ಕೊಲೆ ಪ್ರಕರಣ:
ಶಹಾಬಾದ ನಗರ ಠಾಣೆ:ದಿನಾಂಕ:
15.05.2015 ರಂದು ಶ್ರೀಮತಿ ಸಾವೂರಮ್ಮ ಸಾ: ಶಹಾಬಾದ ರವರು ಹಾಜರಾಗಿ ತನ್ನ ಮಗಳು ಲಕ್ಷ್ಮಿ @ ಮಾರೆಮ್ಮಾ ಇವಳಿಗೆ ರಾಜು ಇತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ನಾನು
ಮತ್ತು ಮಗಳು ಅಳಿಯ ಎಲ್ಲರೊ ಶಹಾಬಾದದಲ್ಲಿ ಬಾಡಿಗೆಯಿಂದ ವಾಸವಾಗಿದ್ದು ನನ್ನ ಅಳಿಯ ರಾಜು ಇತನು
ಮನೆಗಳಿಗೆ ಟೈಲ್ಸ ಹಾಕುವ ಕೆಲಸ ಮಾಡುತ್ತಿದ್ದು, ಆತನೊಂದಿಗೆ ಲಕ್ಷ್ಮಿ @ ಮಾರೆಮ್ಮಾ ಇವಳು ಕೂಡ ಕೆಲಸಕ್ಕೆ ಹೋಗುತ್ತಿದ್ದು ಇಬ್ಬರೂ
ಸಂಸಾರದ ವಿಷಯವಾಗಿ ಆಗಾಗ ಜಗಳವಾಡುತ್ತಿದ್ದು ದಿ:11-05-2015 ರಂದು ನಾನು ಸಂಬಂಧಿಕರ ಮದುವೆ
ಕುರಿತು ಸೋಲ್ಲಾಪೂರಕ್ಕೆ ಹೋಗಿದ್ದು,
ಮನೆಯಲ್ಲಿ ಮಗಳು ಅಳಿಯ ಇಬ್ಬರೊ ಮನೆಯಲ್ಲೇ
ಇದ್ದು. ನಾನು ಮದುವೆ ಕಾರ್ಯಕ್ರಮ ಮುಗಿಸಿಕೊಂಡು ದಿ:14.05.2015 ರಂದು ರಾತ್ರಿ ಶಹಾಬಾದಕ್ಕೆ ಬಂದು ನೋಡಲಾಗಿ
ಮನೆಯ ಮುಂದೆ ಬಹಳಷ್ಟು ಜನ ನೆರೆದಿದ್ದು ಅವರು ತಿಳಿಸಿದ್ದೇನೆಂದರೆ ಮನೆಯಿಂದ ಕೆಟ್ಟ ದುರ್ವಾಸನೆ ಬರುತ್ತಿದ್ದು ಮನೆಯಲ್ಲಿ ಏನಾಗಿದೆ ನೋಡು ಎಂದಾಗ ನನ್ನಲ್ಲಿದ್ದ ಇನ್ನೊಂದು ಕೀಲಿ
ಕೈಯಿಂದ ಮನೆಯ ಕೀಲಿ ತೆಗೆದು ನೋಡಲಾಗಿ ಮನೆಯಲ್ಲಿ
ನನ್ನ ಮಗಳು ಲಕ್ಷ್ಮಿ @ ಮಾರೆಮ್ಮಾ ಇವಳು ಮಗ್ಗಲಾಗಿ ಮಲಗಿಕೊಂಡಿದ್ದು ಅವಳ
ತಲೆಗೆ ಯಾವುದೊ ಒಂದು ಆಯುಧದಿಂದ ಹೊಡೆದಿದ್ದರಿಂದ
ತಲೆಯಿಂದ ರಕ್ತಸೋರಿ ಮೃತಪಟ್ಟಿದ್ದು, ಮನೆಯಲ್ಲಾ ದುರ್ವಾಸನೆ ಬರುತ್ತಿತ್ತು,
ದಿನಾಂಕ: 11.05.2015 ರಂದು
ನಾನು ಸೊಲ್ಲಾಪೂರಕ್ಕೆ ಮದುವೆಗೆ ಹೋದಾಗ ನನ್ನ
ಅಳಿಯ ರಾಜು ಇತನು ಲಕ್ಷ್ಮಿ ಜೊತೆ ಜಗಳ
ತೆಗೆದು ಯಾವುದೊ ಒಂದು ಆಯುಧದಿಂದ ತಲೆಗೆ
ಹೊಡೆದು ಕೊಲೆಮಾಡಿ ಗೊತ್ತಾಗಬಾರದೆಂದು
ಮನೆಗೆ ಹೊರಗಡೆಯಿಂದ ಕೀಲಿಹಾಕಿ ಓಡಿ ಹೋಗಿರುತ್ತಾನೆ. ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಶಹಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ: ದಿನಾಂಕ 13-05-2015 ರಂದು ಶಿವಪ್ಪಾ ಪಾಣಿಗರ ಸಾ|| ಅಫಜಲಪೂರ ಮತ್ತು ಸಲೀಮ ತಂದೆ ಅಬ್ದುಲರೆಹ್ಮಾನ ಶೇಖ ರವರು
ಅಫಜಲಪೂರ ಬಸವೇಶ್ವರ ಚೌಕದಿಂದ ತಮ್ಮ ಮನೆಗೆ ಹೋಗುತ್ತಿದ್ದಾಗ ವಾಹಿದ ಮೋಟರ ಸೈಕಲ್ ಸರ್ವಿಸ್
ಸೆಂಟರ ಮುಂದೆ ರಸ್ತೆಯ ಎಡಭಾಗದಿಂದ ನಡೆದುಕೊಂಡು ಹೋಗುತ್ತಿದ್ದಾಗ, ಹಿಂದುಗಡೆಯಿಂದ ಬರುತ್ತಿದ್ದ ಅಶೋಕ ಲೈಲಂಡ ಮಿನಿ ಟೆಂಪು
ನೇದ್ದರ ಚಾಲಕನು ಅತೀವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸುತ್ತಾ ಬಂದು ಹಿಂದಿನಿಂದ ಅಪಘಾತ
ಪಡಿಸಿದ್ದು ಅಪಘಾತದಲ್ಲಿ ನನ್ನ ಕಿವಿ ಹತ್ತಿರ ರಕ್ತಗಾಯ ಮತ್ತು ಹಣೆಯ ಮೇಲೆ ಒಳಪೆಟ್ಟು ಹಾಗು
ಎದೆಯ ಮೇಲೆ ಭಾರಿ ಒಳಪೆಟ್ಟಾಗಿದ್ದು ಮಿನಿ ಟೆಂಪು ನಂ ಕೆ.ಎ-33/ಎ-2885 ಇದ್ದು ಅದರ ಚಾಲಕನ ಹೆಸರು ಮೈನೋದ್ದಿನ ಸಾ|| ಗೋಗಿ ತಾ|| ಶಹಾಪೂರ ಇರುತ್ತದೆ ನನಗೆ ಅಪಘಾತ ಪಡಿಸಿದ ಅಶೋಕ ಲೈಲಂಡ
ಮಿನಿ ಟೆಂಪು ನೇದ್ದರ ಚಾಲಕನ ವಿರುದ್ದ ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಲ್ಲಿಸಿದ ದೂರು
ಸಾರಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳವು ಪ್ರಕರಣ
ಆಳಂದ ಪೊಲೀಸ್ ಠಾಣೆ:ದಿನಾಂಕ:14/05/2015 ರಂದು ಶ್ರೀ.ಸಿದ್ದಾರಾಮ ತಂದೆ ಕಾಶಿನಾಥ ಪಾಟೀಲ ಸಾ:ಗುಳ್ಳೋಳಿ ತಾ: ಆಳಂದ ಇವರು ಠಾಣೆಗೆ ಹಾಜರಾಗಿ ದಿನಾಂಕ: 13/05/2015 ರಂದು ರಾತ್ರಿ ಮನೆಗೆ ಕೀಲಿ ಹಾಕಿ
ಮನೆಯ ಮಾಳಿಗೆಯ ಮೇಲೆ ಮಲಗಿಕೊಂಡಿದ್ದು ನಂತರ ರಾತ್ರಿ 02:30 ಗಂಟೆಯ ಸುಮಾರಿಗೆ ಮೂತ್ರ
ವಿಸರ್ಜನೆಗೆ ಎದ್ದಾಗ ಮನೆಯ ಕೀಲಿ ಮುರಿದಿದ್ದು ನೋಡಿ ನಾವು ಮನೆಯ ಒಳಗಡೆ ಹೋಗಿ ನೋಡಲಾಗಿ
ಮನೆಯಲ್ಲಿದ್ದ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿದ್ದು ಯಾರೋ ಕಳ್ಳರು ದೇವರ ಕೋಣೆಯಲ್ಲಿದ್ದ
ಕಬ್ಬಿಣದ ಪೇಟ್ಟಿಗೆಯ ಕೀಲಿ ಮುರಿದು ಅದರಲ್ಲಿದ್ದ ಬಂಗಾರ ನಮೂನೆಯ ಹಳೆಯ ಬಂಗಾರದ ಆಭರಣಗಳಾದ 1)
ಬೋರಮಳ ಸರ 10 ಗ್ರಾಂ. 2) ಬೆರಳು ಉಂಗುರ 05 ಗ್ರಾಂ. ಹೀಗೆ ಒಟ್ಟು 24,000/- ರೂ ಕೀಮ್ಮತ್ತಿನ 15 ಗ್ರಾಂ ಬಂಗಾರ ಆಭರಣ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ
ಸಲ್ಲಿಸಿದ ದೂರು ಸಾರಾಶಂದ ಮೇಲಿಂದ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕೈಕೊಳ್ಳಲಾಗಿದೆ.
ಆಳಂದ ಪೊಲೀಸ್ ಠಾಣೆ: ದಿನಾಂಕ:14/05/2015 ರಂದು ಶ್ರೀ
ರಸೀದ್ ತಂದೆ ಮಕ್ತುಮಸಾಬ ಶೇಖ ಸಾ:ಗುಳ್ಳೋಳಿ ತಾ: ಆಳಂದ ಇವರು ಠಾಣೆಗೆ ಹಾಜರಾಗಿ ದಿನಾಂಕ: 13/05/2015 ರಂದು ರಾತ್ರಿ ಮನೆಯ ಕೊಂಡಿ ಹಾಕಿ
ಅಂಗಳದಲ್ಲಿ ಮಲಗಿಕೊಂಡಿದ್ದು ಬೆಳಿಗ್ಗೆ ಎದ್ದಾಗ ಮನೆಯ ಬಾಗಿಲು ತೆರೆದಿದ್ದು ನೋಡಿ ನಾವು ಮನೆಯ
ಒಳಗಡೆ ಹೋಗಿ ನೋಡಲಾಗಿ ಮನೆಯಲ್ಲಿದ್ದ ಅಲಮಾರಿಯ ಕೀಲಿ ಮುರಿದಿದ್ದು ಅದರಲ್ಲಿದ್ದ ಬಂಗಾರದ ಹಳೆಯ
ಆಭರಣಗಳಾದ 1) ಬೋರಮಳ ಸರ 1/2 ತೊಲೆ 2) ಗಲಸೇರಿ 1/2 ತೊಲೆ 3) ಚೀರಾಮಣಿ 1/2 ತೊಲೆ ಇವುಗಳ
ಅ.ಕೀ.18,000/- ರೂ ಹಾಗೂ ಬೆಳ್ಳಿಯ
ಹಳೆಯ ಆಭರಣ 25 ತೊಲೆಯ ಕಾಲು ಚೈನ ಅ.ಕೀ.2000/- ಹಾಗೂ ಮನೆಯಲ್ಲಿದ್ದ ಕಾರಬನ್ ಮೋಬೈಲ ಸಿಮ್
ನಂ.1) 8546927850 2) 7026443024 ಸಮೇತ ಅ.ಕೀ.500/-
ಮತ್ತು ನಮ್ಮ ಮನೆಯ ಪಕ್ಕದ ಪಾಚಾಬೀ ಗಂಡ ಮಹಮ್ಮದ ಪಟೇಲ ಇವಳ ಕೊರಳಲ್ಲಿದ್ದ ಹಳೆಯ 03
ಗ್ರಾಂ.ದ ಪತ್ತಿನ ಬಂಗಾರದ ಸರ ಅ.ಕೀ.4000/- ಹೀಗೆ ಒಟ್ಟು 24,500/- ರೂ ಕೀಮ್ಮತ್ತಿನ ಬಂಗಾರ & ಬೆಳ್ಳಿಯ ಆಭರಣ ಹಾಗೂ ಮೋಬೈಲನ್ನು ಯಾರೋ ಕಳ್ಳರು
ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಶಂದ ಮೇಲಿಂದ ಆಳಂದ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೇವರ್ಗಿ
ಪೊಲೀಸ್ ಠಾಣೆ: ದಿನಾಂಕ 14.05. 2015 ರಂದು ಶ್ರೀ ನಾನಾಸಾಬ ತಂದೆ ರುಸ್ತುಮಸಾಬ ಇನಾಮದಾರ ಸಾ: ಗಂವ್ಹಾರ ಇವರು ಠಾಣೆಗೆ ಹಾಜರಾಗಿ ದಿನಾಂಕ: 13.05.20015 ರಂದು ರಾತ್ರಿ 10.00 ಗಂಟೆಯಿಂದ ದಿ: 14.05.2015 ರಂದು ಬೆಳಗಿನ ಜಾವ 03.00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ತಮ್ಮ ಮನೆಯ ಬಾಗಿಲು ಕೀಲಿ ಮುರಿದು ಮನೆಯ ಅಲಮಾರದಲ್ಲಿದ್ದ ನಗದು ಹಣ 4.20,000/-ರೂ ಮತ್ತು ಬಂಗಾರದ ನೇಕ್ಲೇಸ್, ಎರಡು ಜೋತೆ ಕಿವಿಯಲ್ಲಿನ ಜುಮಕಿ , ಒಂದು ಬಂಗಾರದ ಬೊರಮಳ ಸರ್ , ಎರಡು ಬಂಗಾರದ ಉಂಗರಗಳು , ಒಂದು ಬಂಗಾರದ ಜೀರಮಣಿ , ಎರಡು ಬಂಗಾರದ ಸಣ್ಣ ಮಕ್ಳಳ ಕಿವಿಯಲ್ಲಿನ ರಿಂಗ ,ಒಂದು
ಬಂಗಾರದ ಉಂಗರ , ಹೀಗೆ ಒಟ್ಟು 5,20,000/-ರೂ ಕಿಮ್ಮತಿನವುಗಳು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment