POLICE BHAVAN KALABURAGI

POLICE BHAVAN KALABURAGI

17 March 2015

Kalaburagi District Reported Crimes

ಪತ್ರಿಕಾ ಪ್ರಕಟಣೆ
      ಈ ಮೂಲಕ ಸಾರ್ವಜನಿಕರಲ್ಲಿ ತಿಳಿಯಪಡಿಸುವದೇನೆಂದರೆ ಬಿದ್ದಾಪೂರ ಕಾಲೋನಿಯಲ್ಲಿರುವ ಮಾನವ ಸಹಿತ  ಲೆವಲ ಕ್ರಾಸಂಗ ನಂ 83 ಬಿ, ರೇಲ್ವೆ ಕಿ.ಮಿ 565/6-7 ನೇದ್ದರಲ್ಲಿ ಮೇಲ್ಸೆತುವೆ  ಕಾಮಗಾರಿಯು ಈಗಾಗಲೇ ಕೇಂದ್ರ ಹಾಗು ರಾಜ್ಯ ಸರಕಾರದಿಂದ ಮಂಜೂರಾಗಿರುತ್ತದೆ. ಈ ಕಾಮಗಾರಿಯು ದಿನಾಂಕ 20-03-2015 ರಂದು ಆರಂಬಿಸಲು ಜಿಲ್ಲಾಡಳಿತ ನಿರ್ಧರಿಸಿರುತ್ತದೆ.
     ಈ ಕಾಮಗಾರಿ ಆರಂಭವಾದ ದಿನದಿಂದ ಕಾಮಗಾರಿ ಮುಗಿಯುವವರೆಗೆ ಸಂಚಾರವನ್ನು ಈ ಕೆಳಕೆಂಡ ಮಾರ್ಗಗಳಲ್ಲಿ ಸಂಚರಿಸಲು ಪರ್ಯಾರ ಮಾರ್ಗ ಸೂಚಿಸಲಾಗಿದೆ.
1) ಅಫಜಲಪೂರ ಕಡೆಯಿಂದ ಬರುವ ಮತ್ತು ಅಫಜಲಪೂರ ಕಡೆಗೆ ಹೋಗುವ ಭಾರಿ ವಾಹನಗಳು ಹೈಕೋರ್ಟ ಹತ್ತಿರ  
   ರಾಮ ಮಂದಿರ ಕಡೆಗಿನ ರಿಂಗ ರೋಡ ಮುಖಾಂತರ ಚಲಿಸಲು ಸೂಚಿಸಲಾಗಿದೆ. 
2) ಅಫಜಲಪೂರ ಕಡೆ ಹೋಗುವ ಮತ್ತು ಬರುವ ಲಘು ವಾಹನಗಳು ಹೊಸ ಜೇವಗರ್ಿ ರೋಡ ಮುಖಾಂತರ
   ಚಲಿಸಲು ಸೂಚಿಸಲಾಗಿದೆ.
3) ಅಫಜಲಪೂರ ಮಾರ್ಗದಲ್ಲಿ ಚಲಿಸುವ ದ್ವಿಚಕ್ರ ವಾಹನಗಳು ಬಂಜಾರ ಕ್ರಾಸದಿಂದ ತಿರುಗಿ ಬಿದ್ದಾಪೂರ ಕಾಲೋನಿ
   ಮುಖಾಂತರ ಸಂಚರಿಸಬಹುದಾಗಿದೆ.
4) ಹೀರಾಪೂರ, ಬಬಲಾದ, ಸಾವಳಗಿ, ಹುಣಸಿಹಡಗಿಲ, ನೀಲೂರ, ಸ್ಟೇಶನ ಗಾಣಗಾಪೂರ ಕಡೆಗೆ ಹೋಗುವ ಲಘು
   ವಾಹನಗಳು ಮತ್ತು ದ್ವಿಚಕ್ರ ವಾಹನಗಳು ಎಂದಿನಂತೆ ಸಂಚರಿಸಲು ಸೂಚಿಸಿದೆ.
5) ರೇಲ್ವೆ ಕ್ರಾಸಿಂಗ ಸುತ್ತ ಮುತ್ತಲು ವಾಸಿಸುವ ನಿವಾಸಿಗಳಿಗೆ ಹತ್ತಿರದಲ್ಲಿ ಹೊಸದಾಗಿ ನಿರ್ಮಿಸಿದ ರೇಲ್ವೆ ಅಂಡರ
   ಪಾಸ ಮುಖಾಂತರ ಚಲಿಸಲು ಸೂಚಿಸಲಾಗಿದೆ. ಕಾಮಗಾರಿಯ ಸಂದರ್ಭದಲ್ಲಿ ಸೂಚಿಸಿದಂತಹ ಮಾರ್ಗಗಳಲ್ಲಿ 
   ಸಂಚರಿಸಿ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಸಹಕರಿಸಲು ಕೋರಲಾಗಿದೆ.
                                            
                                                                          ಜಿಲ್ಲಾಧಿಕಾರಿಗಳು,
                                                                           ಕಲಬುರಗಿ ಜಿಲ್ಲೆ. 
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸಂಗಮನಾಥ ತಂದೆ ಸುರೇಂದ್ರನಾಥ ಮಠ ಸಾ: ಜಾಗ್ರತಿ ಕಾಲೋನಿ   ಕಲಬುರಗಿ  ರವರು ದಿನಾಂಕ: 16/03/2015 ರಂದು ಮಧ್ಯಾಹ್ನ ತನ್ನ ಗೆಳೆಯನಾದ ಬಸವರಾಜ ತಂದೆ ಶರಣಯ್ಯಾ ಇವರ ಮೋ/ಸೈಕಲ್ ನಂ; ಕೆಎ 32 ಇಸಿ 4149 ನೆದ್ದರ ಮೇಲೆ ಹೋಗಿ  ಟಿಫಿನ ಮಾಡಿಕೊಂಡು ತಮ್ಮ ಪಿ.ಡಿ.ಎ ಕಾಲೇಜ ಒಳಗೆ ಬಂದು ಪಾರ್ಕಿಂಗ ಇರುವ ಸ್ಥಳದಲ್ಲಿ ಹೋಗುವಾಗ ಪಾರ್ಕಿಂಗ ಸಮೀಪ ರೋಡ ಮೇಲೆ ಹಿಂದಿನಿಂದ  ಕಾರ ನಂ;ಕೆಎ 32 ಎನ್ 3750 ನೆದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಕುಳಿತಿದ್ದ ಮೋ/ಸೈಕಲ್ ಕ್ಕೆ ಡಿಕ್ಕಿ ಪಡಿಸಿ ಅಪಘಾತಮಾಡಿ ಫಿರ್ಯಾದಿಗೆ ಗಾಯಗೊಳಿಸಿ ಕಾರ ಸಮೇತ ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು  :
ಆಳಂದ ಠಾಣೆ : ಶ್ರೀಮತಿ.ಶಾಂತಾಬಾಯಿ ಗಂಡ ಬಾಬುರಾವ ಜಾಧವ ಸಾ:ಸಂಗೊಳಗಿ (ಜಿ) ತಾ; ಆಳಂದ ರವರು ದಿನಾಂಕ: 09/03/2015 ರಂದು ನಮ್ಮ ಮನೆಯ ಎದುರು ಕಟ್ಟೆಯ ಮೇಲೆ ಕುಳಿತಾಗ ಒಬ್ಬ ವ್ಯಕ್ತಿ ಅಂದಾಜು 30-35 ವರ್ಷದವನು ನನ್ನ ಹತ್ತಿರ ಬಂದು ನಾನು ಬೆಳಮಗಿ ಗ್ರಾಮದ ಜಗದೀಶ ಪಾಟೀಲ ಇದ್ದು ನಾನು ದಾದಾ ಇದ್ದೆನೆ ನನಗೆ ಕುಡಿಯಲು ದುಡ್ಡು ಬೇಕು ನೀನು ದುಡ್ಡು ಕೊಡಲಿಲ್ಲ ಅಂದರೆ ನಿನಗೆ ಜೀವ ಸಹಿತ ಬೀಡುವುದಿಲ್ಲಾ ಬೋಸಡಿ ಹಣ ಕೊಡು ಅಂತಾ ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ನನ್ನ ಹಣೆಯ ಬಲಭಾಗಕ್ಕೆ ಹೊಡೆದನು ಅದರಿಂದ ನನಗೆ ರಕ್ತಗಾಯವಾಗಿ ಕೆಳಗೆ ಬಿದ್ದೆನು. ಆಗ ಕಟ್ಟಿಗೆಯಿಂದ ಎಡಗೈ ಹಸ್ತದ ಹತ್ತಿರ ಹೊಡೆದಿದ್ದರಿಂದ ಗುಪ್ತಗಾಯವಾಯಿತು & ಕಾಲಿನಿಂದ ಒದ್ದಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ರಾಘವೇಂದ್ರ ನಗರ ಠಾಣೆ : ಶ್ರೀ ಕಲ್ಯಾಣಿ ತಂದೆ ಶರಣಪ್ಪಾ ಮೀರಕಲ್‌ ಸಾ:ಲಾಲಗೇರಿ ಬ್ರಹ್ಮಪೂರ ಇವರು ದಿನಾಂಕ: 16/03/2015 ರಂದು ಬೆಳಗ್ಗೆ ಬಾಳೆ ಹಣ್ಣಿನ ವ್ಯಾಪಾರ ಮಾಡುತ್ತಾ ಇದ್ದಾಗ ಶರಣಯ್ಯಾ ಸ್ವಾಮಿ ಇವರು ಬಂದು ನನಗೆ ಹೇಳಿದ್ದೆನೆಂದರೆ ಏ ಕಲ್ಯಾಣಿ ನೀನು ನನಗೆ ಸರಾಯಿ ಕುಡಿಯಲಿಕ್ಕೆ 500/-ರೂ ಕೊಡಬೇಕು ಅಂತಾ ಕೇಳಿದಾಗ ನನ್ನ ಹತ್ತಿರ ಹಣ ಇಲ್ಲಾ ಅಂತಾ ಹೇಳಿದಾಗ ಅವನು ತನ್ನ ಮಗನಾದ ವಿರೇಶ ಸ್ವಾಮಿ ಹಾಗೂ ಅವನ ಜೊತೆಯಲ್ಲಿದ್ದ ಇನ್ನೂ ಇಬ್ಬರೂ ಹುಡುಗರೊಂದಿಗೆ ಬಂದು ಏ ರಂಡಿ ಮಗನೆ ನೀನು ನನ್ನ ತಂದೆಯವರಿಗೆ ಸರಾಯಿ ಕುಡಿಯಲಿಕ್ಕೆ ಹಣ ಏಕೆ ಕೊಟ್ಟಿರುವದಿಲ್ಲಾ ಅಂತಾ ಅವಾಚ್ಯವಾಗಿ ಬೈದು ನನ್ನ ಬಂಡಿಯ ಮೇಲೆ ಇದ್ದ ಒಂದು ಕೆಜಿ ತೂಕದ ಕಲ್ಲಿನಿಂದ ನನ್ನ ಎಡಗಡೆಯ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಶರಣಯ್ಯ ಸ್ವಾಮಿ ಹಾಗೂ ಅವನ ಜೊತೆಯಲ್ಲಿದ್ದ ಇಬ್ಬರೂ  ನನಗೆ ಅವಾಚ್ಯವಾಗಿ ಬೈದು ಹೊಡೆಬಡೆ ಮಾಡಿರುತ್ತಾರೆ. ಅವರಿಗೆ ನೋಡಿದರೆ ನಾನು ಗುರುತಿಸುತ್ತೇನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನಿಂಬರ್ಗಾ ಠಾಣೆ : ಶ್ರೀ ಗುಂಡಪ್ಪ ತಂದೆ ಕರಬಸಪ್ಪಾ ತಳವಾರ ಸಾ|| ಬೊಮ್ಮನಳ್ಳಿ ಇವರ ಮನೆಯವರಿಗೆ ಅಶೋಕ ತಂದೆ ಶಂಕಪ್ಪ ನಿಂಬರ್ಗಾ ಇತನು ದಿನಾಂಕ 07/03/2015 ರಂದು ರಾತ್ರಿ 1100 ಗಂಟೆಗೆ ಸರಾಯಿ ಕುಡಿದ ನಶೇಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಭಯ ಪಡಿಸಿರುತ್ತಾನೆ, ಅಲ್ಲದೆ ತಾನು ಈ ಹಿಂದೆ ತನ್ನ ಮಗಳ ಸಂಭಂಧ ಕೊಟ್ಟ ಕೇಸಿನಲ್ಲಿ ಆಪಾದಿತರಾದ 01] ರಾಜು ತಂದೆ ಶಂಕಪ್ಪ ನಿಂಬರ್ಗಾ, 02] ಬಸಪ್ಪ ತಂದೆ ತುಕ್ಕಪ್ಪ ನಿಂಬರ್ಗಾ, 03] ಭೀಮಶಾ ತಂದೆ ನಿಂಗಪ್ಪ ಮಳ್ಳಿ, 04] ನಿಂಗಪ್ಪಾ ತಂದೆ ಮಾಳಪ್ಪ ಹಿರೆ ಪೂಜಾರಿ, 05] ಶರಣಪ್ಪ ತಂದೆ ತುಕ್ಕಪ್ಪ ನಿಂಬರ್ಗಾ, 06] ಗುಂಡಪ್ಪ ತಂದೆ ಶರಣಪ್ಪ ನಿಂಬರ್ಗಾ ಇವರು ಜಾಮೀನಿನ ಮೇಲೆ ಊರಿಗೆ ಬಂದು ಗ್ರಾಮದಲ್ಲಿದ್ದು ಪ್ರಕರಣದಲ್ಲಿ ಸಾಕ್ಷಿ ಹೇಳಿದವರಿಗೆ ಜೀವ ಸಹಿತ ಬಿಡುವದಿಲ್ಲ ಕೊಲೆ ಮಾಡುತ್ತೇವೆ ಅಂತ ಮತ್ತು ಅವಾಚ್ಯ ಶಬ್ದಗಳಿಂದ ಬೈದು ನಿಂದಿಸುತ್ತಿದ್ದಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: