ಅನಧಿಕೈತವಾಗಿ ಮದ್ಯ ಮಾರಾಟ
ಮಾಡುತ್ತಿದ್ದವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 23-03-2015 ರಂದು
ಶಿವೂರ ಗ್ರಾಮದಲ್ಲಿ ಲಕ್ಷ್ಮಿ ಜಾತ್ರೆಯಿದ್ದು, ಸದರಿ ಜಾತ್ರೆಯಲ್ಲಿ ಇಬ್ಬ
ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಅನದಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ
ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶೀವೂರ
ಗ್ರಾಮದ ಹನುಮಪ್ಪನ ಗುಡಿಯಿಂದ ಸ್ವಲ್ಪ ದೂರು ನಮ್ಮ ವಾಹನ ನಿಲ್ಲಿಸಿ, ನಡೆದುಕೊಂಡು ಹೋಗಿ ಮರೆಯಾಗಿ ನಿಂತುಕೊಂಡು ನೋಡಲಾಗಿ, ಹನುಮಪ್ಪ ದೆವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ
ಒಂದು ರಟ್ಟಿನ ಬಾಕ್ಸ ಇಟ್ಟುಕೊಂಡು ಜಾತ್ರೆಗೆ ಬಂದಂತ ಜನರಿಗೆ ಕರೆದು ಅವರಿಂದ ಹಣ ಪಡೆದು ರಟ್ಟಿನ
ಬಾಕ್ಸದಲ್ಲಿದ್ದ ಮದ್ಯದ ಪೌಚಗಳನ್ನು ಕೊಡುತ್ತಿದ್ದನು, ಖಚಿತಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಸದರಿ ವ್ಯೆಕ್ತಿಯ ಮೇಲೆ ದಾಳಿ
ಮಾಡಿ ಹಿಡಿದು ಅವನ ಹತ್ತಿರ ಇದ್ದ ಬಾಕ್ಸನ್ನು ಚೆಕ್ ಮಾಡಲಾಗಿ, ಸದರಿ ಬಾಕ್ಸದಲ್ಲಿ ಓರಿಜನಲ್ ಚೌಯ್ಸ ಕಂಪನಿಯ 90 ಎಮ್ ಎಲ್ ಅಳತೆಯ
ಮದ್ಯ ತುಂಬಿದ ಒಟ್ಟು 60 ರಟ್ಟಿನ ಪೌಚಗಳು ಇದ್ದವು ಅ||ಕಿ|| 1449/- ರೂಪಾಯಿ ರಷ್ಟು ದೊರೆತವು. ಸದರಿಯವನಿಗೆ ಮದ್ಯದ ಬಗ್ಗೆ
ವಿಚಾರಿಸಲಾಗಿ ತಾನು ಯಾವುದೆ ಪರವಾನಿಗೆ ಇಲ್ಲದೆ ಮದ್ಯದ ಪೌಚಗಳನ್ನು ಅಕ್ರಮವಾಗಿ ರಸ್ತೆಯ ಮೇಲೆ
ಇಟ್ಟುಕೊಂಟು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದನು. ಸದರಿ ವ್ಯೆಕ್ತಿಯ ಹೆಸರು ವಿಳಾಸ
ವಿಚಾರಿಸಲು ತನ್ನ ಹೆಸರು ಮಲಕಣ್ಣ ತಂದೆ ತುಕಾರಾಮ ಜಮಾದಾರ ಸಾ|| ಶಿವೂರ ಗ್ರಾಮ ಎಂದು ತಿಳಿಸಿದ್ದು ಸದರಿವನನ್ನು ವಶಕ್ಕೆ ತೆಗೆದುಕೊಂಡು
ಅವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 22-03-2015 ರಂದು ಶಿವೂರ ಗ್ರಾಮದ ಲಕ್ಷ್ಮೀ ಗುಡಿ
ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣಕ್ಕೆ ಪಣ ಹಚ್ಚಿ ಇಸ್ಪೇಟ ಏಲೆಗಳ ಸಾಹಾಯದಿಂದ
ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು
ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಶಿವೂರ ಗ್ರಾಮದ ಲಕ್ಷ್ಮೀ
ಗುಡಿಯಿಂದ ಸ್ವಲ್ಪ ದೂರು ಹೋಗಿ, ಮರೆಯಾಗಿ ನಿಂತು ನೊಡಲು
ಲಕ್ಷ್ಮೀ ಗುಡಿಯ ಪಕ್ಕದಲ್ಲಿರುವ ಖುಲ್ಲಾ ಜಾಗದಲ್ಲಿ 06 ಜನರು ದುಂಡಾಗಿ ಕುಳಿತುಕೊಂಡು
ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದು ಖಚಿತ ಪಡಿಸಿಕೊಂಡು ದಾಳಿ ಮಾಡಿ, ಜೂಜಾಡುತ್ತಿದ್ದ ಎಲ್ಲಾ 06 ಜನರನ್ನು ಹಿಡಿದು ಅವರ ಹೆಸರು
ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಸಿದ್ರಾಯ ತಂದೆ ಶಿವಗೊಂಡ ಹೂನಳ್ಳಿ
2) ಅಣ್ಣಾರಾಯ ತಂದೆ ಬಸಪ್ಪ ಬಿರಾದಾರ 3) ಜಟ್ಟೆಪ್ಪ ತಂದೆ ಶರಣಪ್ಪ ಕೋಳಿ 4) ನಿಂಗಪ್ಪ ತಂದೆ ತಮ್ಮಣ್ಣ ಪೂಜಾರಿ 5) ಸುರೇಶ ತಂದೆ ದುಂಡಪ್ಪ ಹೋಳಗಿ 6) ಭಾಗಪ್ಪ ತಂದೆ ಸೈಭಣ್ಣ ನಾಯ್ಕೋಡಿ ಸಾ|| ಎಲ್ಲರು ಶೀವೂರ ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ
ಬಳಸಿದ ನಗದು ಹಣ ಒಟ್ಟು 3250/- ರೂ ಮತ್ತು 52 ಇಸ್ಪೆಟ ಎಲೆಗಳು ಜಪ್ತ
ಮಾಡಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಭೀಮರಾವ ತಂದೆ ಭೋಜು ಜಾಧವ ಸಾ: ಮರಮಂಚಿ
ತಾಂಡಾ ತಾ:ಜಿ: ಕಲಬುರಗಿ ರವರು ದಿನಾಂಕ:22/03/2015 ರಂದು
ಕಲಬುರಗಿ ತಾಲೂಕಿನ ಬೇಲೂರ [ ಜೆ] ತಾಂಡಾದಲ್ಲಿ ನಮ್ಮ ಸಂಭಂದಿಕರ
ಮಗಳ ಮದುವೆ ನಿಶ್ಚಯ
ಕಾರ್ಯಕ್ರಮ ಇದ್ದಿದ್ದರಿಂದ ನಾನು ಬೇಲೂರ [ಜೆ] ತಾಂಡಾಕ್ಕೆ
ಹೋಗಿದ್ದು, ಅಲ್ಲಿ ನನ್ನಂತೆಯೇ ದಾಧೋಡಿ
ತಾಂಡಾದಿಂದ ನಮ್ಮ ಸಂಭಂದಿಕರಾದ ಸಂತೋಷ
ತಂದೆ ಮಾರುತಿ ಪವಾರ
ಮತ್ತು ವಿಲಾಸ ತಂದೆ ದೇವಿದಾಸ
ಪವಾರ ಇವರೂ ಸಹ
ಬಂದಿದ್ದರು. ಸಾಯಂಕಾಲ 04-00 ಗಂಟೆಯ
ಸುಮಾರಿಗೆ ನಾವು ನಿಶ್ಚಿತಾರ್ಥ
ಕಾರ್ಯಕ್ರಮ ಮುಗಿಸಿಕೊಂಡು ನಾನು
ಮತ್ತು ನನ್ನ ಸಂಭಂದಿಕನಾದ
ಶಿವಾಜಿ ತಂದೆ ಗೋಪು
ರಾಠೋಡ ಇಬ್ಬರೂ ಒಂದು ಮೋಟರ ಸೈಕಲ ಮೇಲೆ ಮತ್ತು
ವಿಲಾಸ ಮತ್ತು ಸಂತೋಷ ಇಬ್ಬರು
ಅವರು ತಂದ ಮೋಟರ ಸೈಕಲ ಮೇಲೆ
ಕುಳಿತುಕೊಂಡು ಕಲಬುರಗಿಯಿಂದ ಕಲಬುರಗಿ – ಹುಮನಾಬಾದ ರಾಷ್ಟ್ರೀಯ ಹೆದ್ದಾರಿ 218
ರಸ್ತೆಯ ಮಹಾಗಾಂವ ಕ್ರಾಸ್
ಮಾರ್ಗವಾಗಿ ಹೊರಟಿದ್ದು, ನಮ್ಮ ಮೋಟರ
ಸೈಕಲ ನಂ: ಕೆಎ-32- ಎಕ್ಸ್- 1159
ನೇದ್ದನ್ನು ನನ್ನ ಸಂಭಂದಿಕರಾದ
ಶಿವಾಜಿ ರಾಠೋಡ ಇವರು
ಚಲಾಯಿಸುತ್ತಿದ್ದರು. ವಿಲಾಸ ಪವಾರ
ಈತನು ಅವರ
ಮೋಟರ ಸೈಕಲ ನಂ: ಕೆಎ-37- ಆರ್- 3486
ನೇದ್ದನ್ನು ಚಲಾಯಿಸುತ್ತಾ ನಮ್ಮ ಮುಂದೆ ಮುಂದೆ
ಹೋಗುತ್ತಿದ್ದನು. ನಾವು ಅವರ ಹಿಂದೆ
ಹಿಂದೆ ಹೋಗುತ್ತಿದ್ದೇವು. ಹಾಗೇಯೇ ರೋಡಕಿಣ್ಣಿ
ಗ್ರಾಮ ದಾಟಿ ಮುಂದೆ ಹೋಗುತ್ತಿದ್ದಾಗ
ರೋಡಕಿಣ್ಣಿ ಸೇತುವೆಯ ಹತ್ತಿರ ಹೋಗುತ್ತಿದ್ದಂತೆಯೇ ಎದುರುಗಡೆಯಿಂದ
ಅಂದರೆ ಹುಮನಾಬಾದ ಕಡೆಯಿಂದ ಒಬ್ಬ ಬುಲೇರೋ ಜೀಪ್ ಚಾಲಕನು ತನ್ನ
ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ
ಚಲಾಯಿಸುತ್ತಾ ಬಂದು ವಿಲಾಸ ಪವಾರ ಈತನು
ಚಲಾಯಿಸುತ್ತಿದ್ದ ಮೋಟರ ಸೈಕಲ್ ಕ್ಕೆ
ಡಿಕ್ಕಿ ಹೊಡೆದು ಅಪಘಾತ
ಪಡಿಸಿದನು. ಅಷ್ಟರಲ್ಲಿ ನಾವು ಅಲ್ಲಿಗೆ ಹೋಗಿ ನೋಡಿದಾಗ ಅಪಘಾತ ಪಡಿಸಿದ
ಬುಲೇರೋ ನಂಬರ ನೋಡಲಾಗಿ ಅದು ಕೆ.ಎ. :32
– ಎನ್ – 5007 ನೇದ್ದು ಇದ್ದು
ನಾವು ಚಿರಾಡುವ ಸಪ್ಪಳ ಕೇಳಿ ಬುಲೇರೋ ಜೀಪ್ ಚಾಲಕನು ತನ್ನ ವಾಹನ
ಸಮೇತ ಅಲ್ಲಿಂದ ಓಡಿ ಹೋದನು.
ಆಗ ನಾವು ಹೋಗಿ ವಿಲಾಸ ಪವಾರನಿಗೆ ನೋಡಲಾಗಿ ಆತನ ಬಲಗಾಲು ಮುರಿದಂತಾಗಿ ಭಾರಿ ಗುಪ್ತಗಾಯವಾಗಿದ್ದು ಅಲ್ಲದೇ
ನಾಲಿಗೆ ಕಚ್ಚಿ ಭಾರಿ ರಕ್ತಗಾಯವಾಗಿದ್ದು ಬಲಗೈಗೆ ಮತ್ತು ಬೆನ್ನು,
ಎದೆ,ಹೊಟ್ಟೆಗೆ ತರಚಿದ ರಕ್ತಗಾಯಗಳಾಗಿ
ಆತನು ಸ್ಥಳದಲ್ಲಿಯೇ ಮೃತಪಟ್ಟಿದ್ದನು. ನಂತರ ಸಂತೋಷ ಪವಾರಿನಿಗೆ ನೋಡಲಾಗಿ
ಆತನ ಮೈ-ಕೈಗಳಿಗೆ ರಕ್ತಗಾಯ ಮತ್ತು
ಎದೆಗೆ, ಸೊಂಟಕ್ಕೆ ಭಾರಿ ಗುಪ್ತಗಾಯಗಳಾಗಿದ್ದು ನೋಡಲಾಗಿ
ಆತನೂ ಸಹ ಸ್ಥಳದಲ್ಲಿಯೇ
ಮೃತಪಟ್ಟಿರುತ್ತಾನೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಜೇವರ್ಗಿ
ಠಾಣೆ : ಶ್ರೀ ಸಂತೋಷ ತಂದೆ ಚಂದಣ್ಣ ಉಪ್ಪರ ಸಾ|| ಖಾಜಾ ಕಾಲೋನಿ ಜೇವರ್ಗಿ ರವರು ದಿನಾಂಕ 22-03-2015 ರಂದು ರಂದು ಸಾಯಂಕಾಲ ಮಹಾಲಕ್ಷ್ಮಿ
ವೈನ್‌ಶಾಪ್ ಮುಂದೆ ಜೇವರ್ಗಿ ಕಲಬುರಗಿ ಮೇನ್ ರೋಡ್ ಮೇಲೆ ನಿಂತಿದ್ದಾಗ ಶ್ರೀನಿವಾಸ
ತಂದೆ ಮನೋಹರ ಕಲ್ಲುರ ಸಾ|| ಖಾಜಾ ಕಾಲೋನಿ ಜೇವರ್ಗಿ
ಬಂದು ಹಳೆಯ ವೈಶಮ್ಯದಿಂದ ನನಗೆ ಅವಾಚ್ಯವಾಗಿ ಬೈದು ಬಿಯರ್ ಬಾಟಲಿಯಿಂದ ನನಗೆ ಹೊಡೆದು ರಕ್ತ
ಗಾಯಪಡಿಸಿ ಜೀವದ ಭಯ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಜೇವರ್ಗಿ
ಠಾಣೆ : ದಿನಾಂಕ 21.03.2015 ರ 23:30 ಯಿಂದ 22.03.2015 ರ 05:00 ಗಂಟೆಯ ಮಧ್ಯದ ಅವಧೀಯಲ್ಲಿ ಯಾರೊ ಕಳ್ಳರು ನನ್ನ ಮನೆಯ
ಬಾಗಿಲ ಕೀಲಿ ಮುರಿದು ಮನೆಯೋಳಗೆ ಪ್ರವೇಶ ಮಾಡಿ ಅಲಮಾರಿಯಲ್ಲಿದ್ದ ಬಂಗಾರ, ಬೆಳ್ಳಿಯ ಆಭರಣಗಳು ಮತ್ತು ನಗದು ಹಣ ಹೀಗೆ ಒಟ್ಟು 24.000/- ರೂ ಮೌಲ್ಯದ ಆಭರಣ ಮತ್ತು ನಗದು ಹಣ ಕಳ್ಳತನ ಮಾಡಿಕೊಂಡು
ಹೊಗಿರುತ್ತಾರೆ ಅಂತಾ ಶ್ರೀ ಮುಕ್ತಮ್ ಪಟೇಲ್ ತಂದೆ ಸೈಯದ್ ಪಟೇಲ್ ಪೊಲೀಸ್ ಪಾಟೀಲ್ ಸಾ|| ಜೇವರ್ಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment