ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 18-05-2015 ರಂದು ಶ್ರೀ ಚಂಧ್ರಕಾಂತ ತಂದೆ ಗುಂಡಪ್ಪಾ ಜಮಾದಾರ ಸಾ: ಗಂಗಾ ನಗರ ಕಲಬುರಗಿ ರವರು
ಎನ,ವಿ ಕಾಲೇಜ ಎದುರು ನಿಂತಿರುವಾಗ ಒಬ್ಬ ಮನುಷ್ಯ ಆನಂದ ಹೋಟೇಲ ಕಡೆಯಿಂದ ಗೋವಾ ಹೋಟೇಲ ಕೆಡೆಗೆ ನಡೆದುಕೊಂಡು
ಹೋಗುತ್ತೀದ್ದಾಗ ಆನಂದ ಹೋಟೇಲ ಕಡೆಯಿಂದ ಗೋವಾ ಹೊಟೇಲ ಕಡೆಗೆ ಹೋಗುವ ಕುರಿತು ಒಬ್ಬ ಆಟೋರಿಕ್ಷಾ ನಂ ಕೆಎ-32-5531 ನೇದ್ದರ ಚಾಲಕನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು
ಎನ.ವಿ.ಕಾಂಪ್ಲೇಕ್ಸನಲ್ಲಿ ಬರುವ ಓಂ ಮಣಿಕಂಠ ಲಿಜಿಂಗ (ರಿ) ಎದುರುಗಡೆ ರೋಡ ಮೇಲೆ ಹಿಂದಿನಿಂದ
ಅಪರಿಚಿತ ಮನುಷ್ಯನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ಆ ಅಪರಿಚಿತ ಮನುಷ್ಯನಿಗೆ
ತೆಲೆಗೆ ಭಾರಿ ಪೆಟ್ಟು ಬಿದ್ದು ,ಮೂಗಿನಿಂದ , ಕಿವಿಯಿಂದ ರಕ್ತ ಬಂದು ಅಪರಿಚಿತ ಮನುಷ್ಯ ಆಸ್ಪತ್ರೆಯಲ್ಲಿ ಉಪಚಾರ ಫಲಿಸದೆ ಸಾಯಂಕಾಲ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀಮತಿ ಸುವರ್ಣಾ ಗಂಡ
ಅಂಬಾರಾಯ ಶೇಖರ ಸಾ:ಬಬಲಾದ (ಐಕೆ) ತಾ:ಜಿ:ಕಲಬುರಗಿ ಹಾ:ವ:ರಾಜಾಪುರ ಕಲಬುರಗಿ ರವರ ಗಂಡ ಅಂಬಾರಾಯ
ತಂದೆ ನಾಗಪ್ಪ ಶೇಖರ ಇತನು ತನ್ನ ಮೋಟಾರ ಸೈಕಲ್ ನಂ ಕೆಎ-32 ಇಸಿ-1402 ನೇದ್ದರ ಮೇಲೆ ಸಾವಳಗಿ
(ಬಿ) ಗ್ರಾಮದ ಶಿವಲಿಂಗೇಶ್ವರ ಮಠಕ್ಕೆ ಹೋಗಿ ದರ್ಶನ ಪಡೆದುಕೊಂಡು ಮರಳಿ ಕಲಬುರಗಿಗೆ ಬರಬೇಕೆಂದು
ಅಲ್ಲಿಂದ ಅದೇ ಮೋಟಾರ ಸೈಕಲ್ ಮೇಲೆ ಗಾಯಾಳು ಜಯಶ್ರೀ ಇವಳಿಗೆ ಕೂಡಿಸಿಕೊಂಡು ಕಲಬುರಗಿ ಕಡೆಗೆ ಬರಬೇಕೆಂದು
ಮದ್ಯಾಹ್ನ ಕೇರಿ ಭೋಸಗಾ ಕ್ರಾಸ ಹತ್ತಿರ ಇರುವ ಜೈ ಭವಾನಿ ದಾಬಾ ದಾಟಿ ಸ್ವಲ್ಪ ಮುಂದೆ ಮೋಟಾರ
ಸೈಕಲ್ ಮೇಲೆ ಬರುವಾಗ ಅದೇ ವೇಳೆಗೆ ಎದುರಗಡೆಯಿಂದ ಒಬ್ಬ ಲಾರಿ ನಂ ಎಪಿ-06 ಹೆಚ್.ಸಿ-1878 ನೇದ್ದರ
ಚಾಲಕನು ತನ್ನ ವಶದಲ್ಲಿದ್ದ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮೃತನ
ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಕೊಟ್ಟು ಅಪಘಾತ ಪಡಿಸಿದ್ದರಿಂದ ಮೃತ ಅಂಬಾರಾಯ ಮತ್ತು ಜಯಶ್ರೀ
ಇಬ್ಬರು ರೋಡಿನ ಮೇಲೆ ಬಿದ್ದಿದ್ದು ಇದರಿಂದ ಅಂಬಾರಾಯನಿಗೆ ಹಣೆಯ ಬಲಗಡೆ ಮೇಲಕಿನ ಮತ್ತು ಕಣ್ಣಿನ
ಹತ್ತಿರ ಭಾರಿ ರಕ್ತಗಾಯ, ಎಡ ಮೇಲಕಿನ ಕೆಳಗೆ ರಕ್ತಗಾಯ, ಎಡಗೈ ಮೊಳಕೈಗೆ ಭಾರಿ ರಕ್ತಗಾಯ, ಬಲಗೈ
ಹಸ್ತ ಮೇಲಬಾಗಕ್ಕೆ ಗಾಯವಾಗಿ ಮುರಿದಂತಾಗಿದ್ದು, ಹೊಟ್ಟೆಯ ಹಾಗು ಇತರೇ ಭಾಗಕ್ಕೆ ಗಾಯವಾಗಿ
ಸ್ಥಳದಲ್ಲಿಯೇ ಮೃತಪಟ್ಟಿದ್ದು ಜಯಶ್ರೀ ಇವಳಿಗೆ ಭಾರಿ ರಕ್ತ ಮತ್ತು ಗುಪ್ತಗಾಯಗಳಾಗಿದ್ದು
ಅಪಘಾತವಾದ ಬಳಿಕ ಸದರಿ ಲಾರಿ ಚಾಲಕನು ತನ್ನ
ಲಾರಿಯನ್ನು ಸ್ವಲ್ಪ ನಿಲ್ಲಿಸಿದಂತೆ ಮಾಡಿ ನಿಲ್ಲಿಸದೇ ಲಾರಿಯೊಂದಿಗೆ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಬಸಮ್ಮಾ ಗಂಡ ದಿಃ ಬಸವರಾಜ ಡೊಂಗರೆ ಸಾಃ ಅಹ್ಮದ ನಗರ ರಿಂಗ ರಸ್ತೆ ಕಲಬುರಗಿ ಇವರು ಕಲಬುರಗಿ
ನಗರದ ಶೇಖರೋಜಾ ಸರ್ವೆ ನಂ.98 ಪ್ಲಾಟ ನಂ.11 ಉದ್ದ ಅಳತೆ 30*40 ನೇದ್ದನ್ನು ನಾನು ಶ್ರೀ ಸಿದ್ದಾರಾಮ ತಂದೆ ಶಂಕ್ರೇಪ್ಪಾ
ಕಲಶಟ್ಟಿ ಸಾ:ಭೀಮನಳ್ಳಿ ತಾ:ಜಿ:ಕಲಬುರಗಿ ಇವರಿಂದ ದಿನಾಂಕ:27/05/2010 ರಂದು 2 ಲಕ್ಷ 40 ಸಾವಿರ ರೂಪಾಯಿಗೆ ಖರೀದಿ ಮಾಡಿರುತ್ತೇನೆ. ಖರೀದಿ ಮಾಡಿದ
ಬಗ್ಗೆ ನಾನು ಒಂದು ಸ್ಟ್ಯಾಂಪ ಬರೆದುಕೊಂಡು ಅದಕ್ಕೆ ನೋಟರಿ ಮಾಡಿಸಿರುತ್ತೇನೆ. ಹೀಗಿದ್ದು 2014ನೇ ಸಾಲಿನ ಡಿಸೆಂಬರ ತಿಂಗಳಲ್ಲಿ ಪ್ಲಾಟ್ ಮೇಲೆ ನಾನು ಹಲೋ
ಬ್ಲಾಕ್ ಕಲ್ಲಿನಿಂದ ಒಂದು ಕೋಣೆ ಕಟ್ಟಿಕೊಂಡು ಇರುತ್ತೇನೆ. ಅದಕ್ಕೆ ಈಗ ಕೆಲವು ದಿವಸಗಳಿಂದ ಅಮೀರ್
ಎಂಬುವನು ತನ್ನ ಜೊತೆಯಲ್ಲಿ 3-4 ಜನರೊಂದಿಗೆ ಬಂದು ಈ ಪ್ಲಾಟ್ ನನ್ನ ಹೆಸರಿನಲ್ಲಿ ಇರುತ್ತದೆ.
ನೀವು ಇದರ ಮೇಲೆ ಏಕೆ ಮನೆ ಕಟ್ಟಿದ್ದಿರಿ ಅಂತಾ ನನಗೆ ಅಂಜಿಸುತ್ತಾ ಬರುತ್ತಿದ್ದು ಆದರೂ ಕೂಡಾ ನಾನು
ಅವರಿಗೆ ಅಂಜಿ ಸುಮ್ಮನೆ ಇರುತ್ತಿದ್ದೇನೆ. ದಿನಾಂಕ:16/05/2015 ರಂದು ಬೆಳಗ್ಗೆ ಅಮೀರ ಇವನು ತನ್ನ ಜೊತೆಯಲ್ಲಿ 7-8 ಜನರೊಂದಿಗೆ ನಮ್ಮ ಮನೆಗೆ ಬಂದು ಅವರಲ್ಲಿ ಇಬ್ಬರೂ ಕೈಯಲ್ಲಿ ಹತೋಡಿ ಇದ್ದು ಈ ಮನೆ ನನಗೆ ಸಂಬಂಧ
ಇರುತ್ತದೆ ಅಂತಾ ಅಮೀರ ಇತನು ನನಗೆ ಹೇಳಿದಾಗ ಈ ಮನೆ ನನ್ನ ಹೆಸರಿನಿಂದ ಇರುತ್ತದೆ ಅಂತಾ ನಾನು ಹೇಳಲು
ಹೋದಾಗ ಅವರೆಲ್ಲರೂ ಒಟ್ಟಿಗೆ ಸೇರಿ ರಾಂಡ, ಚಿನಾಲ್, ಬೋಸಡಿ ತೇರೆ ದೋನೊ ಆಂಕ ನಿಕಾಲತೆ ಅಂತಾ ಬೈಯುತಿದ್ದರು ಕೈಯಲ್ಲಿ ಹತೋಡಿ ಇದ್ದ ಇಬ್ಬರೂ ಜನರು
ಹತೋಡಿಯಿಂದ ನನ್ನ ತಗಡದ ಶಡ್ಡಿನ ಮನೆಯನ್ನು ಸಂಪೂರ್ಣವಾಗಿ ಕೆಡವಿರುತ್ತಾರೆ. ಮತ್ತು ಅವರಲ್ಲಿ ಒಬ್ಬ
ಹುಡುಗನು ನಿನಗೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ ಭಯ ಹಾಕಿರುತ್ತಾನೆ. ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment