POLICE BHAVAN KALABURAGI

POLICE BHAVAN KALABURAGI

23 April 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಆಳಂದ ಠಾಣೆ : ಶ್ರೀ ಅಶೋಕ ತಂದೆ ಸಿದ್ದಪ್ಪಾ ಗೊಲ್ಲೂರ ಸಾ: ಆಯಾ ಜಂಗಲ ಆಳಂದ ರವರು ದಿನಾಂಕ: 22/04/2015 ರಂದು ಸಾಯಂಕಾಲ ತನ್ನ ಹೆಂಡತಿಗೆ ನೋಡಿಕೊಂಡು ಬರಲು ನನ್ನ ಹೆಂಡತಿಯ ಗ್ರಾಮಕ್ಕೆ ಹೋಗಲು ತನ್ನ ಮೋಟರ್ ಸೈಕಲ ನಂ: ಕೆ.ಎ:32 ವಾಯ್: 5037 ನೇದ್ದರ ಮೇಲೆ ಸಂಬಂಧಿ ಸ್ವಾಮಿನಾಥ ಗೊಲ್ಲೂರ ಇಬ್ಬರೂ ಕೂಡಿ ಹೋಗಿ ಮರಳಿ ಆಳಂದಕ್ಕೆ ಬರುವಾಗ ಮೋ.ಸೈಕಲ ಸ್ವಾಮಿನಾಥನು ಚಲಾಯಿಸಿತ್ತಿದ್ದು. ನಾನು ಅವನ ಹಿಂದುಗಡೆ ಕುಳಿತ್ತಿದ್ದು ಇನ್ನೂ ಆಳಂದ ಚಕ್ಕಪೋಸ್ಟ್ 01 ಕೀ.ಮಿ. ದೂರದಲ್ಲಿರುವಾಗ ಸ್ವಾಮಿನಾಥನಿಗೆ ಮೋಟಾರ ಸೈಕಲ ನಿಧಾನವಾಗಿ ಚಲಾಯಿಸಲು ಹೇಳಿದರೂ ಸಹ ಅವನು ಅತೀವೇಗದಿಂದ & ಅಲಕ್ಷತನದಿಂದ ಚಲಾಯಿಸುವಾಗ ಆಳಂದ-ವಾಗ್ದರಗಿ ಮುಖ್ಯ ರಸ್ತೆ ರೋಡಿನ ಎಡಭಾಗದಲ್ಲಿ ಎರಡು ಟ್ರ್ಯಾಕ್ಟರ್ ಟ್ರೈಲಿಗಳು ಕಬ್ಬುತುಂಬಿಕೊಂಡು ರೋಡಿನ ಮೇಲೆ ಯಾವುದೇ ರಸ್ತೆ ಸುರಕ್ಷತೆಯ ಚಿಹ್ನೆಗಳು, ಮುನ್ನೆಚರಕೆಯ ಚಿಹ್ನೆಗಳು ಹಾಕದೇ ನಿಲ್ಲಿಸಿದರಿಂದ ಸ್ವಾಮಿನಾಥನು ಅದರ ಹಿಂದಿನ ಟ್ರೈಲಿಗೆ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ನಾವು ರೋಡಿನ ಕೆಳಗಡೆ ಬಿದ್ದೆವು. ಅಪಘಾತದಿಂದ ನನಗೆ ಹಣೆಯ ಮೇಲೆ ತಲೆಯ ಮೇಲೆ ಭಾರಿ ರಕ್ತಗಾಯವಾಗಿದ್ದು ಎಡಗಾಲಿನ ಮೇಲೆ ಗುಪ್ತಗಾಯವಾಗಿದ್ದು ನಂತರ ಸ್ವಾಮಿನಾಥನಿಗೆ ನೋಡಲಾಗಿ ಅವನ ಮೇಲಕಿನ ಮೇಲೆ ಭಾರಿ ರಕ್ತಗಾಯ ಹಾಗೂ ತಲೆಗೆ ಭಾರಿರಕ್ತಗಾಯ ಎಡಗೈ ಭುಜದ ಹತ್ತಿರ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ. ನಂತರ ಟ್ರ್ಯಾಕ್ಟರ್ ಟ್ರೈಲಿ ನಂಬರ್ ನೋಡಲಾಗಿ ಮುಂದುಗಡೆ ಟ್ರೈಲಿ ನಂಬರ್:ಕೆ.ಎ:32 ಟಿ.ಎ: 4818, ಹಿಂದುಗಡೆ ಟ್ರೈಲಿ ನಂ:ಕೆ.ಎ:32 ಟಿ.ಎ: 4819 ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಠಾಣೆ : ಶ್ರೀ ಸಾಧಿಕ ತಂದೆ ಉಸ್ಮಾನ ಅಲಿ ಸಾ:ಸಿದ್ಧಾರೂಢ ನಗರ, ಕುರಕುಂಟಾ ಇವರು ದಿನಾಂಕ 21-04-2015 ರಂದು ತಾನು ಮತ್ತು ತನ್ನ ಹೆಂಡತಿ ಸರದಾರ ಬೇಗಂ ಸೇಡಂದಿಂದ ಕುರಕುಂಟಾ ಗ್ರಾಮಕ್ಕೆ ಹೋಗಲು ಜೀಪ ನಂ-KA36-M-767 ನೇದ್ದರಲ್ಲಿ ಕುಳಿತೇವು. ನಮ್ಮಂತೆ ಜೀಪನಲ್ಲಿ ಇನ್ನೂ ಮೂರು ಜನ ಜೀಪನಲ್ಲಿ ಕುಳಿತುಕೊಂಡು ಹೊರಟಿದ್ದೇವು, ಬಟಗೆರಾ(ಬಿ) ಕ್ರಾಸ್ ದಾಟಿ ರೋಡಿನ ಮೇಲೆ ಹೋಗುತ್ತಿರುವಾಗ ಎದುರುಗಡೆಯಿಂದ ಒಬ್ಬ ಲಾರಿ ಟ್ಯಾಂಕರ್ ನಂ-KA16 B-6588 ನೇದ್ದರ ಚಾಲಕ ತನ್ನ ವಶದಲ್ಲಿದ್ದ ಲಾರಿಯನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಜೀಪಿಗೆ ಡಿಕ್ಕಿ ಪಡೆಯಿಸಿದ್ದರಿಂದ ಜೀಪಿನೊಂದಿಗೆ ನಾವೆಲ್ಲರೂ ಕೆಳಗೆ ಬಿದ್ದೇವು. ಇದರಿಂದ ನನಗೆ ಗುಪ್ತ ಗಾಯ ಮತ್ತು ತರಚಿದಗಾಯಗಳಾಗಿದ್ದು, ನನ್ನ ಹೆಂಡತಿಗೆ ಸಾದಾ ಮತ್ತು ರಕ್ತಗಾಯಗಳಾಗಿದ್ದು, ಜೀಪಿನಲ್ಲಿ ಕುಳಿತ ಉಳಿದವರಿಗೆ ನೋಡಲಾಗಿ ಅವರಲ್ಲಿ ಭೀಮಸಿಂಗ್ ತಂದೆ ಹೊಬ್ಯಾ ನಾಯ್ಕ್ ಸಾ:ಸ್ಟೆಶನ್ ತಾಂಡ ಇತನಿಗೆ ತಲೆಯ ಹಿಂದೆ ಭಾರಿ ರಕ್ತಗಾಯ, ಬಲಗೈಗೆ ರಕ್ತಗಾವಾಗಿತ್ತು ಮತ್ತು ಕಾರ್ತಿಕ್ ಸಾ:ಕುರಕುಂಟಾ ಇತನಿಗೆ, ಸಾದ ರಕ್ತಗಾಯಗಳಾಗಿದ್ದಲ್ಲದೇ ಜೀಪ ಚಾಲಕನಿಗೂ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದವು. ಸದರಿ ಲಾರಿ ಈ ಅಪಘಾತ ನೋಡಿ ಲಾರಿ ಚಾಲಕ ತನ್ನ ಲಾರಿ ಸ್ಥಳದಲ್ಲಿಯೇ ಬಿಟ್ಟು ಅಲ್ಲಿಂದ ಓಡಿ ಹೋಗಿದ್ದು ಗಾಯಾಳು ಭೀಮಸಿಂಗ್ ತಂದೆ ಹೊಬ್ಯಾ ನಾಯ್ಕ್ ಸಾ:ಸ್ಟೆಶನ್ ತಾಂಡ, ಮಳಖೇಡ ಇವರು ಸೇಡಂ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುವಾಗ ಉಪಚಾರ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಗಿರೇಪ್ಪಾ ತಂದೆ ರೇವಪ್ಪಾ ಮಣ್ಣೂರ ಸಾ: ಹಳೆ ಜಾಜಿ ಬ್ಲಾಕ  ಕಲಬುರಗಿ ರವರು ದಿನಾಂಕ : 22-04-2015 ರಂದು ಸುಪರ ಮಾರ್ಕೇಟನಲ್ಲಿರುವ  ಅಟೋ ಸ್ಟ್ಯಾಂಡ ಹತ್ತಿರದ ಕ್ರಿಷ್ಣಾ ಪ್ರೀಂಟರಸ್  ಎದುರು ರೋಡ ಹತ್ತಿರ ರೈಲ್ವೆ ಸ್ಟೇಶನ ಕಡೆಗೆ ಹೋಗುವ ಅಟೋರೀಕ್ಷಾ ಸಲುವಾಗಿ ಕಾಯುತ್ತಾ ಇರುವಾಗ ಚೌಕ ಸರ್ಕಲ್ ,ಜನತಾ ಬಜಾರ ಕ್ರಾಸ್ ಕಡೆಯಿಂದ ಕಾರ್ ನಂ: ಕೆಎ 34 ಎಮ್ 2503 ರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಡಿಕ್ಕಿ ಪಡಿಸಿ ಅಪಘಾತಮಾಡಿ ಗಾಯಗೊಳಿಸಿ ಕಾರ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀ ವಿಶ್ವರಾಜ ತಂದೆ ಯೋಗಣ್ಣ ಆಂದೋಲಾ ಸಾ:  ಪ್ರಶಾಂತ ನಗರ ಕಲಬುರಗಿ ಇವರ ಅಕ್ಕ ಮಹಾದೇವಿ ಇವರ ಮಗಳಾದ ಕು: ಕಾವ್ಯ ತಂದೆ ಸಿದ್ರಾಮಪ್ಪಾ ವ: 14 ವರ್ಷ ಇವಳು ಬೆಸಿಗೆ ರಜೆ ಕಳೆಯಲು ಪರತಬಾದನಿಂದ ಕಲಬುಗಿಯ ನಮ್ಮ ಮನೆಯಾದ ಪ್ರಶಾಂತ ನಗರಕ್ಕೆ ಬಂದು ಉಳಿದುಕೊಂಡಿದ್ದಳು ದಿನಾಂಕ: 22.04.2015 ಬೆಳಗ್ಗೆ 11. ಗಂಟೆಗೆ ಕಾವ್ಯಳನ್ನು ಬಬಲು ಎಂಬ ಹುಡುಗನು ನಾವು ಮನೆಯಲ್ಲಿ ಯಾರು ಇರದ ಸಮಯದಲ್ಲಿ ಅಪಹರಿಸಿಕೊಂಡು ಹೋಗಿರುತ್ತಾನೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ದಿಲೀಪ್ ತಂದೆ ಸಿದ್ದಪ್ಪ ಕೆ.ಎನ್ ಸಾ : ಶಿವಮೊಗ್ಗ  ರವರು ದಿನಾಂಕ 20.04.2015 ರಂದು ಗುಲಬರ್ಗಾದಿಂದ ವಿಜಯಪುರಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್‌ ನಂ ಕೆ.ಎ28ಎಫ್.1859 ನೇದ್ದರಲ್ಲಿ ಜೇವರ್ಗಿ ಮುಖಾಂತರ ಪ್ರಯಾಣಿಸಿಸುತ್ತಿದ್ದಾಗ ಸದರಿ ಬಸ್‌ ಜೇವರ್ಗಿ ನಿಲ್ದಾಣದಲ್ಲಿ ನಿಲ್ಲಿಸಿದಾಗ ಡೆಲ್‌ ಕಂಪನೀಯ ಲ್ಯಾಪ್‌ಟ್ಯಾಪ್ ಮತ್ತು ಅದರ ಪರಿಕರಗಳು ಅಂ.ಕಿ 24.000 ರೂ ಕಿಮ್ಮತ್ತಿನ ಸಾಮಾನುಗಳನ್ನು ಇಟ್ಟಿದ್ದ ಬ್ಯಾಗ್‌ ಅನ್ನು ಬಸ್‌ ನಲ್ಲಿ ಇಟ್ಟು ಕೇಳಗೆ ಇಳಿದು ನೀರಿನ ಬಾಟಲಿ ತೆಗೆದುಕೊಂಡು ಮತ್ತೆ ಬಸ್‌ ಹತ್ತಿ ನೋಡಿದಾಗ ಲ್ಯಾಪ್‌ಟ್ಯಾಪ್ ಮತ್ತು ಅದರ ಪರಿಕರಗಳನ್ನು ಇಟ್ಟಿದ್ದ ಬ್ಯಾಗ್‌ ಅನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: