ಪೊಲೀಸ ಪೇದೆ
ಸಿಇಟಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಯಲು ಮಾಡಿದವರ ಬಂಧನ :
ವಿಶ್ವವಿದ್ಯಾಲಯ ಠಾಣೆ : ದಿನಾಂಕ:17-11-2014
ರಂದು 11:00 ಎ.ಎಮ ಗಂಟೆಗೆ ಶ್ರೀ ಜೆ.ಹೆಚ್ ಇನಾಮದಾರ ಸಿಪಿಐ ಎಂ.ಬಿ
ನಗರ ವೃತ್ತ, ಕಲಬುರಗಿ ತಮ್ಮಲ್ಲಿ ವರದಿ ಸಲ್ಲಿಸುವದೇಂದರೆ, ಮಾನ್ಯ
ಎಸ್.ಪಿ ಸಾಹೇಬರು ಕಲಬುರಗಿ ರವರು ದಿನಾಂಕ 16/11/2014 ರಂದು ನಡೆಯಲಿರುವ ಪೋಲಸೇಟ್-2014
ಸಿಪಿಸಿ ಮತ್ತು ಮಪಿಸಿ ಅಭ್ಯರ್ಥಿಗಳ ಸಿ.ಇ.ಟಿ ಪರೀಕ್ಷೆ ಬಂದೋಬಸ್ತ ಕರ್ತವ್ಯಕ್ಕಾಗಿ ಶ್ರೀಮತಿ
ಪಿಲ್ಲೋ ಹೋಮಿ ಇರಾಣಿ ಮಹಿಳಾ ಪದವಿ ಮಹಾವಿದ್ಯಾಲಯ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮಾನ್ಯ
ಸಹಾಯಕ ಪೊಲೀಸ ಅಧೀಕ್ಷಕರು ಗ್ರಾಮಾಂತರ ಉಪ-ವಿಭಾಗ ಕಲಬುರಗಿ ರವರ ಅಧೀನದಲ್ಲಿ ನನಗೂ ಮತ್ತು ಇತರೆ
ಸಿಬ್ಬಂದಿಯವರನ್ನು ಬಂದೋಬಸ್ತ ಕರ್ತವ್ಯಕ್ಕಾಗಿ ನೇಮಿಸಿದ್ದು. ದಿನಾಂಕ 16/11/2014
ರಂದು ಮೇಲ್ಕಂಡ ಸಿ.ಇ.ಟಿ ಪರೀಕ್ಷೆ ಬಂದೋಬಸ್ತ ಕರ್ತವ್ಯದಲ್ಲಿದ್ದಾಗ, ಸುಮಾರು
ಬೆಳಿಗ್ಗೆ 8-30 ಗಂಟೆಗೆ ವಿಶ್ವವಿದ್ಯಾಲಯ ಪೊಲೀಸ ಠಾಣೆ ಸಿಬ್ಬಂದಿಯವರಾದ
ಶ್ರೀ ಸಂತೋಷ ಸಿಪಿಸಿ 935 ಮತ್ತು ಶ್ರೀ ಭೀರಣ್ಣ ಸಿಪಿಸಿ 1187
ರವರು ಪೋನ್ ಮೂಲಕ ಮಾಹಿತಿ ತಿಳಿಸಿದ್ದೇನೆಂದರೆ ಇಂದು ನಡೆಯಲಿರುವ ಪೊಲೀಸ ಪೇದೆ ಸಿ.ಇ.ಟಿ
ಪರೀಕ್ಷೆಯ ಪ್ರಶ್ನೆ ಉತ್ತರಗಳು ಬಹಿರಂಗವಾದ ಬಗ್ಗೆ ಮಾಹಿತಿ ಇರುತ್ತದೆ ಅಂತಾ ತಿಳಿಸಿದ್ದರಿಂದ
ನಾನು ಕೂಡಲೇ ಸಿಬ್ಬಂದಿಯವರಿಗೆ ಮಾಹಿತಿ ಸಂಗ್ರಹಿಸಿ ಪತ್ತೆ ಹಚ್ಚುವಂತೆ ಸೂಚಿಸಿ ನಾನು ಪರೀಕ್ಷೆ
ಕರ್ತವ್ಯದಲ್ಲಿ ನಿರತನಾದೇನು. ನಂತರ ಸುಮಾರು 9-30 ಗಂಟೆಗೆ ಮೇಲಿನ ಸಿಬ್ಬಂದಿಯವರು ಪುನಃ ಪೋನ ಮಾಡಿ
ತಿಳಿಸಿದ್ದೇನೆಂದರೆ, ಒಬ್ಬ ವ್ಯಕ್ತಿ ಸಿಕ್ಕಿದ್ದು ಅವರ ಹೆಸರು ಕಾಶಿನಾಥ ತಂದೆ
ಹುಣಚಪ್ಪ ಪೂಜಾರಿ ಸಾ// ಮರತೂರ ಅಂತಾ ಆತನ ಹತ್ತಿರ ಯಾವುದೇ ಪ್ರಶ್ನೆ ಪತ್ರಿಕೆ ಅಥವಾ ಉತ್ತರ
ಪತ್ರಿಕೆ ಇರುವದಿಲ್ಲ. ಅದು ಇನ್ನೊಬ್ಬ ವ್ಯಕ್ತಿಯಾದ ಮಲ್ಲಣ್ಣ ತಂದೆ ಚಂದ್ರಾಮ ಬೀದನೂರ ಸಾ//
ಕೆರಕನಳ್ಳಿ ಈತನ ಹತ್ತಿರ ಇರುವದಾಗಿ ಹೇಳುತ್ತಿದ್ದು ಅಂತಾ ಹೇಳಿದರ ಮೇರೆಗೆ ನಾನು ಮಾನ್ಯ ಸಹಾಯಕ
ಅಧೀಕ್ಷಕರು, ಗ್ರಾಮಾಂತರ ಉಪ-ವಿಭಾಗ ರವರಿಗೆ ಮಾಹಿತಿ ತಿಳಿಸಿ ಅಲ್ಲಿಯೇ
ಸಿದ್ದಾರ್ಥ ಕಾನೂನು ಕಾಲೇಜುದಲ್ಲಿ ಸಿ.ಇ.ಟಿ ಬಂದೋಬಸ್ತ ಕರ್ತವ್ಯದಲ್ಲಿದ್ದ ರಘು ಪಿ.ಎಸ್.ಐ
ಎಂ.ಬಿ ನಗರ ರವರನ್ನು ಕಳುಹಿಸಿಕೊಟ್ಟೇನು. ಅವರ ಜೊತೆಯಲ್ಲಿ ಕಾಶಿನಾಥ ಈತನು ತೋರಿಸಿದಂತೆ
ಮಲ್ಲಣ್ಣ ತಂದೆ ಚಂದ್ರಾಮ ಈತನಿಗೆ ತೋರಿಸಿದ್ದು ಸದರಿ ಪಿ.ಎಸ್.ಐ ಹಾಗೂ ಸಿಬ್ಬಂದಿಯವರು ಆತನನ್ನು
ಕಲಬುರಗಿ ನಗರದ ಸಿ.ಐ.ಬಿ ಕಾಲೋನಿಯಲ್ಲಿರುವ ಗೊವಿಂದರಾವ ಹಾವನೂರ ಇವರ ಮನೆ ಹತ್ತಿರ ಹಿಡಿದುಕೊಂಡು ಚೆಕ್ ಮಾಡಲಾಗಿ ಅವನ ಹತ್ತಿರ ಪರೀಕ್ಷೆ ಉತ್ತರಗಳು ಬರೆದ ಹಾಳೆಗಳು ದೊರೆತ್ತಿದ್ದು ಅದನ್ನು
ಅವುಗಳು ಸಿ.ಇ.ಟಿ ಪರೀಕ್ಷೆಗೆ ಸಂಬಂಧಿಸಿದ ಉತ್ತರಗಳು ಇರಬಹುದು ಅಂತಾ ಸಂಶಯದ ಮೇಲೆ ಪಿ.ಎಸ್.ಐ
ಎಂ.ಬಿ ನಗರ ರವರು ಮೇಲ್ಕಂಡವರು ತಮ್ಮ ತಪ್ಪು ಒಪ್ಪಿಕೊಂಡಿದ್ದರಿಂದ ಸದರಿ ಉತ್ತರ ಬರೆದ
ಹಾಳೆಗಳನ್ನು ಪಂಚರ ಸಮಕ್ಷಮದಲ್ಲಿ ತಮ್ಮ ವಶಕ್ಕೆ ತೆಗೆದುಕೊಂಡು ಮರಳಿ ನನಗೆ ಮಾಹಿತಿ ತಿಳಿಸಿದ್ದು
ನಾನು ಅವರಿಗೆ ಪರೀಕ್ಷೆ ಬಂದೋಬಸ್ತ ಮುಗಿಯುವರೆಗೆ ನೀವು ವೃತ್ತ ಕಛೇರಿಯಲ್ಲಿ ಮೇಲಿನ ಎರಡು ಜನರಾದ
ಕಾಶಿನಾಥ ಮತ್ತು ಮಲ್ಲಣ್ಣ ಇವರನ್ನು ಕೂಡಿಸಿ ಬಂದೋಬಸ್ತ ಮುಗಿದ ಬಳಿಕೆ ಬಂದು ವಿಚಾರಣೆ ಮಾಡಿದರೇ
ಆಯಿತು ಅಂತಾ ತಿಳಿಸಿದ್ದು, ಈ ವಿಷಯದ ಬಗ್ಗೆ ಮಾನ್ಯ ಎ.ಎಸ್.ಪಿ ಸಾಹೇಬರ ಗಮನಕ್ಕೆ
ತಂದು ಬಂದೋಬಸ್ತ ಕರ್ತವ್ಯ ಮುಗಿಸಿಕೊಂಡು ಮದ್ಯಾಹ್ನ 12-45 ಗಂಟೆಗೆ ಕಾರ್ಯಾಲಯಕ್ಕೆ ಬಂದು ಪಿ.ಎಸ್.ಐ ಎಂ.ಬಿ ನಗರ
ರವರು ಕಾಶಿನಾಥ ಮತ್ತು ಮಲ್ಲಣ್ಣ ರವರನ್ನು ಹಾಜರ ಪಡಿಸಿದ್ದು ಮತ್ತು ಸದರಿಯವರಿಂದ ಜಪ್ತು
ಪಡಿಸಿಕೊಂಡ ಸಿ.ಇ.ಟಿ ಪರೀಕ್ಷೆ ಉತ್ತರಗಳು ಬರೆದ ಹಾಳೆಗಳನ್ನು ಹಾಜರ ಪಡಿಸಿದ್ದು ಸದರಿ ಸಿ.ಇ.ಟಿ ಪರೀಕ್ಷೆಯ ಉತ್ತರಗಳು ಸರಿ ಇರುವ ಬಗ್ಗೆ
ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷೆ ಮುಗಿದ ನಂತರ ಅಭ್ಯರ್ಥಿಗಳಿಂದ ವಿವಿದ ಸಿರಿಜಗಳ ಪಶ್ನೆ
ಪತ್ರಿಕೆಯ ನಕಲು ಪ್ರತಿಗಳನ್ನು ತರೆಯಿಸಿಕೊಂಡು ಪ್ರಶ್ನೆ ಪತ್ರಿಕೆಯಲ್ಲಿರುವ ಪ್ರಶ್ನೆಗಳಿಗೆ
ಹಾಗೂ ಮೇಲ್ಕಂಡವರ ಹತ್ತಿರ ದೊರೆತ ಉತ್ತರಗಳನ್ನು ಒಂದುಕ್ಕೊಂದು ಹೋಲಿಕೆ ಯಾಗುತ್ತವೆ ಅಥವಾ ಇಲ್ಲಾ
ಅನ್ನುವ ಕುರಿತು ಇಬ್ಬರೂ ನುರಿತ ಉಪನ್ಯಾಸಕರನ್ನು ಪಂಚರನ್ನಾಗಿ ಬರಮಾಡಿಕೊಂಡು ಅವರಿಂದ
ಪರಿಶೀಲಿಸಿದಾಗ ಅವುಗಳಲ್ಲಿ 77 ಉತ್ತರಗಳು ಸರಿ ಇದ್ದು 6
ಉತ್ತರಗಳು ಭಾಗಶ ಸರಿ ಇರುವದಾಗಿ ಹೇಳಿದ್ದು ಇರುತ್ತದೆ. ನಮ್ಮ ವಶದಲ್ಲಿರುವ ಕಾಶಿನಾಥ ಮತ್ತು
ಮಲ್ಲಣ್ಣ ಇವರನ್ನು ವಿಚಾರಣೆಗೆ ಒಳಪಡಿಸಿದಾಗ ಸದರಿಯವರು ವಿಚಾರಣೆ ಕಾಲಕ್ಕೆ ಹೇಳಿದ್ದೇನೆಂದರೆ
ನಮಗೆ ಹೆಚ್.ಎಸ್ ಸಾಹು ಕೊಚಿಂಗ್ ಲೆಕ್ಚರರ್ ಎನ್.ಎಸ್.ಎಸ್ ಕೊಚಿಂಗ್ ಸೆಂಟರ ಕಲಬುರಗಿ ಇವರು ನಮಗೆ
ಹೇಳಿದ್ದೇನೆಂದರೆ ನನ್ನ ಗೆಳೆಯನಾದ ಬೆಂಗಳೂರಿನ ಮಾರುತೇಶ ಎಂಬುವನು ಪರಿಚಯ ಇದ್ದು ಈಗ ನಡೆಯಲಿರುವ
ಪೊಲೀಸ ಕಾನ್ಸಟೇಬಲ್ ಹುದ್ದೇಗಳ ಪ್ರಶ್ನೆ ಪತ್ರಿಕೆಯ ಉತ್ತರಗಳ ಮಾಹಿತಿಯನ್ನು ಕೊಡುತ್ತಾನೆ
ಅವನಿಂದ ನಾನು ಪಡೆದುಕೊಂಡು ನಿಮಗೆ ಹೇಳುತ್ತೇನೆ ನೀವು ಬೇರೆ ಅಭ್ಯರ್ಥಿಗಳಿಗೆ ಮಾರಾಟ ಮಾಡಿ
ಅವರಿಂದ ಹಣ ಸಂಗ್ರಹ ಮಾಡಿ, ನಾನು ತಮ್ಮಿಂದ ನಂತರ ಹಣ ಪಡೆದುಕೊಳ್ಳುವದಾಗಿ ಹೇಳಿದ್ದು, ಆತನು
ಮೊಬಾಯಿಲ್ ಮುಖಾಂತರ ನನಗೆ ಉತ್ತರಗಳನ್ನು ಹೇಳಿದ್ದು ನಾನು (ಮಲ್ಲಣ್ಣ) ಬರೆದುಕೊಂಡು ನಮ್ಮ
ಗೆಳೆಯನಾದ ಶಿವಕುಮಾರ ಮತ್ತು ಕಾಶಿನಾಥ ಇವರಿಗೆ ಉತ್ತರಗಳನ್ನು ನೀಡಿದ್ದು ಮಲ್ಲು ಕುಳಗೇರಿ
ಈತನಿಗೂ ನೀಡುತ್ತಿರುವಾಗ ಪೊಲೀಸನವರು ನಮಗೆ
ಹಿಡಿದುಕೊಂಡಿದ್ದು ಸದರಿ ವಿಷಯದ ಬಗ್ಗೆ ಹೆಚ್.ಎಸ್ ಸಾಹು ರವರಿಗೆ ಗೊತ್ತಿರುತ್ತದೆ ಅಂತಾ
ಹೇಳಿದ್ದು ಸದರಿ ವಿಷಯದ ಬಗ್ಗೆ ನಾನು ಮಾನ್ಯ ಎಸ್.ಪಿ ಸಾಹೇಬರು ಕಲಬುರಗಿ ರವರಲ್ಲಿ ವರದಿಯನ್ನು
ಸಲ್ಲಿಸಿದ್ದು ಇರುತ್ತದೆ. ನಮ್ಮ ವಶದಲ್ಲಿರುವ
ಕಾಶಿನಾಥ ತಂದೆ ಹುಣಚಪ್ಪ ಪೂಜಾರಿ ಸಾ// ಮರತೂರ ಮತ್ತು ಮಲ್ಲಣ್ಣ ತಂದ ಚಂದ್ರಾಮ ಬೀದನೂರ ಸಾ//
ಕೆರಕನಳ್ಳಿ ಇವರುಗಳನ್ನು ಪೊಲೀಸ ನೊಟೀಸ ನೀಡಿ ನಾಳೆ ವಿಚಾರಣೆಗಾಗಿ ಬೆಳಿಗ್ಗೆ 8-00 ಗಂಟೆಗೆ
ಹಾಜರಾಗುವಂತೆ ಸೂಚಿಸಿ ಕಳುಹಿಸಿದ್ದು ಇಂದು ದಿನಾಂಕ 17/11/2014
ರಂದು ಬೆಳಿಗ್ಗೆ 8-00 ಗಂಟೆಗೆ
ಹಾಜರಾಗಿದ್ದು ಸದರಿಯವರನ್ನು ವಿಚಾರಣೆ ಒಳ ಪಡಿಸಿದ್ದು ಸದರಿಯವರು ಪುನಃ ಹೇಳಿದ್ದೇನೆಂದರೆ, ಪೋಲಸೇಟ್-2014 ಸಿಪಿಸಿ
ಮತ್ತು ಮಪಿಸಿ ಅಭ್ಯರ್ಥಿಗಳ ದಿನಾಂಕ 16/11/2014 ರಂದು ನಡೆಯಲಿರುವ ಸಿ.ಇ.ಟಿ ಪರೀಕ್ಷೆಯ ಪ್ರಶ್ನೆ
ಪತ್ರಿಕೆಗಳ ಉತ್ತರಗಳು ಹೆಚ್.ಎಸ್ ಸಾಹು ಇವರು ಬೆಂಗಳೂರಿನಿಂದ ಪೊನ್ ಮುಖಾಂತರ ನಮಗೆ ನೀಡಿದ್ದು
ಅವುಗಳನ್ನು ಬೇರೆ ಅಭ್ಯರ್ಥಿಗಳಿಗೆ ಮಾರಾಟ ಮಾಡುವಾಗ ಪೊಲೀಸನವರು ನಮಗೆ ಹಿಡಿದುಕೊಂಡಿರುವ ಬಗ್ಗೆ
ತಿಳಿಸಿದ್ದರಿಂದ ಸದರಿ ಮೇಲ್ಕಂಡವರು ಸುಮಾರು ಲಕ್ಷಕ್ಕಿಂದ ಹೆಚ್ಚಿನ ಅಭ್ಯರ್ಥಿಗಳು ರಾಜ್ಯದಲ್ಲಿ
ಪರೀಕ್ಷೆಗೆ ಹಾಜರಾಗಿದ್ದು ಈ ಕೃತ್ಯದಿಂದ ಎಲ್ಲಾ ಅಭ್ಯರ್ಥಿಗಳಿಗೆ ಮೋಸ ಮಾಡಿದ್ದು ಹಾಗೂ
ಸಾರ್ವಜನಿಕರಲ್ಲಿ ಕಳವಳವುಂಟು ಮಾಡಿದ ಅಪರಾಧವೆಸಗಿದ್ದು ಕಂಡು ಬಂದಿದ್ದರಿಂದ ಸದರಿ ಮೇಲ್ಕಂಡ
ಕಾಶಿನಾಥ ಪೂಜಾರಿ , ಮಲ್ಲಣ್ಣ ಬಿದನೂರ ಹಾಗೂ ಇತರರ ವಿರುದ್ಧ ವಿಶ್ವವಿದ್ಯಾಲಯ
ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ
:
ಸಂಚಾರಿ ಠಾಣೆ : ದಿನಾಂಕ 13-11-2014 ರಂದು 5-00 ಪಿ.ಎಮ್ ಕ್ಕೆ ಶಹಾಬಜಾರ ನಾಕಾ ರೋಡಿನಲ್ಲಿ ಬರುವ ಬುಚನಳ್ಳಿ ಗಾದಿ ಕಾರ್ಖಾನೆ ಹತ್ತಿರ ರೋಡಿನ
ಮೇಲೆ ಶರಬಣ್ಣಾ ತಂದೆ ಸಿದ್ದಣ್ಣಾ ಬಡಿಗೇರ ಈತನು ತನ್ನ ಮೋಟಾರ ಸೈಕಲ ನಂ. ಕೆ.ಎ 32 ಇ.ಬಿ 4495 ಇದರ ಮೇಲೆ ಹಿಂದೆ ಕಸ್ತೂರಬಾಯಿ ಇವಳನ್ನು ಕುಡಿಸಿಕೊಂಡು
ಚೌಕ ಸರ್ಕಲ್ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಒಮ್ಮೆಲೆ ಕಟ್
ಹೊಡೆದಿದ್ದರಿಂದ ಫಿರ್ಯಾದಿ ಮೋಟಾರ ಸೈಕಲ ಮೇಲಿಂದ ಕೆಳಗೆ ಬಿದ್ದು ಸೊಂಟಕ್ಕೆ ಭಾರಿ ಗುಪ್ತ
ಪೆಟ್ಟಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಜಾತಿ ನಿಂದನೆ ಮಾಡಿ ಆತ್ಮಹತ್ಯ ಮಾಡಿಕೊಳ್ಳಲು ಪ್ರಚೋದನೆ
ಮಾಡಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಶಿವಶರಣಪ್ಪಾ ತಂದೆ ಭೀಮಶ್ಯಾ ಬುದ್ದನವರ್ ಸಾ: ಕೊಡಂಬಲ್ ತಾ:
ಹುಮನಾಬಾದ ಜಿ:ಬೀದರ ಆದ ನಾನು
ದಿನಾಂಕ:9/09/2014 ರಂದು ನನ್ನ ತಂಗಿಯಾದ ನಾಗಮ್ಮಾ ಗಂಡ ಶಂಕರ ಚಿತ್ತಾಪೂರ ಸಾ: ಮರತೂರ
ಇವಳು ದಿನಾಂಕ:08/09/2014 ರಂದು ಮದ್ಯಾಹ್ನದ ವೇಳೆಯಲ್ಲಿ ಮರತೂರ ಸಿಮಾಂತರದ ಸೂರ್ಯಕಾಂತ
ಮುರಗಾನವರ ಹೊಲದ ಹತ್ತಿರ ಬಂದಾರಿಯಲ್ಲಿ ದನಗಳು ಮೇಯಿಸುತ್ತಾ ಎದೆ ನೋವು ತಾಳಲಾರದೆ ಮನಸ್ಸಿಗೆ
ಬೇಜಾರು ಮಾಡಿಕೊಂಡು ಬೆಳ್ಳಿ ಗಿಡಕ್ಕೆ ನೇಣು
ಹಾಕಿಕೊಂಡು ಮೃತ ಪಟ್ಟಿದ್ದರಿಂದ ಈ ಬಗ್ಗೆ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಗಿದ್ದು ನನ್ನ ತಂಗಿಯ ಗಂಡನಾದ ಶಂಕರ ಇತನು ನನಗೆ ಇಂದು ಪೊನ ಮಾಡಿ
ತಿಳಿಸಿದ್ದೇನೆಂದರೆ, ನನ್ನ ಹೆಂಡತಿ ನಾಗಮ್ಮಾ ಇವಳು ನಮ್ಮೂರ ನಾಗಪ್ಪಾ ತಂದೆ ಶರಣಪ್ಪಾ ಹೌಜಿ ಜಾ: ಕುರಬರ ಸಾ:
ಮರತೂರ ಇತನು ನನ್ನ ಹೆಂಡತಿಯೊಂದಿಗೆ ಅನೈತಿಕ ಸಂಬಂದ ಹೊಂದಿರುತ್ತಾನೆ ಅಂತಾ ನನಗೂ ಮತ್ತು ನಮ್ಮ
ಊರಿನವರಿಗೂ ಗೊತ್ತಿದ್ದು ಆ ವಿಷಯವನ್ನು ನನ್ನ ಮರ್ಯಾದೆ ಹೊಗುತ್ತದೆ ಅಂತಾ ತಿಳಿದು ನಾನು ಯಾರ
ಮುಂದೆ ಹೇಳಿರುವದಿಲ್ಲಾ. ಈ ಬಗ್ಗೆ ಊರಲ್ಲಿ ಜನರು ಅಂದಾಡುತ್ತಿರುವದನ್ನು ಕೇಳಿ ನನ್ನ ಹೆಂಡತಿಗೆ
ನಾಗಪ್ಪಾ ಇತನು ಅನೈತಿಕ ಸಂಬಂದ ಇಟ್ಟುಕೊಂಡಿದ್ದರ ಬಗ್ಗೆ ನನ್ನ ಹೆಂಡತಿ ಈ ಮೊದಲೆ ನನಗೆ
ಹೇಳಿದ್ದು ಅದಕ್ಕೆ ನನ್ನ ಹೆಂಡತಿಯು ಕೂಡಾ ನಾನು ನಾಗಪ್ಪಾನ ಜೊತೆಗೆ ಅನೈತಿಕ ಸಂಬಂದ
ಹೊಂದಿರುತ್ತೇನೆ ಈ ವಿಷಯ ಯಾರಿಗೂ ಗೊತ್ತಾಗದಂತೆ ಇರಲಿ ಅಂತಾ ಮೊದಲೆ ತಿಳಿಸಿದಳು. ಅದರಂತೆ ನಾನು
ಸದರಿ ವಿಷಯವನ್ನು ಯಾರ ಮುಂದೆ ಮರ್ಯಾದೆಗೊಸ್ಕರ ಹೇಳಿರುವದಿಲ್ಲಾ. ಹೀಗಿದ್ದು ನನ್ನ ಹೆಂಡತಿ
ಸಾಯುವ ಮುನ್ನ 3-4 ದಿವಸಗಳ ಹಿಂದೆ ಹೊಲದಲ್ಲಿ ಕೆಲಸ ಮಾಡುವಾಗ ಹೊಟ್ಟೆ ನೋವು ಹೆಚ್ಚಾಗಿದ್ದರಿಂದ ನಮ್ಮೂರ ಶಿವಾನಂದ
ಸುಣಗಾರ ಇತನ ಮೊ/ಸೈ ಮೇಲೆ ಮನೆಗೆ ಬಿಟ್ಟು ಬರಲು
ಹೇಳಿದೇನು. ಅಂದು ನನ್ನ ಹೆಂಡತಿ ಶಿವಾನಂದನ ಮೊ/ಸೈ ಮೇಲೆ ಬರುವದನ್ನು ನಾಗಪ್ಪಾ ಹೌಜಿ
ಇತನು ನೋಡಿ ನನ್ನ ಹೆಂಡತಿ ಮೊಬೈಲಕ್ಕೆ ಪೊನ ಮಾಡಿ ಹೇಳೀದ್ದೆನಂದರೆ,ನೀನು ನನ್ನ ಜೊತೆಗೆ ಅನೈತಿಕ ಸಂಬಂದ
ಇಟ್ಟುಕೊಂಡಿದ್ದಲ್ಲದೇ ನನ್ನಂತೆ ನೀನು ಎಷ್ಟು ಜನರ ಜೊತೆಗೆ ತಿರುಗಾಡುತ್ತಿ ಸೂಳಿ ಮಗಳೆ ನೀನ್ನ
ಹೊಲೆಯ ಜಾತಿ ಬಿಡಲ್ಲಾ. ನೀನು ಹೊಲಸು ರಂಡಿ ಇದ್ದಿ ಇನ್ನೂ ಮುಂದೆ ನಿನ್ನ ಜೊತೆಗೆ ನಾನು ಸಂಬಂದ
ಮಾಡುವದಿಲ್ಲಾ. ಇಲ್ಲಿಗೆ ಬಿಡುತ್ತೇನೆ. ನಿನಗೆ ನಾಚಿಕೆ ಶರ್ಮ ಇದ್ದರೆ ನನಗೆ ಮೂಖ ತೊರಿಸದೇ
ಸತ್ತು ಹೋಗು ಹಲಕಟ ರಂಡಿ ಅಂತಾ ಬೈದಿದ್ದಾನೆ ಅಂತಾ ನನಗೆ ನನ್ನ ಹೆಂಡತಿ
ಹೇಳಿದ್ದರಿಂದ ಅದೇ ಮನಸ್ಸಿಗೆ ಬೇಜಾರು ಮಾಡಿಕೊಂಡಿದ್ದಳು. ಅದಕ್ಕೆ ನನ್ನ ಹೆಂಡತಿಗೆ
ಮನಸ್ಸಿಗೆ ಹಚ್ಚಿಕೊಳ್ಳಬೇಡ ಅಂತಾ ಹೇಳಿದೇನು. ಸದರಿ ನನ್ನ ಹೆಂಡತಿ ಇವಳು ಸದರಿ ನಾಗಪ್ಪಾ ಹೌಜಿ
ಇತನು ಜಾತಿ ನಿಂದನೇ ಮಾಡಿ ಅವಾಚ್ಯವಾಗಿ ಬೈದು ಸಾಯಲು ಪ್ರಚೊದನೆ ಮಾಡಿದ್ದರಿಂದ ನನ್ನ ಹೆಂಡತಿ ನಮ್ಮೂರ
ಸೂರ್ಯಕಾಂತ ಮುರಗಾನವರ ಹೊಲದ ಬಂದಾರಿಯಲ್ಲಿದ್ದ ಬೆಳ್ಳಿಯ ಗಿಡಕ್ಕೆ ನೇಣು ಹಾಕಿಕೊಂಡಾಗ ಮೃತಪಟ್ಟಿರುತ್ತಾಳೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ
ಪ್ರಕರಣ :
ಮಾಹತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಶಹನಾಜ್ ಅಕ್ತರ
ಗಂಡ ಮಹ್ಮದ ಇಲಿಯಾಸ್ ಅಹ್ಮದ ಸಾಃ ಮೆಕ್ಕಾ ಮಜೀದ ಹತ್ತಿರ ಬಂದೇ ನವಾಜ್ ಕಾಲೋನಿ ಕಲಬುರಗಿ ರವರ ಗಂಡನಾದ ಮಹ್ಮದ ಇಲಿಯಾಸ್ ಅಹ್ಮದ ಈತನು ದಾಲಮಿಲ್
ವ್ಯಾಪಾರ ಮಾಡಿಕೊಂಡಿದ್ದು, ಸದರಿ ಮಹ್ಮದ ಇಲಿಯಾಸ್ ಅಹ್ಮದ ಈತನು ದಿನಾಂಕಃ 12/11/2014 ರಂದು
02:00 ಪಿ.ಎಂ. ಸುಮಾರಿಗೆ ಹೈದ್ರಾಬಾದಕ್ಕೆ ಹೋಗುತ್ತೇನೆ ಅಂತಾ ಹೇಳಿ ತಮ್ಮ ಮಾರುತಿ ಸ್ವಿಪ್ಟ್
ಕಾರನಲ್ಲಿ ಹೋದರು. ದಿನಾಂಕಃ 13/11/2014 ರಂದು ರಾತ್ರಿ 01:00 ಗಂಟೆ ಸುಮಾರಿಗೆ ಅರ್ಜಿದಾರರ
ಗಂಡ ಮಹ್ಮದ ಇಲಿಯಾಸ್ ಅಹ್ಮದ ಈತನು ಅರ್ಜಿದಾರರಿಗೆ ತನ್ನ ಮೊಬೈಲ್ ನಂ. 9845839286 ನೇದ್ದರಿಂದ
ಕರೆ ಮಾಡಿ ನಾನು ತಡಮಾಡಿ ಬರುತ್ತೇನೆ ಅಂತಾ ತಿಳಿಸಿದ್ದು ನಂತರ ಅರ್ಜಿದಾರರು ಸದರಿ ಮೊಬೈಲ್ ನಂಬರ
9845839286 ನೇದ್ದಕ್ಕೆ ಕರೆ ಮಾಡಿದಾಗ ಸ್ವಿಚ್ ಆಫ್ ಬರುತ್ತಿತ್ತು. ನನ್ನ ಗಂಡನಾದ ಮಹ್ಮದ
ಇಲಿಯಾಸ್ ಅಹ್ಮದ ಈತನು ಇಲ್ಲಿಯವರೆಗೆ ಮರಳಿ ಮನೆಗೆ ಬಂದಿರುವುದಿಲ್ಲಾ. ನಾನು ಎಲ್ಲಾ ಕಡೆ ನಮ್ಮ
ಸಂಬಂಧಿಕರಲ್ಲಿ ವಿಚಾರಿಸಿದ್ದ ಎಲ್ಲಿಯು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಮಾಹತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಅರ್ಜುನರಾವ ತಂದೆ ಮಸ್ತಾನಪ್ಪ ಹೋಳ್ಕರ ಸಾ; ಕಾಳಮಂದರ್ಗಿ ತಾ;ಜಿ; ಕಲಬುರಗಿ ರವರು ದಿನಾಂಕ:17-11-2014 ರಂದು ಮುಂಜಾನೆ 09-00 ಗಂಟೆಯ ಸೂಮಾರಿಗೆ ತಿನ್ನಲು
ಅಡಿಕೆ ತರಲು ರುಕ್ಮೀಣಿಬಾಯಿ ಇವಳ ಕಿರಾಣಿ ಅಂಗಡಿಗೆ ಹೋಗಿದ್ದು. ಅಲ್ಲಿ ಅಂಗಡಿ ಮುಂದೆ ರೋಡಿನ ಮೇಲೆ ಕಂಟೇಪ್ಪ ಬಿರಾದಾರ ಇವರು ಸಿಕ್ಕಿದ್ದು ನಾನು ಅವರ ಜೋತೆಗೆ
ಮಾತಾಡುತ್ತಾ ನಿಂತಾಗ ವಿಠಲ ವಾಡಿ ಇವನು ಮುಕಾಟಲೆ ಬಂದವನೆ ಗುಂಡ ಕಲ್ಲಿನಿಂದ ನನ್ನ ತಲೆಯ ಹಿಂದೆ
ಹೋಡೆನು ನಾನು ದಿಮ್ಮು ಹತ್ತಿ ಕೆಳಗೆ ಬಿದ್ದಾಗ ಅದೇ ಕಲ್ಲಿನಿಂದ ನನ್ನ ಬಲಗಡೆ ಮಗ್ಗಲಿಗೆ ಮತ್ತು
ಬಲಗಾಲ ಮೋಣಕಾಲ ಹತ್ತೀರ ಹೋಡೆದನು. ನಾನು ಎದ್ದು ಓಡ ಬೇಕೆನ್ನುವಾಗ ವಿಠ್ಠಲನ ಅಳಿಯ ರಾಯಣ್ಣ @ ರವಿ ಇವನು ಬಂದು ನನಗೆ ಹಿಡಿದು ನಿಲ್ಲಿಸಿದ್ದು. ವಿಠ್ಠಲನು ಕಲ್ಲಿನಿಂದ ನನ್ನ ಹಣೆಯ
ಎಡಭಾಗಕ್ಕೆ ಹೋಡೆದು ರಕ್ತ ಗಾಯ ಮಾಡಿದನು. ಅದೇ ಹೋತ್ತಿಗೆ ನನ್ನ ತಮ್ಮನ ಮಗಳು ಗೀತಾ ಶಾಲೆಗೆ
ಹೋಗುತ್ತಿದ್ದು. ನನಗೆ ಹೋಡೆಯುತ್ತಿದ್ದನ್ನು ನೋಡಿ ಬರುತ್ತಿದ್ದಾಗ ರಾಯಣ್ಣ @ ರವಿ ಇವನು ಗೀತಾಗೆ ಅಡ್ಡಗಟ್ಟಿ ನಿಲ್ಲಿಸಿ ಕೈಹಿಡಿದು ಎಳೆದಾಡುತ್ತಾ ರಂಡೀ ನಿಮ್ಮ ಮನೆ
ಗಂಡಸರು ನಮ್ಮ ಮನೆ ಹೆಣ್ಣ ಮಕ್ಕಳ ಮ್ಯಾಲ ಕಣ್ಣ ಹಾಕ್ತಾರ ನಿನ್ನ ಸಂಗಟ ನಾ ಮನ್ಕೋತಿನಿ ನಿನಗ
ಹಡತಿನಿ ಅಂತಾ ಹೋಲಸಾಗಿ ಬೈಯುತ್ತಾ ಅವಮಾನ ಮಾಡಿದ್ದು ಅಲ್ಲದೆ ಜೀವದ ಬೆದರಿಕೆ ಹಾಕಿರುತ್ತಾನೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಿದ್ರಾಮಪ್ಪ ತಂದೆ ಚನ್ನಬಸಪ್ಪ ಮನ್ಮಿ ಸಾ : ಅಫಜಲಪೂರ ಇವರು ಅಫಜಲಪೂರ ಪಟ್ಟಣದಿಂದ ಸುಮಾರು 2 ಕಿ ಮೀ ಅಂತರದಲ್ಲಿ ಆನೂರ ರೋಡಿಗೆ ಹೊಮದಿಕೊಂಡಂತೆ ನಮ್ಮ ಜಮೀನಿನ ಸರ್ವೆ ನಂಬರ 437/3 ನೇದ್ದು ಜಮೀನು ಇರುತ್ತದೆ. ಸದರಿ ಜಮೀನಿನಲ್ಲಿ ನಿರಾವರಿ ಇದ್ದು ಸದರಿ ಜಮೀನಿನಲ್ಲಿ ಕೆಲಸ ಮಾಡಲು ಮಲಕಾರಿ ಮಾಳಿ ಸಾ|| ಯಳಸಂಗಿ ಈತನು ಇರುತ್ತಾನೆ, ಅವನು ದಿನಾಲು ಬೆಳಿಗ್ಗೆ 6:30 ಗಂಟೆ ಜಮೀನಿಗೆ ಹೋಗುವುದು ಮತ್ತು ಮರಳಿ ಸಾಯಂಕಾಲ 7:00 ಗಂಟೆಗೆ ಮನೆಗೆ ಬರುವುದು ಮಾಡುತ್ತಾ ಕೆಲಸ ಮಾಡಿಕೊಂಡಿರುತ್ತಾನೆ, ಹಾಗೂ ಸದರಿ ಜಮೀನಿನಲ್ಲಿ ಒಕ್ಕಲುತನಕ್ಕೆ ಬೇಕಾಗುವ ಸಾಮಗ್ರಿಗಳನ್ನು ಹೊಲದಲ್ಲಿರುವ ನಮ್ಮ ಮೇಟಗಿಯ ಮುಂದೆ ಇಟ್ಟಿರುತ್ತೆವೆ, ಹಿಗಿದ್ದು ಇಂದು ದಿನಾಂಕ 17-11-2014 ರಂದು ಬೆಳಿಗ್ಗೆ 6:30 ಗಂಟೆಗೆ ನಮ್ಮ ಆಳು ಮನಸ್ಯ ಮಲಕಾರಿ ಮಾಳಿ ಈತನು ಹೊಲಕ್ಕೆ ಹೋಗಿರುತ್ತಾನೆ, ಸದರಿ ಮಲಕಾರಿ ಈತನು ಬೆಳಿಗ್ಗೆ 7:00 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಪೋನ ಮಾಡಿ ತಿಳಿಸಿದ್ದೆನೆಂದರೆ, ಹೊಲದಲ್ಲಿ ಇಟ್ಟಿದ್ದ ಆಯಿಲ ಇಂಜೆನ, ಎಣ್ಣೆ ಹೊಡೆಯುವ ಪಂಪಗಳು ಮತ್ತು 2 ಗೊಬ್ಬರ ಚೀಲಗಳು ಕಾಣುತ್ತಿಲ್ಲ ಯಾರೊ ಕಳ್ಳತನ ಮಾಡಿಕೊಂಡು ಹೋಗಿರಬಹುದು ಎಂದು ತಿಳಿಸಿದ ಮೇರೆಗೆ ನಾನು ಹೋಗಿ ನೋಡಲು ಸದರಿ ನಮ್ಮ ಹೊಲದ ಮೇಟಗಿಯ ಮುಂದೆ ಇಟ್ಟಿದ 1) ಒಂದು ಆಯಿಲ ಇಂಜೆನ ಅಕಿ- 15000/- ರೂ 2) ಎರಡು ಎಣ್ಣೆ ಹೊಡೆಯುವ ಪಂಪಗಳು ಅಕಿ-3000/- ರೂ 3) 02 ಡಿಎ.ಪಿ ಕಂಪನಿಯ ಗೊಬ್ಬರ ತುಂಬಿದ ಚೀಲಗಳು ಅಕಿ-2200/- ರೂ ಒಟ್ಟು ಅಂದಾಜು 20,200/- ರೂ ಕಿಮ್ಮತನ ಸಾಮಗ್ರಿಗಳು ಇರಲಿಲ್ಲ, ಇವುಗಳನ್ನು ಯಾರೊ ಕಳ್ಳರು ದಿನಾಂಕ 16-11-2014 ರಂದು 7:30 ಪಿ ಎಮ್ ದಿಂದ ದಿನಾಂಕ 17-11-2014 ರಂದು ಬೆಳಿಗ್ಗೆ 6:00 ಗಂಟೆಯ ಮದ್ಯದ ಅವದಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment