ರಾಘವೇಂದ್ರ ನಗರ ಪೊಲೀಸ್ ಠಾಣೆ : ದಿನಾಂಕಃ 11/05/2015 ರಂದು ರಾತ್ರಿ 08-00 ಗಂಟೆಯವರೆಗೆ ಜಿಲ್ಲಾ ಸರಕಾರಿ
ಆಸ್ಪತ್ರೆಯಲ್ಲಿ ಗಾಯಳು ಶ್ರೀ ಮಹ್ಮದ ನವಾಜ ತಂದೆ ಖಾಜಾಮಿಯ ಶಹಾಬಾದವಾಲೆ ವಯಃ 30 ಸಾಃ ದೇವಲಗಲ್ಲಿ ಜೀಲಾನಾಬಾದ
ಎಂ.ಎಸ್.ಕೆ ಮಿಲ್ ಕಲಬುರಗಿ ಇತನ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶ ಏನೆಂದರೆ ನಾನು ಕಲಬುರಗಿ
ನಗರದ ಎಂ.ಎಸ್.ಕೆ ಮಿಲ್ ಬಡಾವಣೆಯ ಹುಸೇನ ಗಾರ್ಡದಲ್ಲಿರುವ ಲಿಂಬ್ರಾ ನೀರು ಸರಬರಾಜ ಕಂಪನಿಯಲ್ಲಿ
ಕೂಲಿ ಕೆಲಸ ಮಾಡಿಕೊಂಡು ಹೊಗುತ್ತಿದ್ದು ನಮ್ಮ ಕಂಪನಿಯ ಮಾಲಿಕ ನಮ್ಮ ಬಡಾವಣೆಯ ಮನ್ನಾನ ಎಂಬವರು ಇರುತ್ತಾರೆ ನನ್ನಗೆ ತಿಂಗಳಿಗೆ 7500/- ರೂ. ಕೂಲಿ ಕೊಡುತ್ತಾರೆ ಕಳೆದ
7 ದಿವಸಗಳ
ಹಿಂದೆ ನಾನು ನಮ್ಮ ಮಾಲಿಕ ಮನ್ನಾನ ಇವರಿಂದ ಮುಂಗಡವಾಗಿ 15000/- ರೂ. ಪಡೆದುಕೊಂಡಿರುತ್ತೆನೆ ನನ್ನಗೆ
ಅರಾಮ ಇಲ್ಲದ ಕಾರಣ ನಾನು ಎರಡು , ಮೂರ ದಿವಸ ಕೆಲಸಕ್ಕೆ ಹೊಗಿರುವದಿಲ್ಲ ಅದಕ್ಕೆ ಮನ್ನಾನ ನಮ್ಮ ಮನೆಗೆ
ಬಂದು ಕೇಳಿ ಹೋಗಿರುತ್ತಾರೆ ದಿನಾಂಕಃ 10/05/2015 ರಂದು ರಾತ್ರಿ 12-30 ಗಂಟೆ ಸುಮಾರಿಗೆ ನಮ್ಮ ಮನೆಯ
ಮುಂದೆ ನಾನು ಮತ್ತು ನಮ್ಮ ಬಡಾವಣೆಯ ಮಹ್ಮದ ಮತ್ತಿನ ಮತ್ತು ಮಹ್ಮದ ಖಾಸಿಮ ಎಲ್ಲರೂ ಮಾತನಾಡುತ್ತ
ಕುಳಿತಾಗ ಸದರ ಮನ್ನಾನ ಇತನು ಬಂದು ಏ ಮಹ್ಮದ ನಜಾಜ ನೀನು ಕೆಲಸಕ್ಕೆ ಏಕೆ ಬಂದಿಲ್ಲ ಅಂತ
ಹೇಳಿದಕ್ಕೆ ನನ್ನಗೆ ಅರಾಮ ಇರಲಿಲ್ಲ ನಾಳೆ ಬರುತ್ತೆನೆ ಅಂತಾ ಹೇಳಿದಕ್ಕೆ ರಾಂಡ ಕೇ ಬೇಟೆ ತೇರೆ
ಕೊ ಕಾಮಕೇ ಲೀಲೆ ಮೈ ಅಡವಾನ್ಸ್ 15000/- ರೂ. ದಿಯಾ ಹು ಅಂತಾ ನನ್ನ ಎದೆಯ ಮೇಲೆ ಅಂಗಿ ಹಿಡಿದು ನನ್ನಗೆ ಆತನ
ರೂಮಿನಲ್ಲಿ ಕರೆದುಕೊಂಡು ಹೋಗಿ ಏ ರಾಂಡ ಕೇಬೇಟೆ ತೂ ಕಾಮಪೇ ಕ್ಯೂ ನಹೀ ಆಯೆ ಅಂತಾ ಒಂದು
ಬಡಿಗೆಯಿಂದ ನನ್ನ ಬೆನ್ನಿನ ಮೇಲೆ ಹೊಡೆದು ಗುಪ್ತಗಾಯ ಮಾಡಿರುತ್ತಾನೆ ಮತ್ತು ನನ್ನ ಬಟ್ಟೆಗಳು
ಬಿಚ್ಚಿ ಕೈಯಿಂದ ಬೆನ್ನಿನ ಮೇಲೆ ಹೊಡೆದು ಗುಪ್ತಗಾಯ ಮಾಡಿರುತ್ತಾನೆ ಮತ್ತು ಅದೇ ಬಡಿಗೆಯಿಂದ
ನನ್ನ ಎಡತೊಡೆಯ ಮೇಲೆ ಹೊಡೆ ಹತ್ತಿದನು ಆಗ ನನ್ನ ಜೊತೆ ಮಾತನಾಡುತ್ತ ಕುಳಿತ ಮಹ್ಮದ ಮತ್ತಿನ
ಮತ್ತು ಮಹ್ಮದ ಖಾಸಿಂ ಇವರು ಬಂದ ಜಗಳ ಬಿಡಿಸಿರುತ್ತಾರೆ ನನ್ನಗೆ ಗುಪ್ತಗಾಯ ಆಗಿರುವದರಿಂದ
ಜಿಲ್ಲಾ ಸರಕಾರಿ ಆಸ್ತತ್ರೆಗೆ ಬಂದು ಸೇರಿಕೆ ಆಗಿರುತ್ತೆನೆ ಈ ವಿಷಯದ ಬಗ್ಗೆ ನನ್ನ ಹೆಂಡತಿಯಾದ
ಶ್ರೀಮತಿ ಆಫ್ರೀನ್ ಬೇಗಂ ಇವಳಿಗೆ ತಿಳಿಸಿ ಇಂದು ದಿನಾಂಕಃ 11/05/2015 ರಂದು ತಡವಾಗಿ ಹೇಳಿಕೆ
ನೀಡಿರುತ್ತೆನೆ ಕಾರಣ ಆತನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ಹೇಳಿಕೆ
ನೀಡಿದ್ದು ಸದರ ಹೇಳಿಕೆ ಪಡೆದುಕೊಂಡು ಮರಳಿ ರಾತ್ರಿ 09-00 ಗಂಟೆಗೆ ಠಾಣೆಗೆ ಬಂದು ಫಿರ್ಯಾದಿಯ
ಹೇಳಿಕೆ ಮೇಲಿಂದ ಆರ್.ಜಿ. ನಗರ ಪೊಲಿಸ್ ಠಾಣೆ ಗುನ್ನೆ ದಾಖಲಾಗಿರುತ್ತದೆ.
No comments:
Post a Comment