POLICE BHAVAN KALABURAGI

POLICE BHAVAN KALABURAGI

06 February 2015

Kalaburagi District Reported Crimes

ಅನಧಿಕೃತ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 05-02-2015 ರಂದು ಅಳ್ಳಗಿ (ಬಿ) ಗ್ರಾಮದಲ್ಲಿ ಬಸವೇಶ್ವರ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಳ್ಳಗಿ (ಬಿ) ಗ್ರಾಮಕ್ಕೆ ಹೋಗಿ, ಗ್ರಾಮದ ಬಸವೇಶ್ವರ ಸರ್ಕಲದಿಂದ  ಸ್ವಲ್ಪ ದೂರು ಮರೆಯಾಗಿ ನಿಂತುಕೊಂಡು ನೋಡಲಾಗಿ, ಬಸವೇಶ್ವರ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವೇಕ್ತಿ ತನ್ನ ಹತ್ತಿರ ಒಂದು ರಟ್ಟಿನ ಬಾಕ್ಸ ಇಟ್ಟುಕೊಂಡು  ಹೋಗಿ ಬರುವ ಜನರಿಗೆ ಕರೆದು ಅವರಿಂದ ಹಣ ಪಡೆದು ಬಾಕ್ಸದಲ್ಲಿದ್ದ ಪೌಚಗಳನ್ನು ಕೊಡುತ್ತಿದ್ದನು, ಆಗ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ಸದರಿ ವ್ಯೆಕ್ತಿಯ ಮೇಲೆ ದಾಳಿ ಮಾಡಲು ಹೋದಾಗ ಸದರಿ ವ್ಯಕ್ತಿ ನಮ್ಮನ್ನು ನೋಡಿ ಓಡುತ್ತಿದ್ದನು, ಅವನನ್ನು ನಾವೆಲ್ಲರು ಬೆನ್ನಟ್ಟಿ ಹಿಡಿದು ಅವನ ಹತ್ತಿರ ಇದ್ದ ರಟ್ಟಿನ ಬಾಕ್ಸನ್ನು ಚೆಕ್ ಮಾಡಲಾಗಿ, ಸದರಿ ಬಾಕ್ಸನಲ್ಲಿ ಓರಜಿನಲ್ ಚಾಯಿಸ್ ಕಂಪನಿಯ 180 ಎಮ್ ಎಲ್ ಅಳತೆಯ ಮದ್ಯ ತುಂಬಿದ ಒಟ್ಟು 36 ರಟ್ಟಿನ ಪೌಚಗಳು ಇದ್ದವು. ಹಾಗೂ ಅವನ ವಶದಲ್ಲಿ ಮದ್ಯ ಮಾರಾಟ ಮಾಡಿದ 480/- ರೂ ನಗದು ಹಣ ಇದ್ದವು, ಸದರಿಯವನಿಗೆ ಮದ್ಯ ಮಾರಾಟ ಮಾಡಲು ಅನುಮತಿ ಪಡೆದುಕೊಂಡ ಬಗ್ಗೆ ವಿಚಾರಿಸಲು ತನ್ನ ಹತ್ತಿರ ಮಾರಾಟ ಮಾಡಲು ಯಾವುದೆ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದನು. ಸದರಿ ವ್ಯೆಕ್ತಿಯ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಶಂಕರ ತಂದೆ ಸಪ್ಪಣ್ಣ ಕಟಬರ ವ|| 32 ವರ್ಷ ಜಾ|| ಕಟಬರ ಉ|| ಪಾನ್ ಶಾಪ್ ವ್ಯಾಪಾರ ಸಾ|| ಅಳ್ಳಗಿ (ಬಿ) ಎಂದು ತಿಳಿಸಿದನು. ಸದರಿಯವನಿಂದ ಮದ್ಯ ಹಾಗು ನಗದು ಹಣ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 05-02-2015 ರಂದು ಅಫಜಲಪೂರ ಪಟ್ಟಣದ ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಾಗಿ ನಿಂತು ನೋಡಲು ಮಲ್ಲಿಕಾರ್ಜುಜನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ರಾಘವೇಂದ್ರ ತಂದೆ ರಾಜಶೇಖರ ಕುಲಕರ್ಣಿ ಸಾ : ಬ್ರಾಹ್ಮಣ ಗಲ್ಲಿ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 425/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 05-02-2015 ರಂದು ಮದ್ಯಾಹ್ನ ಕು: ಐಶ್ವರ್ಯಾ ತಂದೆ ಹಣಮಂತರಾವ ಕುಲಕರ್ಣಿ  ಸಾ: ಜಯತೀರ್ಥ ಕಲ್ಯಾಣ ಮಂಟಪ ಹಿಂದುಗಡೆ ಉದನೂರ ರೋಡ ಕಲಬುರಗಿ  ರವರು ದಿನಾಂಕ 05-02-2015 ರಂದು ಮದ್ಯಾಹ್ನ ರಾಷ್ಟಪತಿ ಸರ್ಕಲ ಹತ್ತೀರ ಇರುವ ಎಸ.ಬಿ.ಹೆಚ್.ಬ್ಯಾಂಕ  ವಿದ್ಯಾ ನಗರ ಶಾಖೆ ಕಡೆಯಿಂದ ಉದನೂರ ಕಡೆಗೆ ಹೋಗುವ ಕುರಿತು ಜೇವರ್ಗಿ ರೋಡ ಕಡೆಗೆ ನಡೆದುಕೊಂಡು ರೋಡ ದಾಟುತ್ತಿದ್ದಾಗ ಕೆಂದ್ರ ಬಸ ನಿಲ್ದಾಣ ಕಡೆಯಿಂದ ಮೋಟಾರ ಸೈಕಲ ನಂ ಕೆಎ32-ಇಸಿ-2930 ನೇದ್ದರ ಸವಾರನಾದ ಶೇಶಪ್ಪಾ ಇತನು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿಪಡಿಸಿ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ಶ್ರೀ ಭೀಮಾಶಂಕರ ತಂದೆ ಮಲ್ಲಣ್ಣ ಫರತಾಹಾಬಾದ್ ಸಾ : ಶಖಾಪುರ ರವರು ದಿನಾಂಕ ೦4.02.2015 ರಂದು ನಾನು ನಮ್ಮ ಮಾಲೀಕ ರಾಮನಗೌಡ ಇವರು ನಡೆಸುತ್ತಿದ್ದ ಮೋಟಾರು ಸೈಕಲ್ ನಂ ಕೆ.ಎ32ಈಈ9377 ನೇದ್ದರ ಮೇಲೆ ಕುಳಿತುಕೊಂಡು ನಮ್ಮೂರು ನಿಂದ ಜೇವರ್ಗಿ ಕಡೆಗೆ  ಮುಂಜಾನೆ ಹೋಗುತ್ತಿರುವಾಗ ಅವರಾದ್ ಕ್ರಾಸ್ ದಾಟಿ ಫೂಲಿನ ಹತ್ತಿರ ಬರುತ್ತಿದ್ದ ವೇಳೆಗೆ ನಮ್ಮ ಮುಂದೆ ಹೋಗುತ್ತಿದ್ದ ಟ್ರ್ಯಾಕ್ಟರ್ ನಂ ಕೆ.ಎ32ಟಿಎ0785 ನೇದ್ದರ ಚಾಲಕನು ತನ್ನ ಟ್ರ್ಯಾಕ್ಟರ್ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಹಿಂದೆ ನೋಡದೆ ಯಾವುದೆ ಸೂಚನೆಯನ್ನು ನೀಡದೆ ಒಮ್ಮೆಲೆ ಬಲಸೈಡಿಗೆ ತನ್ನ ಟ್ರ್ಯಾಕ್ಟರ್ ಹೊರಳಿಸಿ ನಮಗೆ ಡಿಕ್ಕಿ ಪಡಿಸಿ ಗಾಯಗೊಳಿಸಿ ತನ್ನ ಟ್ರ್ಯಾಕ್ಟರ್ ಸಮೇತ ಓಡಿಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: