POLICE BHAVAN KALABURAGI

POLICE BHAVAN KALABURAGI

15 December 2014

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಅಫಜಪೂರ ಠಾಣೆ : ದಿನಾಂಕ 14-12-2014 ರಂದು  ಅಫಜಲಪೂರ ಪಟ್ಟಣದ .ಪಿ.ಎಮ್.ಸಿ ಆವರಣದ ಸಾರ್ವಜನೀಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸ್ಥಳಕ್ಕೆ ಹೋಗಿ, ಮರೆಯಾಗಿ ನಿಂತು ನೊಡಲು .ಪಿ.ಎಮ್.ಎಫ್.ಸಿ ಅಡತಿ ಕಟ್ಟದ ಮುಂದೆ ಇದ್ದ ಖುಲ್ಲಾ ಜಾಗದಲ್ಲಿ ಗುಂಪು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದು ಖಚಿತ ದಾಳಿ ಮಾಡಿ,  11  ಜನರಿನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1. ಬಸವರಾಜ ತಂದೆ ಭೀಮಶಾ ಮ್ಯಾಳೇಸಿ  2. ರಾಜಕುಮಾರ ತಂದೆ ಮಲ್ಲಪ್ಪ ಗುಣಾರಿ  3.ದೀಪಕ ತಂದೆ ಅಪ್ಪಾಸಾಹೇಬ ಕಾಂಬ್ಳೆ 4.ಶೀವಾನಂದ ತಂದೆ ಶರಣಪ್ಪ ಕುಮಸಗಿ. 5 ರಾಜೇಶ ತಂದೆ ಸಿದ್ದಣ್ಣ ಪಾಟೀಲ 6. ಪ್ರಶಾಂತ ತಂದೆ ಶಿವಶರಣಪ್ಪ ನಂದಿ 7. ಅಶೋಕ ತಂದೆ ಬಸಣ್ಣ ಬಟಗೇರಾ 8. ಶಾಂತು ತಂದೆ ಸಿದ್ದಪ್ಪ ಡಾಂಗೆ 9. ಸಿದ್ದಾರಾಮ ತಂದೆ ಶಾಮರಾಯ ಹುಂಚಡ್ಕಗಿ10. ಸಿದ್ದಲಿಂಗ ತಂದೆ ನಾಗಪ್ಪ ಗಂಟೆ  11. ಸುರೇಶ ತಂದೆ ಮಳೇಪ್ಪ ಅಂದೋಡಗಿ ಸಾ||  ಎಲ್ಲರು ಅಫಜಲಪೂರ. ಸದರಿಯವರಿಂದ ನಗದು ಹಣ  ಒಟ್ಟು 18400/- ರೂ ಮತ್ತು 52 ಇಸ್ಪೆಟ ಎಲೆಗಳುನ್ನು ಜಪ್ತಿ ಪಡಿಸಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಫಜಪೂರ ಠಾಣೆ : ದಿನಾಂಕ 14-12-2014 ರಂದು ಅಫಜಲಪೂರ ಪಟ್ಟಣದ ಘತ್ತರಗಾ ರೋಡಿಗೆ ಇರುವ ಮೋರಟಗಿ ಇವರ ಕಟ್ಟಿಗೆ ಅಡ್ಡಾದ ಹತ್ತಿರ ಸಾರ್ವಜನೀಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಮೇರೆಗೆ,ಸಿ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ 07 ಜನರನ್ನು ವಶಕ್ಕೆ ತೆಗೆದುಕೊಂಡು ಸದರಿಯವರನ್ನು ವಿಚಾರಿಸಲಾಗಿ 1. ರಾಚಪ್ಪ ತಂದೆ ಬಸವಂತ್ರಾಯ ದೇಸಾಯಿ 2. ಈರಣ್ಣ ತಂದೆ ಶ್ರೀಮಂತ ದೇಸಾಯಿ  3. ಇಮಾಮ ತಂದೆ ಕರೀಮಸಾಬ ಖುರೇಸಿ 4. ಜಗದೇವಪ್ಪ ತಂದೆ ಕಲ್ಯಾಣಿ ತಾರಾಪೂರ  5. ರೇವಣಸಿದ್ದಪ್ಪ ತಂದೆ ಮಲ್ಲಪ್ಪ ನಾಗಣಸೂರ  6. ರಾಮು ತಂದೆ ಕರೆಪ್ಪ ಕಾಂಬ್ಳೇ  7. ಬಸವರಾಜ ತಂದೆ ರೇವಪ್ಪ ಶೇಟ್ಟಿ ಸಾ|| ಎಲ್ಲರು ಅಪಜಲಪೂರ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಿಸಿದ್ದ ನಗದು ಹಣ 6920/- ರೂ ಮತ್ತು 52 ಇಸ್ಪೆಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ಸಿದ್ದಣ್ಣ ತಂದೆ ಬಸವರಾಜ ಕುಮ್ಮಾಣಿ ಸಾ|| ಕೋಳಕೂರ ರವರು ದಿನಾಂಕ 13.12.14 ರಂದು ಜೇವರ್ಗೀ ಪಟ್ಣದ ಹೊಸ ಬಸ್‌ನಿಲ್ದಾಣದ ಹತ್ತಿರ ರಸ್ತೆಯ ಪಕ್ಕದಲ್ಲಿ ತನ್ನ ಊರಿಗೆ ಹೋಗುವ ಸಲುವಾಗಿ ನಿಂತಿದ್ದಾಗ ಲಾರಿ ನಂ ಕೆಎ33-4940  ನೇದ್ದರ ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ನಿಂತಿದ್ದ ಫಿರ್ಯಾದಿದಾರನಿಗೆ ಡಿಕ್ಕಿ ಪಡಿಸಿ ಭಾರಿ ರಕ್ತ ಗಾಯ ಪಡಿಸಿ ಲಾರಿಯನ್ನು ಸ್ಥಳದಲ್ಲಿಯೆ ಬಿಟ್ಟು ಚಾಲಕನು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಕುಮಾರಿ ಯಲ್ಲಮ್ಮ ತಂದೆ ಹುಚ್ಚಪ್ಪ ನಾಟಿಕಾರ ಸಾ|| ಹಳ್ಯಾಳ ಇವರು ದಿನಾಂಕ 14-12-2014 ರಂದು ಸಾಯಂಕಾಲ 5:00 ಗಂಟೆ ಸಮಯಕ್ಕೆ ನನ್ನ ತಮ್ಮ ಮಹೇಶ ಈತನು ನಮ್ಮ ಮನೆಯ ಪಕ್ಕದಲ್ಲಿ ಹುಂಚಿ ಗಿಡದ ಕೇಳಗೆ ಆಟ ಆಡುತ್ತಿದ್ದಾಗ, ನಮ್ಮ ಸಮಾಜದ ಖಾಜಪ್ಪ ತಂದೆ ಜಗದೇವಪ್ಪ ಬಳೂರ್ಗಿ ಈತನ ಮಗ ಪರಸುರಾಮ ಈತನು ಹುಂಚಿ ಗಿಡಕ್ಕೆ ಹುಂಚಿ ಕಾಯಿಯ ಸಂಬಂದ ಕಲ್ಲು ಹೊಡೆದಿದ್ದು, ಸದರಿ ಕಲ್ಲು ನನ್ನ ತಮ್ಮನಿಗೆ ಬಡೆದಿರುತ್ತದೆ ಇದರಿಂದ ನನ್ನ ತಮ್ಮ ನಾಗೇಶನು ಪರಶುರಾಮನೊಂದಿಗೆ ಜಗಳ ಮಾಡಿ ಒಂದು ಏಟು ಹೊಡೆದಿರುತ್ತಾನೆ, ಅದೆವಿಚಾರವಾಗಿ ಖಾಜಪ್ಪನ ಹೆಂಡತಿ ಮಂಗಲಾ ಇವಳು ನಮ್ಮೋಂದಿಗೆ ಜಗಳವಾಡಿದ್ದು ಸಾಯಂಕಾಲ 6:30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಅಕ್ಕ ಚಂದಮ್ಮ ಹಾಗೂ ನನ್ನ ತಾಯಿ ಶಾಂತಾಬಾಯಿ ಮೂರು ಜನರು ನಮ್ಮ ಮನೆಯಲ್ಲಿದ್ದಾಗ 1. ಸಾಯಬಣ್ಣ ತಂದೆ ಜಗದೇವಪ್ಪ ಬಳೂರ್ಗಿ 2. ಖಾಜಪ್ಪ ತಂದೆ ಜಗದೇವಪ್ಪ ಬಳೂರ್ಗಿ 3. ಮಂಗಲಾ ಗಂಡ ಖಾಜಪ್ಪ ಬಳೂರ್ಗಿ 4. ಮಂಜುಬಾಯಿ ಗಂಡ ಸಾಯಬಣ್ಣ ಬಳೂರ್ಗಿ ಸಾ|| ಎಲ್ಲರೂ ಹಳ್ಯಾಳ ರವರು ಮನೆಯಲ್ಲಿ ಬಂದು ಅದರಲ್ಲಿ ಮಂಗಲಾ ಇವಳು ರಂಡೆರೆ ಎಲ್ಲಿ ಇದ್ದಿರಿ ನನ್ನ ಮಗನಿಗಿ ಹೊಡೆದು ಕಳಿಸಿರಿ ಅಂತಾ ಬಂದವರೆ ನನಗೆ ಸಾಯಬಣ್ಣ ಈತನು ಕಾಲಿನಿಂದ ಹೊಟ್ಟೆಯ ಮೇಲೆ ಒದ್ದನು, ಆಗ ನನ್ನ ಅಕ್ಕ ಚನ್ನಮ್ಮ ಇವಳು ಬಿಡಿಸಲು ಬಂದಾಗ ಅವಳಿಗೆ ಖಾಜಪ್ಪ ಮತ್ತು ಮಂಗಲಾ ಇವರು ಕೈಯಿಂದು ಹೊಡೆದು ಕಾಲಿನಿಂದ ಹೊಟ್ಟೆಯ ಮೇಲೆ ಒದ್ದಿರುತ್ತಾರೆ, ಮಂಜುಬಾಯಿ ಇವಳು ನನ್ನ ಮುಖದ ಮೇಲೆ ತನ್ನ ಉಗುರಿನಿಂದ ಚೂರಿರುತ್ತಾಳೆ, ನನ್ನ ತಾಯಿ ಬಿಡಿಸಲು ಬಂದಾಗ ಅವಳಿಗೂ ಸಹ ಸಣ್ಣ ಪುಟ್ಟ ಗಾಯಗಳು ಆಗಿರುತ್ತವೆ, ನಂತರ ನಮಗೆ ಹೊಡೆಯುತ್ತಿದ್ದ ಎಲ್ಲರು ಹೊರಗೆ ಜನರು ಬರುವುದನ್ನು ನೋಡಿ ಮನೆಯಿಂದ ಹೊರಗೆ ಹೋಗಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನಿಂಬರ್ಗಾ ಠಾಣೆ : ಶ್ರೀ ಬಸಲಿಂಗಯ್ಯ ತಂದೆ ಶಿವಯೋಗಯ್ಯ ಹಿರೇಮಠ ಸಾ : ಜವಳಿ (ಡಿ) ಇವರು  ದಿನಾಂಕ 13-12-14 ರಂದು ಜವಳಿ (ಡಿ) ಗ್ರಾಮದ ಅಗಸಿ ಹತ್ತಿರ ತನಗೆ ಬಾಬು ತಂದೆ ಸಿದ್ದಣ್ಣ ಬನಶೇಟ್ಟಿ ಇವನು ತಡೆದು ಅವಾಚ್ಯ ಶಬ್ದಗಳಿಂದ ಬೈದು ಜೀವ ಭಯ ಪಡಿಸಿ ಕಾಲಿನಿಂದ ಒದ್ದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: