POLICE BHAVAN KALABURAGI

POLICE BHAVAN KALABURAGI

16 February 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 15/02/2015 ರಂದು ಶ್ರೀ ರಾಜೇಶ ತಂದೆ ರೇಚಣಸಿದ್ದ ಮಜಗೊಂಡ ಸಾ ಲಚ್ಹಾಣ ತಾ : ಇಂಡಿ ಜಿ : ಬಿಜಾಪೂರ ರವರು ತನ್ನ ಗೆಳೆಯನ ಮದುವೆ ನಿಮಿತ್ಯ ಲಚ್ಚಾಣದಿಂದ ಮೋ/ಸೈ ನಂ- ಎಮ್.ಹೆಚ್-13 ಎವಿ-5983 ನೇದ್ದರ ಮೇಲೆ ಫಿರ್ಯಾದಿ ಮತ್ತು ಗಾಯಾಳು ಬರುತ್ತಿದ್ದಾಗ ಸೊನ್ನ ಕ್ರಾಸ್ ಹತ್ತಿರ ಮದ್ಯಾಹ್ನ 12:30 ಗಂಟೆ ಸುಮಾರಿಗೆ ಹಿಂದು ಗಡೆಯಿಂದ ಕಬ್ಬು ತುಂಬಿದ ಟ್ರಾಕ್ಟರ್ ನಂ- ಎಮ್.ಹೆಚ್-13 ಜೆ-6920 ನೇದ್ದರ ಚಾಲಕನು ಅತೀವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಫಿರ್ಯಾದಿಯ ಮೋ/ಸೈನ್ನು ಸೈಡ ಹೊಡೆಯುವಾಗ ಮೋ/ಸೈಗೆ ಡಿಕ್ಕಿ ಪಡಿಸಿದನು ಆಗ ಮೋ/ಸೈ ಹಿಂದೆ ಕುಳಿತ ರಾಹುಲ ಇವನು ಟ್ರಾಕ್ಟರ ಟ್ರೈಲಿ ಹಿಂದಿನ ಗಾಲಿಯಲ್ಲಿ ಸಿಕ್ಕಿಬಿದ್ದುದ್ದರಿಂದ ರಾಹುಲ ಇವನಿಗೆ ಕೈಗೆ, ಕಾಲಿಗೆ, ಟೊಂಕಿಗೆ ಮತ್ತು ಇತರೆ ಕಡೆಗೆ ಸಾದಾ ಮತ್ತು ಭಾರಿ ರಕ್ತಗಾಯ ಮತ್ತು ಗುಪ್ತ ಪೆಟ್ಟಾಗಿದ್ದು ಗಾಯಾಳು ರಾಹುಲ ತಂದೆ ಶಿವಪ್ಪ ಬೈರಗೋಂಡ ಸಾ|| ಲಚ್ಚಾಣ ತಾ|| ಇಂಡಿ ಇವರಿಗೆ ಹೆಚ್ಚಿನ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ತೆಗೆದುಕೊಂಡು ಹೋಗಿರುತ್ತಾರೆ. ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿ ರವರಿಂದ ಸದರಿ ಗಾಯಾಳು ರಾಹುಲ ಬೈರಗೋಂಡ ಇವನು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ರಫೀಕ ತಂದೆ ಅಬ್ದುಲ ಸಲೀಮ ಸಾ : ರಾಯಚೂರ ಮೊಹಲ್ಲಾ ಯಾದಗೀರ ರವರು ಮತ್ತು ಯಾದಗಿರಿದವರಾದ ರಿಯಾಜ ಅಹ್ಮದ ತಂದೆ ಮೌಲಾಸಾಬ ಕೋಲಿವಾಡೆ ರವರ ಲಾರಿ ಮೇಲೆ ಸುಮಾರು ದಿನಗಳಿಂದ ಕ್ಲೀನರ ಅಂತಾ ಕೆಲಸ ಮಾಡುತ್ತಿದ್ದು ಸದರ ಲಾರಿ ನಂ ಎಮ್.ಎಚ್. 11 ಎಫ್. 5402 ಇದ್ದು ಸದರ ಲಾರಿ ಚಾಲಕ ರಿಯಾಜ ಅಹಮ್ಮದ ಇವನು  ಅಫಜಲಪೂರ ತಾಲೂಕಿನ ಬನ್ನಟ್ಟಿ ಕ್ರಾಸ ಹತ್ತಿರ ಸದರಿ ನಮ್ಮ ಲಾರಿ ಚಾಲಕ ರಿಯಾಜ ರವರು ಅತೀವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಲಾರಿಯನ್ನು ಚಲಾಯಿಸುತ್ತಾ ರಸ್ತೆ ಎಡಗಡೆ ತೆಗ್ಗಿನಲ್ಲಿ ಹಾಕಿ ಬಲಮಗ್ಗಲಿಗೆ ಪಲ್ಟಿ ಮಾಡಿದನು ಆಗ ನಾನು ಜೋರಾಗಿ ಚೀರಿ ಲಾರಿಯಿಂದ ಹೊರಗೆ ಜಿಗಿದು ಚಾಲಕನ ಹತ್ತಿರ ಹೋಗಿ ನೋಡಲು ರಿಯಾಜ ಇವನು ಲಾರಿ ಪ್ರೇಮ ಕೆಳಗೆ  ಸಿಕ್ಕಿಬಿದ್ದಿದ್ದು ಕೆಲವು ಜನರ ಸಾಹಾಯದಿಂದ ಹೊರಗೆ ತೆಗೆದು ಉಪಚಾರ ಕುರಿತು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 15-02-2015 ರಂದು ಬೆಳಿಗ್ಗೆ ಶ್ರೀ ಗುಲಾಮ ಹುಸೇನ ತಂದೆ ಅಬ್ದುಲ ಖಾದರ ಸಾ: ಖಮರಕಾಲೋನಿ ಅಕ್ಬರಿಯಾಮಜೀದ ಹತ್ತಿರ ಕಲಬುರಗಿ. ರವರ ಮಗನಾದ ಮಹ್ಮದ ಸುಫಿಯಾನ ಇತನಿಗೆ ಸಂಡಾಸ ಬಂದಿದಕ್ಕೆ ಆತನ ಅತ್ತೆಯಾದ ತಾಹೇರಬೇಗಂ  ಇವಳು ಮಹ್ಮದ ಸುಫಿಯಾನ ಸಂಡಾಸಕ್ಕೆ ಕರೆದುಕೊಂಡು ಹೋಗಿ ರೋಡಿನ ಪಕ್ಕದಲ್ಲಿ ಸಂಡಾಸಕ್ಕೆ ಕೂಡಿಸಿದಾಗ ಆರೋಪಿ ಸೋಹೇಲ ಈತನು ತನ್ನ ಮೋಟಾರ ಸೈಕಲ ನಂ. ಕೆ.ಎ 32 6799 ಖಮರ ಕಾಲೂನಿ ಅಟೋ ಸ್ಟಾಂಡ ಕಡೆಯಿಂದ ತನ್ನ ಮೋಟಾರ ಸೈಕಲ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಸಂಡಾಸಕ್ಕೆ ಕುಳಿತ ಮಹ್ಮದ ಸುಫಿಯಾನ ಈತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಅಪಘಾತ ಪಡಿಸಿದ ಮೋಟಾರ ಸೈಕಲ ಸಿರೀಜ ನೋಡಿರುವುದಿಲ್ಲ. ಅಪಘಾತದಲ್ಲಿ ಮಹ್ಮದ ಸುಫಿಯಾನ ಈತನಿಗೆ ಎಡಗಾಲು ಪಾದಕ್ಕೆ ಎಡಗಡೆ ಸೊಂಟಕ್ಕೆ ಮತ್ತು ತಲೆಗೆ ಗುಪ್ತ ಪೆಟ್ಟಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ದು ಇರುತ್ತದೆ ಅಂತ ಫಿರ್ಯಾದಿ ಹೇಳಿಕೆ ಸಾರಂಶ ಇರುತ್ತದೆ.
ಆಕಸ್ಮಿಕ ಬೆಂಕಿ ಹಾನಿಯಾದ ಪ್ರಕರಣ :

ಚೌಕ ಠಾಣೆ : ಶ್ರೀ ಭಗವಾನ ತಂ ಶಿವಲಿಂಗಯ್ಯ ಅಲಸಳ್ಳಿ ಸಾಃ ಮನೆ  ನಂ. 6 ಮತ್ತು 7 ದೇವನಗರ ಹಳೆ ಜೇವರ್ಗಿ ರಸ್ತೆ ಕಲಬುರಗಿ ಇವರು ಗಂಜನಲ್ಲಿ ರವಿ ರಸಾಳಕರ ರವರ ಅಂಗಡಿಯಲ್ಲಿ ಬಾಲಾಜಿ ಮಾರ್ಕೆಟಿಂಗ ಎಂಬ ಹೆಸರಿನ ಮಶನರಿ ಮಾರಾಟ ಮಾಡುವ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತೇನೆ. ದಿನಾಂಕ 09.02.15 ರಂದು ಬೆಳಗ್ಗೆ 9 ಗಂಟೆಗೆ ನಾನು ಗಾಜಿಪೂರ ಬಡಾವಣೆಯಲ್ಲಿದ್ದಾಗ ನಮ್ಮ ಅಂಗಡಿಯ ಪಕ್ಕದ ಅಂಗಡಿಯವರಾದ ಪಟೇಲ ಮತ್ತು ಅಂಬಣ್ಣ ಇವರು ನನಗೆ ಪೋನ ಮಾಡಿ ನಿಮ್ಮ ಅಂಗಡಿಯ ಒಳಗಡೆ ಆಕಸ್ಮಿಕವಾಗಿ ಬೆಂಕಿ ಹತ್ತಿ ಸಾಮಾನುಗಳು ಸುಡುತ್ತಿವೆ ಅಗ್ನಿಶಾಮಕ ವಾಹನ ತರಿಸಿದ್ದೇವೆ ಅಂತ ಹೇಳಿದ್ದರಿಂದ ನಾನು ಗಾಬರಿಯಾಗಿ ಹೋಗಿ ನೋಡಲು ನಮ್ಮ ಅಂಗಡಿಗೆ ಬೆಂಕಿ ಹತ್ತಿ ಉರಿಯುತ್ತಿದ್ದು ಅಗ್ನಿಶಾಮಕ ವಾಹನ ಬೆಂಕಿ ಆರಿಸಿದ್ದರಿಂದ ನಾವು ಪರಿಶೀಲಿಸಲು ಅಂಗಡಿಯಲ್ಲಿದ್ದ ಪಿ.ಯು.ಸಿ ಫಿಟಿಂಗ ಪೈಪ 90 ಎಂ.ಎಂ. ಎಂಟಿಎ, 90 ಎಂ.ಎಂ.ಟಿ, ಎಲಬು ಬೆಂಟ, ಕಾಲರ, ಎಫ್.ಟಿ.ಎ, ಬಾಲವಾಲ, ಫುಟಬಾಲ. ನಳಗಳು. ಹೆಚ್.ಡಿಪಿಸಿ ಪೈಪಗಳು, ಕೇಬಲವಾಯರಗಳು, ಸ್ಟಾಸರ, ಮೋಟಾರ ನೇದ್ದುಗಳು ಆಕಸ್ಮಿಕ ಬೆಂಕಿಯಿಂದ ಸೂಟ್ಟು ಅಂದಾಜ ಕಿಮತ್ತು 5,56,728/- ರೂ. ನೇದ್ದವುಗಳಷ್ಟು ಹಾನಿಯಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಂಸದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: