POLICE BHAVAN KALABURAGI

POLICE BHAVAN KALABURAGI

17 May 2015

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ  ಬಂಧನ  :
ಜೇವರಗಿ ಠಾಣೆ : ದಿನಾಂಕ 16.05.2015 ರಂದು ಮುಂಜಾನೆ ಇಜೇರಿ ಗ್ರಾಮದಲ್ಲಿ ಸಾಥಖೇಡ ಕ್ರಾಸ್ ಹತ್ತಿರ ಬಸ್ಸ ನಿಲ್ದಾಣ ಸಮೀಪ ಸಾರ್ವಜನಿಕ ಸ್ಥಳದಲ್ಲಿ 3 ಜನರು ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ತೆಗೆದುಕೊಂಡು ಮಟಕಾ ಅಂಕಿ ಸಂಖ್ಯೆ ಚೀಟಿ ಬರೆದು ಕೊಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ   ಶ್ರೀ ಪಂಡಿತ ವಿ ಸಗರ ಪಿ.ಎಸ್. ಜೇರವರಗಿ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ  ದಾಳಿ ಮಾಡಿ ಹಿಡಿದುಕೊಂಡು ವಿಚಾರಿಸಲು 1. ಚಿದಾನಂದ ತಂದೆ ಶಾಂತಯ್ಯ ಕಡಗಂಚಿ  2. ಅಡವಯ್ಯ ತಂದೆ ಬಸಯ್ಯ ಬಂಟೆತ್ತ  3. ಗುಂಡಪ್ಪ ತಂದೆ ನಾನಪ್ಪ ಅಗಸರ ಸಾ: ಎಲ್ಲರು ಇಜೇರಿ ತಾ: ಜೇವರ್ಗಿ  ಅಂತಾ ತಿಳಿಸಿದ್ದು ಅವರಿಂದ ಜೂಜಾಟಕ್ಕೆ ಬಳಸಿದ ನಗದು  ಹಣ 450/- ರೂ, ಮತ್ತು 3 ಮಟಕಾ ಅಂಕಿ ಸಂಖ್ಯೆ ಚೀಟಿಗಳು ಮತ್ತು 3 ಬಾಲ ಪೆನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರ4ಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಶಿವಾನಂದ ತಂದೆ ಸಿದ್ದಪ್ಪ ಬಿರಾದಾರ ಸಾ: ಕಮಲಾ ನಗರ ಹಾ:ವ ಭೂಸನೂರ ಪ್ಯಾಕ್ಟರಿ   ಇವರು ದಿನಾಂಕ 16/05/2015 ರಂದು ತಾನು ಸಂದೀಪ ವೈನ್ಸ ಭೂಸನೂರ ಪ್ಯಾಕ್ಟರಿ ಯಲ್ಲಿ ಕೆಲಸದಲ್ಲಿದ್ದಾಗ ಮಂಜೂನಾಥ ಯಲಶೇಟ್ಟಿಅಸ್ಲಾಂ ಪಾಗದ, ಹಣಮಂತ ತಳವಾರ ಸಾ: ಎಲ್ಲರೂ ಭೂಸನೂರ ಪ್ಯಾಕ್ಟರಿ ಇವರು ವೈನ್ ಶಾಪ್ ಗೆ ನುಗ್ಗಿ ತನಗು ಹಾಗೂ ಕೆಲಸವರಾದ ಮಲ್ಲಣ್ಣ ಮದಗುಣಕಿ, ಚಂದ್ರಕಾಂತ ಬಿರಾದಾರ ಎಲ್ಲರಿಗೂ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಕಲ್ಲಿನಿಂದ ಹೊಡೆ ಬಡೆ ಮಾಡಿ ಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ. 16-5-2015 ರಂದು ಶ್ರೀಮತಿ ಶಾರದಾಬಾಯಿ ಗಂಡ ಕಲ್ಯಾಣರಾವ ಡೆಂಗಿ ಸಾ;ಉಪಳಾಂವ ತಾ;ಜಿ;ಕಲಬುರಗಿ ಇವರ ಮಗ ಹಣಮಂತ  ತಂದೆ ಕಲ್ಯಾಣರಾವ ಡೆಂಗಿ ಸಾ;ಉಪಳಾಂವ ಇತನು  ದಿನಾಂಕ.15-5-2015 ರಂದು ಸಂಜೆ ಬೇಲೂರ ಕ್ರಾಸ ಹತ್ತಿರ ಇರುವ ಕಲಬುರಗಿ ಹೋಟಲ  ಉಮೇಶ ದೇಗಾಂವ ಇವರ ಹೋಟೆಲದಲ್ಲಿ ಸಮೋಸ ತೆಗೆದುಕೊಂಡು ಮನಗೆ ಬರುವ ಕರಿತು ಸದರಿ ಹೋಟೆಲ ಎದರುಗಡೆ ರೋಡಿನ ಎಡಬದಿಗೆ ನಿಂತಿರುವಾಗ ಅದೇವೇಳಗೆ ಕಲಬುರಗಿ ಕಡೆಯಿಂದ  ಒಂದು ಮೋಟಾರ ಸೈಕಲ ನಂ.ಕೆ..32 ಇಎ-3470 ನೆದ್ದರ ಚಾಲಕ ತನ್ನ ಮೋಟಾರ ಸೈಕಲನ್ನು ಕಲಬುರಗಿ ಕಡೆಯಿಂದ ಬಹಳ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ನನ್ನ ಮಗ ಹಣಮಂತನಿಗೆ ಡಿಕ್ಕಿ ಹೊಡೆದಿದ್ದರಿಂದ ನನ್ನ ಮಗನ ತಲೆಯ ಹಿಂದುಗಡೆ  ಭಾರಿಗಾಯವಾಗಿದ್ದು  ಮತ್ತು ತರಡಿಗೆ ಗುಪ್ತ ಪೆಟ್ಟಾಗಿದ್ದು , ಸದರಿ ಅಪಘಾತ ಪಡಿಸಿದ ಮೋಟಾರ ಸೈಕಲ ಹೀರ ಹೋಂಡಾ ಫ್ಯಾಶನಪ್ರೋ ನಂ.ಕೆ..32 ಇಎ-3470 ನೆದ್ದರ ಚಾಲಕ ತನ್ನ ಮೋಟಾರ ಸೈಕಲನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದು ದಿನಾಂಕ. 16-5-2015 ರಂದು ಮುಂಜಾನೆ ನ್ನ ಮಗ ಹಣಮಂತ ತಂದೆ ಕಲ್ಯಾಣರಾವ ಡೆಂಗಿ ಇತನು ಚಿರಾಯು ಆಸ್ಪತ್ರೆಯಲ್ಲಿ ಉಪಚಾರದಲ್ಲಿ ಗುಣ ಮುಖನಾಗದೆ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: