POLICE BHAVAN KALABURAGI

POLICE BHAVAN KALABURAGI

18 June 2015

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಚೌಕ ಠಾಣೆ : ದಿನಾಂಕ: 17.06.2015 ರಂದು ಠಾಣಾ ಸರಹದ್ದಿನಲ್ಲಿ ಬರುವ ಮುಸ್ಲಿಂ ಚೌಕ ಮೋಮಿನಪುರ ಜಬ್ಬಾರ ಹೊಟೇಲ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದಿದ್ದರಿಂದ ಶ್ರೀ ಹಸೇನ ಬಾಷಾ ಪಿ.ಎಸ್.ಐ (ಕಾ.ಸು)  ಚೌಕ ಪೊಲೀಸ್ ಠಾಣೆ ಕಲಬುರಗಿ ರವರು ತಮ್ಮ ಮೇಲಾಧಿಕಾರಿಗಳಾದ ಡಿ.ಎಸ್.ಪಿ (ಬಿ) ಉಪ ವಿಭಾಗ ಇವರಿಗೆ ಮಾಹಿತಿ ತಿಳಿಸಿದ ಅವರ ಮಾರ್ಗದರ್ಶನದಂತೆ ನಮ್ಮ ಠಾಣೆಯ ಪಿ.ಐ ಸಾಹೇಬರಾದ ಉಮಾಶಂಕರ ಬಿ. ಅವರ ನೇತೃತ್ವದಲ್ಲಿ ಸಿಬ್ಬಂದಿ ಹಾಗು ಪಂಚರೊಂದಿಗೆ ಮುಸ್ಲಿಂ ಚೌಕ ಮೋಮಿನಪುರ ಜಬ್ಬಾರ ಹೊಟೇಲ ಹತ್ತಿರ ಗೋಡೆಯ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಹೋಗಿ ಬರುವ ಸಾರ್ವಜನಿಕರಿಂದ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡೆಸಿಕೊಂಡು ದಾಳಿಮಾಡಿ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಸೈಯದ ಉಸ್ಮಾನ ತಂದೆ ಬಾಬುಮಿಯಾ ಸಾ: ದಾವೂದ ಬೇಕರಿ ಹತ್ತಿರ ಯದುಲ್ಲಾ ಕಾಲೋನಿ ಕಲಬುರಗಿ ಅಂತಾ ಹೆಸರು ವಿಳಾಸ ಹೇಳಿದ್ದು ಸದರಿ ವ್ಯಕ್ತಿಯ ಅಂಗ ಜಪ್ತಿ ಮಾಡಲಾಗಿ ಅವನ ಹತ್ತಿರ ನಗದು ಹಣ 1170/-ರೂಪಾಯಿ, ಒಂದು ಮಟಕಾ ಚೀಟಿ , ಒಂದು ಬಾಲಪೆನ್  ವಶಪಡಿಸಿಕೊಂಡು ಸದರಿಯವನೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮಹಿಬೂಬಶೇಖ ತಂದೆ ಮೀರಾಸಾಬಶೇಖ ಸಾ: ದೇವಿನಗರ ಆಳಂದ ರಸ್ತೆ ಕಲಬುರಗಿ ಇವರು ತಮ್ಮ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಇದ್ದ ಪ್ರಯುಕ್ತ ನನಗೆ ನಮ್ಮ ನೆಂಟರು ಬೀಗರಿಗೆ ಕಾರ್ಯಕ್ರಮದ ಬಗ್ಗೆ ಹೇಳಲು ಹೋಗಲು ನನಗೆ ವಾಹನದ ಅವಶ್ಯಕತೆ ಇರುವದರಿಂದ ನನ್ನ ಗೆಳೆಯನಾದ ಯಾದಗಿರ ಜಿಲ್ಲೆಯ ಶಹಾಪುರ ತಾಲ್ಲೂಕಿನವನಾದ ಶ್ರೀ ಅಯ್ಯಣಗೌಡ ತಂದೆ ಬಸಣ್ಣಗೌಡ ಕುಡಮನಳ್ಳಿ ಇತನ MAHINDRA& MAHINDRA BOLERO SLX JEEP KA-33 M-2027 ವಾಹನ ಇರುವದರಿಂದ ನಾನು ದಿನಾಂಕ:22/01/2015 ರಂದು ಆತನ ಹತ್ತಿರ ಹೋಗಿ ನನ್ನ ಗೆಳೆಯ ಅಯ್ಯಣಗೌಡ ಇವರಿಗೆ ನಮ್ಮ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಇದೆ ನನಗೆ ಅಲ್ಲಲ್ಲಿ ಹೋಗಿ ಬರಲು 3-4 ದಿವಸ ವಾಹನ ಕೊಡಿ ಅಂತಾ ಕೇಳಿದಾಗ ಆಯಿತು ಅಂತಾ ಹೇಳಿ ನನಗೆ ಅವನು ಆತನ MAHINDRA&MAHINDRA BOLERO SLX JEEP KA-33,M-2027 ಜೀಪ ಕೀಲಿ ಕೈ ಕೊಟ್ಟಿದ್ದರಿಂದ ನಾನು ಸಾಯಂಕಾಲ 6.00 ಗಂಟೆ ಸುಮಾರಿಗೆ ಅಲ್ಲಿಂದ ವಾಹನ ತೆಗೆದುಕೊಂಡು ಬಂದು ರಾತ್ರಿ 11.00 ಗಂಟೆ ಸುಮಾರಿಗೆ ನಮ್ಮ ಮನೆಯ ಮುಂದೆ ನಿಲ್ಲಿಸಿ ವಾಹನಕ್ಕೆ ಲಾಕ ಮಾಡಿ ನಾನು ಮನೆಯಲ್ಲಿ ಊಟಮಾಡಿ ಮಲಗಿಕೊಂಡಿದ್ದು ಬೆಳಗ್ಗೆ ದಿನಾಂಕ:23/01/2015 ರಂದು 6.30 ಗಂಟೆಗೆ ಮನೆಯಿಂದ ಹೊರಗೆ ಬಂದಿದ್ದು ನಮ್ಮ ಮನೆಯ ಮುಂದೆ ವಾಹನ ಇರಲಿಲ್ಲ ನಾನು ಗಾಬರಿಯಾಗಿ ಈ ವಿಷಯ ವಾಹನದ ಮಾಲಿಕ ಅಯ್ಯಣ್ಣಗೌಡ ಇವರಿಗೆ ತಿಳಿಸಿದ್ದು ಅವರು ಹೀಗಾದರೆ ನೀನು ಪೊಲೀಸ ಠಾಣೆಗೆ ಹೋಗಿ ಮಾಹಿತಿ ನೀಡು ಅಂತಾ ಹೇಳಿದಾಗ ನಾನು ಪೊಲೀಸ ಠಾಣೆಗೆ ಬಂದು ಮಾಹಿತಿ ನೀಡಿ ವಾಹನದ ಬಗ್ಗೆ ನಾನು ಹುಡುಕಾಡಿ ಮತ್ತೆ ಬಂದು ದೂರುಸಲ್ಲಿಸುತ್ತೇನೆ ಅಂತಾ ಹೋಗಿರುತ್ತೇನೆ. ಅಂದಿನಿಂದ ನಾನು ಎಲ್ಲಾ ಕಡೆ ಹುಡುಕಾಡಿದರೂ ವಾಹನ ಸಿಕ್ಕಿರುವದಿಲ್ಲಾ ಆದ್ದರಿಂದ ನಾನು ತಡವಾಗಿ ಠಾಣೆಗೆ ಬಂದಿರುತ್ತೇನೆ. ಯಾರೋ ಕಳ್ಳರು MAHINDRA&MAHINDRA BOLERO SLX JEEP KA-33 M-2027 CHASSIS NO.MA1PS2GAKA2C79155, ENGINE NO. GAA4C30865 ಅ.ಕಿ.4,69,000/-ರೂ ಬೆಲೆ ಬಾಳುವದು ಕಳುವುಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಗಿದೆ.
ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 17.06.2015 ರಂದು ಮುಂಜಾನೆ 09.30 ಗಂಟೆಗೆ ಕೃಷಿ ಕಛೇರಿ ಹತ್ತಿರ ಜೇವರಗಿ ಕಲಬುರಗಿ ರಾಷ್ಟ್ರೀಯ ಹೆದ್ದಾರಿ ಮೇಲೆ ಅಂಬರೀಷ ತಂದೆ ಬಸವಕಲ್ಯಾಣಪ್ಪ ಸಜ್ಜನ್ ಸಾ: ಕಟ್ಟಿ ಸಂಗಾವಿ ಈತನು ತನ್ನ ಮೋಟಾರು ಸೈಕಲ್ ನಂ ಕೆ.ಎ32ವಿ7767 ನೇದ್ದರ ಮೇಲೆ ತನ್ನಮಕ್ಕಳಾದ ರಕ್ಷೀತಾ ಮತ್ತು ಬಸವಕಲ್ಯಾಣಪ್ಪ ಇವರುಗಳನ್ನು ಕೂಡಿಸಿಕೊಂಡು ತನ್ನ ಊರಿನಿಂದ ಜೇವರಗಿ ಕಡೆಗೆ ಬರುತ್ತಿದ್ದ ವೇಳೆಗೆ ಜೇವರಗಿ ಕಡೆಯಿಂದ ಟಿಪ್ಪರ್ ನಂ ಕೆಎ.32ಸಿ1416 ನೇದ್ದರ ಚಾಲಕನು ತನ್ನ ಟಿಪ್ಪರ್‌ ನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರೊಡಿನ ಎಡಬದಿಯಿಂದ ನಿಧಾನವಾಗಿ ಹೋಗುತ್ತಿದ್ದ ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದಿದ್ದಕ್ಕೆ ಮೋಟಾರು ಸೈಕಲ್‌ ಮೇಲೆ ಇದ್ದ ಮೂರು ಜನರಿಗೆ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೆ ಮೃತಪಟ್ಟಿದ್ದು ಅಪಘಾತ ನಂತರ ಟಿಪ್ಪರ್ ಚಾಲಕನು ತನ್ನ ಟಿಪ್ಪರ್‌ನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಶ್ರೀ ಶರಣಪ್ಪ ತಂದೆ ವಿರುಪಾಕ್ಷಪ್ಪ ಸಜ್ಜನ್ ಸಾ: ಹಾಗರಗುಂಡಗಿ ತಾ : ಕಲಬುರಗಿ ಹಾ:ವ: ವಿಧ್ಯಾ ನಗರ ಜೇವರಗಿ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಕಳವು ಪ್ರಕರಣ :
ಸೇಡಂ ಠಾಣೆ : ಶ್ರೀ ಮಹ್ಮದ ಖದೀರುದ್ದಿನ ತಂದೆ ಮಹ್ಮದ ಗೌಸುದ್ದಿನ ಸಾ|| ಶಾಸ್ತ್ರೀ ನಗರ ಸೇಡಂ ಇವರು ದಿನಾಂಕ 16/06/2015 ರಂದು ಬೆಳಿಗ್ಗೆಯಿಂದ ತನ್ನ ಅಂಗಡಿ ತರೆದು ವ್ಯಾಪಾರ ಮಾಡಿಕೊಂಡು ರಾತ್ರಿ 10-00 ಗಂಟೆಯ ಸಮಯಕ್ಕೆ ನಾನು ನನ್ನ ಅಂಗಡಿ ಮುಚ್ಚಿಕೊಂಡು ಮನೆಗೆ ಹೋದೆನು. ನಂತರ ಇಂದು ದಿನಾಂಕ 17/06/2015 ರಂದು ಬೆಳಿಗ್ಗೆ 06-00 ಗಂಟೆಗೆ ನಮ್ಮ ಅಂಗಡಿ ಇದ್ದ ಕಾಂಪ್ಲೆಕ್ಸನಲ್ಲಿ ದಿನಾಲು ಕಸಗುಡಿಸುವ ಕುರಿತು ಬರುವ ಶಹಾಬುದ್ದಿನ ಇವರು ನನಗೆ ಫೋನ ಮಾಡಿ ತಿಳಿಸಿದ್ದೇನೆಂದರೆ ನನ್ನ ಅಂಗಡಿ ಪ್ರಿನ್ಸ ಎಲೆಕ್ಟ್ರಾನಿಕ್ಸನ ಶೆಟರ ಎತ್ತಿದ್ದು, ಮತ್ತು ಅದರ ಗ್ಲಾಸ ಇದ್ದ ಬಾಗಿಲು ಮುರಿದು ಗ್ಲಾಸ ಒಡೆದಿದ್ದು ಇರುತ್ತದೆ ಅಂತಾ ಹೇಳಿದರು. ಆಗ ನಾನು ಗಾಬರಿಗೊಂಡು ನನ್ನ ತಮ್ಮನಾದ ಹಫೀಜನೊಂದಿಗೆ ನಮ್ಮ ಅಂಗಡಿಗೆ ಬಂದು ನೋಡಲಾಗಿ ನಮ್ಮ ಅಂಗಡಿಯ ಮುಂದಿನ ಶಟ್ಟರನ ಕೀಲಿ ಮುರಿದಿದ್ದು ಮತ್ತು ಸೈಡಿಗೆ ಇದ್ದ ಇನ್ನೊಂದು ಶೆಟ್ಟರ ಕೀಲಿ ಮುರಿದು ಮೇಲಕ್ಕೆ ಎತ್ತಿದ್ದು, ಗಾಜಿನ ಬಾಗಿಲು ಮುರಿದಿದ್ದು, ಮತ್ತು ಒಳಗೆ ನೋಡಲಾಗಿ ನನ್ನ ಅಂಗಡಿಯಲ್ಲಿ ಇಟ್ಟಿದ್ದ ಒಟ್ಟು 12 ಎಲ.ಇ.ಡಿ. ಟಿ.ವಿಗಳು ಇರಲಿಲ್ಲ. ಅವುಗಳ ಅ.ಕಿ. ರೂ. 1,50,000-00 ಆಗುತ್ತದೆ. ಅವುಗಳನ್ನು ದಿನಾಂಕ 16/06/2015 ರಂದು ರಾತ್ರಿ 10-00 ಗಂಟೆಯಿಂದ ಇಂದು ದಿನಾಂಕ 17/06/2015 ರಂದು ಬೆಳಿಗ್ಗೆ 06-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನನ್ನ ಅಂಗಡಿಯ ಶೆಟ್ಟರ ಮುರಿದು ನನ್ನ ಅಂಗಡಿಯಲ್ಲಿ ಇದ್ದ ಒಟ್ಟು 12 ಎಲ.ಇ.ಡಿ, ಟಿವಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆದ್ದಾರಿ ಬಂದ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಿದ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 17.06.2015 ರಂದು ಕೃಷಿ ಕಛೇರಿ ಹತ್ತಿರ ಜೇವರಗಿ ಕಲಬುರಗಿ ರಾಷ್ಟ್ರೀಯ ಹೆದ್ದಾರಿ ಮೇಲೆ ನಡೆದ ರಸ್ತೆ ಅಪಘಾತದ ಹಿನ್ನೆಲೆಯಲ್ಲಿ ಕೈಲಾಸ ತಂದೆ ಈರಯ್ಯ ಬುಟ್ನಾಳ ಸಂಗಡ 27 ಜನರು ಹಾಗು ಸಂಗಡ ಇತರರು ಕೂಡಿಕೊಂಡು ಜೇವರಗಿ ಕಲಬುರಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೆ ಪರವಾನಿಗೆ ಇಲ್ಲದೆ ಮಾನ್ಯ ಸುಪ್ರೀಂ ಕೋರ್ಟ ರವರ ಯಾವುದೆ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಬಾರದು ಎಂಬ ಆದೇಶವನ್ನು ಉಲ್ಲಂಘನೆ ಮಾಡಿ ತಮ್ಮ ಕೈಯಲ್ಲಿ ಬಡಿಗೆ, ರಾಡುಗಳನ್ನು ಹಿಡಿದುಕೊಂಡು ಏಕಾಎಕಿ ಹೆದ್ದಾರಿಯ ಮೇಲೆ ಹೋಗಿ ಬರುವ ವಾಹನಗಳನ್ನು ತಡೆದು ಚಾಲಕರಿಗೆ ಹಾಗು ಸಾರ್ವಜನಿಕರಿಗೆ ಅವಾಚ್ಯವಾಗಿ ಬೈದು ತಮ್ಮ ಕೈಯಲ್ಲಿದ್ದ ಬಡಿಗೆ ಮತ್ತು ರಾಡುಗಳನ್ನು ತೋರಿಸಿ ಜೀವದ ಬೇದರಿಕೆ ಹಾಕಿ ಸಾರ್ವಜನಿಕರ ತೊಂದರೆ ಕೊಟ್ಟು ಕಾನೂನು ಸೂವ್ಯವಸ್ತೆ ಹದಗೆಡಿಸಿರುತ್ತಾರೆ ಅಂತಾ ಶ್ರೀ. ಪಂಡಿತ. ವಿ. ಸಗರ ಪಿ.ಎಸ್.ಐ ಜೇವರಗಿ ಪೊಲೀಸ್ ಠಾಣೆ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


No comments: