ಅಪಘಾತ ಪ್ರಕರಣಗಳು:
ನಿಂಬರ್ಗಾ ಪೊಲೀಸ ಠಾಣೆ: ದಿನಾಂಕ
28/12/2014 ರಂದು ಶ್ರೀಮತಿ ಶಕುಬಾಯಿ ಗಂಡ ಚಂದ್ರಶಾ
ಪಟೇದ ಸಾ|| ನಿಂಬಾಳ
ಇವರು ಠಾಣೆಗೆ ಹಾಜರಾಗಿ ಮಂಜೂಳಾಳು ಮಾಡಿಯಾಳ ಗ್ರಾಮದಲ್ಲಿ ವಾಸಿಸುತ್ತಾ ವಿಧ್ಯಾಭ್ಯಾಸ
ಮಾಡುತ್ತಿದ್ದು ದಿನಾಂಕ 27/12/2014 ರಂದು ರಾತ್ರಿ 08.30 ಗಂಟೆಗೆ ಮನೆಯ ಮುಂದಿನ ಡಾಂಬರ ರಸ್ತೆಯ ಪಕ್ಕದಲ್ಲಿ ಹೊರಟಾಗ
ಮಾಡಿಯಾಳ ಬಸ ನಿಲ್ದಾಣದ ಕಡೆಯಿಂದ ತುಂಬಿಕೊಂಡು ಬರುತ್ತಿದ್ದ ಟ್ರಾಕ್ಟರ ನಂ. ಕೆಎ 32,ಟಿ ಎ 4870 ನೇದ್ದರ
ಚಾಲಕನು ಟ್ರಾಕ್ಟರನ್ನು ಅತೀ ವೇಗ ಮತ್ತು ನಿಷ್ಕಾಳಜಿತನಿಂದ ಚಲಾಯಿಸಿಕೊಂಡು ಬಂದು ಮಂಜುಳಾಳಿಗೆ ಅಪಘಾತಪಡಿಸಿದ್ದರಿಂದ
ಅಪಘಾತದಲ್ಲಿ ಸೊಂಟ ಮತ್ತು ಎರಡು ಕಾಲುಗಳ ಮೇಲೆ ಟ್ರಾಕ್ಟರ ಚಕ್ರ ಹಾಯ್ದು ಭಾರಿ ರಕ್ತಗಾಯ & ಗುಪ್ತಗಾಯವಾಗಿದ್ದರಿಂದ ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆ
ಕಲಬುರಗಿಗೆ ಸೇರಿಕೆ ಮಾಡಿದ್ದು ಉಪಚಾರ ಹೊಂದುತ್ತಾ ದಿನಾಂಕ
28/12/2014 ರಂದು ಬೆಳಿಗ್ಗೆ 0400 ಗಂಟೆಗೆ
ಮಂಜುಳಾ ಮೃತಪಟ್ಟಿದ್ದು ಮಂಜುಳಾಳ ಸಾವಿಗೆ ಕಾರಣವಾದ ಟ್ರಾಕ್ಟರ ನಂ. ಕೆಎ 32,ಟಿ ಎ 4870 ನೇದ್ದರ
ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ಫಿರ್ಯಾದಿ ಸಾರಾಂಶದ ನಿಂಬರ್ಗಾ
ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ: ದಿನಾಂಕ 26-12-2014 ರಂದುರಾತ್ರಿ 9-30 ಗಂಟೆ ಸುಮಾರಿಗೆ ಶ್ರೀ ಅಣ್ಣಪ್ಪಾ ತಂದೆ
ರಾಮಚಂದ್ರ ಸುತಾರ ಸಾ: ಅಕ್ಕಮಹಾದೇವಿ ಗುಡಿ ಹತ್ತಿರ ಗಂದಿಗುಡಿ ಲೇಔಟ ಕಲಬುರಗಿ ಇವರು ಶಹಾಬಜಾರ ನಾಕಾದಿಂದ ಖಾದ್ರಿಚೌಕ ಮೇನ ರೋಡಿನಲ್ಲಿ
ಬರುವ ಶೆಟ್ಟಿ ಕಾಂಪ್ಲೇಕ್ಸ ಎದುರಿನ ರೋಡನ್ನು ನಡೆದುಕೊಂಡು ದಾಟುತ್ತಿದ್ದಾಗ ಶಹಾಬಜಾರ ನಾಕಾ
ಕಡೆಯಿಂದ ಮೋ/ಸೈಕಲ ನಂಬರ ಕೆಎ-32 ಕೆ-5381 ರ ಸವಾರನ್ನು ತನ್ನ ಮೋ/ಸೈಕಲನ್ನು ಅತೀವೇಗವಾಗಿ
ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಎಡಗಾಲು
ತೊಡೆಗೆ, ಮತ್ತು ಮೊಳಕಾಲು ಕೆಳಗೆ ಭಾರಿಗುಪ್ತಪೆಟ್ಟು ಮಾಡಿ
ಮೋ/ಸೈಕಲ ಸಮೇತ ಹೊರಟು ಹೋಗಿದ್ದು ಇರುತ್ತದೆ ಸದರಿಯವರನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಎಂದು
ನೀದಿದ ಫಿರ್ಯಾದಿ ಸಂಕ್ಷೀಪ್ತ ಸಾರಾಂಶದ ಮೇಲಿಂದ
ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ:ದಿನಾಂಕ 27-12-2014 ರಂದು ಮದ್ಯಾಹ್ನ 12-00 ಗಂಟೆ ಸುಮಾರಿಗೆ ಶ್ರೀ
ರಾಜು ತಂದೆ ಮಲ್ಲೇಶಪ್ಪಾ ಪೂಜಾರಿ ಸಾ: ಭವಾನಿ ನಗರ ಕಲಬುರಗಿ ರವರು ಠಾಣೆಗೆ ಹಾಜರಾಗಿ ದಿನಾಂಕ 26-12-2014
ರಂದು ಸಾಯಂಕಾಲ 5-45 ಗಂಟೆ ಸುಮಾರಿಗೆ ತನ್ನ ಆಟೋರಿಕ್ಷಾ ನಂ ಕೆಎ-32-ಎ-4484 ನೇದ್ದರಲ್ಲಿ
ಮಹ್ಮದ ಹರ್ಷದ ಮತ್ತು ಸದಾ ಪಂಜುಮ ಇವರನ್ನು ಕೂಡಿಸಿಕೊಂಡು ಐವಾನ-ಈ- ಷಾಹಿ ಗೆಸ್ಟಹೌಸ ಕಡೆಯಿಂದ
ಲಾಹೋಟಿ ಕ್ರಾಸ ರೋಡ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ವಿಜಯ ವಿದ್ಯಾಲಯ ಕಾಲೇಜ ಎದುರಿನ
ರೋಡ ಮೇಲೆ ಹಿಂದಿನಿಂದ ಕಾಯಕ ಶಾಲೆಯ ಬಸ್ಸ ನಂ
ಕೆಎ-32-ಸಿ-2462 ನೆದ್ದರ ಚಾಲಕನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು
ಫಿರ್ಯಾದಿ ಚಲಾಯಿಸಿಕೊಂಡು ಹೋಗುತ್ತೀರುವ ಆಟೋರಿಕ್ಷಾಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ತನಗೆ
ಮತ್ತು ಮತ್ತು ಮಹ್ಮದ ಹರ್ಷದ ಹಾಗೂ ಸದಾ ಪಂಜುಮ ಇವರಿಗೆ ಸಣ್ಣಪುಟ್ಟ ಗಾಯಗೊಳಿಸಿ ಬಸ್ಸ ಅಲ್ಲಿಯೆ
ಬಿಟ್ಟು ಚಾಲಕನು ಓಡಿ ಹೋಗಿದ್ದು ಇರುತ್ತದೆ ಎಂದು ನೀದಿದ ಫಿರ್ಯಾದಿ ಸಂಕ್ಷೀಪ್ತ ಸಾರಾಂಶದ ಮೇಲಿಂದ ಹೆಚ್ಚುವರಿ
ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ: ದಿನಾಂಕ
27-12-2014 ರಂದು ಶ್ರೀ ಗುರುಪಾದಪ್ಪಾ ತಂದೆ ಬಸವಣಪ್ಪಾ ಪಲ್ಲೇದ ಸಾ: ಪರತಾಬಾದ ರವರು ತನ್ನ
ಮೋಟಾರ ಸೈಕಲ ನಂ ಕೆಎ-32-ವಾಯ್-7458 ನೇದ್ದರ ಮೇಲೆ ಹಿರಾಪುರ ರಿಂಗ ರೋಡ ಮುಖಾಂತರ ಕಣ್ಣಿ
ಮಾರ್ಕೆಟ ಕಡೆಗೆ ಕಾಯಪಲ್ಲೆ ತರಲು ಬರುತ್ತಿದ್ದಾಗ ಹಿಂದಿನಿಂದ ಮೋಟಾರ ಸೈಕಲ ನಂ ಕೆಎ-32-ಇಹೆಚ್-2149 ನೇದ್ದರ
ಸವಾರನಾದ ಅರುಣ ಇತನು ತನ್ನ ಮೋಟಾರ ಸೈಕಲ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು
ಫಿರ್ಯಾದಿ ಮೊ/ಸೈಕಲ್ ಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಫಿರ್ಯಾದಿಯ ಬಲಗೈ ಹೆಬ್ಬರಳಿಗೆ ರಕ್ತಗಾಯ
ಎಡಕಣ್ಣಿನ ಹತ್ತೀರ ತರಚಿದ ಗಾಯ ಹಾಗೂ ಎಡ ಟೊಂಕಿಗೆ ಭಾರಿ ಗುಪ್ತ ಪೆಟ್ಟುಗೊಳಿಸಿದ್ದು ಆತನು ಕೂಡಾ ಗಾಯ ಹೊಂದಿದ್ದು ಇರುತ್ತದೆ ಎಂದು ನೀದಿದ ಫಿರ್ಯಾದಿ ಸಂಕ್ಷೀಪ್ತ ಸಾರಾಂಶದ ಮೇಲಿಂದ
ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ದರೋಡೆ ಮತ್ತು ಸುಲಿಗೆ ಸಂಚುಕೋರರ ಬಂಧನ:
ರಾಘವೇಂದ್ರ ನಗರ ಪೊಲೀಸ ಠಾಣೆ: ದಿನಾಂಕ 28-12-2014 ರಂದು ಶ್ರೀ ಹೇಮಂತಕುಮಾರ ಪಿ.ಎಸ್.ಐ ರಾಘವೇಂದ್ರ ನಗರ ಪೊಲೀಸ ಠಾಣೆರವರು ಠಾಣೆಯಲ್ಲಿದ್ದಾಗ
ಠಾಣಾ ವ್ಯಾಪ್ತಿಯ ಚೋರಗುಮ್ಮಜ ಡಬರಾಬಾದ ಕ್ರಾಸ ಹತ್ತಿರ ತಗ್ಗಿನಲ್ಲಿ ಕೆಲವು ಜನರು ದರೋಡೆ ಮಾಡುವ
ಉದ್ದೇಶದಿಂದ ಮಾರಕಾಸ್ತ್ರಗಳೊಂದಿಗೆ ಕುಳಿತುಕೊಂಡುರುತ್ತಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ರಾಜಶೇಖರ
ಹಳೆಗೋಧಿ ಪಿ.ಐ ಸ್ಟೇಷನ ಬಜಾರ ಪೊಲೀಸ ಠಾಣೆ ಹಾಗೂ
ಅಶೋಕ ಹೆಚ್.ಸಿ 157. ನೀಲಪ್ಪಾ ಪಿಸಿ 562, ನಿತ್ಯಾನಂದ ಪಿಸಿ-1021
ಮತ್ತು ಬ್ರಹ್ಮಪೂರ ಠಾಣೆಯ
ಸಿಬ್ಬಂದಿಯವರಾದ ದೇವಿಂದ್ರ ಪಿಸಿ 212. ಪಂಡಿತ ಪಿಸಿ 439. ರಾಮು ಪಿಸಿ 761 ರವರೊಂದಿಗೆ ಇಬ್ಬರು ಪಂಚರಾದ 1)ಶ್ರೀ
ಮಹ್ಮದ ಇಬ್ರಾಹಿಮ್ ತಂದೆ ಅಬ್ದುಲರಸೀದ ತೊಡಫೋಡ 2)ಶ್ರೀ ಮೈಲಾರಿ ತಂದೆ ಅಮೃತಡಿಗ್ಗಿ ರವರೊಂದಿಗೆ ಮಾನ್ಯ
ಕೆ.ಎಮ್.ಸತೀಶ ಪಿಐ ಬ್ರಹ್ಮಪೂರ ಠಾಣೆರವರ ಮಾರ್ಗದರ್ಶನದಲ್ಲಿ ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ದರೋಡೆ
ಮಾಡಲು ಸಜ್ಜಾಗಿ ಕುಳಿತರ ಮೇಲೆ ದಾಳಿ ಮಾಡಿ ಸದರಿಯವರ ಮೇಲೆ ದಾಳಿ ಮಾಡಿ 7 ಜನರನ್ನು ಹಿಡಿದಿದ್ದು ಪಂಚರ ಸಮಕ್ಷಮದಲ್ಲಿ ಅವರ ಹೆಸರು ವಿಳಾಸ ವಿಚಾರಿಸಿ
ಅಂಗ ಶೋದನೆ ಮಾಡಲು ಅವರು ತಮ್ಮ ಹೆಸರು 1) ಅನಿಲಕುಮಾರ ತಂದೆ ಅಣ್ಣಪ್ಪಾ ತವಡೆ
ಸಾ: ವಿದ್ಯಾ ನಗರ ಇತನ ಹತ್ತಿರ ಒಂದು ಮಚ್ಚು ಮತ್ತು ಮುಖಕ್ಕೆ ಕಟ್ಟಿಕೊಳ್ಳುವ ಒಂದು ಕರಿಬಟ್ಟೆ 2) ಬಾಬು ತಂದೆ ಶಾಮರಾಯ ಜಮಾದಾರ ಸಾ: ಬಳುಂಡಗಿ ತಾ: ಅಫಜಲಪೂರ ಇತನ ಹತ್ತಿರ
ಒಂದು ಚಾಕು, ಮತ್ತು ಜೇಬಿನಲ್ಲಿ ಮುಖಕ್ಕೆ ಕಟ್ಟಿಕೊಳ್ಳುವ
ಒಂದು ಕರಿಬಟ್ಟೆ, 3) ಶರಣು ತಂದೆ ಚಂದ್ರಕಾಂತ ಅಂಕಲಗಿ
ಸಾ: ಅಂಕಲಗಿ ತಾ: ಜಿ: ಕಲಬುರಗಿ ಇವನ ಹತ್ತಿರ ಒಂದು ಕಬ್ಬಿಣದ ರಾಡ ಮತ್ತು ಜೇಬಿನಲ್ಲಿ ಮುಖಕ್ಕೆ ಕಟ್ಟಿಕೊಳ್ಳುವ
ಒಂದು ಕರಿಬಟ್ಟೆ 4) ಅಶೋಕ ತಂದೆ ಶರಣಬಸಪ್ಪಾ ಹಂಗರಗಿ
ಸಾ: ಶರಣಶಿರಸಗಿ ಇತನ ಹತ್ತಿರ ಒಂದು ಹಗ್ಗ ಮತ್ತು ಮುಖಕ್ಕೆ ಕಟ್ಟಿಕೊಳ್ಳುವ ಒಂದು ಕರಿ ಬಟ್ಟೆ. 5) ಬಾಬು ತಂದೆ ಮಲ್ಲಿಕಾರ್ಜುನ ಮದನಕರ ಸಾ: ಬಟ್ಟರಗಾ ಹಾ:ವ: ಶರಣಶಿರಸಗಿ ಮಡ್ಡಿ
ಇತನ ಹತ್ತಿರ ಕಾಗದದಲ್ಲಿ ಕಟ್ಟಿದ ಸ್ವಲ್ಪ ಖಾರದ ಪುಡಿ ಮತ್ತು ಮುಖಕ್ಕೆ ಕಟ್ಟಿಕೊಳ್ಳುವ ಒಂದು
ಕರಿಬಟ್ಟೆ 6) ಮಾಳಪ್ಪಾ ತಂದೆ ಶ್ರೀಮಂತ ನೀಲೂರ
ಸಾ: ಶರಣಶಿರಸಗಿ ಇತನ ಹತ್ತಿರ ಒಂದು ಕಬ್ಬಿಣದ ರಾಡ ಮತ್ತು ಮುಖಕ್ಕೆ ಕಟ್ಟಿಕೊಳ್ಳೂವ ಒಂದು
ಕರಿಬಟ್ಟೆ 7) ಬಸವರಾಜ @ ಚೊಂಚ ಪುಟ್ಟು ತಂದೆ ಶಿವಶರಣಪ್ಪಾ ಮದನಕರ ಸಾ:ಸುಲ್ತಾನಪೂರ ಇತನ ಹತ್ತಿರ
ಮುಖಕ್ಕೆ ಕಟ್ಟಿಕೊಳ್ಳುವ ಒಂದು ಕರಿಬಟ್ಟೆ ದೊರೆತಿದ್ದು ಅವುಗಳನ್ನು ಜಪ್ತಿಮಾಡಿ ಸದರಿಯವರು
ಕೃತ್ಯಕ್ಕೆ ಉಪಯೋಗಿಸುವ ಸಲುವಾಗಿ ತಂದಿದ್ದ ಒಂದು ಹಿರೊಹೊಂಡಾ ಮೊಟಾರ ಸೈಕಲ ನಂ ಕೆಎ 32 ಇಬಿ 2228 ಅ:ಕಿ: 30000/-ರೂ ಜಪ್ತ ಮಾಡಿಕೊಂಡಿದ್ದು ಅವರಲ್ಲಿ ಇನ್ನೊಬ್ಬ ಓಡಿ ಹೋಗಿದ್ದು ಆತನ
ಬಗ್ಗೆ ವಿಚಾರಿಸಲು ಆತನ ಹೆಸರು ಪ್ರವೀಣ ತೆಲ್ಲೂರ ಅಂತ ಗೊತ್ತಾಗಿರುತ್ತದೆ ಸದರಿ .ದರೋಡೆ
ಮತ್ತು ಸುಲಿಗೆ ಮಾಡಲು ಸಂಚು ರೂಪಿಸಿ ಸಿದ್ದತೆ ಮಾಡಿಕೊಂಡು ಸಜ್ಜಾಗಿ ಕುಳಿತ ಮೇಲ್ಕಂಡ 7 ಜನ ಮತ್ತು ಓದಿ ಹೋದ ಇನ್ನೊಬ್ಬನ ವಿರುದ್ದ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕೊಲೆ ಪ್ರಕರಣ:
ಚೌಕ್ ಪೊಲೀಸ್ ಠಾಣೆ: ದಿನಾಂಕ 27.12.14 ರಂದು ದೀನೆಶ ತಂ ಖಂಡೋಬಾ ಲೊಟೆ
ಸಾಃ ಶಿವಾಜಿನಗರ ಕಲಬುರಗಿ ಇವರು ವಿಠಲ ಇವರೊಂದಿಗೆ ಕೂಡಿಕೊಂಡು ತಮ್ಮ ಜೀಪಿನಲ್ಲಿ ತಮ್ಮ ಮನೆಗೆ ಬರುತ್ತಿರುವಾಗ ರಾಮನಗರ ಕ್ರಾಸ ಹತ್ತಿರ ಕಾಶಿನಾಥ ಜಮಾದಾರನನ್ನು ತಮ್ಮ
ಜೀಪಿನಲ್ಲಿ ಕೂಡಿಸಿಕೊಂಡು ತಮ್ಮ ಮನೆಗೆ ಹೋಗುತ್ತಿದ್ದಾಗ ಮನೆಯ ಸ್ವಲ್ಪ ದೂರದಲ್ಲಿ ರಾತ್ರಿ
11.30 ಗಂಟೆಯ ಸುಮಾರಿಗೆ ಮಲ್ಲು @ ಕೆಕೆ ನಗರ ಮಲ್ಲು ಸಾಃರೇವಣಸಿದ್ದೇಶ್ವರ
ಕಾಲೋನಿ ಕಲಬುರಗಿ 2) ಸಂದೀಪ ರಾಮನಗರ ಮತ್ತು ಇನ್ನೂ ಕೆಲವರು ಕೈಯಲ್ಲಿ ತಲ್ವಾರ, ಕ್ರಿಕೇಟ ಸ್ಟಂಪ, ಹಾಕಿ ಸ್ಟೀಕ ಕೈಯಲ್ಲಿಹಿಡಿದುಕೊಂಡು ಮೊಟಾರ ಸೈಕಲ ಮೇಲೆ
ಕುಳಿತ ಜೀಪನ ಎದುರುಗಡೆ ನಿಲ್ಲಿಸಿ ಆರೋಪಿತರು ಎಲ್ಲರು ಕೂಡಿಕೊಂಡು ಕಾಶಿನಾಥನಿಗೆ ಹಳೆಯ ಷಮ್ಯದಿಂದ
ಜೀಪಿನಿಂದ ಹೊರಗೆ ಎಳೆದು ಕ್ರಿಕೇಟ ಸ್ಟಂಪದಿಂದ, ಹಾಕಿ ಸ್ಟೀಕದಿಂದ ತಲೆಗೆ, ಹಣೆಗೆ ಹೊಡೆದು ಭಾರಿ ರಕ್ತಗಾಯ ಪಡಿಸಿದ್ದು, ಬಿಡಿಸಲು
ಬಂದ ದೀನೆಶ ಮತ್ತು ಜೀಪ ಚಾಲಕ ವಿಠಲನಿಗೂ ಆರೋಪಿತರು
ಸ್ಟಂಪದಿಂದ, ಹಾಕಿ ಸ್ಟಿಕದಿಂದ ಹಣೆಗೆ ತಲೆಗೆ ಮತ್ತು ಫಿರ್ಯಾದಿಯ
ಎಡಗಾಲಿಗೆ ಹೊಡೆದು ಭಾರಿ ರಕ್ತಗಾಯ ಪಡಿಸಿದ್ದು ಜನ ಬರುವುದನ್ನು ನೋಡಿ ಆರೋಪಿತರು
ಫಿರ್ಯಾದಿದಾರರಿಗೆ ಹೊಡೆಯುವದನ್ನು ಬಿಟ್ಟು ಓಡಿ ಹೋಗಿದ್ದು ಕಾಶಿನಾಥನಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ
ಸೇರಿಕೆ ಮಾಡಿದಾಗ ಮರಣ ಹೊಂದಿದ್ದು ಇರುತ್ತದೆ. ಆರೋಪಿತರೆಲ್ಲರು ಕೂಡಿ ಕಾಶಿನಾಥ ಇತನಿಗೆ ಹಳೆಯ
ವೈಶಮ್ಯದಿಂದ ಹೊಡೆದು ಕೊಲೆ ಮಾಡಿ ಫೀರ್ಯಾದಿ ಮತ್ತು ಫಿರ್ಯಾಧಿಯ ಜೀಪಚಾಲಕನಿಗೆ ಹೊಡೆದು ಕೊಲೆ
ಮಾಡಲು ಪ್ರಯತ್ನಿಸಿದ ಬಗ್ಗೆ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಚೌಕ್ ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment