ಮಟಕಾ
ಜುಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ 05-01-2015 ರಂದು ಹಳೇ ಜೆವರ್ಗಿ ರಸ್ತೆಯ ಅಂಡರ ಬ್ರಿಡ್ಜ ಪಕ್ಕದಲ್ಲಿರುವ ಗುಂಡೆಯಾರ ಗುಡಿಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ಮನುಷ್ಯನು
ಜನರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಡುತ್ತಿದ್ದಾನೆ ಅಂತಾ ಬಾತ್ಮೀ ಬಂದ ಮೇರೆಗೆ ಪಿ.ಐ. ಸ್ಟೇಷನ ಬಜಾರ ಠಾಣೆ ಹಾಗು
ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಗುಡಿಯ ಗೋಡೆಯ ಮರೆಯಾಗಿ ನಿಂತು ನೋಡಲು ಅಲ್ಲಿ
ಒಬ್ಬ ವ್ಯಕ್ತಿ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು 1/- ರೂ ಗೆ 80/-ರೂ ಕೊಡುವುದಾಗಿ ಹೇಳಿ ಅಂಕಿ ಸಂಖ್ಯೆ ಮಟಕಾ ಚೀಟಿ ಬರೆದುಕೊಡುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ
ಮಾಡಿ ಹಿಡಿದು ಹೆಸರು ವಗೈರೆ ವಿಚಾರಿಸಲು ಆತನು ತನ್ನ ಹೆಸರು
ನಾಗೇಂದ್ರಪ್ಪಾ ತಂದೆ ಶಾಂತಪ್ಪಾ ಕರಿಕಲ ಸಾಃ ಲಕ್ಷ್ಮಿ ಗುಡಿಯ ಹತ್ತಿರ ನಾಗನಳ್ಳಿ ಕಲಬುರಗಿ ಅಂತಾ ಹೇಳಿದನು. ಸದರಿಯವನ ಹತ್ತಿರ ಮಟಕಾ ಜೂಜಾಟಕ್ಕೆ
ಸಂಬಂದಿಸಿದಂತೆ ನಗದು ಹಣ 1330/- ರೂ ಮತ್ತು ಒಂದು ಬಾಲ ಪೆನ್ನು ಹಾಗು ಒಂದು ಮಟಕಾ ಬರೆದ ಚೀಟಿ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಆರೋಪಿ ಮತ್ತು ಮುದ್ದೆ ಮಾಲು ಸಮೇತ ಸ್ಟೇಷನ ಬಜಾರ ಠಾಣೆಗೆ ಬಂದು ಪ್ರಕರಣ
ದಾಖಲಿಸಲಾಗಿದೆ.
ಸ್ಟೇಷನ ಬಜಾರ ಠಾಣೆ : ದಿನಾಂಕ 05-01-2015 ರಂದು ನಾಗಾರ್ಜುನ ಬಾರ&ರೆಸ್ಟೊರಂಟ ಎದುರುಗಡೆ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ
ಸ್ಥಳದಲ್ಲಿ ಒಬ್ಬನು ಮಟಕಾ ಜೂಜಾಟ ಬರೆದುಕೊಳ್ಳತ್ತಿದ್ದಾನೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಪಿ.ಐ. ಸ್ಟೇಷನ ಬಜಾರ ಠಾಣೆ ಹಾಗು ಸಿಬ್ಬಂದಿ ಮತ್ತು
ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಪಕ್ಕದಲ್ಲಿರುವ ಆಸ್ಪತ್ರೆಯ ಗೊಡೆಯ ಮರೆಯಲ್ಲಿ ನಿಂತು ನೋಡಲು
ಅಲ್ಲಿ ಒಬ್ಬ ವ್ಯಕ್ತಿ ಹೋಗಿ ಬರುವ ಸಾರ್ವಜನಿಕರಿಂದ 1/- ರೂ ಗೆ 80/-ರೂ ಕೊಡುವುದಾಗಿ ಹೇಳಿ ಅಂಕಿ ಸಂಖೆ ಮಟಕಾ ಚೀಟಿ ಬರೆದುಕೊಡುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು
ಒಮ್ಮೆಲೆ ಸುತ್ತುವರೆದು ಹಿಡಿದು ಹೆಸರು ವಗೈರೆ ವಿಚಾರಿಸಲು ಆತನು ತನ್ನ ಹೆಸರು ಶಾಂತಪ್ಪಾ ತಂದೆ ಚಂದ್ರಾಮಪ್ಪಾ ಸಿಂಗೆ ಸಾಃ ಇಂದಿರಾ ನಗರ
ಕಲಬುರಗಿ ಅಂತಾ ಹೇಳಿದನು. ಸದರಿಯವನ ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂದಿಸಿದಂತೆ ನಗದು ಹಣ 670/- ರೂ ಮತ್ತು ಒಂದು ಬಾಲ ಪೆನ್ನು ಹಾಗು ಒಂದು ಮಟಕಾ ಬರೆದ ಚೀಟಿ ಪಂಚರ ಸಮಕ್ಷಮ ಜಪ್ತಿ
ಮಾಡಿಕೊಂಡು ಆರೋಪಿ ಮತ್ತು ಮುದ್ದೆ ಮಾಲು ಸಮೇತ ಸ್ಟೇಷನ ಬಜಾರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
No comments:
Post a Comment