POLICE BHAVAN KALABURAGI

POLICE BHAVAN KALABURAGI

01 January 2015

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 31-12-2014 ರಂದು ಅಫಜಲಪೂರ ಪಟ್ಟಣದ ತಹಸಿಲ ಕಾರ್ಯಾಲಯದ ಮುಂದೆ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ  ಶ್ರೀ ನಜೀರ ಅಹ್ಮದ .ಎಸ್. ಅಫಜಲಪೂರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಬಿಂದು ತಂದೆ ಗುಂಡಡೆರಾವ ಕುಲಕರ್ಣಿ ಸಾ|| ಬ್ರಾಹ್ಮಣ ಗಲ್ಲಿ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 230/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಿರುಕಳ ಪ್ರಕರಣ :
ಮಾದನಹಿಪ್ಪರಗಾ ಠಾಣೆ : ಶ್ರೀಮತಿ ಶೋಭಾ ಗಂಡ ಅಶೋಕ ಅಸ್ತಳಕರ ಸಾ; ಸಕ್ಕರಗಾ ಹಾ;ವಾ; ಇಕ್ಕಳಕಿ ತಾ; ಆಳಂದ ಜಿ; ಕಲಬುರಗಿ ರವರು ಸುಮಾರು 10 ವರ್ಷಗಳ ಹಿಂದೆ ನನ್ನ ತಂದೆಯವರು ಸಕ್ಕರಗಾ ಗ್ರಾಮದ ತಿಪ್ಪಣ್ಣಾ ಅಸ್ತಲಕರ ರವರ ಮಗನಾದ ಅಶೋಕ ಅಸ್ತಲಕರರವರೊಂದಿಗೆ ಮದುವೆ ಮಾಡಿ ಕೋಟ್ಟಿದ್ದು 03 ಜನ ಮಕ್ಕಳಿರುತ್ತಾರೆ ಸುಮಾರು ಒಂದು ತಿಂಗಳಿಂದ ನನ್ನ ಮಕ್ಕಳನ್ನು ನನ್ನ ಗಂಡನ ಹತ್ತಿರ ಇಟ್ಟು ಕೋಂಡಿರುತ್ತಾರೆ, ಅಲ್ಲದೇ ನಾನು ಮತ್ತು ನನ್ನ ಗಂಡ ಅಶೋಕ ಅಸ್ತಳಕರ ಮಾವ ತಿಪ್ಪಣ್ಣ, ಅತ್ತೆ ತಾಯಾಬಾಯಿ ಹಾಗು ನಾದಿನಿಯಾದ ಜಯಶ್ರೀ ಗಂಡ ಲಕ್ಕನ ಹಾಗು ನನ್ನ ನಾಧಿನ ಮಗಳಾದ ಸ್ನೇಹಾ ತಂದೆ ಲಕ್ಕನ ನಾವೇಲ್ಲರೂ ಒಂದೆ ಕುಟುಂಬದಲ್ಲಿ ವಾಸವಾಗಿದ್ದು ದಿನಾಂಕ 26-11-2014 ರಂದು 08;00 ಎ.ಎಂಕ್ಕೆ ನಾವೇಲ್ಲರೂ ಮನೆಯಲ್ಲಿದ್ದಾಗ ನನ್ನ ಗಂಡನಾದ ಅಸೋಕ ತಂದೆ ತಿಪ್ಪಣ್ನ ಅಸ್ತಳಕರ ಅತ್ತೆಯಾದ ತಾಯಾಬಾಯಿ ನನ್ನ ಮೈದುನ್ ಅನೀಲ ಅಸ್ತಳಕರ, ಜಯಶ್ರೀ, ಸ್ನೇಹಾ ಮಾವ ತಿಪ್ಪಣ್ಣ ಹಾಗು ನಮ್ಮ ಸಂಬಂದಿಯಾದ ಸಿದ್ದು ತಂದೆ ಭೀಮಶ್ಯಾ ನಿಂಗದಳ್ಳಿ ಸಾ: ಝಳಕಿ[ಕೆ] ರವರೆಲ್ಲರೂ ಕೂಡಿಕೊಂಡು ನನ್ನ ಗಂಡನ ಮನೆಯಲ್ಲಿ ನನಗೆ ನೀನು ಅಡುಗೆ ಸರಿಯಾಗಿ ಮಾಡುವುದಿಲ್ಲ ಅಂತಾ ನನ್ನ ಗಂಡನು ನನಗೆ ತನ್ನ ಮನಸ್ಸಿಗೆ ಬಂದಂತೆ ಬೈಯುವುದು ಹೊಡೆಯುವುದು ಮಾಡುತ್ತಿದ್ದನು ಹಾಗು ನನ್ನ ಸೀಲದ ಮೇಲೆ ಸಂಶಯ ಮಾಡಿದ್ದು ಅಲ್ಲದೇ ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿರುತ್ತಾನೆ ಅಲ್ಲದೇ ಈ ಮೇಲ್ಕಂಡ ಜನರು ಕೂಡಿಕೊಂಡು ನನಗೆ ಹೊಡೆಬಡೆ ಮಾಡಿದ್ದು ಅನೀಲ ಅಸ್ತಳಕರ ನನ್ನ ಮೇ ಮೇಲೆ ಬಂದು ನನ್ನ ಮೈ ಮೇಲಿನ ಸೀರೆ ಜಗ್ಗಿ ನೀನು ಸರಿಯಾಗಿಲ್ಲ ನೀನ್ನವ್ವನ ನೀನ್ನ ತವರು ಮನೆಗೆ ಹೊಗು ಅಂತಾ ನನ್ನ ಕಾಲಿನ ಮೇಲೆ ಒದ್ದಿರುತ್ತಾನೆ, ಜಯಶ್ರೀ ಇವಳು ನನ್ನೋಂದಿಗೆ ದಿನಾಲು ತಕರಾರು ಮಾಡಿಕೊಂಡು ನೀನು ಚೆನ್ನಾಗಿ ಕೆಲಸ ಮಾಡುವುದಿಲ್ಲ ಅಂತಾ ಮಾನಸಿಕ ದೈಹಿಕ ಕಿರುಕಳ ನೀಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

No comments: