POLICE BHAVAN KALABURAGI

POLICE BHAVAN KALABURAGI

20 March 2015

Kalaburagi District Reported Crimes

ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ :
ಜೇವರ್ಗಿ ಠಾಣೆ : ದಿನಾಂಕ 19.03.2015 ರಂದು ಜೇವರ್ಗಿ ಪಟ್ಟಣದ ಹೊಸ ಬಸ್‌ನಿಲ್ದಾಣದಲ್ಲಿ ಒಬ್ಬ ವ್ಯಕ್ತಿಯು ಕೆಂಪು ಬಣ್ಣದ ಬೆನ್ನಿಗೆ ಹಾಕುವ ಬ್ಯಾಗ್‌ ಮತ್ತು ಪ್ಲಾಸ್ಟೀಕ್  ಚೀಲದಲ್ಲಿದ್ದ ಗಾಂಜಾ ಮಾರಾಟ ಮಾಡುತ್ತಿದ್ದಾನೆ, ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ. ಲಕ್ಷ್ಮಣ. ಬಿರಾದಾರ ಎ.ಎಸ್.ಐ ಜೇವರ್ಗಿ ಹಾಗು ಶ್ರೀ. ಬಾಬು ದೇಸಾಯಿ ಸಿಪಿಸಿ 917, ಶ್ರೀ. ಬೀರಣ್ಣ ಸಿಪಿಸಿ 1187, ಶ್ರೀ. ಮಲ್ಲಿಕಾರ್ಜುನ ಸಿಪಿಸಿ 841 ಶ್ರೀ. ತುಕಾರಾಮ ಸಿಪಿಸಿ 219 ಮತ್ತು ಪಂಚರೊಂದಿಗೆ ಸದರಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ತಿಳಿಸಿ ದಾಳಿ ಮಾಡಲು ಕೇಳಿ ಮಾನ್ಯ ಸಿಪಿಐ ಸಾಹೇಬರ ನೇತ್ರತ್ವದಲ್ಲಿ  ಮಾನ್ಯ ಡಿ.ವಾಯಿ.ಎಸ್.ಪಿ ಸಾಹೇಬ ಕಲಬುರಗಿ ರವ್ರ ಮಾರ್ಗದರ್ಶನದಲ್ಲಿ ಜೇವರಗಿ ಹೊಸ ಬಸ್ ನಿಲ್ದಾಣದ ಮೇನ್‌ಗೇಟಿನ ಹತ್ತಿರ ಹೋಗಿ ನೋಡಲು ಅಲ್ಲಿ ಒಬ್ಬ ಮನುಷ್ಯನು ತನ್ನ ಕೈಯಲ್ಲಿ ಕೆಂಪು ಬಣ್ಣದ ಬೆನ್ನಿಗೆ ಹಾಕುವ ಬ್ಯಾಗ್‌ದೊಂದಿಗೆ ಮತ್ತು ಪ್ಲಾಸ್ಟೀಕ್ ಚೀಲದೊಂದಿಗೆ ಬರುತ್ತಿರುವದನ್ನು ನೋಡಿ ಅವನ ಹತ್ತಿರ ಹೋಗುತ್ತಿದ್ದಂತೆ ಅವನು ನಮ್ಮನ್ನು ನೋಡಿ ಬಸ್‌ ನಿಲ್ದಾಣದ ಒಳಗಡೆ ಓಡಿ ಹೋಗುತ್ತಿದ್ದಾಗ ಅವನಿಗೆ ಬೆನ್ನು ಹತ್ತಿ ಹಿಡಿದು ವಿಚಾರಿಸಲು ಅವನು ಸರಿಯಾದ ಮಾಹಿತಿ ನೀಡದೆ ಇರುವದರಿಂದ ಅವನ ಮೇಲೆ ಸಂಶಯ ಬಂದು ಅವನ ಹತ್ತಿರ ಇದ್ದ ಬ್ಯಾಗ್‌ ಮತ್ತು ಚೀಲವನ್ನು ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು ಸದರಿ ಚೀಲಗಳಲ್ಲಿ ಗಾಂಜಾ ಇದ್ದು ಅವನಿಗೆ ಹೆಸರು ಕೇಳಲು ತನ್ನ ಹೇಸರು ಖಲೀಲ ತಂದೆ ಆಬೀದ ಮುನ್ಸಿ ಸಾ|| ಜೇವರಗಿ ಕೆ ಅಂತ ಹೇಳಿದನು. ಈ ಗಾಂಜಾವನ್ನು ಎಲ್ಲಿಂದ ತಂದಿರುವ ಬಗ್ಗೆ ಕೇಳಲು ಅವನು ಸದರಿ ಗಾಂಜಾವನ್ನು ಕುಮ್ಮನ ಸಿರಸಗಿ ಗ್ರಾಮದ 1) ಸಿದ್ದಪ್ಪ ತಂದೆ ಕಲ್ಲಪ್ಪ ಸಂಕಾಲಿ 2) ಶರಣಪ್ಪ ತಂದೆ ಸಾಹೇಬಗೌಡ ಕುದರಗುಂಡ  ಇವರ ಕಡೆಯಿಂದ ತಂದಿರುವ ಬಗ್ಗೆ ಹೇಳಿದನು. ನಂತರ ಸದರಿ ಗಾಂಜಾವನ್ನು ನೋಡಲು ಕೆಂಪು ಬ್ಯಾಗಿನಲ್ಲಿ ಅಂದಾಜು ಅರ್ಧ ಕೆ.ಜಿ ಯಷ್ಟು ಮತ್ತು ಪ್ಲಾಸ್ಟೀಕ್ ಚೀಲದಲ್ಲಿ ಅಂದಾಜು ಒಂದೂವರೆ ಕೆ.ಜಿ ಯಸ್ಟು ಗಾಂಜಾ ಇದ್ದು ಅದರ ಒಟ್ಟು ಅಂದಾಜು ಕಿಮ್ಮತ್ತು  5000/- ರೂ ಆಗುತ್ತಿದ್ದು,  ಸದರ ಬ್ಯಾಗಳನ್ನು ಗಾಂಜಾ ಂಆರಾಟ ಮಾಡುತ್ತಿದ್ದ  ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ನಿಂಬರ್ಗಾ ಠಾಣೆ : ದಿನಾಂಕ 19/03/2015 ರಂದು ಮಾರೇಶರಾಜೇಂದ್ರ ತಂದೆ ಲಕ್ಷ್ಮಣ ಕೆರೂರಅಂಬಾರಾಯ ತಂದೆ ಶಿವಪುತ್ರಪ್ಪ ಕೇರೂರಕಾಂತಪ್ಪ ತಂದೆ ರೇವಣಪ್ಪ ಕೇರೂರಅಮೃತ ತಂದೆ ಶರಣಪ್ಪ ಹಂಗರಗಿಬೀರಣ್ಣಾ ತಂದೆ ಶರಣಬಸಪ್ಪ ಕೇರೂರ ಎಲ್ಲರೂ ಸೇರಿ ಗೇಮು ರಾರೋಡ ಇವರ ಹೊಲದಲ್ಲಿ ಕಬ್ಬು ಕಟಾವು ಮಾಡಿ ಲಾರಿ ನಂ. ಎಮ.ಹಚ್ 25, ಬಿ 9407 ನೇದ್ದರಲ್ಲಿ ಲೋಡ ಮಾಡಿ  ಹೊಲದಿಂದ ಭೂಸನೂರ ಫ್ಯಾಕ್ಟರಿಗೆ ಸಾಗಿಸಲು ಅಂತ ಹೊರಟಾಗ ಲಾರಿ ಕ್ಯಾಬೀನದಲ್ಲಿ ಮಾರೇಶರಾಜೇಂದ್ರ ತಂದೆ ಲಕ್ಷ್ಮಣ ಕೆರೂರಅಂಬಾರಾಯ ತಂದೆ ಶಿವಪುತ್ರಪ್ಪ ಕೇರೂರ ಕುಳಿತಿದ್ದು ಲಾರಿ ಚಾಲಕನಾದ ಅಬ್ಬಾಸಲಿ ತಂದೆ ಬಾಬಾಸಾಬ ಸಾ|| ಸುಂಟನೂರ ಇತನು ತನ್ನ ವಶದಲ್ಲಿದ್ದ ಲಾರಿ ನಂ.ಎಮ.ಹಚ್  25, ಬಿ 9407 ನೇದ್ದನ್ನು ಅತೀ ವೇಗ ಮತ್ತು ನಿಷ್ಕಾಳಜಿತನಿಂದ ಚಲಾಯಿಸಿ  ಭೂಸನೂರ ಫ್ಯಾಕ್ಟರಿ ಕ್ರಾಸ ಹತ್ತಿರ ಇರುವ ಇಳಿಜಾರಿನಲ್ಲಿ ಪಲ್ಟಿ ಹೊಡೆಸಿದ್ದು ಸದರಿ ಅಪಘಾತದಲ್ಲಿ ರಾಜೇಂದ್ರಅಂಬಾರಾಯ ಇಬ್ಬರಿಗೂ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ನನಗೂ ಮತ್ತು ಅಬ್ಬಾಸಲಿ ಇಬ್ಬರಿಗೂ ಭಾರಿ ಮತ್ತು ಸಾದಾ ರಕ್ತ ಮತ್ತು ಗುಪ್ತಗಾಯಗಳಾಗಿರುತ್ತವೆ ಅಂತಾ ಶ್ರೀ ಮಾರೇಶ ತಂದೆ ನಾಗಪ್ಪಾ ಕೇರೂರ  ಸಾ|| ಬಸವಂತವಾಡಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಡಬೂಳ ಠಾಣೆ : ದಿನಾಂಕ-19/03/2015 ರಂದು ಶ್ರೀ ಗುಂಡೆರಾವ ತಂದೆ ರಾಮಜಿರಾವ ಕುಲಕರ್ಣಿ ಸಾ : ಖೂಬಾ ಲೇ ಔಟ ಹಿರಾಪೂರ ಕಲಬುರಗಿ ರವರ ಮಗ ಪ್ರಶಾಂತ ಈತನು ಮೋಟಾರ ಸೈಕಲ ನಂ ಕೆಎ-37 ಹೆಚ್-9890 ನೇದ್ದರ ಮೇಲೆ ಸೇಡಂಕ್ಕೆ ಬಂದು ನಮ್ಮೆಲ್ಲರೊಂದಿಗೆ ಮಾತಾಡಿ ಕಲಬುರಗಿಯಲ್ಲಿ ಕೆಲಸವಿದೆ ನಾನು ಹೋಗುತ್ತೇನೆ ಅಂತಾ ಹೇಳಿ ಅದೇ ಮೋಟಾರ ಸೈಕಲ  ಮೇಲೆ ಸಾಯಾಂಕಾಲ ಹೋದನು ನಂತರ ನಾನು ಮಗ ಮುಟ್ಟಿರುತ್ತಾನೆ ಅಥವಾ ಇಲ್ಲವೋ ಅಂತಾ ಮಗನ ಮೋಬಾಯಿಲಗೆ ಪೋನ್ ಮಾಡಿದಾಗ ಮಾಡಬೂಳ ಠಾಣೆಯ ಪೊಲೀಸನವರು ಮಾತಾಡಿ ಈ ಪೋನ್ ಯಾರಾದೋ ಅಂತ ಕೇಳಿದಕ್ಕೆ ನಮ್ಮ ಮಗ ಪ್ರಶಾಂತನದು ಅಂತಾ ಹೇಳಿದಾಗ ನಿಮ್ಮ ಮಗ ಇವಣಿ ಕ್ರಾಸ್ ಹತ್ತಿರ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿರುತ್ತಾನೆ ಶವವನ್ನು ನಾವು ಜಿಲ್ಲಾ ಆಸ್ಪತ್ರೆ ಕಲಬುರಗಿಯಲ್ಲಿ ಕಳುಸಿರುತ್ತೇವೆ ಅಂತಾ ಹೇಳಿದರಿಂದ ನಾನು ಮತ್ತು ನನ್ನ ಹೆಂಡತ್ತಿ ಹಾಗೂ ಮಗಳು ರಾತ್ರಿ 10 ಗಂಟೆ ಸುಮಾರಿಗೆ ಬಂದು ನೋಡಲಾಗಿ ನನ್ನ ಮಗನೆ ಇದ್ದು ಆತನ ತೆಲೆ ಒಡೆದು ಭಾರಿ ರಕ್ತಗಾಯವಾಗಿ ಮೃತ ಪಟ್ಟಿದ್ದು ವಿಷಯ ಹಾಜರಿದ್ದ ಶ್ರೀ ಸಿದ್ರಾಮಪ್ಪಾ ಎ.ಎಸ್.ಐ ರವರಿಗೆ ವಿಚಾರಿಸಲಾಗಿ ನಿಮ್ಮ ಮಗನಿಗೆ ಯಾವುದೋ ಒಂದು ವಾಹನ ಡಿಕ್ಕಿ ಪಡಿಸಿ ಈ ಘಟನೆ ನಡೆದಿರುತ್ತದೆ ಅಂತಾ ತಿಳಿಸಿದ್ದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀಮತಿ ಭಾಗಮ್ಮಾ ಗಂಡ ರೇವಣಪ್ಪ ಭಂಗರಗಿ ಸಾ|| ಧುತ್ತರಗಾಂವ ಇವರು ದಿನಾಂಕ  18/03/2015 ರಂದು ನಾನು ಕುರಿ ಕಾಯಲು ಹೋದಾಗ ಆಕಸ್ಮಿಕವಾಗಿ ನನ್ನ ಕುರಿಗಳು ನಮ್ಮೂರಿನ ಭೀಮಶಾ ತಂದೆ ಚನ್ನಪ್ಪ ರಾಜೋಳ ಈತನು ಮಾಡಿದ ಶಿವಶರಣಪ್ಪ ತಡಕಲ ಇವರ ಹೊಲದಲ್ಲಿ ಹೋಗಿದ್ದರಿಂದ ದಿನಾಂಕ 19/03/2015 ರಂದು ನಾನು ಆತನ ಹೋಟೇಲ ಮುಂದಿನ ರೋಡಿನ ಮೇಲೆ ಹಾದು ಹೋಗುತ್ತಿದ್ದಾಗ ನನಗೆ ಆತನು ಏ ರಂಡಿ ನಿನಗೆ ಎಷ್ಟು ಸೊಕ್ಕ ಬಂದಾದ ನಾನು ಮಾಡಿದ ಹೊಲದಾಗ ಕುರಿ ಬಿಟ್ಟಿದ್ದಿ ನಿನಗೆ ಇಡಂಗಿಲ್ಲ ಅಂತ ಬೈದನು ಆಗ ಆತನ ಹೆಂಡತಿಯಾದ ತಂಗೆಮ್ಮ ಇವಳು ಅಲ್ಲಿಗೆ ಬಂದು ನನಗೆ ತಡೆದು ನಿಲ್ಲಿಸಿ  ಈ ರಂಡಿಗೆ ಸೊಕ್ಕು ಬಹಳ ಬಂದಾದ ಅಂತ ಅವಾಚ್ಯವಾಗಿ ಬೈದು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಬಲಗೈಗೆ ಹಸ್ತಕ್ಕೆ ಹೊಡೆದು ಭಾರಿರಕ್ತಗಾಯಪಡಿಸಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀಮತಿ ತಂಗೆಮ್ಮ ಗಂಡ ಭೀಮಶಾ ರಾಜೋಳ ಸಾ|| ಧುತ್ತರಗಾಂವ ಇವರು ದಿನಾಂಕ  18/03/2015 ರಂದು ನಮ್ಮೂರಿನ ಭಾಗಮ್ಮಾ ಗಂಡ ರೇವಣಪ್ಪ ಭಂಗರಗಿ ಇವಳು ನನ್ನ ಗಂಡ ಮಾಡಿದ ಶಿವಶರಣಪ್ಪ ತಡಕಲ ಇವರ ಹೊಲದಲ್ಲಿ ಕುರಿ ಬಿಟ್ಟಿದ್ದುಇದರ ಬಗ್ಗೆ ನಾನು ದಿನಾಂಕ  19/03/2015 ರಂದು ನಾನು ನಮ್ಮ ಹೋಟೆಲ್ ಮುಂದಿನ ರೋಡಿನ ಮೇಲೆ ಅವಳು ಮತ್ತು ಅವಳ ಗಂಡ ಹೊಲಕ್ಕೆ ಹೊರಟಾಗ ಕೇಳಿದ್ದಕ್ಕೆ ಭಾಗಮ್ಮಳು ನನಗೆ ಏ ರಂಡಿ ನಾನು ಕುರಿ ಬಿಟ್ಟಿನಿ ಏನು ಮಾಡಕೋತಿ ಮಾಡಕೋ ಅಂತ ಅವಾಚ್ಯವಾಗಿ ಬೈದಳು ಅದಕ್ಕೆ ನಾನು ಹೀಗೆ ಅಂದರ ಹೆಂಗೆ ಅಂತ ಅಂದಿದ್ದಕ್ಕೆ ಅವಳು ತನ್ನ ಕೈಯಲ್ಲಿದ್ದ ಕುರಿ ಕಾಯುವ ಬಡಿಗೆಯಿಂದ ಹಣೆಯ ಮೇಲೆ ಹೊಡೆದು ರಕ್ತಗಾಯಪಡಿಸಿದಳು ಅವಳ ಗಂಡನಾದ ರೇವಣಪ್ಪ ಬಂಗರಗಿ ಈ ರಂಡಿಗೆ ಬಿಡಬೇಡ ಸೊಕ್ಕು ಬಂದಾದ ಅಂತ ಬೈಯುತ್ತಿದ್ದಾಗ ಅಲ್ಲಿಯೇ ಇದ್ದ ನಮ್ಮೂರಿನ ಈರಣ್ಣಾ ಮೇತ್ರೆಬೀರಣ್ಣಾ ತಂದೆ ಸಿದ್ರಾಮ ಕೊರಳ್ಳಿ ಇವರು ಬಂದು ಬಿಡಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: