POLICE BHAVAN KALABURAGI

POLICE BHAVAN KALABURAGI

12 January 2015

Kalaburagi District Reported Crimes

ಅಪಘಾತ ಪ್ರಕರಣಗಳು :
ನೆಲೋಗಿ ಠಾಣೆ : ದಿನಾಂಕ: 09-01-2015 ರಂದು 11-30 ಎ.ಎಂ.ಕ್ಕೆ ನಾನು ರಂಜಣಗಿಯಲ್ಲಿ ಇದ್ದಾಗ ನಮ್ಮ ಮಹಾಂತಪ್ಪ ನಾಗಾವಿ ಇವನು ಫೋನ ಮಾಡಿ ಹೇಳಿದೆನೆಂದರೆ  ದೇಸಾಯಿ ಇವರ ಹೊಲಕ್ಕೆ ಹೋಗುವ ದಾರಿಯಲ್ಲಿ  ರೋಡಿನ ಮೇಲೆ  ಸಣ್ಣವ್ವ  ಮಾಯವ್ವ  ಇವಳು ಹೋಗುತ್ತಿದ್ದಾಗ ಹಿಂದಿನಿಂದ ಒಂದು ಅಪ್ಪೆ ಸಣ್ಣ ಟೆಂಪೋ ಚಾಲಕನು ಅತೀವೇಗ ಮತ್ತು ನಿಸ್ಕಾಳಜಿತನದಿಂದ  ನಡೆಯಿಕೊಂಡು ಹಿಂದಿನಿಂದ ಡಿಕ್ಕಿ ಹೊಡೆದಾಗ ಅವಳ ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯವಾಯಿತ್ತು ಅವಳು ಕೇಳಗೆ ಬಿದ್ದು  ಸತ್ತು ಹೋಗಿರುತ್ತಾಳೆ  ಅಂತ  ಹೇಳಿದ ನಾನು ಅಲ್ಲಿಗೆ  ಹೋಗಿ ನೋಡಲು ಮಾಯವ್ವ ಇವಳಿಗೆ  ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯವಾಗಿ ಸ್ದಳದಲ್ಲಿಯೇ ಮೃತಪಟ್ಟಿರುತ್ತಾಳೆ  ಡಿಕ್ಕಿ ಹೊಡೆದ ಅಪ್ಪೆ ಟೆಂಪೋ ನಂಬರ ನೋಡಲಾಗಿ  ಕೆಎ-32-ಬಿ-3227 ಅಂತ ಇದ್ದು ಅದರ ಚಾಲಕ ಅಲ್ಲಿ ಇರಲಿಲ್ಲಾ ಅವನ ಹೆಸರು ವಿಳಾಸ ಗೊತ್ತಿಲ್ಲಾ  ಅಂತಾ ಶ್ರೀ ದತ್ತಪ್ಪ ತಂದೆ ಜಂಗಪ್ಪ ನಾಗಾವಿ ಸಾ|| ರಂಜಣಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಟಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲೋಗಿ ಠಾಣೆ : ದಿನಾಂಕ: 01-01-2015 ರಂದು 04.00 ಪಿ ಎಮ್ ಕ್ಕೆ ನಮ್ಮ ತಂದೆ ಬಾಬುರಾಯ ಇತನು ನಮ್ಮೂರ ಹೊಸ ಗ್ರಾಮದಿಂದ ತಾಂಡಾಕ್ಕೆ ಹೋಗುವ ಹಾದಿಯಲ್ಲಿ ನಮ್ಮದೊಂದು ಮನೆ ಇದ್ದು, ಆ ಮನೆಗೆ ಹೋಗುತ್ತಿದ್ದಾಗ ಎದುರಿನಿಂದ ಒಂದು ಸೈಕಲ್ ಮೋಟಾರ್ ಸವಾರನು ಅತೀ ಹಾಗೂ ನಿರ್ಲಕ್ಷತನದಿಂದ ನಡೆಯಿಸಿಕೊಂಡು ಬಂದಿ ಢಿಕ್ಕಿ ಹೊಡೆದಿದ್ದು, ಆಗ ನಮ್ಮ ತಂದೆ ಕೆಳಗೆ ಬಿದ್ದ ಅವನ ಬಲಗೈ ಬಲಗಾಲಿಗೆ ಗಾಯಗಳಾಗಿದ್ದು, ನಂತರ ನಾನು ಊರಲ್ಲಿ ಇದ್ದಾಗ ಶರಣಪ್ಪ ಮಾವನೂರ ಇತನು ಫೊನ ಮಾಡಿ ಹೇಳಿದಾಗ ನಾನು ಮತ್ತು ಹೊನ್ನಪ್ಪ ಅದವಾನಿ ಕೂಡಿ ಅಲ್ಲಿಗೆ ಹೋದೇವು. ಅಲ್ಲಿ ನಮ್ಮೂರ ಮಾನಪ್ಪ ತಂದೆ ಅಂಬಣ್ಣ ಕಟಬರ್ ಇತನು ಇದ್ದು ಅವನ ಹತ್ತೀರ ಸೈಕಲ್ ಮೋಟಾರ್ ನಂ ಕೆಎ-32 ಇಇ-9004 ಅಂತಾ ಇದ್ದು ನಮ್ಮ ತಂದೆಗೆ ವಿಚಾರಿಸಲಾಗಿ ನಾನು ಮನೆಯ ಕಡೆ ಹೋಗುವಾಗ ಇವನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ನಡೆಯಿಸಿಕೊಂಡು ಬಂದು ನನಗೆ ಢಿಕ್ಕಿ ಹೊಡೆದಾಗ ಬಲಗಾಲ ಬಲಗೈಗೆ ಗಾಯಗಳಾದವು ಅಂತಾ ಹೇಳಿದನು. ನಂತರ ಅವನನ್ನು ಒಂದು ಜೀಪಿನಲ್ಲಿ ಹಾಕಿಕೊಂಡು ಕಾಮರೆಡ್ಡಿ ಆಸ್ಪತ್ರೆಗೆ ತಂದು ಉಪಚಾರ ಕುರಿತು ಸೇರಿಕೆ ಮಾಡಿದ್ದು ದಿನಾಂಕ: 08-01-2015 ರಂದು ಮುಂಜಾನೆ 09.15 ಗಂಟೆಗೆ ಕಾಮರಡ್ಡಿ ಆಸ್ಪತ್ರೆಯಲ್ಲಿ ಉಪಚಾರಕ್ಕಾಗಿ ಸೇರಿಕೆಯಾದ ಹರವಾಳ ಗ್ರಾಮದ ಬಾಬುರಾಯ ತಂದೆ ಸಿದ್ದಪ್ಪ ಇತನು ಇದೇ ಈಗ 09.10 ಎ ಎಮ್ ಕ್ಕೆ ಮೃತ ಪಟ್ಟಿರುತ್ತಾನೆ ಅಂತಾ ಶ್ರೀ ಶಿವಶರಣ ತಂದೆ ಬಾಬುರಾಯ ಮಂಗಿ ಸಾ:ಹರವಾಳ  ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಜೇವರ್ಗಿ ಠಾಣೆ : ದಿನಾಂಕ 11.01.15 ರಂದು ಮುಂಜಾನೆ 10:15 ಗಂಟೆಗೆ ಜೇವರ್ಗಿ ಕಲಬುರಗಿ ಮೇನ್‌ ರೋಡ್‌ ಮೇಲೆ ಕಟ್ಟಿ ಸಂಗಾವಿ ಕ್ರಾಸ್‌ ಹತ್ತಿರ ಮೇನ್‌ ರೋಡಿನಲ್ಲಿ ನಾಗೇಶ ತಂದೆ ರಾಮಚಂದ್ರಪ್ಪ ಕಟ್ಟಿಮನಿ ಸಾ : ನಿರ್ಣಾ ವಾಡಿ ತಾ : ಹುಮನಾಬಾದ್  ರವರ  ಮಗ ವಿಶಾಲ್ ಈತನು ರೋಡಿನ ಸೈಡಿನಿಂದ ನಡೆದುಕೊಂಡು ಬರುತ್ತಿದ್ದಾಗ ಆ ವೇಳೆಗೆ ಜೇವರ್ಗಿ ಕಡೆಯಿಂದ ಬಂದ ಕಾರ್‌ ನಂ ಎಮ್.ಹೆಚ್.11ಬಿ.ಹೆಚ್.9311 ನೇದ್ದರ ಚಾಲಕನು ತನ್ನ ಕಾರ್‌‌  ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಫಿರ್ಯಾದಿಯ ಮಗನಿಗೆ ಡಿಕ್ಕಿ ಪಡಿಸಿ ಗಾಯಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 11.01.15 ರಂದು ಮುಂಜಾನೆ ಚಿಗರಳ್ಳೀ ಕ್ರಾಸ್‌ ಜೇವರ್ಗಿ ಶಹಾಪುರ ಮೇನ್‌ ರೋಡಿನಲ್ಲಿ ಶ್ರೀ ಗಂಗಾರಾಮ ತಂದೆ ಯಮನಪ್ಪ ಡಂಗೂರ ಸಾ : ಹಂಚನಾಳ (ಎಸ್.ಎ) ರವರ ದೊಡ್ಡಪ್ಪನ ಮಗ ಮಾನಪ್ಪ ತಂದೆ ಶರಣಪ್ಪ ಡಂಬೂರ ಈತನು ರೋಡ್‌ ಕ್ರಾಸ್‌ ಮಾಡುತ್ತಿದ್ದ ಆ ವೇಳೆಗೆ ಶಹಾಪುರ ಕಡೆಯಿಂದ ವಿ.ಆರ್.ಎಲ್ ಬಸ್ ನಂ ಕೆ.ಎ 25 ಸಿ6905 ನೇದ್ದರ ಚಾಲಕ ಉಮೇಶ ಈತನು ತನ್ನ ಬಸ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಮಾನಪ್ಪ ಈತನಿಗೆ ಡಿಕ್ಕಿ ಪಡಿಸಿ ಗಾಯಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದೆ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 07.01.2015 14:00 ಗಂಟೆಗೆ ಶ್ರೀ ಶರಣಪ್ಪ ತಂದೆ ನಾಗಪ್ಪ ಕೊಂಬಿನ್ ಸಾ : ಶಾಸ್ತ್ರಿ ಚೌಕ್‌ ಜೇವರ್ಗಿ ರವರ ಅಣ್ಣನಾದ ಸಾಯಬಣ್ಣ ಈತನು ತನ್ನ ಮೋಟಾರು ಸೈಕಲ್‌ ನಂ ಕೆ.ಎ32ಆರ್7343 ನೇದ್ದರ ಮೇಲೆ ಕುಳಿತು ಗುರುಕುಲ ಶಾಲೆ ಹತ್ತಿರ ರೋಡಿನಲ್ಲಿ ಹೋಗುತ್ತಿದ್ದಾಗ ಅದೇ ವೇಳೆಗೆ ಹಿಂದುಗಡೆಯಿಂದ ಬಂದ ಆಟೋ ನಂ ಕೆ.ಎ32ಸಿ2020 ನೇದ್ದರ ಚಾಲಕ ಚಂದ್ರು ಈತನು ತನ್ನ ಆಟೋ ವನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಹಿಂದಿನಿಂದ ಫಿರ್ಯಾದಿಯ ಅಣ್ಣನು ಚಲಾಯಿಸುತ್ತಿದ್ದ ಮೊಟಾರು ಸೈಕಲ್‌ ಗೆ ಡಿಕ್ಕಿ ಪಡಿಸಿ ಗಾಯಗೊಳಿಸಿ ವಾಹನದೊಂದಿಗೆ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 09/01/2015 ರಂದು ರಾತ್ರಿ 10.30 ಗಂಟೆಯ ಸುಮಾರಿಗೆ ಹುಮನಾಬಾದ ರೋಡ ಗಾಂಧೀನಗರ ಕ್ರಾಸ್ ಹತ್ತಿರ ರೋಡಿನಮೇಲೆ ಫಿರ್ಯಾಧಿ ದಸ್ತಗಿರ ಪಟೇಲ ಇತನೋದಿಗೆ ನಡೆದುಕೊಂಡು ಗಂಜ ಕಡೆಗೆ ಹೋಗುತ್ತಿದ್ದಾಗ ತಾನಾಜಿ ತಂದೆ ದತ್ತುರಾವ ಪಾಟೀಲ ಈತನು ತನ್ನ ಮೋಟಾರ ಸೈಕಲ ನಂ ಕೆ ಎ 38 ಜೆ ಇದನ್ನು ಹುಮನಾಬಾದ ರೀಂಗ ರೋಡ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಶ್ರೀ ಮಹೀಮುದ ಪಟೇಲ ತಂದೆ ಇಮಾಮ ಪಟೇಲ ಸಾ. ತಾಜನಗರ ಮುಸ್ಲಿಂ ಸಂಘ ಕಲಬುರಗಿ .  ರವರಿಗೆ ಅಪಘಾತ ಪಡಿಸಿ  ಭಾರಿ ಗುಪ್ತ ಪೆಟ್ಟು ಗೊಳಿಸಿ ತಾನು ಸಹ ಗಾಯಗೋಂಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ಬಸವರಾಜ ನೂಲಾ ಸಾ|| ಅಫಜಲಪೂರ ಇವರು ದಿನಾಂಕ 08-01-2015 ರಂದು ರಾತ್ರಿ 10:15 ಗಂಟೆ ಸಮಯಕ್ಕೆ ನಾನು ಮತ್ತು ನಮ್ಮ ಸಂಬಂದಿಕ ಬಸವರಾಜ ಜೇವರ್ಗಿ ಇಬ್ಬರು ಮನೆಯಲ್ಲಿದ್ದಾಗ ನಮಗೆ ಪರಿಚಯವಿದ್ದ ಕೋಳ್ಳುರ ಗ್ರಾಮದ ಮೈನುದ್ದಿನ ಶೇಖ ಇವರು ನಮಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ಬಳೂರ್ಗಿ ಗ್ರಾಮದ ಹತ್ತಿರ ನಿಮ್ಮ ಟೆಂಪೊ ಚಾಲಕ ನಿಮ್ಮ ಟೆಂಪೊ ಪಲ್ಟಿ ಮಾಡಿರುತ್ತಾನೆ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ಬಸವರಾಜ ಇಬ್ಬರು  ಬಳೂರ್ಗಿ ಗ್ರಾಮಕ್ಕೆ ಹೋಗಿ ನೋಡಲು ನಮ್ಮ ಟೆಂಪೊ ಬಳೂರ್ಗಿ ಗ್ರಾಮದಿಂದ ಅಫಜಲಪೂರ ಕಡೆಗೆ ಬರುವ ರೋಡಿನಲ್ಲಿ ಸ್ಮಶಾನದ ಹತ್ತಿರ ಬ್ರೀಜ ಪಕ್ಕದ ತಗ್ಗಿನಲ್ಲಿ ಪಲ್ಟಿ ಆಗಿ ಬಿದ್ದಿತ್ತು, ನಂತರ ಅಲ್ಲೆ ಇದ್ದ ನಮ್ಮ ಟೆಂಪೊ ಚಾಲಕನಿಗೆ ಹಾಗೂ ನಮಗೆ ಪೋನ ಮಾಡಿದ ಮೈನುದ್ದಿನ ಶೇಖ ಮತ್ತು ಆತನ ಮಗ ಮಜೇದ ಶೇಖ ಇವರಿಗೆ ವಿಚಾರಿಸಲಾಗಿ ಮೈನುದ್ದಿನ ಶೇಖ ಈತನು ತಿಳಿಸಿದ್ದೆನೆಂದರೆ ನಾನು ಮತ್ತು ನನ್ನ ಮಗ ಇಬ್ಬರು ಅಫಜಲಪೂರಕ್ಕೆ ಬರಬೇಕೆಂದು ಸದರಿ ಸ್ಥಳದಿಂದ ಸ್ವಲ್ಪ ದೂರದಲ್ಲಿ ವಾಹನಗಳಿಗೆ ಕಾಯುತ್ತಿದ್ದಾಗ ನಿಮ್ಮ ಟೆಂಪೊದ ಚಾಲಕ ಅಂದಾಜು ರಾತ್ರಿ 10:00 ಗಂಟೆ ಸುಮಾರಿಗೆ ದುಧನಿ ಕಡೆಯಿಂದ ಟೆಂಪೊವನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ನಡೆಸಿಕೊಂಡು ಬಂದು ನಿಯಂತ್ರಣ ತಾಳದೆ ಜಾಗದಲ್ಲಿ ಪಲ್ಟಿ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಝಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಹರಣ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಸಿದ್ದಪ್ಪಾ ತಂದೆ ಅಂಭೋಜಿ ಬೋವಿ ಸಾ: ಕೈಲಾಸನಗರ ಬ್ರಹ್ಮಪೂರ ಕಲಬುರಗಿ ಇವರು ಮಗನಾದ ವಿಜಯಕುಮಾರ ವಯ:16 ಉ:ಕಲಬುರಗಿ ನಗರದ ಎಚ್.ಕೆ.ಇ. ಸುಸೈಯಿಟಿ ಗಂಡ ಮಕ್ಕಳ ಪ್ರೌಢ ಶಾಲೆಯಲ್ಲಿ 9ನೇ ತರಗತಿಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದು ದಿನಾಂಕ:23.12.2014 ರಂದು ಬೆಳಗ್ಗೆ 09.00 ಗಂಟೆಗೆ ಮನೆಯಿಂದ ಶಾಲೆಗೆ ಹೋಗಿ ಸಾಯಂಕಾಲ 06.00 ಗಂಟೆಗೆ ಮನೆಗೆ ಬಂದು ಸೈಕಲ ಮನೆಯ ಮುಂದೆ ನಿಲ್ಲಿಸಿ ತನ್ನ ಸ್ಕೂಲ ಬ್ಯಾಗ್ ತೆಗೆದುಕೊಂಡು ಮನೆಯಿಂದ ಹೊರಗೆ ಹೋದವನು ಮರಳಿ ಮನೆಗೆ ಬಂದಿರುವದಿಲ್ಲ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಸಿರಾಜ ಸಾಹೇಬ ಮಿಯಾ ತಂದೆ ಸಾಹೇಬ ಮಿಯಾ ಹುಸೇನ ಪಠಾಣ ಸಾಃ ಅಕ್ಬರ ಬಾಗ್ ಕಾಲೋನಿ ಕಲಬುರಗಿ ಇವರು ಎರಡನೇ ಮಗನಾದ ಫಯಾಜ್ ಫಠಾಣ ವಯಃ 25 ವರ್ಷ ಈತನು ಚಿಕ್ಕಂದಿನಿಂದಲೂ ಮಾನಸಿಕವಾಗಿ ಅಸ್ವಸ್ಥನಾಗಿದ್ದು  ದಿನಾಂಕಃ 05/01/2015 ರಂದು 06:00 ಪಿ.ಎಂ. ಕ್ಕೆ ಫಿರ್ಯಾದಿದಾರನ ಮಗನಾದ ಫಯಾಜ್ ಪಠಾಣ ವಯಃ 25 ವರ್ಷ ಈತನು ಸೇಡಂ ರಿಂಗ್ ರೋಡ್ ಖರ್ಗೆ ಪೆಟ್ರೋಲ್ ಪಂಪ್ ಇರುವ ಡ್ರೀಮ್ ಲೈಟ್ ಗಿಫ್ಟ್ ಸೆಂಟರದಿಂದ ಯಾರಿಗೂ ಹೇಳದೆ ಕೇಳದೆ ಹೋಗಿರುತ್ತಾನೆ. ಮರಳಿ ಇಲ್ಲಿಯವರೆಗೆ ಬಂದಿರುವುದಿಲ್ಲಾ ಕಾಣೆಯಾಗಿರುತ್ತಾನೆ ನಾನು ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ರಾಧಾಬಾಯಿ ಗಂಡ ಹನುಮಾನಸಿಂಗ ರಜಪೂತ ಸಾ||ಅಫಜಲಪೂರ ಇವರ ಗಂಡ ಹನುಮಾನಸಿಂಗ್ ಅತ್ತೆ ಇಂದಿರಾಬಾಯಿ ನಾದುನಿ ರಾಣಾಬಾಯಿ ಮೈದುನರಾದ ಮನುಸಿಂಗ್, ಗುಂಡುಸಿಂಗ್ ಇವರೇಲ್ಲರು ಹಾಗೂ ನನ್ನ ಗಂಡನ ಸೋದರಮಾವನಾದ  ಸತ್ರಾಮಸಿಂಗ್ ತಂದೆ ಹನುಮಾನಸಿಂಗ್ ರಜಪೂತ ಸಾ||ಗೌರ(ಬಿ) ಇತನ ಕುಮ್ಮಕಿನಂತೆ ಫೀರ್ಯಾದಿದಾರಳ ಗಂಡ ಖರಿದಿಸಿದ ಪೀಕಾಪ ವಾಹನದ 2 ಲಕ್ಷ ರೂ/- ವರದಕ್ಷಣೆ ಹಣವನ್ನು ತಂಡುಕೊಡು ಬಾ ಅಂತ ಎಲ್ಲರು ಫಿರ್ಯಾದಿದಾರಳಿಗೆ ಅವಾಚ್ಯವಾಗಿ ಬೈದು ಮಾನಸಿಕ ಮತ್ತು ದೈಇಹಿಕ ಕಿರುಕುಳ ನೀಡಿ ವರದಕ್ಷಣೆ ಕಿರುಕುಳ ಕೊಟ್ಟು ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಹನ ಕಳವು ಪ್ರಕರಣಗಳು :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಶಿವಾಜಿ ತಂದೆ ಶರಣಪ್ಪಾ ಜಮಾದಾರ ಸಾಃ ಎಂ.ಬಿ ನಗರ ಕಲಬುರಗಿ ಇವರು ಪ್ರತಿ ದಿವಸ ತನ್ನ ವಾಹನವನ್ನು ಮನೆಯ ಮುಂದುಗಡೆ ಲಾಕ್ ಮಾಡಿ ನಿಲ್ಲಿಸಿದ್ದು ದಿನಾಂಕ: 04/01/2015 ರಂದು ರಾತ್ರಿ 00:30 ಎ.ಎಂ. ಸುಮಾರಿಗೆ ಈದ ಮಿಲಾದ್ ಹಬ್ಬವಿದ್ದ ಪ್ರಯಕ್ತ ಎಚ್ಚರಿದ್ದು ತನ್ನ ವಾಹನ ನಂ. ಕೆ.ಎ 37 ಎಂ. 4832 ಅಃಕಿಃ 4,00,000/- ರೂ. ನೇದ್ದನ್ನು ಮನೆಯ ಮುಂದೆ ನಿಲ್ಲಿಸಿದ್ದು ನಂತರ ರಾತ್ರಿ 02:00 ಗಂಟೆಗೆ ಸುಮಾರಿಗೆ ಮನೆಯ ಅಕ್ಕಪಕ್ಕದಲ್ಲಿ ಸಪ್ಪಳ ಬಂದಿದ್ದಕಾರಣ ಫಿರ್ಯಾದಿ ಹೆಂಡತಿ ಎದ್ದು ಮನೆಯ ಕಿಟಕಿಯಿಂದ ನೋಡಲಾಗಿ ಹೊರಗಡೆ ನಿಲ್ಲಿಸಿದ ಬುಲೆರೋ ವಾಹನ ಕಂಡು ಬರಲಿಲ್ಲ. ನಂತರ ನಾನು ಎದ್ದು ನೋಡಲು ನಿಲ್ಲಿಸಿದ ವಾಹನ ಇರಲಿಲ್ಲ. ಎಲ್ಲಾ ಕಡೆಗೂ ಹುಡುಕಾಡಿದರೂ ಸಹ ಸಿಕ್ಕಿರುವುದಿಲ್ಲಾ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಠಂಶದ ಮೇಲಿಂದ ಮಾಹಾತ್ಮ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 11.12.2014 14:00 ಗಂಟೆಯಿಂದ 14:30 ಗಂಟೆಯ ಅವಧಿಯಲ್ಲಿ ಜೇವರ್ಗಿ ಪಟ್ಟಣದ ಶ್ರೀ. ರೇಣುಕಾಚಾರ್ಯ ದೇವರ ಗುಡಿಯ ಪಕ್ಕದ ರೋಡಿನಲ್ಲಿ ಫಿರ್ಯಾದಿ ದಾರನು ತನ್ನ ಮೋಟಾರು ಸೈಕಲ್‌ ನಂ ಕೆ.ಎ32ಈ.ಎಫ್ 7669 ನೇದ್ದು ಅಂ.ಕಿ 25.000/- ರೂ ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿ ವಾಹನವನ್ನು ಪತ್ತೆ ಮಾಡಿ ಕೊಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ  ಮಲ್ಲಿಕಾರ್ಜುನ ತಂದೆ ನಿಂಗಪ್ಪ ಜಿಡ್ಡಿಮನಿ  ಸಾ : ಮಾದನ ಹಿಪ್ಪರಗಾ ಇವರಿಗೆ ಹಳೆಯ ದ್ವೇಶದಿಂದ ದಿನಾಂಕ 05/01/2015 ರಂದು 0330 ಪಿ.ಎಮ ಕ್ಕೆ ಯಳಸಂಗಿ ಗ್ರಾಮವ ವೆಂಕು ಗುತ್ತೇದಾರ ಇವರ ದಾಬಾದಲ್ಲಿ ಆಪಾದಿತರಾದ ಲಕ್ಷ್ಮಿಕಾಂತ ಮತ್ತು ಈರಣ್ಣ ಇಬ್ಬರೂ ಸೇರಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆ ಬಡೆ ಮಾಡಿ ಜೀವ ಭಯಪಡಿಸಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

No comments: