POLICE BHAVAN KALABURAGI

POLICE BHAVAN KALABURAGI

24 May 2015

Kalaburagi District Reported Crimes.

ಜೇವರ್ಗಿ ಪೊಲೀಸ್ ಠಾಣೆ : ಬಸವೇಶ್ವರ ಆಸ್ಪತ್ರೆ ಕಲಬುರಗಿಯಿಂದ ಎಮ್.ಎಲ್.ಸಿ ವಸೂಲಾಗಿದ್ದು ಅದರ ವಿಚಾರಣೆ ಕುರಿತು ಸದರಿ ಆಸ್ಪತ್ರೆಗೆ ಭೆಟಿ ನಿಡಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳುವಿಗೆ ವಿಚಾರಿಸಿದ್ದು ಸದರಿಯವನು ಫಿರ್ಯಾದಿ ಹೇಳಿಕೆ ನೀಡಿದ್ದರ ಸಾರಾಂಶವೆನೆಂದರೆ ನೀನ್ನೆ ದಿನಾಂಕ  22-05-2015 ರಂದು ಮುಂಜಾನೆ  ನಾನು ಮತ್ತು ನಮ್ಮೂರ ಮೈಹಿಬೂಬ ತಂದೆ ಹುಸೇನ ಸಾಬ ಕೊತ್ತವಾಲ, ಮಹ್ಮದ್ ಸಾಬ ತಂದೆ ರಾಜಾ ಸಾಬ ಕೊತ್ವಾಲ ಮೂರು ಜನರು ಕೂಡಿಕೊಂಡು ನಮ್ಮೂರ  ಸೊಮಣ್ಣಗೌಡ ಪಾಟೀಲ ಇವರ ಹೊಲಕ್ಕೆ ಕಸ ಬಳಿಯಲು ಹೊಗಿದ್ದೆವು ನಾವು ಹೊಲದಲ್ಲಿ ಮದ್ಯಾಹ್ನನದವರೆಗೆ ಕಸ ತೆಗೆದು ನಂತರ ನಾವು ಮೂರು ಜನರು ಹೊಲದಿಂದ ಮರಳಿ ಮನೆಗೆ ಬರುವಾಗ ಬಸ್ಸಪ್ಪ ತಂದೆ ಶಿವಪ್ಪ ಸಾಃ ಹೊನಗುಂಟಾ ಇತನು ನಡೆಸುವ ಟ್ರ್ಯಾಕ್ಟರ್ ನಂ ಕೆ..-32-ಟಿ.-9440 ನೇದ್ದರ ಇಂಜಿನ ಮೇಲೆ ಕುಳಿತುಕೊಂಡು ಬರುತ್ತಿದ್ದೆವು,  ಮದ್ಯಾಹ್ನ  1 ಗಂಟೆಯ ಸುಮಾರಿಗೆ  ಗೂಡೂರ ಸೀಮಾಂತರದ ಎಕ್ಬಾಲ್ ಸಾಬ ತಂದೆ ಮೈಹಿಬೂಬ ಸಾಬ ಗೂಡುರ ಇವರ ಹೊಲದ ಹತ್ತಿರದ ಕೇನಾಲ್ ಕಚ್ಚಾ ರೊಡಿನಲ್ಲಿ ನಾವು ಕುಳಿತು ಬರುತ್ತಿದ್ದ ಟ್ರ್ಯಾಕ್ಟರ್ ಚಾಲಕನು ತನ್ನ ವಾಹನವನ್ನು ಅತೀವೆಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಿದ್ದಾಗ ಅದೇ ವೇಳಗೆ ದನಗಳು ರೊಡಿನಲ್ಲಿ ಅಡ್ಡ ಬಂದಿದ್ದರಿಂದ ಅವುಗಳಿಗೆ ಉಳಿಸಲು ಹೊಗಿ ಒಮ್ಮಲೆ ಕಟ್ ಹೊಡೆದಿದ್ದರಿಂದ ಟ್ರ್ಯಾಕ್ಟರ್ ಇಂಜೀನ ಎಡ ಮಗ್ಗುಲಾಗಿ ಕೇನಾಲದಲ್ಲಿ ಬಿದ್ದಿರುತ್ತದೆ. ನಾವು ಕೂಡಾ ಟ್ರ್ಯಾಕ್ಟರ ಇಂಜೀನದೊಂದಿಗೆ ಕೇನಾಲ್ ದಲ್ಲಿ ಬಿದ್ದಿರುತ್ತೆವೆ ನಂತರ ನಾವು ಸಾವಕಾಸವಾಗಿ ಎದ್ದು ನೊಡಲಾಗಿ ನನಗೆ ಬಲಗೈ ಕೇಳಗೆ, ಮತ್ತು ಬೇನ್ನಿಗೆ ತರಚಿತ ರಕ್ತಗಾಯವಾಗಿರುತ್ತದೆ, ಹೊಟ್ಟೆಗೆ ಗುಪ್ತ ಪೆಟ್ಟು ಆಗಿರುತ್ತದೆ. ಮತ್ತು ಮೈಹಿಬೂಬ ಕೊತ್ತವಾಲ ಇತನಿಗೆ ಬಲಗಾಲಿನ ಮೊಳಕಾಲ ಕೇಳಗಡೆ ತರಚಿದ ರಕ್ತಗಾಯವಾಗಿದ್ದು ಅಲ್ಲದೆ ಅಲಲ್ಲಿ ತರಚಿತ ಗಾಯವಾಗಿರುತ್ತವೆ ಹಾಗೂ ಮಹ್ಮದ್ ಸಾಬ ಕೊತ್ತವಾಲನಿಗೆ ಬಲಕಣ್ಣಿನ ಹುಬ್ಬಿನ ಮೇಲೆ ರಕ್ತಗಾಯವಾಗಿದ್ದು  ಮತ್ತು ಬೇನ್ನಿಗೆ ಟ್ರ್ಯಾಕ್ಟರ ಇಂಜೀನ ಸಾಯಿಲೇನ್ಸರ್ ಹತ್ತಿ ಸುಟ್ಟಗಾಯವಾಗಿರುತ್ತದೆ, ಟ್ರ್ಯಾಕ್ಟರ ಚಾಲಕನು ನಮಗಾದ ಗಾಯ ನೋಡಿ ಟ್ರ್ಯಾಕ್ಟರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೊಗಿರುತ್ತಾನೆ ನಂತರ ನಾವು ಮೂರು ಜನರು  ಒಂದು ಖಾಸಗಿ ವಾಹದಲ್ಲಿ ಕುಳಿತುಕೊಂಡು ಜೇವರಗಿ ಸರಕಾರಿ ಆಸ್ಪತ್ರೆಗೆ ಬಂದು ಉಪಚಾರ ಪಡೆದುಕೊಂಡು ನಂತರ ಹೆಚ್ಚಿನ ಉಪಚಾರಕ್ಕಾಗಿ ಅದೇ ಖಾಸಗಿ ವಾಹನದಲ್ಲಿ ಕಲಬುರಗಿ ಬಸವೇಶ್ವರ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೆವೆ. ಟ್ರ್ಯಾಕ್ಟರ್ ಇಂಜೀನ ನಂ ಕೆ.. 32-ಟಿಎ-9440 ನೇದ್ದರ ಚಾಲಕನು ತನ್ನ ಟ್ರ್ಯಾಕ್ಟರ್ನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ಅಫಘಾತಪಡಿಸಿದ್ದು  ಇರುತ್ತದೆ  ಕಾರಣ ಅವನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ವಗೈರೆ ಫಿರ್ಯಾದಿ ಸಾರಾಂಶದ ವನ್ನು ಪಡೆದುಕೊಂಡು ಮರಳಿ ಠಾಣೆಗೆ ಇಂದು ದಿನಾಂಕ 23.05.2015 ರಂದು 18:15 ಗಂಟೆಗೆ ಠಾಣೆಗೆ ಬಂದು ಸದರಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 144/2015 ಕಲಂ 279. 337 ಐ.ಪಿ.ಸಿ ಮತ್ತು 187 ಐ.ಎಮ್.ವಿ ಆಕ್ಟ್ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಾಗಿರುತ್ತದೆ.

No comments: