ಅನಧೀಕೃತ
ಮಧ್ಯ ಮಾರುತ್ತಿದ್ದವನ ಬಂಧನ :
ಜೇವರ್ಗಿ
ಠಾಣೆ : ದಿನಾಂಕ 08.02.2015 ರಂದು ಜೇವರ್ಗಿ ಕಲಬುರಗಿ ಹೈವೆ ಪಕ್ಕ ಕಟ್ಟಿ
ಸಂಗಾವಿ ಬ್ರೀಡ್ಜ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ
ಪಿ.ಎಸ್.ಐ. ಜೇವರ್ಗಿ ರವರು ಹಾಗು ಸಿಬ್ಬಂದಿ
ಮತ್ತು ಪಂಚರೊಂದಿಗೆ ಸ್ಠಳಕ್ಕೆ ಹೋಗಿ ದಾಳಿ ಮಾಡಿ ಹಿಡಿದು
ವಿಚಾರಿಸಲು ಜಾನಸ್ @ ಜಾನಯ್ಯ ತಂದೆ ಲಚಮಯ್ಯ ಗುತ್ತೆದಾರ ಸಾ : ಕಟ್ಟಿ ಸಂಗಾವಿ ಅಂತಾ ಹೇಳಿದ್ದು ಅವನಿಂದ ಒಟ್ಟು 4998/- ರೂ ಕಿಮ್ಮತ್ತಿ ಮಧ್ಯದ
ಬಾಟಲಿ ಮತ್ತು ಪೌಚ್‌ಗಳನ್ನು 1000/- ರೂ ನಗದು ಹಣ ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ಜೇವರ್ಗಿ
ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಜಾತಿ
ನಿಂದನೆ ಪ್ರಕರಣ :
ವಿಶ್ವವಿದ್ಯಾಲಯ
ಠಾಣೆ : ಶ್ರೀಮತಿ ಸುಮಂಗಲಾ ಗಂಡ ಅಮೃತ ಸಾಗರ ಸಾ|| ರಾಮಜಿನಗರ ರೋಜಾ(ಕೆ) ಕಲಬುರಗಿ. ರವರ ಮನೆ ಸರ್ವೆ ನಂ 36 ಹಾಗರಗಾ ರೋಡ ಬಡೇಪುರ ಕಲಬುರಗಿ ನೇದ್ದರ ಜಮೀನಿನ ಪ್ಲಾಟ ನಂ
11,12,13 ನೇದ್ದು ಇದ್ದು, ಪ್ಲಾಟ ನಂ 11,13 ರಲ್ಲಿ ಮನೆ ಕಟ್ಟುವ ಸಾಮಾನು ಹಾಕಿದಾಗ ದಿನಾಂಕ
24.01.2015 ರಂದು 11.00 ಎಎಮ್ ಕ್ಕೆ ಆರೋಪಿತರಾದ 1) ಮಹ್ಮದ ಖದೀರ ತಂದೆ ಮಹ್ಮದ ಮಸ್ತಾನಸಾಬ ಸಾ||
ನಯಾ ಮೊಹಲ್ಲಾ ಹಜ ಕಮೀಟಿ ಹತ್ತಿರ ಕಲಬುರಗಿ ಮತ್ತು ಇತರೆ 3 ಜನರು ಫಿರ್ಯಾದಿದಾರರ
ಪ್ಲಾಟನಲ್ಲಿ ಅತಿಕ್ರಮ ಪ್ರವೇಶ ಮಾಡಲು ಪ್ರಯತ್ನಿಸಿ ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಈ
ಪ್ಲಾಟನಲ್ಲಿ ಬಂದರೆ ಖಲಾಸ ಮಾಡುತ್ತೇವೆಂದು ಈ 3 ಜನರು ಮತ್ತು ಇತರೆ ಗುಂಡಾ ಜನರ ಕೈಯಲ್ಲಿ ಆಯುಧ
ಹಿಡಿದುಕೊಂಡು ನಮ್ಮ ಮೆಲೆ ಕೃತ್ಯ ವೆಸಗಲು ಪ್ರಯತ್ನಿಸುತ್ತಿದ್ದಾರೆ ಹಾಗೂ ಜೀವದ ಭಯ
ಒಡ್ಡಿರುತ್ತಾರೆ ಅಲ್ಲದೆ ಈ ಕಮೀನಾ ಜಾತಕೋ ಮಾರಡಾಲೆಂಗೆ ಎಂದು ಜಾತಿ ನಿಂದನೆ ಮಾಡಿರುತ್ತಾರೆ, ಅಂತಾ
ಸಲ್ಲಿಸಿದ ದೂರು ಸಾರಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 07.02.2015
ರಂದು ರಾತ್ರಿ ಜೇವರ್ಗಿ ನರಿಬೊಳ ರೋಡ್ ಮೇಲೆ ನರಿಬೋಳ ಗ್ರಾಮದ ಹತ್ತಿರ ನನ್ನ ಇಂಡಿಕಾ ವಿಸ್ತಾ
ಕಾರ್ ನಂ ಕೆಎ32ಎನ್5080 ನೇದ್ದರ ಚಾಲಕನು ನನ್ನ ಕಾರ್ ಅನ್ನು ಅತಿ ವೇಗ ಮತ್ತು
ಅಲಕ್ಷ್ಯತನದಿಂದ ನಡೆಸಿಕೊಂಡು ನರೊಬೋಳ ಗ್ರಾಮದ ಹತ್ತಿರ ಒಮ್ಮೇಲೆ ರೋಡಿನ ಮೇಲೆ ಕಟ್ ಹೋಡೆದು ರೋಡಿನ ಬಲ ಸೈಡಿಗೆ ಕಾರ್
ಅನ್ನು ಪಲ್ಟಿ ಮಾಡಿ ಕಾರ್‌ಅನ್ನು ಪುರ್ತಿಯಾಗಿ ಜಖಂ ಗೊಳಿಸಿದ್ದು ಅದೆ ಅಂತಾ ಸಲ್ಲಿಸಿದ ದೂರು
ಸಾರಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿ ಸಾವು ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ವಸಂತ ತಂದೆ ಗೌಡಪ್ಪ ಪಾಟೀಲ ಸಾ:ರೋಡಕಿಣ್ಣಿ ಗ್ರಾಮ
ತಾ:ಜಿ:ಕಲಬುರ್ಗಿ ಇವರು ದಿನಾಂಕ:04-02-2015
ರಂದು ಮುಂಜಾನೆ ರೋಡಕಿಣ್ಣಿ ಹೆದ್ದಾರಿ ಬಾಜು ಇರುವ
ಮುರಳಿಧರ ಚವ್ಹಾಣ ಇವರ ಹೋಟೇಲನಲ್ಲಿ ಚಹಾ ಕುಡಿಯಲು ಹೋದಾಗ ಒಬ್ಬ ಅಂದಾಜು 28-30 ವಯಸ್ಸಿನ
ಅಪರಿಚಿತ ಮಾನಸಿಕ ಅಶ್ವಸ್ಥನಂತೆ ಕಾಣುವ ಮನುಷ್ಯ ಸೂಮಾರು ದಿನಗಳಿಂದ ಊಟ ಮಾಡದೆ ನಿಶಕ್ತನಂತೆ
ಕಾಣುವ ಮನುಷ್ಯ ನಾನು ಕುಳಿತ ಹೋಟೇಲ ಮುಂದೆ ಬಂದು ನಿಂತಿದ್ದು. ಆತನ ಮೈಮೇಲೆ ಕೇವಲ ನೀಲಿ ಬಣ್ಣದ
ಫುಲ ಜಾಂಗ ಹಾಕಿಕೊಂಡು ಬರಿ ಮೈಲೆ ಮೈಯಲ್ಲಾ
ಛಳಿಯಲ್ಲಿ ನಡಗಿಸುತ್ತಾ ಬಂದು ನಿಂತಿದ್ದು. ನಾನು ಮತ್ತು ಹೋಟೇಲ ಮಾಲಿಕ ಅವನಿಗೆ ಮಾತನಾಡಲು ಅವನು
ಹಿಂದಿ ಮತ್ತು ತೆಲಗು ಭಾಷೆಯಲ್ಲಿ ವಿಚಿತ್ರವಾಗಿ ಮಾತನಾಡುತ್ತಿದ್ದು. ಅವನು ಛಳಿಯಲ್ಲಿ
ನಡುಗುತಿದ್ದನ್ನು ಅದನ್ನು ನೋಡಿ ನಾನು ಅವನಿಗೆ ಕುಡಿಯಲು ಚಹಾ ಕೋಟ್ಟಿದ್ದು. ಅವನು ಅದನ್ನು
ಕುಡಿಯದೆ ಹಾಗೆ ನಡೆದುಕೊಂಡು ರೋಡ ದಾಟಿ ಮನೋಹರರಾವ ಚವ್ಹಾಣ ಸಾ:ರೋಡಕಿಣ್ಣಿ ಇವರ ಮನೆಯ ಬಾಜು
ಹೇದ್ದಾರಿಯ ಬಾಜು ಹೋಗಿ ಚಿರಾಡುತ್ತಾ ಮಲಗಿಕೊಂಡು ಮುಂಜಾನೆ 08-15 ಗಂಟೆಯ ಸೂಮಾರಿಗೆ ಒಮ್ಮಿಲೆ
ಹಾ ಅಂತಾ ಚಿರಿ ಗಪ್ಪಾಗಿದ್ದು. ಅದನ್ನು ನೋಡಿ ಕೇಳಿ ನಾನು ಮತ್ತು ಮುರಳಿಧರ ಚವ್ಹಾಣ ಇಬ್ಬರು
ಕೂಡಿ ಆ ಮನುಷ್ಯನ ಹತ್ತೀರ ಹೋಗಿ ನೋಡಲು ಅಪರಿಚಿತ ಮಾನಸಿಕ ಅಶ್ವಸ್ಥ ವ್ಯಕ್ತಿ ಸತ್ತು
ಬಿದ್ದಿದನು. ಕಮಲಾಪೂರ ಪೊಲಿಸರು ಬಂದು ಸತ್ತುಬಿದ್ದ ಅಪರಿಚಿತ ಮನುಷ್ಯನ ಮೃತ ದೇಹವನ್ನು
ತೆಗೆದುಕೊಂಡು ಹೋಗಿ ಮೃತನ ವಿಳಾಸದ ಬಗ್ಗೆ ಪತ್ತೆ ಹಚ್ಚುವ ಸಂಬಂಧ ಕಲಬುರ್ಗಿ ಸರಕಾರಿ
ಆಸ್ಪತ್ರೆಯಲ್ಲಿ ಇಟ್ಟಿದ್ದು. ಎರಡು ದಿನಗಳಾದರು ಅಪರಿಚಿತ ಮನುಷ್ಯನ ವಿಳಾಸದ ಬಗ್ಗೆ
ಪತ್ತೆಯಾಗಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ
ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment