿ ಒಟ್ಟು 2,80,000/- ಹಣ ಮರಳಿ ಕೊಟ್ಟರು ಸಹ ಇನ್ನು 70,200/- ರೂಪಾಯಿ ಮೀಟರ ಬಡ್ಡಿ ಹಣ ಕೊಡಲು ಪೀಡಿಸುತ್ತಾ ಭಯಪಡಿಸುತ್ತಾ ದಬ್ಬಾಳಿಕೆಯಿಂದ ನನ್ನ ಹೊಲವನ್ನು ಸಾಗುವಳಿ ಮಾಡುತ್ತಿರುವ ಚಂದ್ರಶಾ, ಶಿವಣ್ಣ, ರಾಮಣ್ಣ, ಗುಂಡಪ್ಪ ಸಾ|| ಎಲ್ಲರೂ ಕುಡಕಿ ಇವರ ಮೇಲೆ ಸೂಕ್ತ ಕ್ರಮ ಜರುಗಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: